AFG ಬ್ಯಾಟರ್ಸ್ ಪೆವಿಲಿಯನ್ ಪರೇಡ್ – 56 ರನ್ ಗೆ ಆಲೌಟ್.. ಹಿಂಗೂ ಆಡ್ತಾರಾ?
ತಾನೇ ತೋಡಿದ ಹಳ್ಳಕ್ಕೆ ಬಿತ್ತಾ ಆಫ್ಘನ್?

AFG ಬ್ಯಾಟರ್ಸ್ ಪೆವಿಲಿಯನ್ ಪರೇಡ್ – 56 ರನ್ ಗೆ ಆಲೌಟ್.. ಹಿಂಗೂ ಆಡ್ತಾರಾ?ತಾನೇ ತೋಡಿದ ಹಳ್ಳಕ್ಕೆ ಬಿತ್ತಾ ಆಫ್ಘನ್?

ಇಡೀ ಕ್ರಿಕೆಟ್ ಜಗತ್ತೇ ಎದುರು ನೋಡ್ತಿದ್ದ ಟಿ-20 ವಿಶ್ವಕಪ್​ನ ಮೊದಲ ಸೆಮೀಸ್ ಪಂದ್ಯ ಮುಗಿದಿದೆ. ಬಟ್ ಮ್ಯಾಚ್​ನ ಮೊದಲ ಇನ್ನಿಂಗ್ಸ್​ನಲ್ಲೇ ಆಲ್​ಮೋಸ್ಟ್ ಯಾವ ಟೀಂ ಫಿನಾಲೆಗೆ ಲಗ್ಗೆ ಇಡುತ್ತೆ ಅನ್ನೋದು ಕನ್ಫರ್ಮ್ ಆಗಿತ್ತು. ಫಸ್ಟ್ ಓವರ್​ನಿಂದಲೇ ಒನ್ ಸೈಡೆಡ್​ನಂತೆಯೇ ನಡೆದ ಕದನದಲ್ಲಿ ಕೊನೆಗೂ ದಕ್ಷಿಣ ಗೆದ್ದು ಬೀಗಿದೆ. ಟೂರ್ನಿಯುದ್ದಕ್ಕೂ ಬಲಿಷ್ಠ ತಂಡಗಳನ್ನೇ ಬಗ್ಗು ಬಡಿದು ಇಡೀ ಜಗತ್ತಿನ ಗಮನ ಸೆಳೆದ ಆಫ್ಘನಿಸ್ತಾನ ಕೊನೇ ಹಂತದಲ್ಲಿ ಮುಗ್ಗರಿಸಿದೆ. ನ್ಯೂಜಿಲೆಂಡ್, ಬಾಂಗ್ಲಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಗೆದ್ದ ನಂತರ ಅಫ್ಘಾನಿಸ್ತಾನವು ನಿರ್ಣಾಯಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲುಂಡು ಟೂರ್ನಿಯಿಂದ ಹೊರಬಿದ್ದಿದೆ. ಇದರೊಂದಿಗೆ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶದ ಕನಸು ಕಂಡಿದ್ದ ಅಫ್ಘಾನ್ ಗೆ ನಿರಾಸೆ ಎದುರಾಗಿದೆ. ಆಫ್ಘನ್ ತಂಡ ಎಡವಿದ್ದೆಲ್ಲಿ? ರಶೀದ್ ಖಾನ್ ಕಣ್ಣೀರಿಟ್ಟಿದ್ದೇಕೆ? ಸೌತ್ ಆಫ್ರಿಕಾ ಬರೆದ ದಾಖಲೆಗಳೆಷ್ಟು? ಈ ಬಗೆಗಿನ ರೋಚಕ ಸಂಗತಿ ಇಲ್ಲಿದೆ.

ಇದನ್ನೂ ಓದಿ: ವಿಶ್ವಕಪ್ ನಲ್ಲಿ ಜಗತ್ತನ್ನೇ ಗೆದ್ದ AFG | NZ, AUSಗೂ ನೀರು ಕುಡಿಸಿದ್ದೇಗೆ?

