ಕಾಂಗರೂಗಳ ತವರಿನಲ್ಲಿ ಹರಿಣಗಳ ಅಬ್ಬರ – ಆಸೀಸ್ ವಿರುದ್ಧ 2ನೇ ಟೆಸ್ಟ್ ಗೆದ್ದ ದಕ್ಷಿಣ ಆಫ್ರಿಕಾ

ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಸೋಲು ಕಂಡಿದ್ದ ದಕ್ಷಿಣ ಆಫ್ರಿಕಾ, ಎರಡನೇ ಪಂದ್ಯದಲ್ಲಿ ತಿರುಗೇಟು ನೀಡಿದೆ. ಅದೂ ಸಾಮಾನ್ಯ ಗೆಲುವಲ್ಲ, ಇನ್ನಿಂಗ್ಸ್ ಮತ್ತು 31 ರನ್‌ಗಳ ಭರ್ಜರಿ ಜಯ! ಈ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿರುವ ಹರಿಣಗಳ ಪಡೆ, ಕಾಂಗರೂಗಳ ತವರಿನಲ್ಲಿ ತನ್ನ ತಾಕತ್ತು ಪ್ರದರ್ಶಿಸಿದೆ.
ಈ ಐತಿಹಾಸಿಕ ಗೆಲುವಿನ ರೂವಾರಿಗಳಾಗಿ ನಾಯಕ ತೆಂಬಾ ಬವುಮಾ ಮತ್ತು ಮಾರ್ಕೊ ಯಾನ್ಸೆನ್ ಹೊರಹೊಮ್ಮಿದ್ದಾರೆ. ನಾಯಕನ ಜವಾಬ್ದಾರಿ ಹೊತ್ತ ಬವುಮಾ ಅಮೋಘ ಶತಕ ಸಿಡಿಸಿ ತಂಡಕ್ಕೆ ಬಲ ತುಂಬಿದರೆ, ಯಾನ್ಸೆನ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿ ಆಸ್ಟ್ರೇಲಿಯಾವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ದಕ್ಷಿಣ ಆಫ್ರಿಕಾದ ಸಂಘಟಿತ ಪ್ರದರ್ಶನದ ಮುಂದೆ ಆಸ್ಟ್ರೇಲಿಯಾದ ಆಟಗಾರರು ಸಂಪೂರ್ಣವಾಗಿ ಮಂಕಾದರು.
ಇದನ್ನೂ ಓದಿ: ಶ್ರೇಯಸ್ ಗೆ ಈಗ REAL ಸವಾಲ್! – ಬಲಿಷ್ಠ NZ ಬೇಟೆಯಾಡಿದ್ರಷ್ಟೇ ಭವಿಷ್ಯ
ಈ ಪಂದ್ಯದ ಮತ್ತೊಂದು ವಿಶೇಷ ಅಂದ್ರೆ, ಫಾಲೋ ಆನ್ ಹೇರಿದ ಬಳಿಕವೂ ಆಸ್ಟ್ರೇಲಿಯಾವನ್ನು ಮಣಿಸಿದ ದಕ್ಷಿಣ ಆಫ್ರಿಕಾದ ಸಾಧನೆ! ಬರೋಬ್ಬರಿ 56 ವರ್ಷಗಳ ಬಳಿಕ ಆಸ್ಟ್ರೇಲಿಯಾ ವಿರುದ್ಧ ಇಂತಹ ಐತಿಹಾಸಿಕ ಗೆಲುವು ದಾಖಲಿಸಿರುವುದು ಹರಿಣಗಳ ಪಡೆಯ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಮೊದಲ ಪಂದ್ಯದ ಸೋಲಿನಿಂದ ಕಂಗೆಟ್ಟಿದ್ದ ತಂಡ, ಎರಡನೇ ಪಂದ್ಯದಲ್ಲಿ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದೆ. ಇದೀಗ ಸರಣಿ ಸಮಬಲಗೊಂಡಿದ್ದು, ಮೂರನೇ ಟೆಸ್ಟ್‌ನಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಆಸ್ಟ್ರೇಲಿಯಾ ತಿರುಗೇಟು ನೀಡುತ್ತಾ, ಅಥವಾ ದಕ್ಷಿಣ ಆಫ್ರಿಕಾ ಸರಣಿ ಗೆದ್ದು ಇತಿಹಾಸ ನಿರ್ಮಿಸುತ್ತಾ? ಕ್ರಿಕೆಟ್ ಅಭಿಮಾನಿಗಳ ಕಣ್ಣು ಈಗ ನಿರ್ಣಾಯಕ ಪಂದ್ಯ ಮೇಲಿದೆ!

ನೋಡಿರಿ

