ಹಸೆಮಣೆ ಏರಬೇಕಿದ್ದವರು ಮಸಣ ಸೇರಿದರು – ಹೋಟೆಲ್ನಲ್ಲಿ ಅಗ್ನಿ ಅವಘಡ ಸಂಭವಿಸಿ ಯುವಜೋಡಿ ಸಾವು

ಹಸೆಮಣೆ ಏರಬೇಕಿದ್ದವರು ಮಸಣ ಸೇರಿದರು – ಹೋಟೆಲ್ನಲ್ಲಿ ಅಗ್ನಿ ಅವಘಡ ಸಂಭವಿಸಿ ಯುವಜೋಡಿ ಸಾವು

ಈ ಜೋಡಿ ಮದುವೆಗೆ ಸಿದ್ದತೆ ಮಾಡಿಕೊಂಡಿದ್ದರು. ಅವರಿಬ್ಬರ ಕನಸಿನಂತೆ ವಿವಾಹ ಸಮಾರಂಭವನ್ನು ನೈರೋಬಿಯಲ್ಲಿ ಏರಪಡಿಸಿದ್ದರು. ಮುಂಬೈನಿಂದ ನೈರೋಬಿಗೆ ವಿಮಾನದಲ್ಲಿ ತೆರಳಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ವಿಮಾನದ ಸಮಯ ಬದಲಾವಣೆಯಾಗಿದ್ದರಿಂದ ಮುಂಬೈ ಹೋಟೆಲ್‌ವೊಂದರಲ್ಲಿ ತಂಗಿದ್ದರು. ಸ್ಪಲ್ಪ ತಡವಾಗಿ ವಿಮಾನ ನಿಲ್ದಾಣಕ್ಕೆ ತೆರಳಿದರಾಯಿತು ಎಂದು ಈ ಜೋಡಿ ನಿರ್ಧರಿಸಿ ಅಲ್ಲಿಯೇ ಉಳಿದಿದ್ದರು. ಆದರೆ ವಿಧಿಯ ಆಟ ಬೇರೆಯೇ ಇತ್ತು. ಮದುವೆಯಾಗಿ ಖುಷಿಯಿಂದ ದಾಂಪತ್ಯ ಜೀವನ ಆರಂಭಿಸಬೇಕಿದ್ದ ಈ ಜೋಡಿಗಳು ಸಾವಿನ ಕದ ತಟ್ಟಿದ್ದಾರೆ.

ನೈರೋಬಿಗೆ ತೆರಳಬೇಕಿದ್ದ ಈ ಜೋಡಿ ವಿಮಾನ ಸಮಯ ಬದಲಾಗಿದ್ದರಿಂದ ಮುಂಬೈ ಹೋಟೆಲ್‌ವೊಂದರಲ್ಲಿ ತಂಗಿದ್ದರು. ಅಷ್ಟರಲ್ಲಾಗಲೇ ಜವರಾಯ ಎಂಟ್ರಿಕೊಟ್ಟಿದ್ದಾನೆ. ಹೋಟೆಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿ ಈ ಜೋಡಿ ದುರಂತ ಅಂತ್ಯ ಕಂಡಿದ್ದಾರೆ. ಮದುವೆಯಾಗಿ ಖುಷಿಯಿಂದ ಜೀವನ ರೂಪಿಸಿಕೊಳ್ಳಬೇಕಿದ್ದವರು ಮಸಣ ಸೇರಿದ್ದಾರೆ.

ಇದನ್ನೂ ಓದಿ: ಚಿಪ್ಸ್‌ ಪ್ಯಾಕೆಟ್‌ ಕದ್ದು ಜೈಲು ಪಾಲಾದ ಖ್ಯಾತ ನಟ – ಸೆಲೆಬ್ರಿಟಿಯಾದವನಿಗೆ ಇದೆಲ್ಲಾ ಬೇಕಿತ್ತಾ?

