ಮದುವೆ ಆದ ಒಂಬತ್ತು ತಿಂಗಳಿಗೆ ಗುಡ್ ನ್ಯೂಸ್ ಕೊಟ್ರಾ ಶೋಭಿತಾ? – ಹೊಟ್ಟೆ ಮುಚ್ಚಿಕೊಳ್ಳಲು ಪ್ರಯತ್ನಿಸಿದ್ದು ಇದಕ್ಕಾ?

ದಕ್ಷಿಣ ಭಾರತದ ನಟ ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ ಇತ್ತೀಚೆಗಷ್ಟೇ ಮದುವೆ ಆಗಿದ್ದಾರೆ. ಮದುವೆ ಆದ 9 ತಿಂಗಳಿಗೆ ನಟಿ ಶೋಭಿತಾ ಗುಡ್‌ನ್ಯೂಸ್ ಕೊಟ್ರಾ ಅನ್ನೋ ಅನುಮಾನ ಇದೀಗ ಫ್ಯಾನ್ಸ್‌ನ ಕಾಡ್ತಿದೆ.
ಇದನ್ನೂ ಓದಿ: IPL ನ ಚೀಪ್ & ಬೆಸ್ಟ್ ಪ್ಲೇಯರ್ಸ್ ಕಡಿಮೆ ಹಣಕ್ಕೆ ಧಮಾಕ ಪರ್ಫಾಮೆನ್ಸ್
ಶೋಭಿತಾ ಧುಲಿಪಾಲ ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ನಾಗ ಚೈತನ್ಯ, ನಾಗಾರ್ಜುನ ಕೂಡ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಶೋಭಿತಾ ತುಂಬಾ ಸುಂದರವಾದ ಸೀರೆಯನ್ನು ಉಟ್ಟಿದ್ದರು. ಆದರೆ ಕಾರ್ಯಕ್ರಮದಲ್ಲಿ ಶೋಭಿತಾ ಅವರ ಎಚ್ಚರಿಕೆಯ ವರ್ತನೆ ನೆಟ್ಟಿಗರಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಏಕೆಂದರೆ ಶೋಭಿತಾ ತಮ್ಮ ಸೀರೆಯ ಅಂಚನ್ನು ಕೈಯಲ್ಲಿ ಹಿಡಿದುಕೊಂಡು ಹೊಟ್ಟೆ ಮುಚ್ಚಿಕೊಳ್ಳಲು ಪ್ರಯತ್ನಿಸಿದ್ದರು. ಅವರ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ, ಚರ್ಚೆಗೆ ಕಾರಣವಾಗಿದೆ. ಶೋಭಿತಾ ಅವರು ಪ್ರೆಗ್ನೆಂಟಾ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಕಳೆದ ಕೆಲವು ದಿನಗಳಿಂದ, ಶೋಭಿತಾ ನಿರಂತರವಾಗಿ ಸಡಿಲವಾದ ಬಟ್ಟೆಗಳನ್ನು ಧರಿಸುತ್ತಿರುವುದು ಕಂಡುಬಂದಿದೆ. ಅವರು ಸಾಮಾಜಿಕ ಮಾಧ್ಯಮಗಳಲ್ಲಿಯೂ ಇದೇ ರೀತಿಯ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಅದಾದ ನಂತರ, ‘ವೇವ್ಸ್ ಸಮ್ಮಿಟ್’ ನಲ್ಲಿ ಅವರ ನಡವಳಿಕೆ ಇನ್ನಷ್ಟು ಪ್ರಶ್ನಾರ್ಥಕವಾಗಿ ಕಾಣಲಾರಂಭಿಸಿತು. ಮದುವೆಯಾದ ಐದು ತಿಂಗಳ ನಂತರ ಶೋಭಿತಾ ಗರ್ಭಿಣಿಯಾಗಿದ್ದು, ಹೊಟ್ಟೆಯನ್ನ ಮರೆಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಈ ಚರ್ಚೆಗಳ ಬಗ್ಗೆ ಅವರಿಗೆ ಹತ್ತಿರವಿರುವ ವ್ಯಕ್ತಿಯೊಬ್ಬರು ಟೈಮ್ಸ್ ಆಫ್ ಇಂಡಿಯಾಗೆ ಪ್ರತಿಕ್ರಿಯಿಸಿದರು. ಅದರಲ್ಲಿ ಆ ವ್ಯಕ್ತಿ, ‘ಶೋಭಿತಾ ಸಡಿಲವಾದ ಬಟ್ಟೆಗಳನ್ನು ಧರಿಸಿದ್ದರೂ, ಅವರು ಗರ್ಭಿಣಿಯಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.