2024ರ ವಿಶ್ವಕಪ್ ಹತ್ತು ಹಲವು ದಾಖಲೆಗಳನ್ನ ನಿರ್ಮಿಸಿದೆ. ಸೆಮೀಸ್​ಗೆ ಎಂಟ್ರಿ ಕೊಟ್ಟು ಇತಿಹಾಸ ಸೃಷ್ಟಿಸಿದ್ದ ಅಫ್ಘಾನಿಸ್ತಾನ ತಂಡ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಮುಗ್ಗರಿಸಿದೆ. ಮಹತ್ವದ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ರೋಚಕ ಜಯ ಸಾಧಿಸಿದ ಆಫ್ಘಾನ್ ತಂಡ ಸೆಮಿಫೈನಲ್ ಪಂದ್ಯದಲ್ಲಿ ಅಂತ್ಯಂತ ಹೀನಾಯವಾಗಿ ಸೋಲೊಪ್ಪಿಕೊಂಡಿದೆ. ಗ್ರೂಪ್ ಹಾಗೂ ಸೂಪರ್ 8 ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಅಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್​ ಗಳಿಂದ ಸೋಲುಂಡಿದೆ. ಬೌಲಿಂಗ್​ನಲ್ಲಿ ಅದ್ಬುತ ಪ್ರದರ್ಶನ ತೋರಿದ ದಕ್ಷಿಣ ಆಫ್ರಿಕಾ ತಂಡ ಅಫ್ಘಾನ್ ತಂಡದ ವಿರುದ್ಧ ಭರ್ಜರಿ ಗೆಲುವು ಪಡೆದುಕೊಂಡಿದೆ. ಟಾಸ್ ಗೆದ್ದರೂ ಕೂಡ ಆಫ್ಘನ್ ನಾಯಕ ರಶೀದ್ ಖಾನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ರು. ಬಹುಶಃ ಇದೇ ನಿರ್ಧಾರ ರಶೀದ್ ಬಳಗಕ್ಕೆ ದೊಡ್ಡ ಶಾಕ್ ನೀಡಿತು. ಮೊದಲ ಓವರ್​ನಿಂದಲೇ ಕರಾರುವಾಕ್ ದಾಳಿ ಸಂಘಟಿಸಿದ ಸೌತ್ ಆಫ್ರಿಕಾ ಬೌಲರ್​ಗಳು ಆರಂಭದಲ್ಲೇ ಆಘಾತ ನೀಡುವಲ್ಲಿ ಯಶಸ್ವಿಯಾದರು. ಬ್ಯಾಟಿಂಗ್​ಗೆ ಇಳಿದ ಆಫ್ಘನ್ ಬ್ಯಾಟರ್ಸ್ ಅಕ್ಷರಶಃ ಪೆವಿಲಿಯನ್ ಪರೇಡ್ ನಡೆಸಿದ್ರು. ಟೂರ್ನಿಯ ಆರಂಭದಿಂದಲೇ ಉತ್ತಮ ಆರಂಭ ನೀಡುತ್ತಿದ್ದ ಆಫ್ಘಾನ್ ಆರಂಭಿಕರು ಮಹತ್ವದ ಪಂದ್ಯದಲ್ಲಿ ಕಂಪ್ಲೀಟ್ ಫೇಲ್ಯೂರ್ ಆದ್ರು. ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮಾರ್ಕೊ ಜಾನ್ಸನ್ ಮೊದಲ ಓವರ್‌ನಲ್ಲಿ ಗುರ್ಬಾಜ್​ರನ್ನ ಡಕ್​ಔಟ್ ಮಾಡಿ ಪೆವಿಲಿಯನ್‌ಗೆ ಕಳುಹಿಸಿದರು. ನಂತರದ ಓವರ್‌ನಲ್ಲಿ ಗುಲ್ಬದಿನ್ ನೈಬ್ 9 ರನ್ ಗಳಿಗೆ ಬೌಲ್ಡ್ ಆಗಿ ಹಿಂದಿರುಗಿದರು. ಇಲ್ಲಿಂದ ಆರಂಭವಾದ ವಿಕೆಟ್ ಪತನ ಯಾವುದೇ ಹಂತದಲ್ಲೂ ಕಮ್ ಬ್ಯಾಕ್ ಮಾಡಲಿಲ್ಲ. ಜದ್ರಾನ್ 2 ರನ್ ಗಳಿಗೆ ರಬಾಡಗೆ ಬಲಿಯಾದ್ರೆ ಬಳಿಕ ಬಂದ ಯಾವ ಬ್ಯಾಟ್ಸ್ ಮನ್ ಕೂಡ 10 ನಿಮಿಷ ಕ್ರೀಸ್ ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಒಮರ್ಜಾಯ್ 10 ರನ್, ನಬಿ ಶೂನ್ಯ, ಖರೋತ್ 2 ರನ್, ಕರೀಂ ಜನತ್ 8, ರಶೀದ್ ಖಾನ್ 8, ನೂರ್ ಅಹ್ಮದ್ ಶೂಣ್ಯ ಶೂನ್ಯ, ನವೀನ್ ಉಲ್ ಹಕ್ 2 ರನ್​ಗೆ ವಿಕೆಟ್ ಒಪ್ಪಿಸಿದ್ರು. ವಿಪರ್ಯಾಸ ಅಂದ್ರೆ ಒಮರ್ಜಾಯ್ ಸಿಡಿಸಿದ 10 ರನ್​ಗಳೇ ವೈಯಕ್ತಿಯ ಹೈಯೆಸ್ಟ್ ಸ್ಕೋರ್. ಮಿಕ್ಕಿದವರ್ಯಾರೂ ಸಿಂಗಲ್ ಡಿಜಿಟ್ ಕೂಡ ದಾಟಲಿಲ್ಲ. ಅದಕ್ಕಿಂತ ದಯನೀಯ ಸ್ಥಿತಿ ಅಂದ್ರೆ ಮೂವರು ಆಟಗಾರರು ಡಕ್​ಔಟ್ ಆದ್ರು. ಸೌತ್ ಆಫ್ರಿಕಾ ಬೌಲರ್ಸ್ ದಾಳಿಗೆ ಪತರಗುಟ್ಟಿದ ಆಫ್ಘನ್ ಪಡೆ 11.5 ಓವರ್​ಗಳಲ್ಲೇ 56 ರನ್​ ಗಳಿಸಿ ಆಲೌಟ್ ಆದ್ರು. 120 ಬಾಲ್​ಗಳಲ್ಲಿ 57 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಸೌತ್ ಆಫ್ರಿಕಾ ಈ ಸ್ಕೋರ್ ರೀಚ್ ಆಗೋದು ಸವಾಲು ಅನ್ನಿಸ್ಲೇ ಇಲ್ಲ. ಸುಲಭ ಗುರಿ ಬೆನ್ನಟ್ಟಿದ ಸಫಾರಿ ಪಡೆ ಕೇವಲ 8.5 ಓವರ್ ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 60 ರನ್ ಸಿಡಿಸಿ ಫಿನಾಲೆಗೆ ಗ್ರ್ಯಾಂಡ್ ಆಗೇ ಎಂಟ್ರಿ ಕೊಡ್ತು. ಆಫ್ರಿಕಾ ಪರ ಡಿಕಾಕ್ 5 ರನ್ ಗಳಿಸಿ ಔಟ್ ಆದರೆ, ರೆಜಾ ಹೆಂಡ್ರಿಕ್ಸ್ 29 ರನ್, ನಾಯಕ ಐಡೆನ್ ಮಾರ್ಕ್ರಾಮ್ 23 ರನ್ ಗಳಿಸಿ ಅಜೇಯರಾಗಿ ಉಳಿದರು.  ಈ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಒಂಬತ್ತು ವಿಕೆಟ್‌ಗಳಿಂದ ಹೀನಾಯ ಸೋಲು ಕಂಡು ಟೂರ್ನಿಗೆ ವಿದಾಯ ಹೇಳಿತು.

