ವೆಸ್ಟ್ ಇಂಡೀಸ್ ವಿರುದ್ಧ ಗೆದ್ದ ಸೌತ್ ಆಫ್ರಿಕಾ – ಭಾರತದ ಸೆಮಿಫೈನಲ್ ಹಾದಿ ಈಗ ಸುಲಭ!

ಟಿ-20 ವಿಶ್ವಕಪ್ ನಲ್ಲಿ ಸೆಮಿಫೈನಲ್ ರೇಸ್ನಲ್ಲಿದ್ದ ಟೀಂ ಇಂಡಿಯಾಗೆ ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯದ ಫಲಿತಾಂಶ ಭಾರತದ ಪರವಾಗಿಯೇ ಬಂದಿದೆ. ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ಗೆದ್ದು ಭಾರತದ ಹಾದಿಯನ್ನ ಸುಗಮಗೊಳಿಸಿದೆ. ಭಾರತವನ್ನ ಸೋಲಿಸಿದ್ದ ಅದೇ ಸೌತ್ ಆಫ್ರಿಕಾ ಈಗ ಭಾರತದ ಸೆಮೀಸ್ ಹಾದಿಯನ್ನ ಈಸಿ ಮಾಡಿದೆ.
ಇದನ್ನೂ ಓದಿ : ಹೊಡಿಬಡಿ ಆಡಿದ್ರಷ್ಟೇ ಭಾರತ ಸೇಫ್ – ZIM ಅಗ್ನಿಪರೀಕ್ಷೆ ಗೆಲ್ತಾರಾ?
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಧ್ಯಾಹ್ನ 3 ಗಂಟೆಗೆ ಆರಂಭವಾಗಿದ್ದ ಸೂಪರ್ 8 ಹಂತದ ಪಂದ್ಯದಲ್ಲಿ ಸೌತ್ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಗಿದ್ದವು. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು. ಮೊದಲು ಬ್ಯಾಟಿಂಗ್ ಮಾಡಿರುವ ಕೆರಿಬಿಯನ್ ಪಡೆ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 176 ರನ್‌ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು. 83ಕ್ಕೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಶೆಫರ್ಡ್ ಅರ್ಧಶತಕ (ಅಜೇಯ 52) ಹಾಗೂ ಹೋಲ್ಡರ್ 49 ರನ್‌ಗಳಿಸಿ ಸವಾಲಿನ ಗುರಿ ನೀಡಲು ನೆರವಾದರು. ಈ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ ಪರ ಏಡಂ ಮಾರ್ಕ್ರಂ ಮತ್ತು ಕ್ವಿಂಟನ್ ಡಿಕಾಕ್ ಒಳ್ಳೆ ಪಾಟ್ನರ್ ಶಿಪ್ ಬಂತು. 95 ರನ್‌ಗಳ ಜೊತೆಯಾಟವಾಡಿದ್ರು. ಆನಂತ್ರ ರಿಯಾನ್ ರಿಕಲ್ಟನ್ ಕೂಡ ಒಳ್ಳೆ ಸಾಥ್ ಕೊಟ್ರು. ಹೀಗಾಗಿ 16.1 ಓವರ್ ನಲ್ಲೇ ಸೌತ್ ಆಫ್ರಿಕಾ ಪಂದ್ಯವನ್ನ ಗೆದ್ದುಕೊಳ್ತು. ಹರಿಣಗಳ ಪರ ಏಡನ್ ಮಾರ್ಕ್ರಂ 82 ರನ್ ಗಳಿಸಿ ಅಜೇಯವಾಗಿ ಉಳಿದ್ರು. ರಿಕಲ್ಟನ್ 45 ರನ್ ಗಳಿಸಿ ಅಜೇಯರಾಗಿ ಉಳಿದ್ರು. ಈ ಮೂಲಕ 1 ವಿಕೆಟ್ ನಷ್ಟಕ್ಕೆ ಸೌತ್ ಆಫ್ರಿಕಾ ಗೆದ್ದು ಸೆಮೀಸ್ ಟಿಕೆನ್ಗೂ ಬುಕ್ ಮಾಡ್ಕೊಂಡಿದೆ.
ಸೌತ್ ಆಫ್ರಿಕಾ ಗೆದ್ದರೆ ಟೀಮ್ ಇಂಡಿಯಾಗೆ ನೇರವಾಗಿ ಸೆಮಿಫೈನಲ್ಗೇರಲು ಅವಕಾಶ ಸಿಕ್ಕಿದೆ. ಅಂದರೆ ಯಾವುದೇ ನೆಟ್ ರನ್ ರೇಟ್ ಲೆಕ್ಕಾಚಾರ ಗಣನೆಗೆ ಬರುವುದಿಲ್ಲ. ಜಿಂಬಾಬ್ವೆ ವಿರುದ್ಧ ಭಾರತ ಗೆದ್ರೆ 2 ಅಂಕ ಪಡೆಯಲಿದೆ. ಈಗ ವಿಂಡೀಸ್ ಕೂಡ 2 ಅಂಕ ಪಡೆದಿದೆ. ಹೀಗಾಗಿ ಮಾರ್ಚ್ 1 ರಂದು ನಡೆಯಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯವು ‘ನಾಕೌಟ್’ ಪಂದ್ಯದಂತಾಗುತ್ತದೆ. ಆಗ ಭಾರತ ಕೇವಲ ಈ ಪಂದ್ಯವನ್ನು ಗೆದ್ದರೆ ಸಾಕು. ಈ ಮೂಲಕ ಟೀಮ್ ಇಂಡಿಯಾ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿ ನೇರವಾಗಿ ಸೆಮಿಫೈನಲ್ಗೇರಬಹುದು. ಅಕಸ್ಮಾತ್ ವೆಸ್ಟ್ ಇಂಡೀಸ್ ಗೆದ್ದರೆ ವಿಂಡೀಸ್ ತಂಡವೇ ಸೆಮಿಫೈನಲ್ ಗೇರುತ್ತೆ. ಸದ್ಯ ಸಿಚುಯೇಷನ್ ನೋಡಿದ್ರೆ ಮೊದಲ ಎರಡೂ ಪಂದ್ಯಗಳನ್ನ ಗೆದ್ದಿರೋ ಸೌತ್ ಆಫ್ರಿಕಾ ಆಲ್ರೆಡಿ ಸೆಮೀಸ್ ಟಿಕೆಟ್ ಬುಕ್ ಮಾಡಿಕೊಂಡಂತೆಯೇ ಆಗಿದೆ.

ನೋಡಿರಿ

