ರೀಲ್ಸ್ ರಾಣಿ ಆ ರಾತ್ರಿ ಹೋಗಿದ್ದೆಲ್ಲಿಗೆ? – ಸೋನು ಶ್ರೀನಿವಾಸ್‌ ಗೌಡ ಮಾಡ್ಕೊಂಡ ಎಡವಟ್ಟುಗಳೇನು?

ರೀಲ್ಸ್ ರಾಣಿ ಆ ರಾತ್ರಿ ಹೋಗಿದ್ದೆಲ್ಲಿಗೆ? – ಸೋನು ಶ್ರೀನಿವಾಸ್‌ ಗೌಡ ಮಾಡ್ಕೊಂಡ ಎಡವಟ್ಟುಗಳೇನು?

ಏನೋ ಮಾಡಲು ಹೋಗಿ ಇನ್ನೇನು ಆಗಿ ಕೊನೆಗೆ ಜೈಲಿಗೆ ಹೋಗಿದ್ದಾರೆ ರೀಲ್ಸ್ ರಾಣಿ ಸೋನುಗೌಡ. ಹಾಗಿದ್ದರೆ ಸೋನುಗೌಡ ಮಾಡಲು ಹೋಗಿದ್ದು ಏನು?, ಇಲ್ಲಿ ರೀಲ್ಸ್ ರಾಣಿ ಮಾಡ್ಕೊಂಡ ಎಡವಟ್ಟುಗಳೇನು? ಕೆರಿಯರ್ ಬಿಲ್ಡ್ ಮಾಡಿಕೊಳ್ಳೋ ಟೈಮ್‌ ನಲ್ಲಿ ಜೈಲಿಗೆ ಹೋಗಬೇಕಾದ ಸಿಚುವೇಶನ್ ಯಾಕೆ ಬಂತು ಎಂಬ ಬಗ್ಗೆ ಮಾಹಿತಿ ಇಲ್ಲಿದೆ..

ಟಿಕ್ ಟಾಕ್ ವಿಡಿಯೋದಲ್ಲಿ ಫೇಮಸ್.. ರೀಲ್ಸ್ ರಾಣಿಯಾಗಿಯೂ ಫೇಮಸ್. ಆದ್ರೆ, ಏನೋ ಮಾಡಲು ಹೋಗಿ ಏನೇನೋ ಆಗೋದ್ರಲ್ಲೂ ಫೇಮಸ್ ಆಗಿದ್ದಾರೆ ಸೋನು ಶ್ರೀನಿವಾಸ್ ಗೌಡ. ವಿವಾದ ಇವರೇ ಮಾಡಿಕೊಳ್ಳೋದೋ.. ಇಲ್ಲ.. ವಿವಾದವೇ ಇವರನ್ನು ಹುಡುಕಿಕೊಂಡು ಬರುತ್ತೋ.. ಕುಂತಲ್ಲಿ, ನಿಂತಲ್ಲಿ, ಕಾಂಟ್ರವರ್ಸಿಯ ಮಾಡಿಕೊಳ್ಳೋ ಸೋನುಗೌಡ ಈಗ ಜೈಲು ಸೇರಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಫೈಟ್ – ಸಂಜು ಸ್ಯಾಮ್ಸನ್ ಹಾಗೂ ರಿಷಬ್ ಪಂತ್ ನಡುವೆ ಗೆಲ್ಲೋರು ಯಾರು?