ಆಫ್ಘಾನಿಸ್ತಾನ ಸೆಮೀಸ್​ಗೆ ಕಾಲಿಟ್ಟಾಗಲೇ ಆಫ್ಘನ್ನರು ಬಣ್ಣದೋಕುಳಿ ಆಡಿ ಸಂಭ್ರಮಿಸಿದ್ದರು. ಈ ಸಲ ಫಿನಾಲೆಗೆ ತಲುಪುತ್ತೇವೆ. ಮ್ಯಾಚ್ ವಿನ್ ಆಗ್ತೇವೆ ಅನ್ಕೊಂಡಿದ್ರು. ಆದ್ರೆ ಆ ಕನಸು ನನಸಾಗಲೇ ಇಲ್ಲ. ಇದೇ ಕಾರಣಕ್ಕೆ ಸೌತ್ ಆಫ್ರಿಕಾ ಗೆಲುವು ಪಡೆಯುತ್ತಿದ್ದಂತೆ ಅಫ್ಘಾನ್ ಕ್ಯಾಪ್ಟನ್​ ರಶೀದ್ ಖಾನ್ ಸೇರಿದಂತೆ ಇತರೆ ಪ್ಲೇಯರ್ಸ್ ಕಣ್ಣೀರು ಹಾಕಿದ್ರು. ಪಂದ್ಯದ ಬಳಿಕ ಮಾತನಾಡಿದ ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್, ತಮ್ಮ ಸೋಲಿಗೆ ಕಾರಣಗಳನ್ನ ಪ್ರಸ್ತಾಪ ಮಾಡಿದ್ರು. ಸೆಮಿಸ್ ಸೋಲಿಗೆ ಬ್ಯಾಟಿಂಗ್ ವೈಫಲ್ಯವೇ ಪ್ರಮುಖ ಕಾರಣ, ಆದರೆ ಈ ಮೆಗಾಟೂರ್ನಮೆಂಟ್‌ನಲ್ಲಿ ಹಲವು ಸಕಾರಾತ್ಮಕ ಅಂಶಗಳಿವೆ ಎಂದ್ರು. ಬೌಲಿಂಗ್ ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ತೋರಬೇಕು, ಯಾವುದೇ ತಂಡವನ್ನು ಸೋಲಿಸಬಲ್ಲೆವು ಎಂಬ ಆತ್ಮವಿಶ್ವಾಸವನ್ನು ಗಳಿಸಿದ್ದೇವೆ . ಮುಂದಿನ ಮೆಗಾಟೂರ್ನಮೆಂಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತೇನೆ ವಿಶ್ವಾಸ ವ್ಯಕ್ತಪಡಿಸಿದ್ರು.

