ಹೇರ್ ಡೈ ಬೇಡ.. ಮನೆಯಲ್ಲಿರೋ ಈ ಎಲೆ ಬಿಳಿಕೂದಲಿಗೆ ರಾಮಬಾಣ!

ಮಕ್ಕಳಿಂದ ಹಿಡಿದು ವಯಸ್ಸಾದವರಿಗೆ ಕಾಡುವ ಸಮಸ್ಯೆಗಳಲ್ಲಿ ಬಿಳಿ ಕೂದಲು ಕೂಡ ಒಂದು. ಇಂದಿನ ಲೈಫ್‌ಸ್ಟೈಲ್, ರಾಸಾಯನಿಕ ಶಾಂಪೂಗಳನ್ನ ಬಳಸುವುದರಿಂದ ಕೂದಲು ಉದುರುವುದಲ್ಲದೇ, ಸಣ್ಣ ವಯಸ್ಸಿನಲ್ಲೇ ಬಿಳಿ ಕೂದಲು ಕಾಣಿಸಿಕೊಳ್ಳುತ್ತದೆ. ಬಿಳಿ ಕೂದಲಿನಿಂದ ಮುಕ್ತಿ ಪಡೆಯಲು ಅನೇಕರು ಡೈ ಬಳಸುತ್ತಾರೆ. ಆದ್ರೆ ಡೈ ಕೂದಲಿಗೆ ಹಚ್ಚುವುದು ಅಪಾಯಕಾರಿ. ಇದ್ರಿಂದ ಆರೋಗ್ಯಕ್ಕೆ ತೊಂದರೆ ಉಂಟಾಗ್ಬೋದು. ಹೀಗಾಗಿ ಮನೆಯಲ್ಲಿರುವ ಈ ಒಂದು ಎಲೆಯಿಂದ ಕೂದಲು ಕಪ್ಪಾಗಿಸಬಹುದು.
ಇದನ್ನೂ ಓದಿ: ಅಭಿಮಾನಿಗೆ 4 ಕೋಟಿ ಮೌಲ್ಯದ ಕಾರ್ ಗಿಫ್ಟ್ ಕೊಟ್ಟ ಹಿಟ್‌ಮ್ಯಾನ್!
ಹೌದು, ನಮ್ಮ ಸುತ್ತಮುತ್ತ ಸಾಕಷ್ಟು ಔಷಧೀಯ ಗುಣಗಳಿರುವ ಗಿಡಗಳು ಇರುತ್ತವೆ. ಆದ್ರೆ ಅದ್ರ ಮಹತ್ವ ಅನೇಕರಿಗೆ ಗೊತ್ತಿಲ್ಲ. ಇದ್ರಲ್ಲಿ ಕರಿಬೇವು ಕೂಡ ಒಂದು. ಕರಿಬೇವನ್ನು ತೆಂಗಿನ ಎಣ್ಣೆಯೊಂದಿಗೆ ಮಿಕ್ಸ್ ಮಾಡಿ ಬಳಸಿದ್ರೆ ಬಿಳಿ ಕೂದಲು ಮಾಯವಾಗುತ್ತೆ. ಹೌದು, ನೈಸರ್ಗಿಕವನ್ನು ನೆತ್ತಿಯನ್ನು ತಂಪಾಗಿಸುವ ಗುಣ ಹೊಂದಿರುವ ತೆಂಗಿನೆಣ್ಣೆಯೊಂದಿಗೆ ಸುಲಭವಾಗಿ ಲಭ್ಯವಿರುವ ಕರಿಬೇವನ್ನು ಹಾಕಿ ಬಳಸುವುದರಿಂದ ಹೇರ್ ಡೈ ಸಹಾಯವಿಲ್ಲದೆಯೇ, ಬಿಳಿ ಕೂದಲನ್ನು ಕಪ್ಪಾಗಿಸಬಹುದು.
ಕರಿಬೇವಿನ ಸೊಪ್ಪಿನಲ್ಲಿ ವಿಟಮಿನ್ ಬಿ ಹೇರಳವಾಗಿ ಕಂಡು ಬರುತ್ತದೆ. ಇದು ಕೂದಲೀನ ಕಿರುಚೀಲಗಳಿಗೆ ನೈಸರ್ಗಿಕವಾಗಿ ಬಣ್ಣ ನೀಡಿ, ಬೇರುಗಳಿಂದ ಕೂದಲು ಗಟ್ಟಿ ಮುಟ್ಟಾಗಿ ಕಪ್ಪಾಗಿ ಬೆಳೆಯುವಂತೆ ಪ್ರೋತ್ಸಾಹಿಸುತ್ತದೆ.
ಒಂದು ಬಟ್ಟಲಿನಷ್ಟು ಕೊಬ್ಬರಿ ಎಣ್ಣೆಯನ್ನು ಹಾಗೂ ಒಂದು ಹಿಡಿ ತಾಜಾ ಕರಿಬೇವಿನ ಎಲೆಗಳನ್ನು ಕಬ್ಬಿಣದ ಬಾಣೆಲೆಗೆ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಿ. ಕೊಬ್ಬರಿ ಎಣ್ಣೆಯ ಬಣ್ಣ ಕಪ್ಪಾಗುವವರೆಗೂ ಕಾಯಿಸಿದ ಬಳಿಕ ಅದನ್ನು ಆರಿಸಿ, ತಣ್ಣಗಾಗಲು ಬಿಡಿ.
ಕರಿಬೇವನ್ನು ಬೆರೆಸಿ ಕುದಿಸಿಟ್ಟ ತೆಂಗಿನೆಣ್ಣೆಯನ್ನು ಶೋಧಿಸಿ ಒಂದು ಗಾಜಿನ ಸೀಸೆಯಲ್ಲಿ ಸಂಗ್ರಹಿಸಿ ಇಡಿ. ಬಳಿಕ ಈ ಎಣ್ಣೆಯನ್ನು ವಾರದಲ್ಲಿ ಒಂದೆರಡು ಬಾರಿ ಕೂದಲಿಗೆ ಹಚ್ಚಿ ಮಸಾಜ್ ಮಾಡುತ್ತಾ ಬಂದರೆ ಬಿಳಿ ಕೂದಲು ಬೇರುಗಳಿಂದ ಕಪ್ಪಾಗುತ್ತದೆ.