ಪುಂಡರ ಕಾಟ.. ಗಂಡನ ಪೆಟ್ಟು.. – ರೀಲ್ಸ್ ರಾಣಿ ರೇಷ್ಮಾ ರಿಯಲ್‌ ಸ್ಟೋರಿ..

ಪುಂಡರ ಕಾಟ.. ಗಂಡನ ಪೆಟ್ಟು.. – ರೀಲ್ಸ್ ರಾಣಿ ರೇಷ್ಮಾ ರಿಯಲ್‌ ಸ್ಟೋರಿ..

ಸೋಶಿಯಲ್ ಮೀಡಿಯಾ ಬಂದ್ಮೇಲೆ ದಿನಕ್ಕೊಂದು ಪ್ರತಿಭೆಗಳು ಅರಳ್ತಾ ಇವೆ. ಕಾಲೇಜ್ ಗೆ ಹೋಗೋ ಹುಡುಗ್ರು.. ಗೃಹಿಣಿಯರು ಕೂಡ ಸೆಲೆಬ್ರಿಟಿಗಳಾಗ್ತಾ ಇದ್ದಾರೆ.. ದಿನಕ್ಕೊಂದೊಂದು ವಿಡಿಯೋ ಅಪ್ ಲೋಡ್ ಮಾಡಿ ಮನೆಯಿಂದಲೇ ಫೇಮಸ್ ಆಗ್ತಾ ಇದ್ದಾರೆ.. ಅಂಥವರಲ್ಲಿ ರೇಷ್ಮಾ ಆಫ್ ಕ್ವೀನ್ಸ್ ಕೂಡ ಒಬ್ರು.. ಸದ್ಯ ಇನ್ಸ್ಟಾಗ್ರಾಮ್ ರೀಲ್ಸ್ ನಲ್ಲಿ ಈಕೆಯೇ ಟ್ರೆಂಡ್ ನಲ್ಲಿ ಇದ್ದಾರೆ..

ಸೋಶಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು.. ಬರೀ ರೀಲ್ಸ್ ಗಳದ್ದೇ ಹಾವಳಿ.. ಒಮ್ಮೆ ನೋಡಿದ್ರೆ ಸಾಕು ದಿನವಿಡೀ ಸ್ಕ್ರೋಲ್ ಮಾಡ್ತಾನೆ ಇರ್ತೀವಿ.. ಇನ್ನು ಒಂದು ನೋಡೋಣ ಅಂತಾ ನೋಡ್ತಾ ಇದ್ರೆ ಟೈಮ್ ಹೋಗೋದೇ ಗೊತ್ತಾಗಲ್ಲ. ಎದ್ದಾಗಿಂದ ರಾತ್ರಿ ಮಲಗೋ ವರೆಗೂ ಏನೇನ್ ಆಯ್ತು ಅಂತಾ ರೀಲ್ಸ್ ಮಾಡೋದು ಅಪ್‌ಲೋಡ್ ಮಾಡೋದು.. ಅಂಥವರ ಸಾಲಿನಲ್ಲಿ ಹಾಯ್ ಫ್ರೆಂಡ್ಸ್ ಅಂತಾ ಏರು ಧ್ವನಿಯಲ್ಲಿ ಮಾತಾಡೋ ರೇಷ್ಮಾ ಆಫ್ ಕ್ವೀನ್ಸ್ ಕೂಡ ಒಬ್ರು.. ಸದ್ಯ ಇನ್ಸ್ ಸ್ಟಾಗ್ರಾಂ ನಲ್ಲಿ  ಈಕೆಯದ್ದೇ ಹವಾ..

ಇದನ್ನೂ ಓದಿ: ರಾಜಕೀಯಕ್ಕೆ ಗೌತಮ್ ಗಂಭೀರ್ ಗುಡ್‌ ಬೈ -ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಈ ನಿರ್ಧಾರ ಮಾಡಿದ್ಯಾಕೆ?

