ಹಾಟ್ ಹಾಟ್ ಫೋಟೋ ಶೇರ್ ಮಾಡಿದ ಸೋನು ಗೌಡ – ಮೈಮಾಟ ಪ್ರದರ್ಶನ ಇಷ್ಟೇ ಸಾಕಾ ಅಂತಿದ್ದಾರೆ ಕೆಲವರು

ಹಾಟ್ ಹಾಟ್ ಫೋಟೋ ಶೇರ್ ಮಾಡಿದ ಸೋನು ಗೌಡ – ಮೈಮಾಟ ಪ್ರದರ್ಶನ ಇಷ್ಟೇ ಸಾಕಾ ಅಂತಿದ್ದಾರೆ ಕೆಲವರು

ಮೊದ್ಲೇ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಸೋನು ಗೌಡ ಫೇಮಸ್. ಆದರೆ, ಇತ್ತೀಚಿಗೆ ಮಾಲ್ಡೀವ್ಸ್‌ಗೆ ಹೋದಾಗ ಹಾಕಿರುವ ಬಿಕಿನಿ ಫೋಟೋ ಸಿಕ್ಕಾಪಟ್ಟೆ ವೀವ್ಸ್ ಕಂಡಿತ್ತು. ಇದಾದ ಮೇಲೆ ಸೋನುಗೆ ಬಿಕಿನಿ ಫೋಟೋ ಹಾಕೋದೇ ಅಭ್ಯಾಸವಾದಂತಿದೆ. ಜೊತೆಗೆ ಸ್ವಲ್ಪವಾದರೂ ಖಾಸಗಿ ಭಾಗ ಕಾಣಿಸಿದರೆ ಮಾತ್ರ ಜಾಸ್ತಿ ವೀವ್ಸ್ ಬರುವುದು ಎಂಬ ಆಸೆಯೋ ಏನೋ. ಇದೀಗ ಸೋನು ಹೋದಲ್ಲಿ ಬಂದಲ್ಲಿ ಹಾಟ್ ಹಾಟ್ ಫೋಟೋ ಹಾಕಿ ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚುತ್ತಿದ್ದಾರೆ.

ಇದನ್ನೂ ಓದಿ: ಸಾರಾ ಅಣ್ಣಯ್ಯ ಸಖತ್ ಹಾಟ್ – ‘ಬಿಕಿನಿ’ ಫೋಟೋ ನೋಡಿ ‘ಸೂಪರ್’ ಎಂದ ಫ್ಯಾನ್ಸ್

ಸೋನು ಶ್ರೀನಿವಾಸ್ ಗೌಡ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 1 ಮಿಲಿಯನ್ ಹಿಂಬಾಲಕರು ಸಿಕ್ಕಿದ್ದಾರೆ. ಆವತ್ತು ಹಾಕಿರುವ ಹಾಟ್ ಫೋಟೋದಿಂದ ದಿಢೀರ್ ಅಂತಾ ಸೋನುಗೆ ಹಿಂಬಾಲಕರು ಜಾಸ್ತಿಯಾದರು. ಇದೀಗ ಸೋನು ತನ್ನ ಹಾಟ್ ಹಾಟ್ ಫೋಟೋ ಹಾಕೋದನ್ನು ಜಾಸ್ತಿ ಮಾಡಿದ್ದಾರೆ. ಬಿಕಿನಿ ಫೋಟೋಗೆ ಪಡ್ಡೆ ಹುಡುಗರು ಖುಷಿಪಟ್ಟಿದ್ದೇ ತಡ ಈಗ ಮತ್ತಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಬಾರಿ ಕೆಂಪು ಚಡ್ಡಿ, ಬಿಳಿ ಟಿ ಶರ್ಟ್ ನಲ್ಲಿ ಕಾಣಿಸಿಕೊಂಡಿರುವ ಫೋಟೋ ಶೇರ್ ಮಾಡಿದ್ದಾರೆ. ಬಟ್ಟೆ ಹಾಕಿದಂಗೂ ಇರಬೇಕು. ಪಡ್ಡೆಗಳು ತನ್ನ ಸೌಂದರ್ಯವನ್ನು ಇಣುಕಿ ಇಣುಕಿ ನೋಡಬೇಕು ಎಂಬಂತಿತ್ತು ಸೋನು ಹಾಕಿರುವ ಫೋಟೋಸ್.

ಸೋನು ಗೌಡ ಒಂದರ ಮೇಲೊಂದು ಫೋಟೋಗಳನ್ನು ಶೇರ್ ಮಾಡುತ್ತಲೇ ಇದ್ದಾರೆ. ಆ ಫೋಟೋಗಳು ಕೂಡ ಸಖತ್ ವೈರಲ್ ಆಗುತ್ತಿವೆ. ಜೊತೆಗೆ ನೆಗೆಟಿವ್ ಕಾಮೆಂಟ್ ಗಳ ಮಹಾಪುರವೇ ಹರಿದು ಬರುತ್ತಿವೆ. ಇಂತಹ ಕಾಮೆಂಟ್ ಗಳಿಗೆ ಉತ್ತರ ಕೊಡುವಂತೆ ಮತ್ತೊಂದು ಫೋಟೋ ಶೇರ್ ಮಾಡುವುದು ಸೋನು ಸ್ಟೈಲ್. ಯಾರು ಹೇಗೆ ಕಮೆಂಟ್ ಮಾಡಿದರೂ ಡೋಂಟ್ ಕೇರ್ ಎಂಬ ಮನಸ್ಥಿತಿ ಸೋನು ಅವರದ್ದು. ಏನೇ ಆಗಲಿ, ಸೋನು ಅವತಾರಕ್ಕೆ ಒಂದಿಷ್ಟು ಜನ ಸೂಪರ್ ಅಂತಿದ್ದಾರೆ. ಮತ್ತೊಂದಿಷ್ಟು ಜನ ಖಡಕ್ ಆಗಿ ಕ್ಲಾಸ್ ತೆಗೆದುಕೊಳ್ತಾರೆ. ಏನಮ್ಮಾ ಸೋನು, ಮೈಮಾಟ ಪ್ರದರ್ಶನ ಅಷ್ಟು ಇಷ್ಟನಾ ಅಂತಾ ಇನ್ನಷ್ಟು ಮಂದಿ ಕೇಳುತ್ತಿದ್ದಾರೆ. ಯಾರು ಏನು ಹೇಳಿದರೂ ನಾನು ಮಾತ್ರ ಬದಲಾಗಲ್ಲ ಅಂತಿದ್ದಾರೆ ಸೋನು.

Sulekha