ಸ್ನಾನ ಮಾಡುವಾಗ ದೇಹದ ಈ ಭಾಗಗಳನ್ನು ತೊಳೆಯುವುದೇ ಇಲ್ವಂತೆ! – ನೀವೂ ಹೀಗೆ ಮಾಡ್ತೀರಾ?

ಸ್ನಾನ ಮಾಡುವಾಗ ದೇಹದ ಈ ಭಾಗಗಳನ್ನು ತೊಳೆಯುವುದೇ ಇಲ್ವಂತೆ! – ನೀವೂ ಹೀಗೆ ಮಾಡ್ತೀರಾ?

ನಮ್ಮ ದೇಹದ ಪ್ರತಿಯೊಂದು ಭಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ ಅಲರ್ಜಿ, ಚರ್ಮರೋಗದಂತಹ ಅನೇಕ ಕಾಯಿಲೆಗಳು ನಮ್ಮನ್ನು ಕಾಡುತ್ತವೆ. ಅದಕ್ಕಾಗಿಯೇ ಪ್ರತಿನಿತ್ಯ ಸ್ನಾನ ಮಾಡಬೇಕು, ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಎಂದು ಹಿರಿಯರು, ವೈದ್ಯರು ಹೇಳುತ್ತಾ ಬಂದಿದ್ದಾರೆ. ಆದರೆ ಸ್ನಾನ ಮಾಡುವಾಗ ಕೆಲವರು ದೇಹದ ಕೆಲವೊಂದು ಭಾಗವನ್ನು ಶುಚಿಗೊಳಿಸಲು ಆಲಸ್ಯ ಮಾಡುತ್ತಾರಂತೆ. ಇದರಿಂದಾಗಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಅನೇಕರು ಕೇವಲ 5 ನಿಮಿಷದಲ್ಲಿ ಸ್ನಾನ ಮಾಡಿಕೊಂಡು ಬರುತ್ತಾರೆ. ಅವರು ಅಷ್ಟು ಬೇಗ ಸ್ನಾನ ಮುಗಿಸಿ ಬರುವುದನ್ನು ಯಾರಾದರೂ ಕಂಡರೆ, ಅರೇ.. ಸ್ನಾನ ಮಾಡಿದ್ಯೋ ಅಥವಾ ನೀರು ಸುರಿದುಕೊಂಡು ಬಂದೆಯೋ ಅಂತಾ ಕೇಳುತ್ತಾರೆ. ಹೀಗೆ ಸ್ಪೀಡ್‌ ಆಗಿ ಸ್ನಾನ ಮಾಡುವವರು ದೇಹದ ಕೆಲವು ಭಾಗಗಳನ್ನು ಶುಚಿಗೊಳಿಸಲು ನಿರ್ಲಕ್ಷ್ಯ ಮಾಡುತ್ತಾರೆ. ಏಕೆಂದರೆ ಆ ಭಾಗಗಳನ್ನು ಸ್ವಚ್ಛಗೊಳಿಸುವ ಅಗತ್ಯವಿಲ್ಲ ಎಂದು ಅವರು ಭಾವಿಸುತ್ತಾರೆ. ಅಂತಹ ಕೆಲವು ಭಾಗಗಳ ಶುಚಿತ್ವ ಕಾಪಾಡುವುದು ಬಹಳ ಮುಖ್ಯವಾಗಿತ್ತದೆ.

ಇದನ್ನೂ ಓದಿ : ವಯಸ್ಸಿಗೂ ಮೊದಲೇ ನಿಮ್ಮ ಕೂದಲು ಬಿಳಿಯಾಗಿದ್ಯಾ? – ಈ ಮನೆಮದ್ದು ಬಳಸಿ ನಿಮ್ಮ ಕೂದಲಿನ ಆರೈಕೆ ಮಾಡಿ

ತಜ್ಞರ ಪ್ರಕಾರ, ಜನರು ತಮ್ಮ ಶುಚಿತ್ವಕ್ಕೆ ಗಮನ ಕೊಡದ ಪ್ರಮುಖ ಭಾಗಗಳೆಂದರೆ ಪಾದಗಳು ಮತ್ತು ಉಗುರು. ಸ್ನಾನ ಮಾಡುವಾಗ ಸಾಮಾನ್ಯವಾಗಿ ನೀರು ನಮ್ಮ ಪಾದಗಳು ಅಥವಾ ಉಗುರುಗಳನ್ನು ತಲುಪುತ್ತದೆ ಹಾಗಾಗಿ ಅವುಗಳನ್ನು ಸ್ವಚ್ಛಗೊಳಿಸುವ ಅಗತ್ಯವಿರುವುದಿಲ್ಲ ಎಂದು ಅನೇಕರು ಭಾವಿಸುತ್ತಾರೆ. ಆದರೆ ಪಾದ ಹಾಗೂ ಉಗುರುಗಳಿಂದಲೇ ಬ್ಯಾಕ್ಟೀರಿಯಾಗಳು ನಮ್ಮ ದೇಹವನ್ನು ಸೇರಿಕೊಳ್ಳುತ್ತವೆ ಎಂದು ತಜ್ಞರು ಹೇಳುತ್ತಾರೆ.