90 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ರೇಷ್ಮಾ, ಬೆಳಗ್ಗೆ ಎದ್ದು ದಿನಚರಿ ಶುರು ಮಾಡುವ ಸಮಯದಿಂದ ಮಲಗುವ ಸಮಯದವರೆಗೂ ವಿಡಿಯೋ ಮಾಡಿ ತಾನು ಏನೇನ್ ಮಾಡ್ದೆ ಅಂತ ಜನರಿಗೆ ತಿಳಿಸ್ತಾ ಇರ್ತಾಳೆ.. ಪ್ರತಿ ದಿನ ನಾಲ್ಕರಿಂದ ಐದು ವಿಡಿಯೋ ಅಪ್ಲೋಡ್ ಮಾಡುತ್ತಾಳೆ. ಕೆಲವೊಮ್ಮೆ ಇನ್ನೂ ಜಾಸ್ತಿ ವಿಡಿಯೋ ಪೋಸ್ಟ್ ಮಾಡ್ತಾಳೆ.. ಈ ರೀಲ್ಸ್ ರಾಣಿ ರೇಷ್ಮಾ ಹಾಸನ ಜಿಲ್ಲೆ ಚೆನ್ನರಾಯ ಪಟ್ಟಣ ತಾಲೂಕಿನ ನುಗ್ಗೇಹಳ್ಳಿ ಎಂಬಲ್ಲಿ ಹುಟ್ಟಿದ್ದಾಳೆ.. ಅಲ್ಲೇ ತಮ್ಮ ಬಾಲ್ಯವನ್ನ ಕಳೆದಿದ್ದಾಳೆ.. 6 ನೇ ಕ್ಲಾಸ್ ಓದಿರೋ ರೇಷ್ಮಾ ಆರಂಭದಲ್ಲಿ ಗಾರ್ಮೆಂಟ್ಸ್ ಒಂದ್ರಲ್ಲಿ ಕೆಲ್ಸ ಮಾಡ್ತಿದ್ಲು.. ಬಳಿಕ ಬಟ್ಟೆ ವ್ಯಾಪಾರ ಮಾಡ್ತಿದ್ಲು..  ಬ್ಯೂಟಿ ಪಾರ್ಲರ್ನಲ್ಲೂ ಕೆಲಸ ಮಾಡಿದ್ಲು.. ಅಷ್ಟೇ ಅಲ್ಲದೆ ಕನ್ನಡ ಸೀರಿಯಲ್ಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿದ್ದಾಳಂತೆ..

ಆರಂಭದಲ್ಲಿ ರೇಷ್ಮಾ ಟಿಕ್ ಟಾಕ್ ಮಾಡ್ತಿದ್ದಳಂತೆ.. ಬಳಿಕ ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡಲು ಶುರು ಮಾಡಿದ್ಲು.. ಇದಕ್ಕೆ ಮನೆಯವರ ತೀವ್ರ ವಿರೋಧ ಕೂಡ ಇದೆ. ಆಕೆ ರೀಲ್ಸ್ ಮಾಡ್ತಿರೋದರಿಂದ ಆಕೆಯ ಮನೆಯವರು ಮಾತಾಡೋದನ್ನೇ ಬಿಟ್ಟಿದ್ದಾರಂತೆ..  ಗಂಡ ಕುಡಿದು ಬಂದು ಹೊಡೆದ್ರೂ.. ಜನ ಟ್ರೋಲ್ ಮಾಡಿದ್ರೂ.. ರೀಲ್ಸ್ ಮಾಡೋದನ್ನ ಮಾತ್ರ ಬಿಟ್ಟಿಲ್ಲ..

ತಾನು ಸೋಶಿಯಲ್ ಮೀಡಿಯಾಗೆ ತುಂಬಾ ಅಡಿಕ್ಟ್ ಅಗಿದ್ದೀನಿ.. ರೀಲ್ಸ್ ಮಾಡಿಲ್ಲ ಅಂದ್ರೆ ದಿನಾನೇ ಮುಂದೆ ಹೋಗಲ್ಲ ಅಂತಾಳೆ ಈಕೆ.. ಇನ್ನು ಬೆಳಗ್ಗೆ ಎದ್ದಾಗಿನಿಂದಲೂ ರೇಷ್ಮಾ ರೀಲ್ಸ್ ಮಾಡ್ತಾಳೆ.. ಹಾಯ್ ಫ್ರೆಂಡ್ಸ್ ಅಂತಾ ರೀಲ್ಸ್ ಶುರುಮಾಡೋ ಈಕೆ.. ಬೇಜಾರ್ ಆದ್ರೂ ಖುಷಿ ಆದ್ರೂ ವೀಕ್ಷಕರ ಮುಂದೆ ಹೇಳ್ಕೊಳ್ತಾಳೆ.. ಅಷ್ಟೇ ಅಲ್ದೇ ಕೆಲವೊಂದು ವಿಚಾರ ಬಗ್ಗೆ ಮಾತಾಡಿ ಅದ್ರ ಬಗ್ಗೆ ಕೆಲ ಟಿಪ್ಸ್ ಕೂಡ ಕೊಡ್ತಾಳೆ..

