‘ನನ್ನ ಕೈ ಸನ್ನೆ ಕೆಲವರಿಗೆ ಇಷ್ಟವಾಗದೇ ಇರಬಹುದು’ – ನಟಿ ರಶ್ಮಿಕಾ ಮಂದಣ್ಣ

‘ನನ್ನ ಕೈ ಸನ್ನೆ ಕೆಲವರಿಗೆ ಇಷ್ಟವಾಗದೇ ಇರಬಹುದು’ – ನಟಿ ರಶ್ಮಿಕಾ ಮಂದಣ್ಣ

ನನ್ನ ಕೈ ಸನ್ನೆ ಕೆಲವರಿಗೆ ಇಷ್ಟವಾಗದೇ ಇರಬಹುದು ಎಂದು ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಕನ್ನಡದ ಸೂಪರ್ ಹಿಟ್ ಚಿತ್ರ ‘ಕಿರಿಕ್ ಪಾರ್ಟಿ’ ಮೂಲಕ ರಶ್ಮಿಕಾ ಮಂದಣ್ಣ ಫೇಮಸ್ ಆಗಿದ್ದರು. ಆದರೆ, ರಶ್ಮಿಕಾ ತೆಲುಗು ಚಿತ್ರರಂಗದಲ್ಲಿ ಹೆಚ್ಚು ಜನಪ್ರಿಯತೆ ಕಂಡಿದ್ದಾರೆ. ಜೊತೆಗೆ ಟಾಲಿವುಡ್‌ನ ಹಿಟ್ ಮೂವಿಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಅಲ್ಲದೇ ಬಾಲಿವುಡ್‌ನಲ್ಲೂ ರಶ್ಮಿಕಾ ಹವಾ ಇದೆ. ಹೀಗಾಗಿಯೇ ಕನ್ನಡ ಚಿತ್ರರಂಗವನ್ನು ಅವರು ನಿರ್ಲಕ್ಷ್ಯ ಮಾಡಿದ್ದಾರೆ ಎಂಬುದು ಹಲವರ ಆರೋಪ. ಹೀಗಾಗಿ ರಶ್ಮಿಕಾ ಮಂದಣ್ಣ (Rashmika Mandanna) ಅವರನ್ನು ನಿರಂತರವಾಗಿ ಟ್ರೋಲ್ ಮಾಡಲಾಗುತ್ತಿದೆ. ಆದರೆ, ರಶ್ಮಿಕಾ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ‘ನಮ್ಮನ್ನು ಎಲ್ಲರೂ ಇಷ್ಟಪಡಬೇಕು ಎಂದೇನೂ ಇಲ್ಲ’ ಅನ್ನೋದು ರಶ್ಮಿಕಾ ಅಭಿಪ್ರಾಯ.

ಇದನ್ನೂ ಓದಿ:  ‘ಮಂಕು ಭಾಯ್ ಫಾಕ್ಸಿ ರಾಣಿ’ ಸಿನಿಮಾ ಮುಂದಿನ ವಾರ ರಿಲೀಸ್ – ರೂಪೇಶ್ ಶೆಟ್ಟಿಗೆ ಡಬಲ್ ಧಮಾಕಾ

ಇನ್ನು ಸಂದರ್ಶನವೊಂದರಲ್ಲಿ ಮಾತನಾಡಿದ ರಶ್ಮಿಕಾ ಮಂದಣ್ಣ, ‘ನಾವು ಕಲಾವಿದರಾಗಿ ಜನರು ನಮ್ಮನ್ನು ಮಾತ್ರ ಇಷ್ಟಪಡಬೇಕು ಎಂದು ನಾವು ನಿರೀಕ್ಷಿಸಬಾರದು. ನೀವು ಎಲ್ಲರಿಗೂ ಉತ್ತರಿಸಬೇಕೆಂದಿಲ್ಲ. ಬಹಳಷ್ಟು ದ್ವೇಷ, ಬಹಳಷ್ಟು ಪ್ರೀತಿ ಎರಡೂ ಇರುತ್ತದೆ. ನಾನು ಮಾತನಾಡುವುದು ಅಥವಾ ನನ್ನ ಕೈ ಸನ್ನೆಗಳು ಕೆಲವರಿಗೆ ಇಷ್ಟವಾಗದಿರಬಹುದು. ನನ್ನನ್ನು ಜನರು ಇಷ್ಟಪಡದೆ ಇರಲು ಇದೆಲ್ಲವೂ ಕಾರಣ ಆಗಿರಬಹುದು. ಇದರ ಜತೆ ಅನೇಕರು ಪ್ರೀತಿ ತೋರುತ್ತಿದ್ದಾರೆ. ಇದಕ್ಕೆ ನಾನು ಕೃತಜ್ಞ’ ಎಂದಿದ್ದಾರೆ ರಶ್ಮಿಕಾ.

ಈ ಹಿಂದೆ ರಶ್ಮಿಕಾ ಮಂದಣ್ಣ ಸಂದರ್ಶನದ ವೇಳೆ ಮೊದಲ ಸಿನಿಮಾ ‘ಕಿರಿಕ್ ಪಾರ್ಟಿ’ ಬಗ್ಗೆ ಹೇಳುವಾಗ ಪ್ರೊಡಕ್ಷನ್ ಹೌಸ್ ಹೆಸರನ್ನು ಉಲ್ಲೇಖ ಮಾಡದೆ ಕೈ ಬೆರಳಿಂದ ಸನ್ನೆ ಮಾಡಿದ್ದರು. ಈ ವಿಚಾರದಲ್ಲಿ ರಿಷಬ್ ಶೆಟ್ಟಿ ಅವರು ರಶ್ಮಿಕಾಗೆ ಪರೋಕ್ಷವಾಗಿ ಟೀಕೆ ಮಾಡಿದ್ದರು. ಈಗ ರಶ್ಮಿಕಾ ಅವರು ‘ನನ್ನ ಕೈ ಸನ್ನೆಗಳು ಕೆಲವರಿಗೆ ಇಷ್ಟವಾಗದೇ ಇರಬಹುದು’ ಎಂದು ಹೇಳಿರುವುದು ರಿಷಬ್ ಶೆಟ್ಟಿಗೆ ಹೇಳಿದ ಮಾತೇ ಎಂಬ ಚರ್ಚೆ ನಡೆಯುತ್ತಿದೆ.

suddiyaana