ಶುಭ್ರ ಆಗಸದಲ್ಲಿ ಉರಿಯುವ ರಿಂಗ್ ನಂತೆ ಕಾಣಿಸಿಕೊಳ್ಳಲಿದ್ದಾನೆ ರವಿಮಾಮ! – ಅ. 14ರಂದು ಸಂಭವಿಸಲಿದೆ ಸೂರ್ಯಗ್ರಹಣ

ಶುಭ್ರ ಆಗಸದಲ್ಲಿ ಉರಿಯುವ ರಿಂಗ್ ನಂತೆ ಕಾಣಿಸಿಕೊಳ್ಳಲಿದ್ದಾನೆ ರವಿಮಾಮ! – ಅ. 14ರಂದು ಸಂಭವಿಸಲಿದೆ ಸೂರ್ಯಗ್ರಹಣ

ಬಾಹ್ಯಾಕಾಶದ ವಿಸ್ಮಯ ಹಾಗೂ ಆಕಾಶದಲ್ಲಿ ಸಾಕಷ್ಟು ಕುತೂಹಲಕಾರಿ ವಿಚಾರಗಳ  ಬಗ್ಗೆ ವಿಜ್ಞಾನಿಗಳು ಸದಾ ಕಣ್ಣಿಟ್ಟಿರುತ್ತಾರೆ. ಅಲ್ಲಿ ನಡೆಯುವ ಪ್ರತಿಯೊಂದು ವಿದ್ಯಾಮಾನಗಳ ಬಗ್ಗೆ ಸದಾ ಅಧ್ಯಯನ ನಡೆಸಿ, ಜನರಿಗೆ ತಿಳಿಸುತ್ತಿರುತ್ತಾರೆ. ಹೀಗಾಗಿಯೇ ಬಾನಂಗಳದಲ್ಲಿ ನಡೆಯುವ ಕುತೂಹಲಕಾರಿ ಖಗೋಳ ವಿಸ್ಮಯಗಳು ಮನುಷ್ಯರಲ್ಲಿ ಯಾವಾಗಲೂ ಒಂದು ರೀತಿಯ ಕುತೂಹಲವನ್ನು ಹುಟ್ಟಿಸುತ್ತಲೇ ಇರುತ್ತದೆ. ಮುಂದೆ ಬರುವ ಸೂರ್ಯಗ್ರಹಣವು ಬಾಹ್ಯಾಕಾಶ ವಿಸ್ಮಯಗಳನ್ನು ನೋಡುವ ಆಕಾಂಕ್ಷೆಯುಳ್ಳವರಿಗೆ ಒಂದು ರೀತಿಯ ಸುಂದರ ಅನುಭವವನ್ನು ನೀಡಲಿದೆ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನಾಸಾ) ಹೇಳಿದೆ.

ಅಕ್ಟೋಬರ್ 14ರಂದು ಸೂರ್ಯಗ್ರಹಣ ಸಂಭವಿಸಲಿದೆ. ಈ ಸೂರ್ಯಗ್ರಹಣ ಶುಭ್ರ ಆಗಸದಲ್ಲಿ ಅದು ಉರಿಯುವ ರಿಂಗ್ ನಂತೆ ಕಾಣಲಿದೆ. ವೈಜ್ಞಾನಿಕ ಸಲಕರಣೆಗಳ ಮೂಲಕ ಸುಂದರ ಕಲಾಕೃತಿಯಂತೆ ಕಾಣುವ ಸೂರ್ಯಗ್ರಹಣವನ್ನು ನೋಡಬಹುದು ಅಂತಾ ನಾಸಾ ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಬೇಸರದ ಸಂಗತಿಯೆಂದರೆ ಈ ಸೂರ್ಯಗ್ರಹಣ ಭಾರತಕ್ಕೆ ಗೋಚರವಾಗುವುದಿಲ್ಲ. ಅಮೆರಿಕ ಮುಂತಾದ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಾತ್ರ ಗೋಚರವಾಗುತ್ತದೆ.

ಇದನ್ನೂ ಓದಿ: ನೆಪ್ಚ್ಯೂನ್ ಗ್ರಹದ ಮೇಲೆ ನಿಗೂಢ ಕಪ್ಪು ಚುಕ್ಕೆ ಪತ್ತೆ! –  ಪ್ರಕಾಶಮಾನವಾದ ಚುಕ್ಕೆಯ ರಹಸ್ಯವೇನು?

ಅಮೆರಿಕದಲ್ಲಿ ನಡೆಯಲಿರುವ ಸೂರ್ಯಗ್ರಹಣವು, ಉತ್ತರ ಒರೆಗಾವ್ ನಿಂದ ದಕ್ಷಿಣದ ಟೆಕ್ಸಾಸ್ ವರೆಗೆ ಗೋಚರವಾಗುತ್ತದೆ. ಪೂರ್ಣ ಸೂರ್ಯಗ್ರಹಣದ ವೇಳೆಯಲ್ಲಿ ಅಂದರೆ, ಸೂರ್ಯಗ್ರಹಣದ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಸೂರ್ಯನು ಉರಿಯುವ ವೃತ್ತದಂತೆ ಗೋಚರಿಸಲಿದ್ದಾರೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಅಕ್ಟೋಬರ್ ನಲ್ಲಿ ಸಂಭವಿಸಲಿರುವ ಸೂರ್ಯಗ್ರಹಣದ ಚಿತ್ರಣವನ್ನು ತಾನು ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಹಾಗೂ ತನ್ನದೇ ಆದ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ನೇರಪ್ರಸಾರ ಮಾಡುವುದಾಗಿ ನಾಸಾ ಹೇಳಿಕೊಂಡಿದೆ. ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರಕಟಣೆಯೊಂದನ್ನು ಹಾಕಿರುವ ಸಂಸ್ಥೆ, ಅ. 14ರ ದಿನಾಂಕವನ್ನು ನಿಮ್ಮ ಕ್ಯಾಲೆಂಡರ್ ನಲ್ಲಿ ಗುರುತು ಹಾಕಿಕೊಳ್ಳಿ. ರಿಂಗ್ ಆಫ್ ಫೈರ್ ಅನ್ನು ಆನಂದಿಸಲು ಸಿದ್ಧರಾಗಿರಿ. ಬಾನಿನಲ್ಲಿ ನಡೆಯುವ ಈ ವಾರ್ಷಿಕ ವಿದ್ಯಮಾನವನ್ನು ನೋಡಲು ಮೆಕ್ಸಿಕೋ ಕೊಲ್ಲಿಯಿಂದ ನೇರವಾಗಿ ಪ್ರಸಾರ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

suddiyaana