ರಸ್ತೆ ಬದಿಯಲ್ಲಿ ಅಡುಗೆ ಮಾಡಿದ ಶೋಭಿತಾ! – ನಾಗಚೈತನ್ಯ ಹೆಂಡ್ತಿ ಸರಳತೆಗೆ ಫ್ಯಾನ್ಸ್ ಫಿದಾ!

ಸಮಂತಾಗೆ ಡಿವೋರ್ಸ್ ಕೊಟ್ಟ ಬಳಿಕ ನಾಗಚೈತನ್ಯ ಶೋಭಿತಾ ಧೂಳಿಪಾಲ ಅವರನ್ನ ಮದುವೆ ಆಗಿದ್ದಾರೆ.. ಇದೀಗ ಇಬ್ಬರೂ ಖುಷಿಯಾಗಿ ಜೀವನ ನಡೆಸ್ತಿದ್ದಾರೆ. ಶೋಭಿತಾ ಸೂಪರ್ ಮಾಡೆಲ್, ನಟಿಯಾಗಿದ್ರೂ ಕೂಡ ತುಂಬಾ ಸರಳ. ಇದೀಗ ಶೋಭಿತಾ ರಸ್ತೆ ಬದಿಯಲ್ಲಿ ಅಡುಗೆ ಮಾಡಿ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಭೀಮಾತೀರದಲ್ಲಿ ಮತ್ತೆ ಗನ್ ಸೌಂಡ್ – ರೌಡಿಶೀಟರ್ ಭಿಮನಗೌಡ ಮೇಲೆ ಫೈರಿಂಗ್
ಹೌದು, ಸೆಲೆಬ್ರಿಟಿಗಳು ಕೆಲವೊಮ್ಮೆ ಸಿಂಪಲ್ ಲೈಫ್ ಇಷ್ಟ ಪಡ್ತಾರೆ. ಇಂಥಹ ಜೀವನ ಇಷ್ಟ ಪಡುವ ಸೆಲೆಬ್ರಿಟಿಗಳು ಕಡಿಮೆ ಜನರಿರುವ ಜಾಗಕ್ಕೆ ಹೋಗಿ ಸಾಮಾನ್ಯರಂತೆ ಕೆಲ ಸಮಯ ಕಳೆದು ಬರ್ತಾರೆ. ಇದೀಗ ಇಂಥದ್ದೇ ಲೈಫ್ ಫೀಲ್ ಮಾಡಿರುವ ನಟಿ ಶೋಭಿತಾ ಧೂಲಿಪಲಾ ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೋ ಹಾಗೂ ವೀಡಿಯೋಗಳನ್ನ ಹಂಚಿಕೊಂಡಿದ್ದಾರೆ. ನಟ ನಾಗಚೈತನ್ಯ ಪತ್ನಿ ಶೋಭಿತಾ ಪ್ರವಾಸದ ವೇಳೆ ಅಡುಗೆ ಮಾಡ್ತಿರುವ ಫೋಟೋ ಹಂಚಿಕೊಂಡು ಗಮನ ಸೆಳೆದಿದ್ದಾರೆ.
ರಸ್ತೆಯಲ್ಲೇ ಅಡುಗೆ ಸಾಂಬಾರ್ ಮಾಡೋದು, ಬೆಂಡೇಕಾಯಿ ಕಟ್ ಮಾಡುವುದು, ತೆಂಗಿನಕಾಯಿ ಒಡೆಯೋದು, ಕುಟಾಣಿಯಲ್ಲಿ ಕುಟ್ಟುವ ಕೆಲಸ ಮಾಡುತ್ತಿರುವ ಫೋಟೋಸ್ ಗಾಗೂ ವಿಡಿಯೋಗಳನ್ನ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಫೋಟೋ ನೋಡಿದ ನಟಿ ಸರಳತೆ ನೋಡಿ ಆಶ್ಚರ್ಯಪಟ್ಟಿದ್ದಾರೆ.

ನೋಡಿರಿ

