ಹರಿಣಗಳ ಕಿವಿ ಹಿಂಡಿದ ಕಿವೀಸ್ ಪಡೆ – ಸೌತ್ ಆಫ್ರಿಕಾಕ್ಕೆ ಮತ್ತೆ ಸಿಕ್ತು ಚೋಕರ್ಸ್ ಹಣೆಪಟ್ಟಿ

ಹರಿಣಗಳ ಕಿವಿ ಹಿಂಡಿದ ಕಿವೀಸ್ ಪಡೆ – ಸೌತ್ ಆಫ್ರಿಕಾಕ್ಕೆ ಮತ್ತೆ ಸಿಕ್ತು ಚೋಕರ್ಸ್ ಹಣೆಪಟ್ಟಿ

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವೆ ನಡೆದಿದ್ದು ನಿರ್ಣಾಯಕ ಪಂದ್ಯ. ಟಿ20 ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯ ಎರಡೂ ತಂಡಕ್ಕೂ ಮಹತ್ವದ್ದಾಗಿತ್ತು. ನ್ಯೂಜಿಲೆಂಡ್ ಪಡೆ ಇಡೀ ಪಂದ್ಯವನ್ನು ತನ್ನ ಕೈವಶ ಮಾಡಿಕೊಂಡಿರುವುದು ರೋಚಕ ಎನಿಸಿದರೆ, ದಕ್ಷಿಣ ಆಫ್ರಿಕಾ ಹೀನಾಯ ಸೋಲು ಕೂಡಾ ಅಚ್ಚರಿಗೊಳಿಸಿದೆ.

ಇದನ್ನೂ ಓದಿ:ಸಂಜು-ಅಭಿ ಜೊತೆಯಾಟವೇ ಪ್ಲಸ್ – ವರುಣ್ ಬದಲು ಕುಲ್ದೀಪ್ ಗೆ ಚಾನ್ಸ್?

ಚೋಕರ್ಸ್ ಹಣೆಪಟ್ಟಿಯನ್ನ ಧರಿಸಿಕೊಂಡೇ ಮತ್ತೊಂದು ಮತ್ತೊಂದು ಐಸಿಸಿ ಟೂರ್ನಮೆಂಟ್‌ನ ನಾಕೌಟ್‌ಗಳಲ್ಲಿ ದಕ್ಷಿಣ ಆಫ್ರಿಕಾದ ಪ್ರಯಾಣವು ಪ್ರಶಸ್ತಿ ಇಲ್ಲದೆ ಕೊನೆಗೊಂಡಿದೆ. ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೌತ್ ಆಫ್ರಿಕಾದ ಪರಿಸ್ಥಿತಿ ಸೋತ ಆಫ್ರಿಕಾ ಎಂಬಂತಾಗಿದೆ. ಕಿವೀಸ್ ಗೆಲುವಿನ ಹೀರೋ ಅಲೆನ್ ಹೊಡೆದ ನೂರು ರನ್, ಹರಿಣಗಳ ಕನಸನ್ನು ನುಚ್ಚು ನೂರು ಮಾಡಿದೆ. ಕೊನೆಗೂ  ಐಡೆನ್ ಮಾರ್ಕ್ರಾಮ್ ನೇತೃತ್ವದ ತಂಡ ಕಿವೀಸ್ ಕೈಯಲ್ಲಿ ಸರಿಯಾಗಿಯೇ ಕಿವಿ ಹಿಂಡಿಸಿಕೊಂಡಿದೆ. ಈ ಪಂದ್ಯವನ್ನು 9 ವಿಕೆಟ್‌ಗಳಿಂದ ಗೆದ್ದ ನ್ಯೂಜಿಲೆಂಡ್ ತಂಡ ಫೈನಲ್ ತಲುಪಿತು. ನ್ಯೂಜಿಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದರೆ, ದಕ್ಷಿಣ ಆಫ್ರಿಕಾ ತಂಡದ ಎಲ್ಲಾ ಲೆಕ್ಕಚಾರವನ್ನು ನ್ಯೂಜಿಲೆಂಡ್ ಉಲ್ಟಾ ಮಾಡಿತ್ತು. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ವಿಭಾಗ ಹೆಚ್ಚು ಗಮನ ಸೆಳೆಯಲಿಲ್ಲ. ಆರಂಭದಲ್ಲೇ ಬಿಗ್ ಇನ್ನಿಂಗ್ಸ್ ಆಡಿ ತಂಡಕ್ಕೆ ಆಸರೆಯಾಗಬೇಕಿದ್ದ ಟಾಪ್ ಆರ್ಡರ್ ಬ್ಯಾಟಿಂಗ್ ವಿಭಾಗ ಕೈ ಕೊಟ್ಟಿತ್ತು. ಐಡೆನ್ ಮಾರ್ಕ್ರಾಮ್ (18), ಕ್ವಿಂಟನ್ ಡಿ ಕಾಕ್ (10), ರಿಯಾನ್ ರಿಕೆಲ್ಟನ್ (0), ಡೆವಾಲ್ಡ್ ಬ್ರೆವಿಸ್ (34), ಡೇವಿಡ್ ಮಿಲ್ಲರ್ (6), ಟ್ರಿಸ್ಟಾನ್ ಸ್ಟಬ್ಸ್ (29) ವಿಕೆಟ್‌ಗಳು ಉರುಳುತ್ತಾ ಹೋದವು. ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬ್ಯಾಟರ್​​ಗಳು ಪೆವಿಲಿಯನ್ ಪರೇಡ್ ನಡೆಸಿದರು. ಒಬ್ಬ ಹಿಂದೆ ಒಬ್ಬರಂತೆ ವಿಕೆಟ್ ಕಳೆದುಕೊಂಡರು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಉತ್ತಮ ಜೊತೆಯಾಟದ ಅವಶ್ಯಕತೆಯಿತು.

