ಅಂತರ್ – ಧರ್ಮೀಯ ಮದುವೆಯಾದ ಮಗ – ಅಪ್ಪನನ್ನೇ ಉಚ್ಚಾಟನೆ ಮಾಡಿದ ಬಿಜೆಪಿ!

ಯಾರೋ ಮಾಡಿದ ತಪ್ಪಿಗೆ, ಇನ್ಯಾರಿಗೋ ಶಿಕ್ಷೆ ಎಂಬ ಮಾತನ್ನು ನಾವು ಕೇಳಿರುತ್ತೇವೆ. ಮಗ ಮಾಡಿದ ತಪ್ಪಿಗೆ ತಂದೆ ಶಿಕ್ಷೆಯಾಗಿರುವ ಘಟನೆ ನಡೆದಿದೆ. ಲಡಾಖ್ ಬಿಜೆಪಿಯ ಹಿರಿಯ ನಾಯಕರೊಬ್ಬರ ಮಗ ಬೌದ್ಧ ಮಹಿಳೆ ಜತೆ ಓಡಿ ಹೋಗಿ ಮದುವೆಯಾಗಿದ್ದಾನೆ. ಇದೀಗ ಮಗ ಮಾಡಿದ ತಪ್ಪಿಗೆ ಅಪ್ಪನನ್ನು ಬಿಜೆಪಿಯು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
ಈ ವಿಚಿತ್ರ ಘಟನೆ ಲಡಾಖನಲ್ಲಿ ನಡೆದಿದೆ. ಲಡಾಖ್ನ ಬಿಜೆಪಿ ರಾಜ್ಯ ಉಪಾಧ್ಯಕ್ಷ ನಜೀರ್ ಅಹ್ಮದ್(74) ಅವರ ಮಗ ಒಂದು ತಿಂಗಳ ಹಿಂದೆ ಬೌದ್ಧ ಮಹಿಳೆಯೊಂದಿಗೆ ಓಡಿ ಹೋಗಿ ಮದುವೆಯಾಗಿದ್ದರು. ಈ ಹಿನ್ನೆಲೆ ಬಿಜೆಪಿ ನಾಯಕ ನಜೀರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಒಂದೇ ರೂಮ್‌ನಲ್ಲಿದ್ದ ಗೆಳೆಯನ ಮದುವೆಯಾಗಲು ಅವಳಾದನು! – ಲಿಂಗ ಬದಲಿಸಿ ಬಂದಾಗ ಕಾದಿತ್ತು ದೊಡ್ಡ ಶಾಕ್!
ಬಿಜೆಪಿಯ ಕಾರ್ಯಕಾರಿ ಸಭೆಯ ನಂತರ ಲಡಾಖ್ ಬಿಜೆಪಿ ಮುಖ್ಯಸ್ಥ ಫುಂಚೋಕ್ ಸ್ಟಾಂಜಿನ್ ಅವರು ಉಚ್ಚಾಟನೆ ಆದೇಶ ಹೊರಡಿಸಿದ್ದಾರೆ. ನಜೀರ್ ಅವರ ಮಗ ಬೌದ್ಧ ಮಹಿಳೆ ಜತೆ ಓಡಿ ಹೋಗಿರುವ ವಿಚಾರ ಕುರಿತಂತೆ ಪಕ್ಷ ಸ್ಪಷ್ಟನೆ ಕೇಳಿತ್ತು. ಒಂದು ತಿಂಗಳ ಹಿಂದೆ ನಜೀರ್ ಪುತ್ರ ಹಾಗೂ ಬೌದ್ಧ ಯುವತಿ ಮದುವೆಯಾಗಿದ್ದಾರೆ, ಆದರೆ ಅವರು ಎಲ್ಲಿದ್ದಾರೆ ಎನ್ನುವ ಸುಳಿವು ಸಿಕ್ಕಿಲ್ಲ. ಲಡಾಖ್‌ನಲ್ಲಿ ಅನೇಕ ಧಾರ್ಮಿಕ ಸಮುದಾಯಗಳು ಇವೆ. ಇಂತಹ ಸೂಕ್ಷ್ಮ ಘಟನೆಗಳು ಇಲ್ಲಿನ ಕೋಮು ಸೌಹಾರ್ದವನ್ನು ಹದಗೆಡಿಸುತ್ತದೆ. ಲಡಾಖ್‌ನಲ್ಲಿ ಯಾವ ಧರ್ಮದವರು ಕೂಡ ಓಡಿ ಹೋಗುವುದು ಸ್ವೀಕಾರಾರ್ಹವಲ್ಲ. ಈ ಪ್ರದೇಶದ ಜನರ ಏಕತೆಗೆ ಧಕ್ಕೆ ತಂದಂತೆ ಎಂದು ಬಿಜೆಪಿ ಹೇಳಿದೆ.
ತನ್ನ ಮಗ ಮಂಜೂರ್ ಅಹ್ಮದ್‌ನನ್ನು ಬೌದ್ಧ ಮಹಿಳೆಯೊಂದಿಗೆ ವಿವಾಹವಾಗುವುದನ್ನು ಅವರ ಕುಟುಂಬವೂ ವಿರೋಧಿಸುತ್ತದೆ ಮತ್ತು ಕಳೆದ ಒಂದು ತಿಂಗಳಿನಿಂದ ಅವರು ಎಲ್ಲಿ ತಂಗಿದ್ದಾರೆಂದು ತಿಳಿದಿಲ್ಲ ಎಂದು ಉಚ್ಚಾಟಿತ ಬಿಜೆಪಿ ನಾಯಕ ಹೇಳಿದ್ದಾರೆ.