2ನೇ ಪಂದ್ಯಕ್ಕಾದ್ರೂ ಆಡ್ತಾರಾ ವೈಭವ್ ಸೂರ್ಯವಂಶಿ – ಟಾಪ್-5ನಲ್ಲಿ ಚೇಂಜ್ ಮಾಡ್ತಿಲ್ಲ ಏಕೆ?
 ENG ಚಾಲೆಂಜ್ ಗೆಲ್ತಾರಾ ಶ್ರೇಯಸ್?

2ನೇ ಪಂದ್ಯಕ್ಕಾದ್ರೂ ಆಡ್ತಾರಾ ವೈಭವ್ ಸೂರ್ಯವಂಶಿ – ಟಾಪ್-5ನಲ್ಲಿ ಚೇಂಜ್ ಮಾಡ್ತಿಲ್ಲ ಏಕೆ? ENG ಚಾಲೆಂಜ್ ಗೆಲ್ತಾರಾ ಶ್ರೇಯಸ್?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟಿ-20ಐ ಪಂದ್ಯ ನಾಳೆ ನಡೆಯಲಿದೆ. ಮ್ಯಾಂಚೆಸ್ಟರ್​​ನಲ್ಲಿ ನಡೆಯಲಿರೋ ಈ ಪಂದ್ಯ ಗೆದ್ರಷ್ಟೇ ಭಾರತಕ್ಕೆ ಈ ಸರಣಿ ಗೆಲ್ಲೋ ಚಾನ್ಸಸ್ ಜಾಸ್ತಿ ಇರುತ್ತೆ. ಇಲ್ದಿದ್ರೆ ಮುಂದಿನ ಮೂರೂ ಪಂದ್ಯಗಳು ಡು ಆರ್ ಡೈ ಆಗುತ್ತೆ. ಮೊದಲ ಪಂದ್ಯ ಮಳೆಗೆ ಕೊಚ್ಚಿ ಹೋಗಿದ್ರಿಂದ ಜುಲೈ 4ಕ್ಕೆ ಮ್ಯಾಂಚೆಸ್ಟರ್​ನಲ್ಲಿ ನಡೆಯಲಿರೋ ಎರಡನೇ ಪಂದ್ಯ  ಗೆದ್ದು ಸರಣಿ ಲೀಡ್ ಸಾಧಿಸೋಕೆ ಎರಡೂ ತಂಡಗಳು ಕಾಯ್ತಾ ಇವೆ. ಸೋ ಬಲಿಷ್ಠ ಪಡೆಯನ್ನೇ ಅಖಾಡಕ್ಕೆ ಇಳಿಸಬೇಕಾಗುತ್ತೆ. ಹೀಗಿದ್ರೂ ಟೀಂ ಇಂಡಿಯಾದಲ್ಲಿ ಅದೊಂದು ಬದಲಾವಣೆಗಾಗಿ ಎಲ್ರೂ ಕಾಯ್ತಿದ್ದಾರೆ. ವೈಭವ್ ಸೂರ್ಯವಂಶಿಯನ್ನ ಆಡಿಸ್ತಾರಾ ಅಂತಾ. ಬಟ್ ರಿಯಾಲಿಟಿ ಏನಂದ್ರೆ ಈ ಪಂದ್ಯದಲ್ಲೂ ವೈಭವ್ ಗೆ ಚಾನ್ಸ್ ಸಿಗೋದು ಡೌಟ್​ನಲ್ಲೇ ಇದೆ.

ಇದನ್ನೂ ಓದಿ : 2ನೇ ಪಂದ್ಯದಲ್ಲೂ ಇಲ್ಲ ವೈಭವ್‌ಗೆ ಚಾನ್ಸ್‌ – ಸಂಜು ಸ್ಯಾಮ್ಸನ್ ಪರ ಡಿಕೆ ಬ್ಯಾಟಿಂಗ್

ಎರಡನೇ ಪಂದ್ಯದಲ್ಲೂ ಬೆಂಚ್ ಕಾಯಬೇಕು ಸೂರ್ಯವಂಶಿ!

ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ ಎಲ್ಲರ ಕಣ್ಣೂ ವೈಭವ್ ಸೂರ್ಯವಂಶಿ ಮೇಲೇ ಇದೆ. ಡೆಬ್ಯೂಗೆ ಅವಕಾಶ ಸಿಗುತ್ತಾ ಅಂತಾ. ಬಟ್ ಈಗಿರೋ ಡವಲಪ್​ಮೆಂಟ್ಸ್ ನೋಡಿದ್ರೆ ವೈಭವ್ ಎರಡನೇ ಪಂದ್ಯದಲ್ಲೂ ಬೆಂಚ್ ಕಾಯಿಸೋ ಸಾಧ್ಯತೆಗಳೇ ಜಾಸ್ತಿ ಇದೆ. ಈ ಬಗ್ಗೆ ಟೀಂ ಇಂಡಿಯಾ ಮಾಜಿ ಆಟಗಾರ ದಿನೇಶ್ ಕಾರ್ತಿಕ್ ಒಂದಷ್ಟು ರೀಸನ್ಸ್ ಕೂಡ ಕೊಟ್ಟಿದ್ದಾರೆ. ವೈಭವ್ ಸೂರ್ಯವಂಶಿ ಪದಾರ್ಪಣೆಗಾಗಿ ಎಲ್ರೂ ಕಾಯ್ತಿದ್ದಾರೆ. ಆದ್ರೆ ಎರಡನೇ ಮ್ಯಾಚಲ್ಲೂ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಗೋದು ಕಷ್ಟ. ಯಾಕಂದ್ರೆ  2026 ರ ಟಿ20 ವಿಶ್ವಕಪ್‌ನಲ್ಲಿ ತುಂಬಾನೇ ಪ್ರೆಶರ್ ಟೈಮಲ್ಲಿ ಸಂಜು ಸ್ಯಾಮ್ಸನ್ ಎಂಥಾ ಅದ್ಭುತ ಆಟ ಆಡಿದ್ರೂ ನಿಮ್ಗೆಲ್ಲಾ ಗೊತ್ತೇ ಇದೆ.  ಹೀಗಾಗಿ ಬಿಸಿಸಿಐ ಬಿಗ್ ಬಾಸ್​ಗಳು ಸಂಜು ಸ್ಯಾಮ್ಸನ್‌ಗೆ ಮತ್ತೊಂದು ಅವಕಾಶ ನೀಡ್ತಾರೆ. ಇಂಥಾ ಟೈಮಲ್ಲಿ ನಾವು ಕೂಡ ನಾವು ಸಂಜು ಅವರನ್ನು ಬೆಂಬಲಿಸಬೇಕು. ಅವಕಾಶ ಸಿಕ್ಕಾಗ ವೈಭವ್ ಖಂಡಿತವಾಗಿ ಅದ್ಭುತ ಪ್ರದರ್ಶನ ನೀಡುತ್ತಾರೆ. ಅವ್ರಲ್ಲಿ ಅಂಥಾ ಟ್ಯಾಲೆಂಟ್ ಇದೆ ಅನ್ನೋ ಮೂಲಕ ಎರಡನೇ ಮ್ಯಾಚ್​ನಲ್ಲೂ ಆಡಲ್ಲ ಅನ್ನೋದನ್ನ ಹೇಳಿದ್ದಾರೆ. ಹಾಗೇ ಮ್ಯಾಂಚೆಸ್ಟರ್ ಮೈದಾನದ ಬೌಂಡರಿಗಳು ಚಿಕ್ಕದಾಗಿದ್ದು ಇಲ್ಲಿ ರನ್ ಗಳಿಸೋದು ಸುಲಭ. ಸೋ ಭಾರತದ ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ಇಲ್ಲಿ ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸುವ ಸಾಧ್ಯತೆಗಳಿವೆ ಎಂದಿದ್ದಾರೆ.

