PAKನಿಂದ ಚಾಂಪಿಯನ್ಸ್ ಟ್ರೋಫಿ ಶಿಫ್ಟ್ – ಭಾರತವನ್ನು ಕೆಣಕಿ ಕೆಟ್ಟಿತಾ ಪಾಕ್?
ದಕ್ಷಿಣ ಆಫ್ರಿಕಾಗೆ ಟೂರ್ನಿ ಹೊಣೆ

PAKನಿಂದ ಚಾಂಪಿಯನ್ಸ್ ಟ್ರೋಫಿ ಶಿಫ್ಟ್ – ಭಾರತವನ್ನು ಕೆಣಕಿ ಕೆಟ್ಟಿತಾ ಪಾಕ್?ದಕ್ಷಿಣ ಆಫ್ರಿಕಾಗೆ ಟೂರ್ನಿ ಹೊಣೆ

ಪಾಕಿಸ್ತಾನಕ್ಕೆ ಕಾಲಿಡಲ್ಲ ಅಂತಾ ಟೀಂ ಇಂಡಿಯಾ. ನಿಮ್ಗೋಸ್ಕರ ಟೂರ್ನಿ ಶಿಫ್ಟ್ ಮಾಡೋಕ್ ಆಗಲ್ಲ ಅಂತಾ ಪಾಕಿಸ್ತಾನ. ಕಳೆದ ನಾಲ್ಕೈದು ತಿಂಗಳಿಂದ ಇದೇ ಜಟಾಪಟಿ. 2025ರ ಚಾಂಪಿಯನ್ಸ್ ಟ್ರೋಫಿಯ ಆತಿತ್ಯವನ್ನ ಪಿಸಿಬಿ ವಹಿಸಿಕೊಂಡ್ಮೇಲೆ ಬರೀ ಇದೇ ಡಿಸ್ಕಷನ್. ಕೊನೆಗೂ ಈ ಕನ್ಫ್ಯೂಷನ್​ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಕ್ಲೈಮ್ಯಾಕ್ಸ್ ಅನ್ನೋದಕ್ಕಿಂತ ಬೇರೆಯದ್ದೇ ಟ್ವಿಸ್ಟ್ ಪಡ್ಕೊಳ್ತಿದೆ. ಇಡೀ ಟೂರ್ನಿಯೇ ಶಿಫ್ಟ್ ಆಗೋ ಚಾನ್ಸಸ್ ಇದೆ. ಹಾಗಾದ್ರೆ ಟೂರ್ನಿ ಆಯೋಜನೆಯಿಂದ ಪಾಕಿಸ್ತಾನ ಹಿಂದೆ ಸರಿಯಿತಾ? ಭಾರತದ ನಡೆ ಏನು? ಯಾವ ದೇಶದಲ್ಲಿ ನಡೆಯುತ್ತೆ ಚಾಂಪಿಯನ್ಸ್ ಟ್ರೋಫಿ? ಇನ್ಮುಂದೆ ಐಸಿಸಿ ಟೂರ್ನಿಗಳಲ್ಲೂ ಭಾರತ ವರ್ಸಸ್ ಪಾಕಿಸ್ತಾನ ನಡುವೆ ಮ್ಯಾಚ್​ಗಳು ನಡೆಯಲ್ವಾ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬುಮ್ರಾ ಕ್ಯಾಪ್ಟನ್.. KL ಓಪನರ್ – AUS ಸರಣಿಗೆ BCCI ಬಿಗ್ ಟ್ವಿಸ್ಟ್

