ರಜಿನಿಯನ್ನೇ ಹಿಂದಿಕ್ಕಿದ ಸೌಬಿನ್ ಶಾಹಿರ್ – ಕೂಲಿಯ ಮೋನಿಕಾ ಡ್ಯಾನ್ಸ್ ಸೂಪರ್ HIT
ಭಾರತೀಯರ ದಿಲ್ ಕದ್ದ ಮಲಯಾಳಂ ನಟ

ನೋಡೋಕೆ ಹೀರೋ ಮೆಟಿರಿಯಲ್ ಅಲ್ಲವೇ ಅಲ್ಲ.. ಬೋಳು ತಲೆ, ಕುಳ್ಳ ದೇಹ, ಸುಕ್ಕು ಗಟ್ಟಿದ ತರ ಇರೋ ಮುಖ. ಆದ್ರೆ ಇವರ ಮಾಡಿದ ಎಲ್ಲಾ ಸಿನಿಮಾಗಳು ಸೂಪರ್ ಹಿಟ್.. ಹೌದು ನೀವು ಇವರನ್ನ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನೋಡಿರ್ತಿರಾ.. ಅದರಲ್ಲೂ ಮಂಜುಮ್ಮೆಲ್ ಬಾಯ್ಸ್ ನೋಡಿದ ಪ್ರತಿಯೊಬ್ಬರು ಇವರ ನಟನೆಗೆ ಫಿದಾ ಆಗಿರ್ತಾರೆ. ಈಗ ಕೂಲಿ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೌಂಡ್ ಮಾಡುತ್ತಿದ್ದಾರೆ ಈ ಸೌಬಿನ್ ಶಾಹಿರ್.. ಅದರಲ್ಲೂ ಮೋನಿಕಾ ಡ್ಯಾನ್ಸ್ನಲ್ಲಿ ಇವರ ಸಖತ್ ವೈರಲ್ ಆಗುತ್ತಿದ್ದು, ಫ್ಯಾನ್ಸ್ ಫಿದಾ ಆಗಿದ್ದಾರೆ. ಅಂದಹಾಗೇ ಸೌಬಿನ್ ಚಿತ್ರರಂಗಕ್ಕೆ ಹೊಸಬರಲ್ಲ.. ಕಳೆದ 20 ವರ್ಷಗಳಿಂದ ಮಲೆಯಾಳಂ ಚಿತ್ರರಂಗಲ್ಲಿ ಅಭಿನಯ ಮಾಡುತ್ತಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿದ ಕೂಲಿ ಚಿತ್ರದಲ್ಲಿ ರಜನಿ ಜೊತೆ ನಾಗಾರ್ಜುನ, ಉಪೇಂದ್ರ, ಆಮೀರ್ ಖಾನ್, ಸೌಬಿನ್ ಶಾಹಿರ್, ಸತ್ಯರಾಜ್, ಶ್ರುತಿ ಹಾಸನ್, ಪೂಜಾ ಹೆಗ್ಡೆ ಮುಂತಾದವರು ನಟಿಸಿದ್ದಾರೆ. ಈ ಪೈಕಿ ಸೌಬಿನ್ ಶಾಹಿರ್ ಹಲವರಿಗೆ ಅಚ್ಚರಿ ನೀಡಿದ್ದಾರೆ. ಕಾಮಿಡಿ ಸೇರಿದಂತೆ ಹಲವು ಪಾತ್ರಗಳನ್ನು ನಿಭಾಯಿಸಿದ್ದ ಸೌಬಿನ್ ಕೂಲಿ ಸಿನಿಮಾದಲ್ಲಿನ ನಟನೆ ಪಿದಾ ಆಗಿದ್ದಾರೆ. ಇವರ ಪಾತ್ರ ಅಭಿಮಾನಿಗಳಿಗೆ ರಸದೌತಣ ನೀಡಿದೆ.. ಇವರ ಮೋನಿಕಾ ಡ್ಯಾನ್ಸ್, ಸ್ಕ್ರೀನ್ ಮೇಲೆ ಬಂದಾಗ ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡುತ್ತೆ.
ಇದನ್ನೂ ಓದಿ: ಪ್ರಸಿದ್ಧ್ ಕೃಷ್ಣ ಆಟಕ್ಕುಂಟು ಲೆಕ್ಕಕ್ಕಿಲ್ಲ – ಏಷ್ಯಾಕಪ್ ನಲ್ಲಿ ಕನ್ನಡಿಗರಿಗೆ ಸಿಗಲಿಲ್ಲ ಚಾನ್ಸ್!