ವಿಶ್ವಕಪ್ ಇತಿಹಾಸದಲ್ಲಿ ಇದು ಸೌತ್ ಆಫ್ರಿಕಾ ತಂಡದ ಮೊದಲ ಸೆಮಿಫೈನಲ್ ಗೆಲುವು ಎಂಬುದು ವಿಶೇಷ. ಅಂದರೆ 1992 ರಿಂದ ವಿಶ್ವಕಪ್​ನಲ್ಲಿ ಕಣಕ್ಕಿಳಿಯುತ್ತಿರುವ ಆಫ್ರಿಕನ್ನರು ಒಮ್ಮೆಯೂ ಫೈನಲ್​ಗೆ ಪ್ರವೇಶಿಸಿರಲಿಲ್ಲ. ಇದೀಗ ಅಫ್ಘಾನಿಸ್ತಾನ್ ತಂಡವನ್ನು ಬಗ್ಗು ಬಡಿದು ಚೊಚ್ಚಲ ಬಾರಿ ಫೈನಲ್ ಸುತ್ತಿಗೆ ಪ್ರವೇಶಿಸಿದೆ. ಇಲ್ಲಿ ಇನ್ನೊಂದು ವಿಶೇಷ ಅಂದ್ರೆ ಆಫ್ಘನ್ ವಿರುದ್ಧದ ಗೆಲುವಿನೊಂದಿದೆ ಸೌತ್ ಆಫ್ರಿಕಾ ತಂಡವು ಟಿ20 ವಿಶ್ವಕಪ್​ನಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದೆ. ಅದು ಸಹ ಸತತ ಗೆಲುವುಗಳ ಮೂಲಕ ಎಂಬುದು ವಿಶೇಷ. ಅಂದರೆ ಟಿ20 ವಿಶ್ವಕಪ್ ಇತಿಹಾಸದ ಆವೃತ್ತಿಯೊಂದರಲ್ಲಿ ಸತತ ಗೆಲುವು ಸಾಧಿಸಿ ಫೈನಲ್​ಗೆ ಪ್ರವೇಶಿಸಿದ ಮೊದಲ ತಂಡವೆಂಬ ಕೀರ್ತಿ ಸೌತ್ ಆಫ್ರಿಕಾ ಪಾಲಾಗಿದೆ. ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ 8 ಪಂದ್ಯಗಳನ್ನಾಡಿರುವ ಸೌತ್ ಆಫ್ರಿಕಾ ತಂಡವು ಒಂದೇ ಒಂದು ಸೋಲನುಭವಿಸಿಲ್ಲ. ಈ ಮೂಲಕ ಸತತ ಎಂಟು ಗೆಲುವುಗಳೊಂದಿಗೆ ಆಫ್ರಿಕನ್ನರು ಇದೀಗ ಫೈನಲ್ ಸುತ್ತಿಗೆ ಪ್ರವೇಶಿಸಿದೆ. ಇದರೊಂದಿಗೆ ಟಿ20 ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತೀ ಹೆಚ್ಚು ಪಂದ್ಯಗಳಲ್ಲಿ ಸತತ ಗೆಲುವು ದಾಖಲಿಸಿದ ವಿಶೇಷ ದಾಖಲೆಯೊಂದು ಸೌತ್ ಆಫ್ರಿಕಾ ಹೆಸರಿಗೆ ಸೇರ್ಪಡೆಯಾಗಿದೆ. ಅಲ್ದೇ ಫೈನಲ್ ಪ್ರವೇಶಿಸಿರುವ ಸೌತ್ ಆಫ್ರಿಕಾ ತಂಡವು ಅಂತಿಮ ಪಂದ್ಯದಲ್ಲಿ ಜಯಭೇರಿ ಬಾರಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಅಂದರೆ ಟಿ20 ವಿಶ್ವಕಪ್​ನಲ್ಲಿ ಸತತವಾಗಿ ಅತೀ ಹೆಚ್ಚು ಪಂದ್ಯಗಳಲ್ಲಿ ಜಯ ಸಾಧಿಸಿ ವಿಶ್ವ ದಾಖಲೆ ನಿರ್ಮಿಸಲು ಆಫ್ರಿಕನ್ನರಿಗೆ ಒಂದು ಗೆಲುವಿನ ಅಗತ್ಯವಿದೆ.