2025ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಸಂಬಂಧ ಬಿಸಿಸಿಐ ಮತ್ತು ಪಿಸಿಬಿ ನಡುವೆ ಮೊದ್ಲಿಂದಲೂ ಕೋಲ್ಡ್ ವಾರ್ ನಡೀತಾನೇ ಇದೆ. ಭದ್ರತಾ ದೃಷ್ಟಿಯಿಂದ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಅನ್ನೋದನ್ನ ಟೀಂ ಇಂಡಿಯಾ ಮ್ಯಾನೇಜ್​ಮೆಂಟ್ ಐಸಿಸಿಗೆ ಮನವರಿಕೆ ಮಾಡಿದೆ. ಈ ಬಗ್ಗೆ ಪಿಸಿಬಿಗೆ ಐಸಿಸಿ ಮಾಹಿತಿ ನೀಡಿದೆ. ಇಷ್ಟೆಲ್ಲಾ ಆಗ್ತಿದ್ದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿ ಮೂಲಕ ಪಾಕಿಸ್ತಾನ ಸರ್ಕಾರಕ್ಕೆ ದೃಢೀಕರಣ ಮೇಲ್ ಕಳುಹಿಸಿದೆ. ಪಾಕಿಸ್ತಾನವು ಐಸಿಸಿ ಟೂರ್ನಿಯಿಂದ ಹಿಂದೆ ಸರಿಯಬಹುದು ಎಂದಿದ್ದು ವಿಶ್ವಕ್ರಿಕೆಟ್​ನಲ್ಲಿ ಹಲ್​ಚಲ್ ಎಬ್ಬಿಸಿದೆ.

ಹೈಬ್ರಿಡ್ ಮಾದರಿ ಟೂರ್ನಿಗೆ ಒಪ್ಪದ ಪಾಕಿಸ್ತಾನ!

ಚಾಂಪಿಯನ್ಸ್ ಟ್ರೋಪಿ ಟೂರ್ನಿ ಪಾಕಿಸ್ತಾನದಲ್ಲಿ ಆಯೋಜನೆ ಎನ್ನುತ್ತಿದ್ದಂತೆಯೇ ಹೈಬ್ರಿಡ್ ಮಾದರಿ ಕ್ರಿಕೆಟ್ ಸದ್ದು ಮಾಡಿತ್ತು. ಹೈಬ್ರಿಡ್ ಮಾದರಿ ಅಂದ್ರ ಚಾಂಪಿಯನ್ಸ್​ ಟ್ರೋಫಿ ಟೂರ್ನಿಯು ಪಾಕಿಸ್ತಾನದಲ್ಲೇ ಆಯೋಜನೆಗೊಂಡರೂ, ಟೀಮ್ ಇಂಡಿಯಾದ ಪಂದ್ಯಗಳು ತಟಸ್ಥ ಸ್ಥಳಗಳಲ್ಲಿ ನಡೆಯಲಿದೆ. ಭಾರತದ ಪಂದ್ಯಗಳನ್ನು ಪಾಕಿಸ್ತಾನದ ಹೊರಗೆ ನಡೆಸಬೇಕಾಗುತ್ತದೆ. ಆದರೆ ಪಾಕಿಸ್ತಾನ ಮಾತ್ರ ಈ ಹೈಬ್ರಿಡ್ ಮಾದರಿಗೆ ಒಪ್ಪುತ್ತಿಲ್ಲ. ಅಂತಿಮವಾಗಿ ಈ ಎರಡೂ ತಂಡಗಳು ಒಂದು ನಿರ್ಧಾರಕ್ಕೆ ಬರದಿದ್ದರೆ, ಆಗ ಐಸಿಸಿ, ಈ ಪಂದ್ಯಾವಳಿಯ ಆತಿಥ್ಯವನ್ನು ಪಾಕಿಸ್ತಾನದ ಬಳಿಯಿಂದ ಕಸಿದುಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಈ ಭಯ ಪಾಕಿಸ್ತಾನಕ್ಕೆ ಕಾಡುತ್ತಿದೆ. ಹಾಗೇ ಚಾಂಪಿಯನ್ಸ್ ಟ್ರೋಫಿ 2025 ರಿಂದ ಪಾಕಿಸ್ತಾನ್ ತಂಡ ಹೊರಗುಳಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ‌. ಭಾರತ ತಂಡವು ಟೂರ್ನಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿರುವ ಕಾರಣ ಪಿಸಿಬಿ ಈ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ ಎನ್ನಲಾಗಿದೆ. ಇದೇ ವೇಳೆ ಪಾಕ್ ಸರ್ಕಾರ ಟೂರ್ನಿಯಿಂದ ಹಿಂದೆ ಸರಿಯುವ ಬಗ್ಗೆ ಪಿಸಿಬಿ ಜೊತೆ ಚರ್ಚಿಸಿದೆ. ಹೀಗಾಗಿ ಭಾರತವು ಪಾಕಿಸ್ತಾನದಲ್ಲಿ ಆಡಲು ನಿರಾಕರಿಸಿದರೆ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯಲು ಪಾಕ್ ಸರ್ಕಾರ ಪಿಸಿಬಿಗೆ ತಾಕೀತು ಮಾಡಲಿದೆ.

