ಚೋಕರ್ಸ್ ಹಣೆಪಟ್ಟಿಯನ್ನು ತನ್ನಲ್ಲೇ ಉಳಿಸಿಕೊಂಡ ಹರಿಣಗಳು – ಕೊನೇ ತನಕ ಪಟ್ಟುಬಿಡದೆ ಹೋರಾಡಿ ಗೆದ್ದ ಕಾಂಗರೂಗಳು

ಚೋಕರ್ಸ್ ಹಣೆಪಟ್ಟಿಯನ್ನು ತನ್ನಲ್ಲೇ ಉಳಿಸಿಕೊಂಡ ಹರಿಣಗಳು – ಕೊನೇ ತನಕ ಪಟ್ಟುಬಿಡದೆ ಹೋರಾಡಿ ಗೆದ್ದ ಕಾಂಗರೂಗಳು

ಚೋಕರ್ಸ್ ಎಂಬ ಹಣೆಪಟ್ಟಿಯಿಂದ ಹೊರಗೆ ಬರಬೇಕು ಎಂದು ದಕ್ಷಿಣ ಆಫ್ರಿಕಾ ಪಟ್ಟ ಶ್ರಮ ಕೊನೆಗೂ ವ್ಯರ್ಥವಾಗಿದೆ. ಪಂದ್ಯಾವಳಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾ ತಂಡ ಸೆಮಿಫೈನಲ್​ನಲ್ಲಿ ಮುಗ್ಗರಿಸಿದೆ. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾವನ್ನು 3 ವಿಕೆಟ್‌ಗಳಿಂದ ಸೋಲಿಸಿದೆ.

ಇದನ್ನೂ ಓದಿ: 7 ವಿಕೆಟ್ ಕಬಳಿಸಿ ಸೆಮೀಸ್ ಗೆದ್ದ ಮೊಹಮ್ಮದ್ ಶಮಿ – ವಿಶ್ವಕಪ್‌ನಲ್ಲಿ ಶೈನ್ ಆಗಿರುವ ಶಮಿ ಬದುಕಿನ ಹಿಂದಿದೆ ಕರಾಳ ಕಥೆ

ಆಸ್ಟ್ರೇಲಿಯಾದ ಬೌಲರ್ಸ್​ಗಳು ಆರಂಭದಲ್ಲಿಯೇ ಕಮಾಲ್ ಮಾಡಿದ್ದರು. ಹೇಜಲ್​ವುಡ್ ಮತ್ತು ಮಿಚೆಲ್ ಸ್ಟಾರ್ಕ್ ಅಕ್ಷರಶ: ದಕ್ಷಿಣ ಆಫ್ರಿಕಾ ಬ್ಯಾಟ್ಸ್​ಮನ್​ಗಳ ಮೇಲೆ ಸವಾರಿ ಮಾಡಿದರು. ಕ್ಯಾಪ್ಟನ್ ಟೆಂಬಾ ಬವುಮಾ, ಕ್ವಿಂಟನ್ ಡಿಕಾಕ್, ರಾಸ್ಸಿ ಡಸ್ಸೆನ್ ಮತ್ತು ಏಡೆನ್ ಮ್ಯಾಕ್ರಮ್ ಹೀಗೆ ನಾಲ್ವರು ಬ್ಯಾಟ್ಸ್​​ಮನ್​ಗಳು ಆರಂಭದಲ್ಲೇ ಪೆವಿಲಿಯನ್​ಗೆ ಪರೇಡ್ ಮಾಡಿದರು. ಬಳಿಕ ಟೀಂಗೆ ನೆರವಾಗಿದ್ದು, ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್. ಕ್ಲಾಸೆನ್ ಅವರು 47 ರನ್​ ಗಳಿಸಿದ್ರೆ, ಡೇವಿಡ್ ಮಿಲ್ಲರ್ ಆ ಪ್ರೆಷರ್ ಮಧ್ಯೆಯೂ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಸೆಂಚೂರಿ ಹೊಡೆದರು. ಡೇವಿಡ್ ಮಿಲ್ಲರ್ ಬ್ಯಾಟಿಂಗ್​​ನಿಂದಾಗಿ ಸೌತ್​ ಆಫ್ರಿಕಾ ಅಟ್​ಲೀಸ್ಟ್ 212 ರನ್​​ಗಳ ಕಾಂಪಿಟೀಟಿವ್ ಸ್ಕೋರ್ ಗಳಿಸೋಕೆ ಸಾಧ್ಯವಾಯ್ತು.

