ರಾಜಸ್ಥಾನದ ಕಾಡಿನಲ್ಲಿ ಸೋನಿಯಾ-ರಾಹುಲ್ ಸಫಾರಿ!

ರಾಜಸ್ಥಾನದ ಕಾಡಿನಲ್ಲಿ ಸೋನಿಯಾ-ರಾಹುಲ್ ಸಫಾರಿ!

ನಿನ್ನೆ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ 76ನೇ ವರ್ಷದ ಹುಟ್ಟುಹಬ್ಬ. ಹೀಗಾಗಿ ಸೋನಿಯಾ ಗಾಂಧಿ ರಾಜಸ್ಥಾನದಲ್ಲಿ ಪುತ್ರ ರಾಹುಲ್ ಗಾಂಧಿ ಮತ್ತು ಪುತ್ರಿ ಪ್ರಿಯಾಂಕಾ ಗಾಂಧಿ ಜೊತೆಗೆ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ರು. ರಾಜಸ್ಥಾನದಲ್ಲಿರೋ ರಣ್​ಥಂಬೋರ್​ ಕಾಡಿನಲ್ಲಿ ಸೋನಿಯಾ ಪುತ್ರನ ಜೊತೆ ಜೀಪ್​ ಸಫಾರಿಗೆ ತೆರಳಿದ್ದರು. ರಣ್​ಥಂಬೋರ್​ ಅರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದ್ದು, ಸಾವಿರಾರು ಮಂದಿ ಪ್ರವಾಸಿಗರು ಭೇಟಿ ಕೊಡುತ್ತಾರೆ.

ರಾಜಸ್ಥಾನದ ಕಾಡಿನಲ್ಲಿ ಸೋನಿಯಾ-ರಾಹುಲ್ ಸಫಾರಿ!

ರಾಹುಲ್ ಗಾಂಧಿ ಸದ್ಯ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಪಾದಯಾತ್ರೆ ನಡೆಸುತ್ತಿದ್ದಾರೆ. ತಾಯಿಯ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಪಾದಯಾತ್ರೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ರಾಹುಲ್ ಗಾಂಧಿ,  ಇಂದು ಮತ್ತೆ ಯಾತ್ರೆ ಶುರು ಮಾಡಿದ್ದಾರೆ. ರಾಜಸ್ಥಾನದಲ್ಲಿ 17 ದಿನಗಳ ಕಾಲ  ಸುಮಾರು 500 ಕಿಲೋ ಮೀಟರ್ ದೂರ ರಾಹುಲ್ ಗಾಂಧಿ ಕಾಲ್ನಡಿಗೆ ನಡೆಸುತ್ತಿದ್ದಾರೆ.  ಸೆಪ್ಟೆಂಬರ್ 7ರಂದು ತಮಿಳುನಾಡಿನ  ಕನ್ಯಾಕುಮಾರಿಯಿಂದ ಆರಂಭವಾಗಿದ್ದ ಭಾರತ್ ಜೋಡೋ ಯಾತ್ರೆ ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಹಾದು ಹೋಗಿ ಈಗ ರಾಜಸ್ಥಾನಕ್ಕೆ ತಲುಪಿದೆ. 2023ರ ಫೆಬ್ರವರಿಯಲ್ಲಿ ಯಾತ್ರೆ ಜಮ್ಮು-ಕಾಶ್ಮೀರ ತಲುಪಲಿದೆ.

suddiyaana