ನಮ್ಮ ತಂದೆಗೆ ಗಂಡ ಹೊಡೆದು ಬಿಟ್ಟ ಅಂತ  ರೇಷ್ಮಾ ಮಾಡಿದ ವಿಡಿಯೋ ಸಖತ್ ವೈರಲ್ ಆಗಿತ್ತು. ಅನೇಕರು ಸಪೋರ್ಟ್‌ ಬಂದಿದ್ದರು. ಆರಂಭದಲ್ಲಿ ಈಕೆ ರೀಲ್ಸ್‌ ಮಾಡೋದನ್ನ ವಿರೋಧ ಮಾಡ್ತಿದ್ದ ಗಂಡ ಕೂಡ ಈಗ ಈಕೆಗೆ ಸಪೋರ್ಟ್‌ ಮಾಡ್ತಾ ಇದ್ದಾರೆ.. ಹೀಗಾಗಿ ಟೈಮ್‌ ಸಿಕ್ಕಾಗೆಲ್ಲಾ ಗಂಡನ ಜೊತೆ ಕೂಡ ರೀಲ್ಸ್ ಮಾಡ್ತಾಳೆ..

ಇನ್ನು ವಿಡಿಯೋದಲ್ಲಿ ನೀವು ಕೇಳಿಲ್ಲ ಅಂದ್ರೂ, ನಾನು ಏನು ತಿನ್ನುತ್ತಿರುವೆ ಅಂತ ಹೇಳುತ್ತೀನಿ ಎಂದು ಹೇಳ್ತಾನೆ ರೇಷ್ಮಾ ವಿಡಿಯೋ ಮಾಡುತ್ತಾಳೆ. ಕಿರಿಕಿರಿ ಅನಿಸಿದ್ದರೂ ಕೆಲವರು ಬೈತಾನೆ ವಿಡಿಯೋ ನೋಡುತ್ತಾರೆ. ಅಷ್ಟೇ ಅಲ್ಲದೇ ಆ ವಿಡಿಯೋನ ಬೇರೆಯವರಿಗೂ ಶೇರ್ ಮಾಡ್ತಾರೆ. ಇನ್ನು ಕೆಲವು ದಿನಗಳ ಹಿಂದೆ ರೇಶ್ಮಾ ಮನೆ ಬಳಿ ಕೆಲವು ಪುಂಡರು ಬಂದಿದ್ದರಂತೆ. ಜೋರಾಗಿ ಹೆಸರು ಕೂಗಿ ಕಿರಿಕಿರಿ ಮಾಡಿದ್ದಾರಂತೆ.. ಇದೇ  ಕಾರಣಕ್ಕೆ ರೇಷ್ಮಾ ಫ್ಯಾಮಿಲಿ ಮನೆ ಕಾಲಿ ಮಾಡಿ ಬೇರೆ ಕಡೆ ಶಿಫ್ಟ್ ಆಗಿದ್ದಾರಂತೆ.. ಇದು‌ಕೂಡ ರೇಷ್ಮಾ ನೀಡಿರುವ ಅಪ್ ಡೇಟ್ಸ್..

ಇತ್ತೀಚೆಗೆ ರೇಷ್ಮಾ ಜಿಮ್ ಗೆ ಬೇರೆ ಹೋಗೋಕೆ ಶುರು ಮಾಡಿದ್ದಾಳೆ..  ಈ ಮೂಲಕ ತಾನೂ ಒಬ್ಬ ಸ್ಟಾರ್ ಎಂದು‌ ತೋರಿಸಿಕೊಳ್ತಿದ್ದಾಳೆ. ತಾನು ಜಿಮ್ ಗೆ ಹೋಗಿ ಏನೆಲ್ಲಾ ಮಾಡ್ತಿದ್ದೀನಿ ಅನ್ನೋದನ್ನು ವಿಡಿಯೋ ಮೂಲಕ ತನ್ನ ವೀವರ್ಸ್‌ಗೆ ತಿಳಿಸ್ತಾಳೆ. ಫಸ್ಟ್ ಟೈಮ್ ಜಿಮ್ ಗೆ ಹೋಗಿದ್ದಾಗ ಅಲ್ಲಿ ಹೇಗೆಲ್ಲ ವರ್ಕ್ ಔಟ್ ಮಾಡಿದ್ಲು.. ಹೇಗೆ ಬಾಡಿ ಬಿಲ್ಡ್ ಮಾಡ್ಬೇಕು ಅಂತಾ ಅಂದ್ಕೊಂಡಿದ್ದೇನೆ ಅಂತಾ ರೇಷ್ಮಾ ಹೇಳಿದ್ದಾರೆ.. ಇಲ್ಲಿ ಉಂಡೆ.. ಗಿಂಡೆ ನೋಡಿ ಭಯ ಆಗ್ತಿದೆ..   ಕೈಗಳೆರಡನ್ನೂ ಒಳ್ಳೆ ಉಂಡೆ  ಆಲೂಗಡ್ಡೆ ತರ ಬಿಲ್ಡ್ ಮಾಡ್ಕೊಳ್ಬೋಕು ಅಂತಾ ಹೇಳಿದ್ದಳು.. ಇದು ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು..