ಇನ್ನು ಚೇಸಿಂಗ್​ಗೆ ಇಳಿದ ಆಸ್ಟ್ರೇಲಿಯಾದ ಓಪನರ್ಸ್ ಟ್ರಾವಿಡ್ ಹೆಡ್ ಮತ್ತು ಡೇವಿಡ್ ವಾರ್ನರ್​​ ಆರಂಭದಿಂದಲೇ ಅಗ್ರೆಸ್ಸಿವ್ ಆಡೋಕೆ ಶುರುಮಾಡಿದ್ರು. ಆಸ್ಟ್ರೇಲಿಯಾ ಈಸಿಯಾಗಿಯೇ ವಿನ್ ಆಗುತ್ತೆ ಅಂತಾ ಅಂದುಕೊಳ್ಳುವಷ್ಟರಲ್ಲೇ ಡೇವಿಡ್ ವಾರ್ನರ್ 29 ರನ್​ಗೆ ಔಟಾದ್ರು. ಮತ್ತೊಂದೆಡೆ ಟ್ರಾವಿಸ್ ಹೆಡ್​ಗೆ ಈ ಮ್ಯಾಚ್​ನಲ್ಲಿ ನಿಜಕ್ಕೂ ಲಕ್ ಸಾಥ್ ಕೊಟ್ಟಿತ್ತು. ಟ್ರಾವಿಸ್​ ಹೆಡ್​​ರ ಎರಡು ಕ್ಯಾಚ್​ಗಳನ್ನ ಸೌತ್​ ಆಫ್ರಿಕನ್ಸ್  ಡ್ರಾಪ್ ಮಾಡಿದ್ರು. ಹೀಗಾಗಿ ಟ್ರಾವಿಸ್ 62 ರನ್ ಮಾಡಿದ್ರು. ಬಳಿಕ ಲಬುಶೇನ್​ ಅವರ ಕ್ಯಾಚ್​ನ್ನ ವಿಕೆಟ್ ಕೀಪರ್ ಕ್ವಿಂಟನ್ ಡಿಕಾಕ್ ಡ್ರಾಪ್ ಮಾಡಿದ್ರು. ಇಷ್ಟೊತ್ತಿಗಾಗಲೇ ದಕ್ಷಿಣ ಆಫ್ರಿಕಾ ಕ್ಯಾಪ್ಟನ್ ಬವುಮಾಗೆ ತಮ್ಮಲ್ಲೊಂದಷ್ಟು ಓಳ್ಳೆಯ ಸ್ಪಿನ್ನರ್ಸ್ ಇದ್ದಾರೆ ಅನ್ನೋದು ನೆನಪಾಯ್ತು. ಕೊಲ್ಕತ್ತಾದ ಪಿಚ್​​ನಲ್ಲಿ ಬಾಲ್ ತುಂಬಾನೆ ಟರ್ನ್ ಆಗ್ತಿತ್ತು. ಹೀಗಾಗಿ ಸ್ಪಿನ್ನರ್ಸ್​ಗಳನ್ನ ಸ್ವಲ್ಪ ಮೊದಲೇ ಇಳಿಸ್ತಿದ್ರೆ ಆಸ್ಟ್ರೇಲಿಯಾ ಬ್ಯಾಟ್ಸ್​​ಮನ್​ಗಳ ಮೇಲೆ ಇನ್ನಷ್ಟು ಪ್ರೆಷರ್ ಹಾಕಬಹುದಿತ್ತೋ ಏನೋ.. ಇನ್ನು ಸೌತ್​ ಆಫ್ರಿಕಾ ಸಿನ್ನರ್ಸ್​ಗಳು ದಾಳಿಗಿಳಿಯೋ ವೇಳೆ ಸ್ಟೀವ್​ ಸ್ಮಿತ್​ ಕ್ರೀಸ್​ಗೆ ಬಂದಿದ್ರು. ಹೇಳಿ ಕೇಳಿ ಸ್ಮಿತ್​ ಸ್ಪಿನ್​​ ಬಾಲ್ ಫೇಸ್​ ಮಾಡಬಲ್ಲ ವನ್ ಆಫ್​ ದಿ ಬೆಸ್ಟ್ ಬ್ಯಾಟ್ಸ್​ಮನ್. ಹಾಗೆಯೇ ಸ್ಟೀವ್ ಸ್ಮಿತ್ 62 ಬಾಲ್​ಗಳಲ್ಲಿ 30 ರನ್​ ಮಾಡಿ ಅತ್ಯಂತ ಕ್ರೂಶಿಯಲ್ ಇನ್ನಿಂಗ್ಸ್ ಆಡಿದರು.