ಒಂದ್ ಟೈಮ್‌ಲ್ಲಿ ಕೈಯಲ್ಲಿ ಮೊಬೈಲಿದ್ರೆ ಟಿಕ್ ಟಾಕ್ ವಿಡಿಯೋಗಳದ್ದೇ ದರ್ಬಾರ್. ಟಿಕ್ ಟಾಕ್ ವಿಡಿಯೋ ಮಾಡಿ, ಸಿಕ್ಕಾಪಟ್ಟೆ ಟ್ರೋಲ್‌ಗೆ ಯಾರಾದ್ರೂ ಒಳಗಾಗಿದ್ರು ಅಂದ್ರೆ.. ಅದು ಸೋನು ಶ್ರೀನಿವಾಸ್ ಗೌಡ. ಸೋನುಗೆ ಟ್ರೋಲ್ ಪ್ರಿಯರಲ್ಲೂ ಫಾಲೋವರ್ಸ್ ಇದ್ರು. ಕೆಲವರು ನೆಗೆಟಿವ್ ಆಗಿ ಟ್ರೋಲ್ ಮಾಡಿದ್ರೆ ಇನ್ನು ಕೆಲವರು ಸೋನುಗೆ ಸಪೋರ್ಟ್ ಮಾಡಿಯೇ ವಿಡಿಯೋ ಹಾಕ್ತಿದ್ರು. ಯಾವಾಗ ಟಿಕ್‌ಟಾಕ್ ವಿಡಿಯೋ ಬ್ಯಾನ್ ಆಯ್ತೊ.. ನಂತ್ರ ಶುರುವಾಗಿದ್ದೇ ರೀಲ್ಸ್ ಜಗತ್ತು. ಇದ್ರಲ್ಲಂತೂ ಯಾರಿಗೂ ಕಮ್ಮಿಯಿಲ್ಲ ಸೋನು. ಊಟವಿಲ್ಲದೆ, ನಿದ್ದೆಯಿಲ್ಲದೇ ಇರ್ತೀನಿ, ರೀಲ್ಸ್ ಇಲ್ಲದೆ ಇರೋಕೆ ಆಗಲ್ಲ ಅನ್ನೋ ಸೋನು, ರೀಲ್ಸ್ ರಾಣಿಯಂತಾನೇ ಫೇಮಸ್ ಆದ್ರು. ಇದೇ ನೇಮು ಫೇಮು ಇಟ್ಕೊಂಡೇ ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್‌ಬಾಸ್‌ಗೂ ಎಂಟ್ರಿ ಕೊಟ್ರು.

ಸೋಷಿಯಲ್ ಮೀಡಿಯಾದಲ್ಲಿ ಮುಳುಗಿರೋರಿಗೆ ಸೋನು ಶ್ರೀನಿವಾಸ ಗೌಡ ಬಗ್ಗೆ ಚೆನ್ನಾಗಿಯೇ ಗೊತ್ತು. ಆಕೆಯ ರೈಸಿಂಗ್, ಡೌನ್‌ಫಾಲ್‌ ಎಲ್ಲವೂ ಗೊತ್ತು. ಸೋಷಿಯಲ್ ಮೀಡಿಯಾದಲ್ಲಿ ಪಾಪ್ಯುಲರ್ ಆಗಿದ್ದ ಕಾರಣಕ್ಕೆನೇ ಆಕೆಗೆ ಓಟಿಟಿ ಬಿಗ್‌ಬಾಸ್ ನಲ್ಲಿ ಚಾನ್ಸ್ ಸಿಕ್ಕಿದ್ದು. ಆ ಸಮಯದಲ್ಲೂ ಆಕೆಯ ವಿರುದ್ಧ ದೊಡ್ಡ ಅಲೆಯೇ ಎದ್ದಿತ್ತು. ಆಕೆಯನ್ನ ಬಿಗ್‌ಬಾಸ್‌ಗೆ ಸೆಲೆಕ್ಟ್ ಮಾಡಿದ್ದೇ ತಪ್ಪು ಅನ್ನೋ ರೀತಿ ದೊಡ್ಡ ಚರ್ಚೆಯಾಗಿತ್ತು. ಆದ್ರೆ, ಕೊನೆಗೂ.. ಆಕೆಗೂ ಒಂದು ಬದುಕಿದೆ ಬಿಡಿ ಅನ್ನೋ ಮಟ್ಟಿಗೆ ಜನ ಮಾತಾಡಿದ್ದರು. ಇದಾದ ನಂತರ ಸೋನು ಶ್ರೀನಿವಾಸ್ ಗೌಡ ಬಗ್ಗೆ ಪಾಸಿಟಿವಿಟಿ ಜಾಸ್ತಿನೇ ಆಯ್ತು. ಬಿಗ್‌ಬಾಸ್ ಮನೆಯಲ್ಲಿದ್ದ ಸೋನುಗೆ ಫ್ಯಾನ್ಸ್ ಜಾಸ್ತಿಯಾದ್ರು. ಟ್ರೋಲ್ ಕ್ವೀನ್ ಎಂದೇ ಗುರುತಿಸಿಕೊಂಡ ಸೋನು,, ಬಿಗ್‌ಬಾಸ್ ಮನೆಗೆ ಬಂದ ಮೇಲೆ ನಮ್ಮ ಮನೆ ಮಗಳು ಸೋನು ಅನ್ನುವಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿದ್ರು.