ಟೂರ್ನಿ ಶಿಫ್ಟ್ ಆದ್ರೆ ಪಂದ್ಯಾವಳಿ ಆಡಲು ನಿರಾಕರಣೆ ಸಾಧ್ಯತೆ! 

ಚಾಂಪಿಯನ್ಸ್ ಟ್ರೋಫಿಯ ಆತಿಥ್ಯ ಪಾಕ್ ಬಳಿಯೇ ಇದ್ದರೂ, ಭಾರತವು ಮಾತ್ರ ತನ್ನ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡುತ್ತದೆ. ಉಳಿದ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲ್ಲಿವೆ. 2023 ರ ಏಷ್ಯಾಕಪ್ ಅನ್ನು ಸಹ ಇದೇ ರೀತಿಯಲ್ಲಿ ಆಯೋಜಿಸಲಾಗಿತ್ತು. ಆದರೆ, ಈಗ ಭಾರತ ನಿರಾಕರಿಸಿದ ನಂತರ, ಐಸಿಸಿ ಈ ಸಂಪೂರ್ಣ ಪಂದ್ಯಾವಳಿಯನ್ನು ಬೇರೆ ದೇಶಕ್ಕೆ ಸ್ಥಳಾಂತರಿಸಲು ಯೋಚಿಸುತ್ತಿದೆ. ಇದೀಗ ಪಿಸಿಬಿ ಮೂಲವೊಂದು ಡಾನ್‌ಗೆ, ‘ ಪಾಕಿಸ್ತಾನ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಟೂರ್ನಿಯನ್ನು ಸ್ಥಳಾಂತರಿಸಿದರೆ, ಪಾಕಿಸ್ತಾನ ಸರ್ಕಾರವು ಪಿಸಿಬಿಯನ್ನು ಪಂದ್ಯಾವಳಿಯಲ್ಲಿ ಆಡಲು ನಿರಾಕರಿಸುವಂತೆ ಸೂಚಿಸಿದೆ.

ಕೋಟಿ ಕೋಟಿ ಖರ್ಚು ನೀರಲ್ಲಿ ಹೋಮ?