ಭಾರತದ ಪ್ಲೇಯಿಂಗ್ 11

ಅಭಿಷೇಕ್ ಶರ್ಮಾ

ಸಂಜು ಸ್ಯಾಮ್ಸನ್

ಇಶಾನ್ ಕಿಶನ್

ಶ್ರೇಯಸ್ ಅಯ್ಯರ್

ತಿಲಕ್ ವರ್ಮಾ

ಶಿವಂ ದುಬೆ

ಅಕ್ಷರ್ ಪಟೇಲ್

ಹರ್ಷಿತ್ ರಾಣಾ

ವರುಣ್ ಚಕ್ರವರ್ತಿ

ಪ್ರಿನ್ಸ್ ಯಾದವ್

ಅರ್ಷದೀಪ್ ಸಿಂಗ್

ಡಿಕೆ ಪ್ರಕಾರ ಭಾರತ ಈ ಮ್ಯಾಚ್​ಗೆ ಮೂವರು ಸ್ಪಿನ್ನರ್ಸ್ ಬದಲಿಗೆ ಇಬ್ಬರ ಜೊತೆ ಹೋಗೋ ಚಾನ್ಸಸ್ ಜಾಸ್ತಿ ಇದೆ. ಯಾಕಂದ್ರೆ ಮ್ಯಾಂಚೆಸ್ಟರ್ ಪಿಚ್ ಬ್ಯಾಟಿಂಗ್ ಫ್ರೆಂಡ್ಲಿಯಾಗಿದ್ದು ಪೇಸ್ ಬೌಲರ್​ಗಳಿಗೆ ಹೆಚ್ಚಿನ ಸಕ್ಸಸ್ ಸಿಗುತ್ತೆ. ಹೀಗಾಗಿ ಮೂವರು ಫಾಸ್ಟ್ ಬೌಲರ್ಸ್ ಜೊತೆ ಕಣಕ್ಕಿಳಿಯಬಹುದು. ಹಾಗೇ ಭಾರತಕ್ಕೆ ಈ ಪಂದ್ಯದ ಗೆಲುವು ಎಷ್ಟು ಮುಖ್ಯನೋ ಸಂಜು ಸ್ಯಾಮ್ಸನ್ ಕಡೆಯಿಂದ ಬಿಗ್ ಇನ್ನಿಂಗ್ಸ್ ಬರೋದು ಕೂಡ ಅಷ್ಟೇ ಮುಖ್ಯ. ಹೌದು ವಿಶ್ವಕಪ್ ಹೀರೋ. ಬಟ್ ಕಳೆದ ಮೂರು ಪಂದ್ಯಗಳ ಫೇಲ್ಯೂರ್ ಅವ್ರ ಮೇಲೆ ಪ್ರೆಶರ್ ಜಾಸ್ತಿ ಮಾಡ್ತಿದೆ. ಕಳೆದ ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಬ್ಯಾಕ್ ಟು ಬ್ಯಾಕ್ ಐದು ಪಂದ್ಯಗಳಲ್ಲಿ ಫೇಲ್ಯೂರ್ ಆಗಿದ್ದಕ್ಕೆ ವಿಶ್ವಕಪ್​ನಲ್ಲೂ ಆರಂಭದ ಮ್ಯಾಚ್​ಗಳನ್ನ ಮಿಸ್ ಮಾಡಿಕೊಂಡಿದ್ರು. ಈಗ್ಲೂ ಕೂಡ ಮತ್ತಷ್ಟೇ ಸ್ಟ್ರಗಲ್ಸ್ ಜಾಸ್ತಿ ಇತ್ತಂದ್ರೆ ಬಿಸಿಸಿಐ ಮ್ಯಾನೇಜ್​ಮೆಂಟ್​ಗೂ ಬೇರೆ ಆಪ್ಶನ್ಸ್ ನೋಡಲೇಬೇಕಾದ ಅನಿವಾರ್ಯತೆ ಇರಲಿದೆ. ಌಂಡ್ ಈ ಸರಣಿಗೆ ಸೆಲೆಕ್ಟ್ ಆಗಿರೋರ ಪೈಕಿ ವೈಭವ್ ಮಾತ್ರವೇ ಪ್ಲೇಯಿಂಗ್ 11ನಿಂದ ದೂರ ಇರೋದು.