ಸೌತ್ ಆಫ್ರಿಕನ್ಸ್ ಕ್ಯಾಚ್​​ಗಳನ್ನ ಬಿಟ್ಟೇ ಈ ಮ್ಯಾಚ್​​ನ್ನ ಸೋತಿದ್ದಾರೆ ಅಂದರೂ ತಪ್ಪಾಗಲ್ಲ. ಆಸ್ಟ್ರೇಲಿಯಾಗೆ ಚೇಸ್​ ಮಾಡೋಕೆ ಏನು ಭಾರಿ ಸ್ಕೋರ್ ಅಂತೂ ಇರಲಿಲ್ಲ. ಹೀಗಿರೋವಾಗ ಟೈಟ್ ಫೀಲ್ಡಿಂಗ್ ಮಾಡದೆ ಅಲ್ಲೇ ಲೂಸ್ ಬಿಟ್ರೆ, ಮ್ಯಾಚ್ ಟರ್ನ್ ಮಾಡೋ ಕ್ಯಾಚ್​ಗಳನ್ನೇ ಡ್ರಾಪ್ ಮಾಡಿದ್ದೇ ಮುಳುವಾಗಿತ್ತು. ಅದು ದಕ್ಷಿಣ ಆಫ್ರಿಕಾ ಯಾವಾಗಲೂ ಟಾಪ್​​ ಫೀಲ್ಡಿಂಗ್‌ನಿಂದಲೇ ಗುರುತಿಸಿಕೊಂಡಿರುವ ಟೀಂ. ಆದ್ರೆ ಅವರಿಂದ ಈ ರೀತಿಯ ಫೀಲ್ಡಿಂಗ್​ನ್ನ​ ಯಾರು ಕೂಡ ನಿರೀಕ್ಷಿಸಿರಲಿಲ್ಲ. ​​ ಸೌತ್ ಆಫ್ರಿಕನ್ಸ್ ಕ್ಯಾಚ್ ಬಿಟ್ರು.. ಸೆಮಿಫೈನಲ್ ಸೋತ್ರು ಅಷ್ಟೇ.. ಜೊತೆಗೆ ಬ್ಯಾಟಿಂಗ್​ನಲ್ಲಿ ಇನ್ನೊಂದಷ್ಟು ಸ್ಕೋರ್​ ಮಾಡ್ತಿದ್ರೆ, ಅಂದ್ರೆ 260-270 ಹೊಡೀತಿದ್ರೂ ಸೌತ್​ ಆಫ್ರಿಕಾ ಈ ಮ್ಯಾಚ್ ಗೆಲ್ತಿತ್ತು. ಆದ್ರೇನು ಮಾಡೋದು ಕ್ರಿಕೆಟ್​ನಲ್ಲಿ, ಅದ್ರಲ್ಲೂ ವರ್ಲ್ಡ್​ಕಪ್​ನಲ್ಲಿ ಸೌತ್ ಆಫ್ರಿಕಾ ಮೋಸ್ಟ್ ಅನ್​ಲಕ್ಕೀ ಟೀಂ. ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್​​​ನಲ್ಲಿ 3ನೇ ಸೆಮಿಫೈನಲ್​ ಮ್ಯಾಚ್ ಆಡಿ, ಮತ್ತೊಮ್ಮೆ ಸೋತು, ಪುನ: ಚೋಕರ್ಸ್​ಗಳು ಅಂತಾ ಅನ್ನಿಸಿಕೊಂಡಿದ್ದಾರೆ. ಈ ಬಾರಿಯೂ ದಕ್ಷಿಣ ಆಫ್ರಿಕನ್ನರಿಗೆ ಚೋಕರ್ಸ್ ಹಣೆಪಟ್ಟಿಯನ್ನ ಕಳಚಿಕೊಳ್ಳೋಕೆ ಸಾಧ್ಯವಾಗಿಲ್ಲ.