ಇನ್ನು ಈಕೆ ಕೆಲ ವಿಡಿಯೋದಲ್ಲಿ ಏನೋ ಹೇಳಲು ಹೋಗಿ ಇನ್ನೇನೋ ಆಗಿದೆ.. ಡಿಪ್ರೆಷನ್ ಅಂತಾ ಹೇಳಲು ಹೋಗಿ ನಾನು ಡಿಪ್ಲೊಮೋಗೆ ಹೋಗಿದ್ದೇನೆ ಅಂತಾ ಹೇಳಿ ನಗೆಪಾಟಲಿಗೆ ಗುರಿಯಾಗಿದ್ದಳು.. ಇದೂ ಟ್ರೋಲ್ ಕೂಡ ಆಗಿತ್ತು..  ಇನ್ನೊಮ್ಮೆ ರೇಷ್ಮಾ ಫೋನ್ ಗೆ ಟೆಂಪರ್ ಗ್ಲಾಸ್ ಹಾಕೋಕೆ ಹೋಗಿದ್ದಾಳೆ.. ಈ ವೇಳೆ ನೋಡಿ ಫ್ರೆಂಡ್ಸ್‌ .. ನನ್ ಮೊಬೈಲ್ ಗೆ ಅಂಗಿ ಹಾಕಿಸ್ತಾ ಇದ್ದೀನಿ..ಅದೇನೋ ಟೆಂಪಲ್ ಗ್ಲಾಸ್ ಇದ್ಯಾಲ್ಲಾ.. ಅದನ್ನ ಹಾಕಿಸ್ತಾ ಇದ್ದೀನಿ ಅಂದಿದಾಳೆ.. ಈ ವಿಡಿಯೋ ಕೂಡ ಟ್ರೋಲ್ ಪೇಜ್‌ಗಳಿಗೆ ಆಹಾರವಾಗಿತ್ತು.

ಇನ್ನು ರೇಷ್ಮಾ ಬಿಗ್ ಬಾಸ್ ಗೆ ಹೋಗ್ತೇನೆ ಅಂತಾ ಹೇಳಿದ್ದಾಳೆ.. ಇದಕ್ಕೆ ಟ್ರೋಲರ್ಸ್ ಇಲ್ಲೇ ಈ ಪಾಟಿ ಜನರ ತಲೆ ಕೆಡಿಸ್ತೀರಾ.. ಇನ್ನು ಬಿಗ್ ಬಾಸ್ ಕ್ಯಾಮೆರಾ ಕತೆ ಏನು ಅಂತಾ ಜನ ಕೇಳಿದ್ದರು. ಹೀಗೆ ತನ್ನ ತರಲೆಗಳ ಮೂಲಕವೇ ರೇಷ್ಮಾ ಫೇಮಸ್ ಆಗಿದ್ದಾಳೆ. ಈಕೆಯ ವಿಡಿಯೋ ಕೆಲ ಜನರಿಗೆ ಕಿರಿ ಅನ್ನಿಸಿದ್ರೂ ನೊಡ್ತಾರೆ.. ಒಟ್ಟಿನಲ್ಲಿ ಇನ್ಸಾಗ್ರಾಂ ರೀಲ್ಸ್‌ ಬಂದ್ಮೇಲೆ ಹೊಸ ಹೊಸ ಪ್ರತಿಭೆಗಳು ಅರಳ್ತಾನೆ ಇವೆ..

Shwetha M