ಗುಜರಾತ್​ನ ಕಚ್ ಜಿಲ್ಲೆಯ ಸರ್​ಪಂಚ್ ಸುರೇಶ್ ರಾಕಾ ಅವರು ಕಿಶನ್ , ರೂಪಲ್ ಹಾಗೂ ಅವರ ತಾಯಿ ಮತ್ತು ಸಹೋದರಿಯೊಂದಿಗೆ ಹೋಟೆಲ್​ನಲ್ಲಿ ಉಳಿದುಕೊಂಡಿದ್ದರು. ಮಧ್ಯಾಹ್ನ ಹೋಟೆಲ್‌ನ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಿಶನ್ ಹಲೈ (28), ರೂಪಲ್ ವಕಾರಿಯಾ (25) ಮತ್ತು ಇನ್ನೊಬ್ಬ ವ್ಯಕ್ತಿ ಕಾಂತಿಲಾಲ್ ವರ (50) ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ರೂಪಲ್ ಅವರ ತಾಯಿ ಮಂಜುಳಾಬೆನ್ (49), ಸಹೋದರಿ ಅಲ್ಪಾ (19) ಮತ್ತು ಅಸ್ಲಂ ಶೇಖ್ (48) ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಿಶನ್ ಹಲೈ ಮತ್ತು ಅವರ ಪ್ರೇಯಸಿ ರೂಪಲ್ ವಕಾರಿಯಾ ಹಲವು ವರ್ಷಗಳಿಂದ ನೈರೋಬಿಯಲ್ಲಿ ವಾಸಿಸುತ್ತಿದ್ದರು. ಕಿಶನ್ ಮತ್ತು ರೂಪಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಮತ್ತು ನೈರೋಬಿಗೆ ಬಂದ ನಂತರ ಶೀಘ್ರದಲ್ಲೇ ಮದುವೆಯಾಗಲು ಯೋಜಿಸುತ್ತಿದ್ದರು. ಅಲ್ಲಿ ಅವರು ಹಲವಾರು ವರ್ಷಗಳಿಂದ ತಮ್ಮ ಪೋಷಕರು ಮತ್ತು ಒಡಹುಟ್ಟಿದವರೊಂದಿಗೆ ವಾಸಿಸುತ್ತಿದ್ದರು.

ಕಿಶನ್, ರೂಪಲ್ ಮತ್ತು ಅವರ ಕುಟುಂಬ ಸುಮಾರು ಒಂದು ತಿಂಗಳ ಹಿಂದೆ ಕಿಶನ್ ಅವರ ಕಿರಿಯ ಸಹೋದರನ ಮದುವೆಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದರು. ಕಿಶನ್ ಸ್ವಲ್ಪ ವರ್ಷಗಳ ಕಾಲ ರಾಂಪರ್ ಗ್ರಾಮದಲ್ಲಿದ್ದ , ಕಿಶನ್ 13 ವರ್ಷದವನಿದ್ದಾಗ ಹೆತ್ತವರ ಜತೆ ನೈರೋಬಿಗೆ ತೆರಳಿದ್ದ. ಗುಜರಾತ್‌ನಲ್ಲಿ ಶಾಪಿಂಗ್ ಮುಗಿಸಿ ಸಂಬಂಧಿಕರನ್ನು ಭೇಟಿ ಮಾಡಿದ ನಂತರ ಕಿಶನ್, ರೂಪಲ್, ಆಕೆಯ ಪೋಷಕರು ಮತ್ತು ಸಹೋದರಿ ಭಾರತದಿಂದ ನೈರೋಬಿಗೆ ತೆರಳಬೇಕಿತ್ತು. ಅಹಮದಾಬಾದ್​ನಿಂದ ವಿಮಾನದಲ್ಲಿ ಮುಂಬೈ ತಲುಪಿದ್ದರು, ವಿಮಾನ ತಡವಾಗುತ್ತದೆ ಎಂದ ಕಾರಣ ವಿಮಾನಯಾನ ಸಂಸ್ಥೆಯು ಅವರಿಗೆ ಸಾಂತಾಕ್ರೂಜ್ ಬಳಿಯ ಹೋಟೆಲ್​ನಲ್ಲಿ ವಸತಿ ಕಲ್ಪಿಸಿತ್ತು.

ಪ್ರಭಾತ್ ಕಾಲೋನಿಯ ನಾಲ್ಕು ಅಂತಸ್ತಿನ ಗ್ಯಾಲಕ್ಸಿ ಹೋಟೆಲ್‌ನ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದರಲ್ಲಿ ರೂಪಲ್ ವಕಾರಿಯಾ, ಕಿಶನ್ ಮತ್ತು ಕಾಂತಿಲಾಲ್ ಗೋರ್ಧನ್ ಮೃತಪಟ್ಟಿದ್ದಾರೆ. ಬೆಂಕಿ ನಂದಿಸಲು ನಾಲ್ಕು ಅಗ್ನಿಶಾಮಕ ವಾಹನಗಳು, ಅಷ್ಟೇ ಸಂಖ್ಯೆಯ ನೀರಿನ ಟ್ಯಾಂಕರ್‌ಗಳು ಮತ್ತು ಇತರ ಉಪಕರಣಗಳ ಸಹಾಯವನ್ನು ತೆಗೆದುಕೊಳ್ಳಲಾಗಿತ್ತು.

suddiyaana