ನಾವು ದೇಹದ ಇತರ ಭಾಗಗಳಿಂದ ಕೊಳೆಯನ್ನು ತೆಗೆದುಹಾಕಿದಾಗ ಪಾದ ಹಾಗೂ ಉಗುರುಗಳ ಮೇಲೆ ಕೊಳಕು ನೀರಿನಿಂದ ಹರಿಯುತ್ತದೆ. ಪಾದಗಳು ಅಥವಾ ಉಗುರುಗಳಿಗೆ ಅಂಟಿಕೊಳ್ಳುತ್ತದೆ. ನೀವು ಈ ಭಾಗಗಳನ್ನು ಸ್ವಚ್ಛಗೊಳಿಸದಿದ್ದರೆ, ಸೋಂಕಿನ ಅಪಾಯ ಉಂಟಾಗಬಹುದು. ಹಾಗಾಗಿ ದೇಹದ ಇತರ ಭಾಗಗಳಂತೆ, ನೀವು ಪಾದಗಳು ಮತ್ತು ಉಗುರುಗಳನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಮುಖ್ಯ ಎಂದು ವೈದ್ಯರು ಹೇಳುತ್ತಾರೆ.

ಒಂದು ವರದಿಯ ಪ್ರಕಾರ, 50 ಪ್ರತಿಶತ ಮಹಿಳೆಯರು ಮತ್ತು ಪುರುಷರು ಸ್ನಾನ ಮಾಡುವಾಗ ತಮ್ಮ ಪಾದಗಳನ್ನು ತೊಳೆಯುವುದಿಲ್ಲ. 25 ರಷ್ಟು ಜನರು ಯಾವಾಗಲಾದರೊಮ್ಮೆ ತೊಳೆಯುತ್ತಾರೆ. ಹಾಗಾಗಿ ಪಾದಗಳು ಮತ್ತು ಉಗುರು ತುಂಬಾ ಕೊಳಕಾಗಿರುತ್ತವೆ. ಅಡಿಭಾಗದ ಮೇಲೆ ಕೊಳಕು ಅಂಟಿಕೊಳ್ಳುತ್ತದೆ. ಅದಕ್ಕಾಗಿ ಅದನ್ನು ಪ್ರತಿದಿನ ತೊಳೆಯಬೇಕು. ನಿಮ್ಮ ಪಾದಗಳನ್ನು ತೊಳೆಯುವುದು ಅಥ್ಲೀಟ್ ಪಾದದ ಸೋಂಕು ಪಾದಗಳು ಬಿರುಕು ಬಿಡಲು ಕಾರಣವಾಗುತ್ತದೆ. ಕಾಲುಗಳ ಚರ್ಮವು ಸಿಪ್ಪೆ ಸುಲಿಯಲು ಪ್ರಾರಂಭಿಸುತ್ತದೆ. ಇದರಿಂದಾಗಿ ತುರಿಕೆ ಮತ್ತು ಉರಿ ಕೂಡ ಉಂಟಾಗುತ್ತದೆ.

ಆರೋಗ್ಯಕರ ವೈಯಕ್ತಿಕ ನೈರ್ಮಲ್ಯ ಮತ್ತು ನಿಮ್ಮ ಪಾದಗಳ ಆರೈಕೆಯ ಮೂಲಕ ಅನೇಕ ರೋಗಗಳು ಮತ್ತು ಪಾದದ ಸಮಸ್ಯೆಗಳನ್ನು ತಡೆಯಬಹುದು. ಆರೋಗ್ಯಕರ ಪಾದದ ನೈರ್ಮಲ್ಯವೆಂದರೆ ನಿಮ್ಮ ಪಾದಗಳನ್ನು ತೊಳೆಯುವುದು ಮಾತ್ರವಲ್ಲ, ನಿಮ್ಮ ಕಾಲ್ಬೆರಳ ಉಗುರುಗಳನ್ನು ಕತ್ತರಿಸುವುದು, ರಕ್ಷಣಾತ್ಮಕ ಪಾದರಕ್ಷೆಗಳನ್ನು ಧರಿಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಮೇರಿಕನ್ ಹೆಲ್ತ್ ಏಜೆನ್ಸಿ ಪ್ರಕಾರ, ಪ್ರತಿಯೊಬ್ಬರೂ ಪ್ರತಿ ದಿನವೂ ತಮ್ಮ ಪಾದಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆಯಬೇಕು. ಬೆರಳುಗಳ ನಡುವೆ ಸೋಪ್ ಅನ್ನು ಹಚ್ಚಬೇಕು. ಪಾದದ ಪ್ರತಿಯೊಂದು ಭಾಗವನ್ನು ಸ್ವಚ್ಛಗೊಳಿಸಬೇಕು. ಸಾಕ್ಸ್ ಮತ್ತು ಬೂಟುಗಳನ್ನು ಧರಿಸಿದರೆ ಮೊದಲು ಪಾದಗಳನ್ನು ಚೆನ್ನಾಗಿ ಒಣಗಿಸಬೇಕು. ಒದ್ದೆಯಾದ ಪಾದಗಳ ಮೇಲೆ ಎಂದಿಗೂ ಸಾಕ್ಸ್ ಮತ್ತು ಬೂಟುಗಳನ್ನು ಧರಿಸಬೇಡಿ. ಹಾಗೆಯೇ ನಿಯಮಿತವಾಗಿ ನಿಮ್ಮ ಉಗುರುಗಳನ್ನು ಕತ್ತರಿಸುವುದರಿಂದ ಉಗುರಿನ ಸೋಂಕನ್ನು ತಡೆಯಬಹುದು.

suddiyaana