ದೆಹಲಿಯಲ್ಲಿ ಮತ್ತಷ್ಟೂ ಹದಗೆಟ್ಟ ವಾಯುಗುಣಮಟ್ಟ – ಸೋನಿಯಾ ಗಾಂಧಿ ಜೈಪುರಕ್ಕೆ ಸ್ಥಳಾಂತರ

ದೆಹಲಿಯಲ್ಲಿ ಮತ್ತಷ್ಟೂ ಹದಗೆಟ್ಟ ವಾಯುಗುಣಮಟ್ಟ – ಸೋನಿಯಾ ಗಾಂಧಿ ಜೈಪುರಕ್ಕೆ ಸ್ಥಳಾಂತರ

ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಸೋನಿಯಾ ಗಾಂಧಿ ಜೈಪುರಕ್ಕೆ ಸ್ಥಳಾಂತರಗೊಂಡಿದ್ದರು. ಇದು ಅನೇಕ ಊಹಾಪೋಹಕ್ಕೂ ಎಡೆಮಾಡಿಕೊಟ್ಟಿತ್ತು. ಆದರೆ, ಸೋನಿಯಾ ಗಾಂಧಿಯವರು ಜೈಪುರಕ್ಕೆ ಶಿಫ್ಟ್ ಆಗಿರುವುದು ವೈದ್ಯರ ಸಲಹೆ ಮೇರೆಗೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ದೆಹಲಿಯಲ್ಲಿ ವಾಯುಗುಣಮಟ್ಟ ದಿನದಿಂದ ದಿನಕ್ಕೆ ಕಳಪೆಯಾಗುತ್ತಿರುವ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಸೋನಿಯಾ ಜೈಪುರಕ್ಕೆ ಶಿಫ್ಟ್ ಆಗಿದ್ದಾರೆ.

ಇದನ್ನೂ ಓದಿ:ಕರೆಂಟ್‌ ಕಳ್ಳ ಕುಮಾರಸ್ವಾಮಿ ಎಂಬ ಆರೋಪ – ಶುರುವಾಯ್ತು ಮತ್ತೊಂದು ಸುತ್ತಿನ ಕಾಂಗ್ರೆಸ್‌ – ಜೆಡಿಎಸ್‌ ಕಾಳಗ!

ಆಸ್ಪತ್ರೆಯಿಂದ ಬಿಡುಗಡೆಯಾದ ಎರಡು ತಿಂಗಳ ನಂತರ, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಾತ್ಕಾಲಿಕವಾಗಿ ಜೈಪುರಕ್ಕೆ ಸ್ಥಳಾಂತರಗೊಂಡಿದ್ದಾರೆ. ದೆಹಲಿಯಲ್ಲಿ ಮಾಲಿನ್ಯದಿಂದ ಉಂಟಾಗುವ ವಿಷಪೂರಿತ ಗಾಳಿಯನ್ನು ತಪ್ಪಿಸಲು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಈಗ ಜೈಪುರದಲ್ಲಿ ಕೆಲವು ದಿನಗಳ ಕಾಲ ತಂಗಲಿದ್ದಾರೆ.

ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಅವರಿಗೆ ಪುಷ್ಪ ನಮನ ಸಲ್ಲಿಸಲು ನವೆಂಬರ್ 14 ರಂದು ಬೆಳಿಗ್ಗೆ ಶಾಂತಿವನ ಸ್ಮಾರಕವನ್ನು ತಲುಪಿದ ಸೋನಿಯಾ ಗಾಂಧಿ ಅವರು ಮಾಸ್ಕ್ ಧರಿಸಿದ್ದರು. ಆದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಯಾವುದೇ ಚುನಾವಣಾ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿಲ್ಲ. ರಾಜಧಾನಿ ದೆಹಲಿಯಲ್ಲಿ ದೀಪಾವಳಿ ನಂತರ ಮಾಲಿನ್ಯ ಮತ್ತೊಮ್ಮೆ ಹೆಚ್ಚಾಗಿದೆ. ಮಂಗಳವಾರ ಬೆಳಗಿನ ಜಾವವೂ ಗಾಳಿಯ ಗುಣಮಟ್ಟ ತೀರಾ ಕಳಪೆಯಾಗಿ ದಾಖಲಾಗಿದೆ.

ದೆಹಲಿಯಲ್ಲಿ ಬೆಳಗ್ಗೆ 8 ಗಂಟೆಗೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 435ರಲ್ಲಿ ದಾಖಲಾಗಿದೆ. ಆದರೆ AQI ನೋಯ್ಡಾದಲ್ಲಿ 418 ಮತ್ತು ಗುರುಗ್ರಾಮ್‌ನಲ್ಲಿ 391 ತಲುಪಿದೆ. ದೆಹಲಿ NCR ನಲ್ಲಿ ವೇಗವಾಗಿ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ, ಜನರು ಮತ್ತೊಮ್ಮೆ ಕಣ್ಣುಗಳಲ್ಲಿ ಕಿರಿಕಿರಿ ಮತ್ತು ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ. ದೆಹಲಿಯಲ್ಲಿ ಮಾಲಿನ್ಯದ ಕಾರಣ ಸೋನಿಯಾ ಗಾಂಧಿ ಅವರು ರಾಜಧಾನಿ ದೆಹಲಿಯಿಂದ ಹೊರಗೆ ಹೋಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ವೈದ್ಯರ ಸಲಹೆಯ ಮೇರೆಗೆ, 2020 ರಲ್ಲಿ, ದೆಹಲಿಯಲ್ಲಿ ವೇಗವಾಗಿ ಹೆಚ್ಚುತ್ತಿರುವ ಮಾಲಿನ್ಯದ ನಂತರ ಸೋನಿಯಾ ಗಾಂಧಿ ಗೋವಾಕ್ಕೆ ಸ್ಥಳಾಂತರಗೊಂಡಿದ್ದರು. ನವೆಂಬರ್ 25 ರಂದು ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

Sulekha