ಸೋನು ಶ್ರೀನಿವಾಸ್ ಗೌಡಗೆ ಇನ್‌ಸ್ಟಾಗ್ರಾಮ್‌ನಲ್ಲಿ 1 ಮಿಲಿಯನ್‌ ಗೂ ಅಧಿಕ ಫಾಲೋವರ್ಸ್ ಇದ್ದಾರೆ. ಯಾವಾಗ ರಿಯಾಲಿಟಿ ಶೋನಲ್ಲಿ ತನ್ನ ರಿಯಲ್ ವಿಚಾರಗಳನ್ನು ಹೇಳಿಕೊಳ್ಳಲು ಶುರುಮಾಡಿದ್ರೋ ಆವಾಗ್ಲೇ ಸೋನು ಬಗ್ಗೆ ಜನರಲ್ಲಿದ್ದ ಇಮೇಜ್ ಕೂಡಾ ಚೇಂಜ್ ಆಯ್ತು. ಸೋನು ಕನ್ನಡದ ಹುಡುಗಿ, ಪಕ್ಕಾ ಮಂಡ್ಯ ಹುಡುಗಿ, ಅವಳಲ್ಲಿ ಟ್ಯಾಲೆಂಟ್ ಇದೆ ಅನ್ನೋದು ಗೊತ್ತಾಗೋಕೆ ಶುರುವಾಯ್ತು. ಇದೇ ಟ್ಯಾಲೆಂಟ್‌ನಿಂದಾಗಿಯೇ ದೊಡ್ಮನೆಗೆ ಬಂದಿದ್ದು ಅನ್ನೋದು ಕೂಡಾ ಸೋನುನೇ ಪ್ರೂವ್ ಮಾಡಿದ್ರು.. ದೊಡ್ಮನೆಯಿಂದ ಸಿನಿಜಗತ್ತಿಗೂ ಆಫರ್ ಬಂದಿತ್ತು. ಕ್ಯಾಡ್‌ಬರೀಸ್ ಎಂಬ ಸಿನಿಮಾದಲ್ಲೂ ಚಾನ್ಸ್ ಸಿಕ್ತು. ಇದ್ರ ಮಧ್ಯೆ, ಮಾಲ್ಡೀವ್ಸ್ ಪ್ರವಾಸಕ್ಕೆ ಹೋದ ಸೋನು ತನ್ನ ಬೋಲ್ಡ್ ಲುಕ್‌, ಹಾಟ್ ಪೋಸ್ ನಿಂದ ಮತ್ತಷ್ಟು ಫಾಲೋವರ್ಸ್ ಜಾಸ್ತಿಮಾಡಿಕೊಂಡಿಡ್ರು.

ಸಿನಿಮಾಗಳಲ್ಲಿ ನಟಿಸುವ ಚಾನ್ಸ್ ಬಂದಾಗ, ತನ್ನ ಟ್ಯಾಲೆಂಟ್ ತೋರಿಸಿಕೊಳ್ಳೋದು ಬಿಟ್ಟು.. ಅಕ್ರಮವಾಗಿ ಮಗುವನ್ನು ದತ್ತು ಪಡೆದುಕೊಂಡ ವಿಚಾರವನ್ನು ಮೈಮೇಲೆ ಎಳೆದುಕೊಂಡಿದ್ದಾರೆ ಸೋನು ಶ್ರೀನಿವಾಸ್ ಗೌಡ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಕೂಡಾ ಆಗಿದ್ದಾರೆ. ರಾತ್ರೋರಾತ್ರಿ ರಾಯಚೂರಿಗೆ ಹೋಗಿ ಮಲಗಿದ್ದ ಮಗುವನ್ನು ಎತ್ತಿಕೊಂಡು ಹೋಗಿದ್ದಾರೆ ಅಂತಾ ಪೋಷಕರು ಕೂಡಾ ಹೇಳುತ್ತಿದ್ದಾರೆ. ಅದೆಲ್ಲಾ ಕೂಡಾ ವಿಚಾರಣೆಯಲ್ಲಿದೆ. ಸತ್ಯಾಸತ್ಯತೆ ಕೂಡಾ ಮುಂದೆ ತಿಳಿದೇ ತಿಳಿಯುತ್ತದೆ.

