ವರ್ಷದ ಮೊದಲ ಸೂರ್ಯಗ್ರಹಣ – ಎಲ್ಲೆಲ್ಲಿ ಗೋಚರಿಸಲಿದೆ ಗೊತ್ತಾ?

ವರ್ಷದ ಮೊದಲ ಸೂರ್ಯಗ್ರಹಣ – ಎಲ್ಲೆಲ್ಲಿ ಗೋಚರಿಸಲಿದೆ ಗೊತ್ತಾ?

2023 ರ ಮೊದಲ ಸೂರ್ಯ ಗ್ರಹಣ ಗುರುವಾರ ( ಏ. 20) ಸಂಭವಿಸಲಿದೆ. ಈ ವರ್ಷದ ಮೊದಲ ಸೂರ್ಯ ಗ್ರಹಣ ಸುಮಾರು ಐದು ಗಂಟೆಗಳ ಕಾಲ ಗೋಚರಿಸಲಿದ್ದು, ಬೆಳಗ್ಗೆ 7. 40 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 12. 29ಕ್ಕೆ ಕೊನೆಗೊಳ್ಳಲಿದ್ದು, ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಗೋಚರಿಸಲಿದೆ.

ಸೂರ್ಯ ಗ್ರಹಣ ಆಸ್ಟ್ರೇಲಿಯಾ, ಪೂರ್ವ ಮತ್ತು ದಕ್ಷಿಣ ಏಷ್ಯಾ, ಪೆಸಿಫಿಕ್ ಮಹಾಸಾಗರ, ಅಂಟಾರ್ಟಿಕಾ ಮತ್ತು ಹಿಂದೂ ಮಹಾಸಾಗರದಲ್ಲಿ ಗೋಚರಿಸಲಿದೆ. ಸೂರ್ಯಗ್ರಹಣದ ಮಾರ್ಗವು ಭಾರತದ ಮೂಲಕ ಹಾದುಹೋಗುವುದಿಲ್ಲ. ದಕ್ಷಿಣ/ಪೂರ್ವ ಏಷ್ಯಾ, ಆಸ್ಟ್ರೇಲಿಯಾ, ಪೆಸಿಫಿಕ್, ಹಿಂದೂ ಮಹಾಸಾಗರ ಮತ್ತು ಅಂಟಾರ್ಟಿಕಾದ ಕೆಲವು ಭಾಗಗಳಲ್ಲಿ ಗೋಚರಿಸುತ್ತದೆ. ಗ್ರಹಣದ ಸಂಪೂರ್ಣತೆಯು ಪಶ್ಚಿಮ ಆಸ್ಟ್ರೇಲಿಯಾದ ಎಕ್ಸ್‌ಮೌತ್‌ನಲ್ಲಿ ಗೋಚರಿಸುತ್ತದೆ ಅಂತಾ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕೊನೆ ಕ್ಷಣದಲ್ಲಿ ರಾಕೆಟ್ ಉಡಾವಣೆ ಮುಂದೂಡಿಕೆ! – ಸಾಕಷ್ಟು ಕಲಿತೆವು ಎಂದಿದ್ದೇಕೆ ಮಸ್ಕ್?

ಸ್ಪೇಸ್ ಡಾಟ್ ಕಾಮ್ ಪ್ರಕಾರ, ‘ವಾರ್ಷಿಕ ರಿಂಗ್ ಆಫ್ ಫೈರ್’ಸಮಯದಲ್ಲಿ ಇದು ಭಾರತೀಯ ಮತ್ತು ಪೆಸಿಫಿಕ್ ಸಾಗರಗಳಲ್ಲಿ ಕೆಲವು ಸೆಕೆಂಡುಗಳ ಕಾಲ ಗೋಚರಿಸಲಿದೆ.  ಆಮ್ ಸ್ಟರ್‌ಡ್ಯಾಮ್, ಪೋರ್ಟ್-ಔ-ಫ್ರಾನ್ಸ್ , ಆಸ್ಟ್ರೇಲಿಯಾದ ಪರ್ತ್, ಡಾರ್ವಿನ್,  ಇಂಡೋನೇಷ್ಯಾದ ಜಕಾರ್ತ,  ಮನೋಕ್ವಾರಿ ಮತ್ತು ಮಕಾಸ್ಸರ್, ಫಿಲಿಪೈನ್ಸ್ ನ ಜನರಲ್ ಸ್ಯಾಂಟೋಸ್, ಪಪುವಾ ನ್ಯೂ ಗಿನಿಯಾದ ಪೋರ್ಟ್ ಮೊರೆಸ್ಬಿ, ಸೊಲೊಮನ್ ದ್ವೀಪಗಳ ಹೊನಿಯಾರಾ ನಗರಗಳಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರಿಸಲಿದೆ.

ಸೂರ್ಯ ಗ್ರಹಣದ ಸಮಯದಲ್ಲಿ ಸೂರ್ಯನನ್ನು ಬರಿ ಕಣ್ಣಿನಿಂದ ನೇರವಾಗಿ ನೋಡುವುದು ಅಪಾಯಕಾರಿಯಾಗಿದೆ. ಇದರಿಂದ ಕಣ್ಣಿನ ಮೇಲೆ ದುಷ್ಪರಿಣಾಮ ಬೀಳಲಿದೆ. ಗ್ರಹಣವನ್ನು ನೋಡಲು ಕಪ್ಪು ಪಾಲಿಮರ್, ಅಲ್ಯೂಮಿನೈಸ್ಡ್ ಮೈಲಾರ್ ಅಥವಾ ಶೇಡ್ ಸಂಖ್ಯೆ 14 ರ ವೆಲ್ಡಿಂಗ್ ಗ್ಲಾಸ್ ಸೇರಿದಂತೆ ಕಣ್ಣಿನ ಫಿಲ್ಟರ್‌ಗಳನ್ನು ಬಳಸಿ ಸೂರ್ಯಗ್ರಹಣ ನೋಡಬೇಕು ಅಂತಾ ನಾಸಾ ವಿಜ್ಞಾನಿಗಳು ಸೂಚಿಸಿದ್ದಾರೆ.

suddiyaana