ಟೂರ್ನಿಗೆ ಕೇವಲ ನಾಲ್ಕು ತಿಂಗಳಿರುವಾಗ ಚಾಂಪಿಯನ್ಸ್‌ ಟ್ರೋಫಿಯ ಆತಿಥ್ಯ ಪಾಕಿಸ್ತಾನದ ಕೈತಪ್ಪುವ ಸಾಧ್ಯತೆ ಇದೆ. ಇದಕ್ಕೆ ಪಾಕಿಸ್ತಾನದ ಹಠವೇ ಕಾರಣ ಎನ್ನಲಾಗಿದ್ದು, ಭಾರತದ ವಿರುದ್ಧ ನಿಲ್ಲಲು ಹೋಗಿ ಪಾಕಿಸ್ತಾನವೇ ನೆಲಕ್ಕೆ ಬೀಳುತ್ತಿರುವ ರೀತಿ ಕಾಣುತ್ತಿದೆ. ತನ್ನ ಮಾತನ್ನ ಕೇಳದಿರುವ ಪಾಕಿಸ್ತಾನಕ್ಕೆ ಈಗ ಐಸಿಸಿ ಶಾಕ್‌ ನೀಡುವ ಸಾಧ್ಯತೆ ಇದೆ. ಟೂರ್ನಿಗಾಗಿ ಈಗಾಗಲೇ ಕೋಟಿ ಕೋಟಿ ಖರ್ಚು ಮಾಡಿರುವ ಪಾಕ್‌ ಕೈ ಕೈ ಹಿಸುಕಿಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆ ಬಿಸಿಸಿಐ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸದಿರಲು ನಿರ್ಧರಿಸಿದೆ. ಈ ಹಿನ್ನೆಲೆ ಐಸಿಸಿ ಹೈಬ್ರಿಡ್‌ ಮಾದರಿಯಲ್ಲಿ ಟೂರ್ನಿ ಆಯೋಜಿಸುವಂತೆ ಪಿಸಿಬಿಗೆ ತಿಳಿಸಿದೆ. ಭಾರತದ ಪಂದ್ಯಗಳನ್ನು ದುಬೈ ಅಥವಾ ಯುಎಇನಲ್ಲಿ ಆಯೋಜಿಸಲು ಸೂಚಿಸಿದೆ. ಆದರೆ, ಪಾಕಿಸ್ತಾನ ಇದಕ್ಕೆ ಒಪ್ಪದೇ ಭಾರತ ತನ್ನ ದೇಶದಲ್ಲಿಯೇ ಬಂದು ಕ್ರಿಕೆಟ್‌ ಆಡಬೇಕು ಎಂದು ಹಠ ಹಿಡಿದಿದೆ. ಭಾರತದ ನಡೆ ವಿರುದ್ಧ ಪ್ರತಿಭಟನೆ ದಾಖಲಿಸಲು ಟೂರ್ನಿಯಿಂದಲೇ ಹಿಂದೆ ಸರಿಯುವ ಬೆದರಿಕೆಯನ್ನು ಪಾಕಿಸ್ತಾನ ಐಸಿಸಿಗೆ ಹಾಕಿದೆ.

ಪಾಕ್ ಮೊಂಡಾಟ.. ದಕ್ಷಿಣ ಆಫ್ರಿಕಾಕ್ಕೆ ಟೂರ್ನಿ ಶಿಫ್ಟ್?

ಚಾಂಪಿಯನ್ಸ್‌ ಟ್ರೋಫಿಯ ಮಾತುಕತೆ ಇನ್ನು ಆರಂಭಿಕ ಹಂತದಲ್ಲಿದ್ದು, ಹೈಬ್ರಿಡ್‌ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಬೇಕು ಎಂದು ಪಾಕಿಸ್ತಾನಕ್ಕೆ ಐಸಿಸಿ ಖಡಕ್‌ ಸೂಚನೆ ನೀಡಿದೆ. ಭಾರತದ ಪಂದ್ಯಗಳು ಯುಎಇಯಲ್ಲಿ, ಫೈನಲ್‌ ಪಂದ್ಯವನ್ನು ದುಬೈನಲ್ಲಿ ಆಯೋಜಿಸಬೇಕು ಎಂದು ಐಸಿಸಿ ತಿಳಿಸಿದೆ. ಪಾಕಿಸ್ತಾನ ಈ ಷರತ್ತಿಗೆ ಒಪ್ಪಿಕೊಳ್ಳದಿದ್ದರೆ ಇಡೀ ಟೂರ್ನಿಯನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸುವ ಯೋಚನೆಯನ್ನು ಐಸಿಸಿ ಮಾಡುತ್ತಿದೆ. ಈಗಾಗಲೇ ದಕ್ಷಿಣ ಆಫ್ರಿಕಾಕ್ಕೆ ಟೂರ್ನಿ ಆಯೋಜಿಸಲು ರೆಡಿಯಾಗಿರಿ ಎಂಬ ಸೂಚನೆಯು ಐಸಿಸಿ ಕಡೆಯಿಂದ ಹೋಗಿದೆ ಎನ್ನಲಾಗಿದೆ.