ಆಟ ಅಂದ್ಮೇಲೆ ಸೋಲು ಗೆಲುವು ಇದ್ದಿದ್ದೇ. ಸೋ ಇಂದಿನ ಸೆಮೀಸ್​ನಲ್ಲಿ ಆಫ್ಘನ್ ಗೆಲುವು ಸಾಧಿಸಿ ಫಿನಾಲೆಗೆ ಕಾಲಿಟ್ಟಿದೆ. ಇಂಗ್ಲೆಂಡ್ ಮತ್ತು ಭಾರತದ ನಡುವಿನ ಎರಡನೇ ಸೆಮಿಫೈನಲ್​ನಲ್ಲಿ ಯಾರು ಗೆಲ್ತಾರೋ ಅವ್ರ ವಿರುದ್ಧ ಫೈನಲ್ ಪಂದ್ಯ ಆಡಲಿದೆ. ಮತ್ತೊಂದೆಡೆ ಮೊದಲ ಬಾರಿಗೆ ಸೆಮಿಫೈನಲ್​ಗೆ ಬಂದಿದ್ದ ರಶೀದ್​ ತಂಡ ತನ್ನದೇ ತಪ್ಪಿನಿಂದ ಫೈನಲ್​ಗೇರೋ ಚಾನ್ಸ್ ಮಿಸ್ ಮಾಡ್ಕೊಂಡಿದೆ. ಬಟ್ ಈ ಟೂರ್ನಿ ಆಫ್ಘನ್ ತಂಡಕ್ಕೆ ದೊಡ್ಡ ಭರವಸೆ ನೀಡಿರೋದ್ರಲ್ಲಿ ಅನುಮಾನವೇ ಇಲ್ಲ.

Shwetha M

Leave a Reply

Your email address will not be published. Required fields are marked *