ಸೋಲಿನ ಬಳಿಕ ಭಾವುಕರಾಗಿ ಮಾತನಾಡಿದ ನಾಯಕ ತೆಂಬ ಬಾವುಮಾ ಪಂದ್ಯವನ್ನು ಯಾವ ಹಂತದಲ್ಲಿ ಪಂದ್ಯವನ್ನು ಕಳೆದುಕೊಂಡೆವು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.  ‘ಅದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಮೊದಲನೆಯದಾಗಿ ಆಸ್ಟ್ರೇಲಿಯಾಕ್ಕೆ ಅಭಿನಂದನೆಗಳು. ಫೈನಲ್‌ಗೆ ಅವರಿಗೆ ಶುಭಾಶಯಗಳು. ಅವರು ಇಂದು ಚೆನ್ನಾಗಿ ಆಡಿದ್ದಾರೆ. ನಾವು ಬ್ಯಾಟ್ ಮತ್ತು ಬಾಲ್‌ನಿಂದ ಪ್ರಾರಂಭಿಸಿದ ರೀತಿ ಈ ಪಂದ್ಯದ ಟರ್ನಿಂಗ್ ಪಾಯಿಂಟ್, ಅಲ್ಲಿಯೇ ನಾವು ಸೋತಿದ್ದೇವೆ. ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಆಕ್ರಮಣಕಾರಿ ಕ್ರಿಕೆಟ್ ಆಡಿತು, ಇದು ನಿಜವಾಗಿಯೂ ನಮ್ಮನ್ನು ಒತ್ತಡಕ್ಕೆ ಸಿಲುಕಿಸಿತು. ನೀವು ಕೇವಲ 24 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡ ಬಳಿಕ ಉತ್ತಮ ಸ್ಕೋರ್ ದಾಖಲಿಸಲು ಯಾವಾಗಲೂ ಕಷ್ಟಪಡಬೇಕಾಗುತ್ತದೆ. ಮಿಲ್ಲರ್ ಮತ್ತು ಕ್ಲಾಸೆನ್ ಇದ್ದಾಗ ಸ್ಕೋರ್ ಬೋರ್ಡ್​ನಲ್ಲಿ ಏರಿಕೆ ಕಂಡುಬರುತ್ತಿತ್ತು. ಆದರೆ ದುರದೃಷ್ಟವಶಾತ್ ಅದು ಹೆಚ್ಚು ಕಾಲ ಉಳಿಯಲಿಲ್ಲ. ಮಿಲ್ಲರ್ ಅವರ ಇನ್ನಿಂಗ್ಸ್ ಅದ್ಭುತವಾಗಿತ್ತು. ಅಂತಹ ಒತ್ತಡದ ಪರಿಸ್ಥಿತಿಯಲ್ಲಿ, ಅದರಲ್ಲೂ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಈ ರೀತಿಯ ಪ್ರದರ್ಶನ ನೀಡಿದ್ದು ಶ್ಲಾಘನೀಯ ಎಂದು ದಕ್ಷಿಣ ಆಫ್ರಿಕಾ ನಾಯಕ ತೆಂಬ ಬಾವುಮಾ ಹೇಳಿದರು.

 

Sulekha