ಒಟ್ನಲ್ಲಿ ಮುಂದಿನ ವರ್ಷ ಫೆಬ್ರವರಿ 19ರಿಂದ ಮಾರ್ಚ್ 9ರವರೆಗೆ ಟೂರ್ನಿ ನಡೆಸೋಕೆ ಪಾಕಿಸ್ತಾನ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಆದ್ರೀಗ ಟೂರ್ನಿಯೇ ಎತ್ತಂಗಡಿ ಆಗೋ ಲಕ್ಷಣ ಕಾಣ್ತಿದೆ. ಟೂರ್ನಿಗಾಗಿ ಪಾಕ್ ಸಾವಿರಾರು ಕೋಟಿ ರೂ. ಖರ್ಚು ಮಾಡಿ ರಾವಲ್ಪಿಂಡಿ, ಕರಾಚಿ ಹಾಗೂ ಲಾಹೋರ್‌ ಕ್ರೀಡಾಂಗಣಗಳನ್ನು ಸಿದ್ಧಪಡಿಸಿಕೊಳ್ತಿದೆ. ಟೂರ್ನಿ ಆಯೋಜನೆಯಿಂದ ಒಂದಿಷ್ಟು ಆರ್ಥಿಕತೆಗೆ ಬೂಸ್ಟ್ ಪಡೆಯಬಹುದು ಅಂತಾ  ಪಾಕಿಸ್ತಾನ ಆಯೋಜಿಸಿತ್ತು. ಆದ್ರೀಗ ಎಲ್ಲಾ ಲೆಕ್ಕಾಚಾರ ಉಲ್ಟಾ ಆಗ್ತಿದೆ.

ಅಸಲಿಗೆ  ಭಾರತ-ಪಾಕಿಸ್ತಾನ ತಂಡಗಳು 2012ರಿಂದ ಯಾವುದೇ ದ್ವಿಪಕ್ಷೀಯ ಸರಣಿಯಲ್ಲಿ ಭಾಗವಹಿಸಿಲ್ಲ. ಕಳೆದ ವರ್ಷ ಪಾಕಿಸ್ತಾನ ಆಯೋಜಿಸಿದ್ದ ಏಷ್ಯಾಕಪ್ ಕೂಡ ಹೈಬ್ರಿಡ್ ಮಾದರಿಯಲ್ಲೇ ನಡೆದಿತ್ತು. ಆದರೆ ಭಾರತದಲ್ಲಿ ನಡೆದ ODI ವಿಶ್ವಕಪ್ ಸೇರಿದಂತೆ ICC ಟೂರ್ನಮೆಂಟ್‌ಗಳಲ್ಲಿ ಪಾಕ್​ ಭಾಗಿಯಾಗಿತ್ತು. ಇನ್ನು ಪಾಕಿಸ್ತಾನ ಕೊನೆಯದಾಗಿ 1996ರ ಏಕದಿನ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಿತ್ತು. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತವನ್ನು ಮಣಿಸಿದ್ದ ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು.‌ 2025ರ ಟೂರ್ನಿಯಲ್ಲೂ ಕಮಾಲ್ ಮಾಡೋಕೆ ಕಾಯ್ತಿದ್ದ ಪಾಕಿಸ್ತಾನ ಈಗ ಇಂಗು ತಿಂದ ಮಂಗನಂತಾಗಿರೋದಂತೂ ಸುಳ್ಳಲ್ಲ.

Shwetha M

Leave a Reply

Your email address will not be published. Required fields are marked *