ಭಾರತದ ಹುಲಿಗಳ ಅಬ್ಬರಕ್ಕೆ ಸೋತು ಸುಣ್ಣವಾದ ಹರಿಣಗಳು – ಟೀಮ್ ಇಂಡಿಯಾ ಪವರ್‌ಗೆ ಸೌತ್ಆಫ್ರಿಕಾ ಸುಸ್ತು

ಭಾರತದ ಹುಲಿಗಳ ಅಬ್ಬರಕ್ಕೆ ಸೋತು ಸುಣ್ಣವಾದ ಹರಿಣಗಳು – ಟೀಮ್ ಇಂಡಿಯಾ ಪವರ್‌ಗೆ ಸೌತ್ಆಫ್ರಿಕಾ ಸುಸ್ತು

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಭಾರತದ ಹುಲಿಗಳ ಅಬ್ಬರಕ್ಕೆ ಹರಿಣಗಳು ಅಕ್ಷರಶಃ ನಡುಗಿ ಹೋಗಿವೆ. ಈ ಇಡೀ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಬಿರುಸಿನ ಆಟ ಪ್ರದರ್ಶಿಸಿದ್ದು, ಈ ಪಂದ್ಯ ರೋಚಕವಾಗಲಿದೆ ಎಂದು ಸಂಪೂರ್ಣವಾಗಿ ನಿರೀಕ್ಷಿಸಲಾಗಿತ್ತು. ಆದರೆ, ಟೀಮ್ ಇಂಡಿಯಾದ ಬೌಲರ್‌ಗಳ ಪವರ್‌ಗೆ ಹರಿಣಗಳು ಕೇವಲ 83 ರನ್ ಗಳಿಸಿ ಸೋಲುಪ್ಪಿಕೊಂಡಿದ್ದು ಅಚ್ಚರಿಯೇ.

ಇದನ್ನೂ ಓದಿ: ಸೆಮಿಫೈನಲ್ ರೇಸ್‌ನಲ್ಲಿ ಅಫ್ಘಾನಿಸ್ತಾನ – ಬಾಕಿಯಿರುವ ಎರಡು ಪಂದ್ಯಗಳಲ್ಲಿ ಗೆದ್ದರೆ ಅಫ್ಘಾನಿಸ್ತಾನಕ್ಕೆ ಚಾನ್ಸ್

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನ ಭಾರತದ ಆಟಗಾರರಿಗೆ ಕ್ರಿಕೆಟ್ ಕಾಶಿಯಿದ್ದಂತೆ. ತಮ್ಮದೇ ನೆಲದಲ್ಲಿ ಭಾರತದ ಹುಲಿಗಳು ಮೆರೆದಿದ್ದು ಪರಾಕ್ರಮ. ಹುಲಿಗಳ ಆಕ್ರಮಣಕ್ಕೆ ಹರಿಣಗಳು ಒಬ್ಬರ ಹಿಂದೆ ಒಬ್ಬರಂತೆ ಬಂದ ದಾರಿಯಲ್ಲೇ ವಾಪಸ್ ಆಗಿದ್ದು ಅಭಿಮಾನಿಗಳಿಗಂತೂ ಸರ್‌ಪ್ರೈಸ್. ಸೌತ್ ಆಫ್ರಿಕಾದಂಥಾ ದೈತ್ಯ ಟೀಂನ್ನೇ 83ರನ್​ಗಳಿಗೆ ಆಲೌಟ್ ಮಾಡ್ತಾರೆ ಅಂದರೆ, ಇದಕ್ಕಿಂತ ಹೆಚ್ಚು ಇನ್ನೇನು ಹೇಳಲು ಸಾಧ್ಯ. ಸೌತ್‌ಆಫ್ರಿಕಾ ತಂಡವನ್ನು ಟೀಮ್ ಇಂಡಿಯಾ ಕೇವಲ 83 ರನ್​ಗಳಲ್ಲೇ ಆಲೌಟ್  ಮಾಡಿದೆ. ಈ ಮೂಲಕ ಟೀಮ್ ಇಂಡಿಯಾ ಬರೋಬ್ಬರಿ 243 ರನ್​ಗಳ ಗೆಲುವು ಕಂಡಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಅಜೇಯ 101 ಮತ್ತು ಶ್ರೇಯಸ್ ಅಯ್ಯರ್ ಅವರ 77 ರನ್‌ಗಳ ಆಧಾರದ ಮೇಲೆ ಮೊದಲು ಬ್ಯಾಟ್ ಮಾಡಿದ ಭಾರತ ಐದು ವಿಕೆಟ್ ಕಳೆದುಕೊಂಡು 326 ರನ್ ಕಲೆಹಾಕಿತ್ತು.

ಈ ವರ್ಲ್ಡ್​​ಕಪ್​ನ 5 ಮ್ಯಾಚ್​ಗಳನ್ನ ಟೀಂ ಇಂಡಿಯಾ ಚೇಸಿಂಗ್ ಮೂಲಕವೇ ಗೆದ್ದಿತ್ತು.  6 ವಿಕೆಟ್​ಗಳಿಂದ ಗೆದ್ದಿದ್ದರು.. ಬಳಿಕ 8 ವಿಕೆಟ್​ಗಳಿಂದ ಗೆದ್ದಿದ್ದರು.. ನಂತರ 7 ವಿಕೆಟ್​​ಗಳಿಂದ ಗೆದ್ದಿದ್ದರು. ಮತ್ತೆ ಪುನ: 7 ವಿಕೆಟ್​ಗಳಿಂದಲೇ ಗೆದ್ದರು.. ಮತ್ತೊಮ್ಮೆ 4 ವಿಕೆಟ್​ಗಳಿಂದ ಗೆದ್ದರು. ಹೀಗೆ ಚೇಸಿಂಗ್ ಮೂಲಕ ಟೀಮ್ ಇಂಡಿಯಾ ತನ್ನೆಲ್ಲಾ ಪಂದ್ಯಗಳನ್ನು ಗೆಲ್ಲುತ್ತಾ ಬಂದಿತ್ತು. ಇನ್ನು ಫಸ್ಟ್ ಬ್ಯಾಟಿಂಗ್ ಮಾಡಿ ಬಳಿಕ ಬೌಲಿಂಗ್​ ಮಾಡಿದಾಗ ಒಂದು ಮ್ಯಾಚ್​ನ್ನ 100 ರನ್​​ಗಳಿಂದ ಗೆದ್ದ ಭಾರತ ನಂತರ ಶ್ರೀಲಂಕಾ ವಿರುದ್ಧ ಬರೋಬ್ಬರಿ 302 ರನ್​ಗಳಿಂದ ಗೆದ್ದರು. ದಕ್ಷಿಣ ಆಫ್ರಿಕಾ ವಿರುದ್ಧ 242 ರನ್​​ಗಳ ಅಂತರದಿಂದ ಗೆದ್ದರು. ಇದು ನಿಜವಾಗಲೂ ಟೀಮ್ ಇಂಡಿಯಾದ ತಾಕತ್ತು.

 

Sulekha