ಬಿಗ್​ಬಾಸ್​ ಸ್ಪರ್ಧಿ ಸೋನುಗೌಡ ಅವರ ವಿಚಾರ, ಜನರ ಮನಸ್ಸಿನಲ್ಲಿ ಎರಡು ಆಯಾಮಗಳಲ್ಲಿ ಚರ್ಚೆಯಾಗ್ತಿದೆ. ಒಂದು ಮಾನವೀಯತೆಯ ಆ್ಯಂಗಲ್‌.. ಮತ್ತೊಂದು ಕಾನೂನಿನ ಆಯಾಮ. ಆಕೆಯ ಪರ ಮಾತನಾಡೋರು ಇದ್ದಾರೆ. ವಿರುದ್ಧವಾಗಿ ಮಾತನಾಡೋರು ಇದ್ದಾರೆ. ಆದ್ರೆ, ಕಾನೂನಿನ ದೃಷ್ಟಿಯಲ್ಲಿ ಆಕೆ ಈಗ ಆರೋಪಿಯೇ. ಹಾಗಾಗಿಯೇ ಈ ಕೇಸ್‌ ಅನ್ನು ಕಾನೂನಿನ ಪರಿಧಿಯಲ್ಲಿ ನೋಡೋದು ಸೂಕ್ತವೇ. ಹಾಗಂತಾ ಜನರ ಅಭಿಪ್ರಾಯ ತಪ್ಪು ಅಂತಾನೂ ಅಲ್ಲ. ಸತ್ಯ ಏನಂದ್ರೆ, ಕಾನೂನಿನ ಕಣ್ಣಿನಲ್ಲಿ ಆಕೆ ಆರೋಪಿ. ಗಂಭೀರವಾದ ಪ್ರಕರಣದ ಆರೋಪಿ. ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳ ದೂರಿನ ಮೇರೆಗೆ ಬ್ಯಾಡರಹಳ್ಳಿ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈಗ ನ್ಯಾಯಾಂಗ ಬಂಧನದಲ್ಲೂ ಇದ್ದಾರೆ ಸೋನು ಶ್ರೀನಿವಾಸ್ ಗೌಡ. ಮಗು ಅನ್ನೋದೇ ಭಾವನಾತ್ಮಕ ವಿಚಾರ. ಆ ವಿಚಾರದಲ್ಲಿ ಪಬ್ಲಿಸಿಟಿ ಇರಬಾರದು. ಆದ್ರೆ, ಸೋನುಗೌಡ ಈ ವಿಚಾರದಲ್ಲಿ ಎಡವಿದ್ದಾರೆ. ಮಗು ಸಮೇತ ವಿಡಿಯೋ ಹಂಚಿಕೊಂಡಿದ್ದಾರೆ. ಇದೀಗ ಸೋನುಗೆ ದತ್ತು ಮಾತೇ ಕುತ್ತು ತಂದಿದೆ. ಇದರ ಜೊತೆಗೆ ಕಾನೂನು ಎಲ್ಲರಿಗೂ ಒಂದೇ ಅನ್ನೋದು ಕೂಡಾ ಸಾಬೀತಾಗಿದೆ. ಟ್ರೋಲ್ ಕ್ವೀನ್ ಸದ್ಯದಲ್ಲೇ ಸ್ಯಾಂಡಲ್‌ವುಡ್ ನಲ್ಲಿ ಹೀರೋಯಿನ್ ಆಗಿ ಮೆರೆಯಬೇಕಿತ್ತು. ಶಾರ್ಟ್ಸ್ ಮೂವಿಯಲ್ಲೂ ಸೋನು ಗೌಡ ಮಿಂಚಬೇಕಿತ್ತು. ಅದೇನೇ ಇರಲಿ, ತನ್ನ ಬಗ್ಗೆ ಯಾರು ಏನೇ ಹೇಳಲಿ, ಎಷ್ಟೇ ಕಾಂಟ್ರವರ್ಸಿಯಾಗಲಿ, ಪರ, ವಿರೋಧವಿರಲಿ ಸೋನು ಶ್ರೀನಿವಾಸ್ ಗೌಡ ಯಾವತ್ತೂ ತನ್ನ ಮನೆಯವರನ್ನು ಈ ವಿವಾದಕ್ಕೆ ಕರೆತಂದಿಲ್ಲ. ಮನೆಯವರು ಕೂಡಾ ಇದುವರೆಗೂ ಸೋನು ಶ್ರೀನಿವಾಸ್ ಗೌಡ ವಿಚಾರಕ್ಕೆ ತಲೆಹಾಕಿಲ್ಲ. ಆದ್ರೆ, ಸಿನಿ ಜಗತ್ತಿನಲ್ಲಿ ಕೆರಿಯರ್ ಶುರು ಮಾಡಿಕೊಳ್ಳೋ ಈ ಸಮಯದಲ್ಲಿ, ಸೋನು ಗೌಡ ಮಾಡಿಕೊಂಡ ಈ ವಿವಾದ ಸದ್ಯ ತಣ್ಣಗಾಗುವ ಲಕ್ಷಣವಂತೂ ಕಾಣ್ತಿಲ್ಲ.

Shwetha M