ಸೌರವ್ ಗಂಗೂಲಿ ಬಯೋಪಿಕ್ ರಿಲೀಸ್‌ಗೆ ರೆಡಿ – ದಾದಾ – ದಿ ಸೌರವ್ ಗಂಗೂಲಿ ಸ್ಟೋರಿ ಬಿಡುಗಡೆಗೆ ಡೇಟ್ ಫಿಕ್ಸ್

ಸೌರವ್ ಗಂಗೂಲಿ ಬಯೋಪಿಕ್ ರಿಲೀಸ್‌ಗೆ ರೆಡಿ – ದಾದಾ – ದಿ ಸೌರವ್ ಗಂಗೂಲಿ ಸ್ಟೋರಿ ಬಿಡುಗಡೆಗೆ ಡೇಟ್ ಫಿಕ್ಸ್

ಕ್ರಿಕೆಟ್ ಲೋಕದ ದಾದಾ ಸೌರವ್ ಗಂಗೂಲಿಯವರ ಬಯೋಪಿಕ್ ತೆರೆ ಕಾಣಲಿದೆ. ಸೌರವ್ ಗಂಗೂಲಿ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ.

ಇದನ್ನೂ ಓದಿ:ಇಂಗ್ಲೆಂಡ್ ವಿರುದ್ಧ ಶ್ರೇಯಸ್ ಪಡೆಗೆ ಹೀನಾಯ ಸೋಲು – ಟೀಂ ಇಂಡಿಯಾಗೆ ಕೈ ಕೊಟ್ಟ ಓಪನರ್ಸ್

ಬಂಗಾಳ ಹುಲಿ, ದಾದಾ ಎಂದೇ ಫೇಮಸ್ ಆಗಿರುವ ಸೌರವ್ ಗಂಗೂಲಿ ಭಾರತ ಕ್ರಿಕೆಟ್ ಕಂಡ ಅತ್ಯುತ್ತಮ ನಾಯಕರಲ್ಲಿ ಒಬ್ಬರು. ಭಾರತ ಕ್ರಿಕೆಟ್​​ನ ನಂಬರ್ 1 ನಾಯಕ ಎಂದೇ ಫೇಮಸ್ ಆಗಿರುವ ಸೌರವ್ ಗಂಗೂಲಿಯವರ ಬಯೋಪಿಕ್ ರೆಡಿಯಾಗಿದೆ. ಜೊತೆಗೆ ಸೌರವ್ ಗಂಗೂಲಿ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ‘ದಾದಾ – ದಿ ಸೌರವ್ ಗಂಗೂಲಿ ಸ್ಟೋರಿ’ ಸಿನಿಮಾ 2027ರ ಮೇ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ .

ಸೌರವ್ ಗಂಗೂಲಿ ಪಾತ್ರದಲ್ಲಿ ಬಾಲಿವುಡ್ ನಟ ರಾಜ್​​ಕುಮಾರ್ ರಾವ್ ನಟಿಸಿದ್ದಾರೆ. ಚಿತ್ರದ ಫಸ್ಟ್-ಲುಕ್ ಪೋಸ್ಟರ್ ಬುಧವಾರ (ಜುಲೈ 8)  ಬಿಡುಗಡೆ ಆಗಿದೆ. ಈಗ ಬಿಡುಗಡೆ ಆಗಿರುವ ಪೋಸ್ಟರ್‌ನಲ್ಲಿ 2002ರಲ್ಲಿ ಇಂಗ್ಲೆಂಡ್ ವಿರುದ್ಧದ ನಾಟ್‌ವೆಸ್ಟ್ ಟ್ರೋಫಿ ಗೆದ್ದ ನಂತರ ಲಾರ್ಡ್ಸ್ ಬಾಲ್ಕನಿಯಲ್ಲಿ ಗಂಗೂಲಿ ಅವರು ಶರ್ಟ್ ಬಿಚ್ಚಿ ಸಂಭ್ರಮಿಸಿದ ಆ ಸುಪ್ರಸಿದ್ಧ ಕ್ಷಣವನ್ನು ಮರುಸೃಷ್ಟಿಸಲಾಗಿದೆ. ಸೌರವ್ ಗಂಗೂಲಿ ಅವರೇ ಈ ಸಿನಿಮಾದ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದಾರೆ.

ದಾದಾ – ದಿ ಸೌರವ್ ಗಂಗೂಲಿ ಸ್ಟೋರಿ  ಸಿನಿಮಾದಲ್ಲಿ ಗಂಗೂಲಿ ಅವರ ಯುವ ಕ್ರಿಕೆಟಿಗನಾಗಿದ್ದ ದಿನಗಳಿಂದ ಹಿಡಿದು ಭಾರತದ ಅತ್ಯಂತ ಪ್ರಭಾವಶಾಲಿ ನಾಯಕನಾಗಿ ಬೆಳೆದ ಪ್ರಯಾಣದ ಕತೆ ಇರಲಿದೆ. ಭಾರತ ಕ್ರಿಕೆಟ್ ಮೇಲೆ ಸೌರವ್ ಅವರ ಪ್ರಭಾವವನ್ನು ತೋರಿಸಲಾಗಿದೆ. ಈ ಸಿನಿಮಾಕ್ಕೆ ವಿಕ್ರಮಾದಿತ್ಯ ಮೊಟ್ವಾನಿ ನಿರ್ದೇಶನವಿದೆ.

Sulekha

Leave a Reply

Your email address will not be published. Required fields are marked *