16 ಆಟಗಾರರ ಪೈಕಿ ಸೂರ್ಯವಂಶಿ ಮಾತ್ರವೇ ಚಾನ್ಸ್ ಗಾಗಿ ವೇಯ್ಟಿಂಗ್!

ಐರ್ಲೆಂಡ್, ಇಂಗ್ಲೆಂಡ್ ಹಾಗೇ ಏಷ್ಯನ್ ಗೇಮ್ಸ್​ಗಾಗಿ ಸೆಲೆಕ್ಟ್ ಆಗಿರೋ ಭಾರತ ಟಿ-20ಐ ತಂಡದ 16 ಸದಸ್ಯರ ಪೈಕಿ 15 ಆಟಗಾರರು ಪ್ಲೇಯಿಂಗ್ 11ಗೆ ಸೆಲೆಕ್ಟ್ ಆಗಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ 6 ಆಟಗಾರರು ಇದ್ರು. ಅದ್ರಲ್ಲಿ ವೈಭವ್ ಸೂರ್ಯವಂಶಿ ಬಿಟ್ಟು ಉಳಿದ ಐವರೂ ಬ್ಯಾಟರ್ಸ್ ಕಳೆದ ಮೂರು ಪಂದ್ಯಗಳಲ್ಲೂ ಆಡಿದ್ದಾರೆ. ಐರ್ಲೆಂಡ್ ಸಿರೀಸ್​ನಲ್ಲಿ ಸೂರ್ಯಾನ್ಶ್ ಶೆಡ್ಗೆ, ಪ್ರಿನ್ಸ್ ಯಾದವ್, ವಾಷಿಂಗ್ಟನ್ ಸುಂದರ್​ಗೂ ಚಾನ್ಸ್ ಸಿಕ್ಕಿತ್ತು. ಆಮೇಲೆ ಇಂಗ್ಲೆಂಡ್ ವಿರುದ್ಧದ ಫಸ್ಟ್ ಮ್ಯಾಚಲ್ಲಿ ರವಿ ಬಿಷ್ಣೋಯ್ ಮತ್ತು ವರುಣ್ ಚಕ್ರವರ್ತಿಯೂ ಪ್ಲೇಯಿಂಗ್ 11ನಲ್ಲಿ ಸೆಲೆಕ್ಟ್ ಆಗಿದ್ರು. ಬಟ್ ಮ್ಯಾಚ್ ರದ್ದಾಗಿದ್ರಿಂದ ಬೌಲಿಂಗ್​ಗೆ ಅವಕಾಶ ಸಿಕ್ಕಿಲ್ಲ. ಈ ಪೈಕಿ ಸೂರ್ಯವಂಶಿ ಹೆಸರಷ್ಟೇ ಪ್ಲೇಯಿಂಗ್ 11ನಲ್ಲಿ ಬರೋದು ಬಾಕಿ ಇದೆ. ಌಂಡ್ ಎಲ್ರಿಗಿಂತ ಜಾಸ್ತಿ ಕಾಯ್ತಿರೋದು ಕೂಡ ಸೂರ್ಯವಂಶಿ ಆಟಕ್ಕಾಗಿಯೇ. ಹೀಗಾಗಿ ಇಂಗ್ಲೆಂಡ್ ಸಿರೀಸ್ ಟಾಪ್-5 ಬ್ಯಾಟರ್ ಗಳ ಪರ್ಫಾಮೆನ್ಸ್ ಅವ್ರ ಸ್ಲಾಟ್​ನ ಅಳಿವು ಉಳಿವಿನ ಪ್ರಶ್ನೆಯೂ ಆಗಿರಲಿದೆ.

Shantha Kumari

Leave a Reply

Your email address will not be published. Required fields are marked *