ಸೌಬಿನ್ ಹುಟ್ಟಿದ್ದು ಕೊಚ್ಚಿಯಲ್ಲಿ. ಮಲಯಾಳಂನಲ್ಲಿ ಇವರು ಸಾಕಷ್ಟು ಹೆಸರು ಮಾಡಿದ್ದಾರೆ. ಇವರ ಕೇವಲ ನಟನೆ ಮಾತ್ರ ಮಾಡುತ್ತಿಲ್ಲ, 20 ವರ್ಷಗಳಿಂದ ನಟನೆ ಜೊತೆ ನಿರ್ದೇಶನ , ನಿರ್ಮಾಪಕರಾಗಿ ಮಲಯಾಳಂ ಚಿತ್ರರಂಗದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. 2003 ರಲ್ಲಿ ಸಹಾಯಕ ನಿರ್ದೇಶಕರಾಗಿ ಸೌಬಿನ್ ಬಣ್ಣದ ಲೋಕಕ್ಕೆ ಕಾಲಿಟ್ರು. ಕೇವಲ ಮಾಲಯಾಳಂನಲ್ಲಿ ಗುರತಿಸಿಕೊಂಡಿದ್ದ ಇವರು ಮಂಜುಮೇಲ್ ಬಾಯ್ಸ್ ಸಿನಿಮಾ ಮೂಲಕ ಕನ್ನಡ ತೆಲುಗು ಹಾಗೂ ಇತರೆ ಬಾಷೆಯಲ್ಲಿ ಇವರು ಗುರುತಿಸಿಕೊಂಡ್ರು. ಹೀರೋ ಆಗುವವರು ಚೆನ್ನಾಗಿರಬೇಕು. ಸ್ಮಾರ್ಟ್ ಆಗಿರಬೇಕು ಅನ್ನೋರ ಮಧ್ಯೆ ಇವರು ವಿಭಿನ್ನವಾಗಿ ಕಾಣಿಸಿಕೊಂಡು ನಟನೆಯಲ್ಲಿ ದೊಡ್ಡ ಸಕ್ಸಸ್ ಕಂಡಿದ್ದಾರೆ. ತಲೆಯಲ್ಲಿ ಕೂದಲಿಲ್ಲ ಅನ್ನೋದ್ದನ್ನ ಇವರ ಸಮಸ್ಯೆ ಅಂದುಕೊಂಡೇ ಇಲ್ಲ.
2017 ರಲ್ಲಿ ಸೌಬಿನ್, ಜಾಮಿಯಾ ಜಹೀರ್ ಎಂಬುವರನ್ನ ಮದುವೆ ಆಗಿದ್ದಾರೆ. ಇವರು ತಮ್ಮ ಖಾಸಗಿ ಜೀವನವನ್ನು ರಹಸ್ಯವಾಗಿಡುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಕೇರಳದ ಕೊಚ್ಚಿಯ ಮಾರ್ಕೆಟಿಂಗ್ ವೃತ್ತಿಪರರಾದ ಜಾಮಿಯಾ, ಸಾರ್ವಜನಿಕರಿಂದ ದೂರ ಉಳಿದಿದ್ದಾರೆ. ಈ ದಂಪತಿಗೆ 2019ರಲ್ಲಿ ಓರ್ಹಾನ್ ಎಂಬ ಗಂಡು ಮಗ ಜನಿಸಿದ್ದು, ಈಗ 6 ವರ್ಷ. ಸದ್ಯ ಈಗ ಕೂಲಿ ಸಿನಿಮಾ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದಾರೆ. ಇವರ ತಂದೆ ಕೂಡ ನಿರ್ದೇಶಕರಾಗಿದ್ದು, ತಂದೆಯ ಸಾಥ್ನಿಂದ ಇವರು ಚಿತ್ರರಂಗಕ್ಕೆ ಕಾಲಿಟ್ರು. ಓದಿನ ಜೊತೆ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದರು. ಸೌಬಿನ್ ದೊಡ್ಡ ಸ್ಟಾರ್ಗಳ ಜೊತೆ ನಟನೆ ಮಾಡಿದ್ದಾರೆ. ಸಾಕಷ್ಟು ಸಿನಿಮಾದಲ್ಲಿ ಖಳನಾಯಕನಾಗಿ, ಹೀರೋ ಗೆಳೆಯನಾಗಿ ಅಭಿನಯಿಸಿದ್ದಾರೆ. ಕಥೆ ಹೇಗೆ ಇರಲಿ, ತಮ್ಮ ಪಾತ್ರ ಯಾವುದೇ ಇರಲಿ ಅದ್ದಕ್ಕೆ ಜೀವ ತುಂಬಿ ನಟನೆ ಮಾಡುತ್ತಾರೆ ಇವರು.. ಇವರಿಗೆ ಮಂಜುಮ್ಮೆಲ್ ಬಾಯ್ಸ್ ಬಿಗ್ ಹಿಟ್ ನೀಡ್ತು. ಈಗ ಕೂಲಿ ಮೂಲಕ ದೇಶ ವಿದೇಶದಲ್ಲಿ ಮನೆ ಮಾತಾಗಿದ್ದಾರೆ. 22 ವರ್ಷದ ನಂತ್ರ ಪ್ಲ್ಯಾನ್ ಇಂಡಿಯಾ ಸಕ್ಸಸ್ ಕಂಡಿದ್ದಾರೆ.

ನೋಡಿರಿ