ಆದರೆ, ನ್ಯೂಜಿಲೆಂಡ್ ತಂಡದ ಆರಂಭಿಕ ಜೋಡಿ ಹರಿಣ ಪಡೆಯ ಬೌಲರ್‌ಗಳನ್ನು ಬೆಂಡೆತ್ತ ತೊಡಗಿದರು. ಆರಂಭಿಕ ಜೋಡಿ ಟಿಮ್ ಸೀಫರ್ಟ್  ಮತ್ತು ಫಿಲ್ ಆಲೆನ್ ಅಬ್ಬರಕ್ಕೆ ಇಡೀ ಸ್ಟೇಡಿಯಂ ಮೂಲೆ ಮೂಲೆಗಳಲ್ಲೂ ಬಾಲ್ ಗಳು ಬೀಳತೊಡಗಿದವು. ಟಿಮ್ ಸೀಫರ್ಟ್ 33 ಎಸೆತಗಳಲ್ಲಿ 58 ರನ್ ಗಳ ಅಬ್ಬರದ ಅರ್ಧಶತಕ ಸಿಡಿಸಿದರು. ಮತ್ತೊಂದಡೆ ಅಬ್ಬರಿಸಿದ  ಫಿಲ್ ಅಲೆನ್  33 ಎಸೆತಗಳಲ್ಲಿ ಅಜೇಯ 100 ರನ್ ಗಳಿಸಿ  ದಾಖಲೆಯ ಶತಕ ಬಾರಿಸಿದರು. ಈ ಜೋಡಿಯನ್ನು ಔಟ್ ಮಾಡುವಲ್ಲಿ ದಕ್ಷಿಣ ಅಫ್ರಿಕಾ ಬೌಲರ್​​ಗಳು ಯಶಸ್ವಿಯಾಗಲಿಲ್ಲ. ಕಗಿಸೋ ರಬಾಡ ಅವರು ಟಿಮ್ ಸೀಫರ್ಟ್ ಔಟ್ ಮಾಡಿದ್ದು, ಬಿಟ್ಟರೆ ಉಳಿದು ಯಾವ ಬೌಲರ್ ವಿಕೆಟ್ ಪಡೆಯಲಿಲ್ಲ. ಹೀಗಾಗಿ ನ್ಯೂಜಿಲೆಂಡ್ ತಂಡ 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.

Sulekha

Leave a Reply

Your email address will not be published. Required fields are marked *