ಗಗನಕ್ಕೇರಿದ ಟೊಮ್ಯಾಟೊ ಬೆಲೆ – ದರ ಇಳಿಕೆಗಾಗಿ ಟೊಮ್ಯಾಟೊ ಮಾಲೆ ಮಾಡಿ ದೇವರಿಗೆ ಅರ್ಪಿಸಿದ ಭಕ್ತರು!
ದೇಶದಾದ್ಯಂತ ಈಗ ಅಡುಗೆ ಮನೆಯ ಕೆಂಪು ಸುಂದರಿಯದ್ದೇ ಮಾತು. ಒಂದು ಕೆಜಿ ಟೊಮ್ಯಾಟೊ 200 ರ ಗಡಿ ದಾಟಿದೆ. ಹೀಗಾಗಿಯೇ ಪ್ರತಿನಿತ್ಯ ಚಿನ್ನದ ಬೆಲೆ ಎಷ್ಟಿದೆ ಅಂತಾ ಕೇಳುವ ಹಾಗೆ ಟೊಮ್ಯಾಟೊ ಬೆಲೆ ಎಷ್ಟು ಅಂತಾ ಕೇಳುವ ಸ್ಥಿತಿ ಎದುರಾಗಿದೆ. ಅಡುಗೆಗೆ ಅಗತ್ಯವಾಗಿ ಬೇಕಾಗಿರುವ ಟೊಮ್ಯಾಟೊ ದರ ಇಳಿಕೆಯಾಗಲಿ ಅಂತಾ ಗೃಹಿಣಿಯರು ಕಾಯುತ್ತಿದ್ದಾರೆ. ಇಲ್ಲೊಂದು ಕಡೆ ಟೊಮ್ಯಾಟೊ ಬೆಲೆ ಇಳಿಕೆಯಾಗಲಿ ಅಂತಾ ಭಕ್ತರು ದೇವಿಗೆ ಟೊಮ್ಯಾಟೊ ಮಾಲೆ ಹಾಕಿ ಪೂಜೆ ಸಲ್ಲಿಸಿರುವ ಘಟನೆ ನಡೆದಿದೆ.
ದೇಶದಲ್ಲಿ 1 ಕೆಜಿ ಟೊಮ್ಯಾಟೊ 250 ರೂ.ಗೆ ಮಾರಾಟವಾಗುತ್ತಿದೆ. ಶೀಘ್ರದಲ್ಲೇ 300 ರೂ.ಗೆ ತಲುಪಲಿದೆ ಎಂದು ಹೇಳಲಾಗುತ್ತಿದೆ. ಹೀಗಿರುವಾಗ ಇಂತಹ ಟೊಮ್ಯಾಟೊ ಬೆಲೆ ಕಡಿಮೆಯಾಗಲಿ ಎಂದು ಭಕ್ತರು ಅಮ್ಮನಲ್ಲಿ ಪ್ರಾರ್ಥಿಸುತ್ತಿದ್ದಾರೆ. ದೇವಿಯ ಕೊರಳಿಗೆ ಟೊಮ್ಯಾಟೋ ಮಾಲೆ ಹಾಕಿ ವಿಶೇಷ ಪೂಜೆ ಸಲ್ಲಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಇದನ್ನೂ ಓದಿ: ರಿಲೇ ಓಡಿದ ಕೆಲವೇ ಕ್ಷಣಗಳಲ್ಲಿ ನಡೆದುಹೋಯ್ತು ದುರಂತ – ಹತ್ತನೇ ತರಗತಿ ವಿದ್ಯಾರ್ಥಿಯ ದಾರುಣ ಸಾವು
ನಾಗಪಟ್ಟಣಂ ಜಿಲ್ಲೆಯ ಕುರುಕುಡಿಯಲ್ಲಿರುವ ಪ್ರಸಿದ್ಧ ಮಹಾ ಮಾರಿಯಮ್ಮನ್ ಮತ್ತು ನಾಗಮ್ಮನ ದೇವಸ್ಥಾನಕ್ಕೆ ರಾಜ್ಯದ ಎಲ್ಲೆಡೆಯಿಂದ ಭಕ್ತರು ಬರುತ್ತಾರೆ. ತಮಿಳುನಾಡಿನಲ್ಲಿ ಪ್ರಸ್ತುತ ತಿಂಗಳನ್ನು ಅಧಿಮಾಸ ಎಂದು ಪರಿಗಣಿಸಲಾಗುತ್ತದೆ. ಈ ಆದಿ ಮಾಸದಲ್ಲಿ ಭಕ್ತರು ಅಮ್ಮನವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ಕ್ರಮದಲ್ಲಿ ಕೆಲ ಭಕ್ತರು ದೇವಿಗೆ ಟೊಮ್ಯಾಟೊ ಮಾಲೆ ಹಾಕಿ ಬೆಲೆ ಇಳಿಸುವಂತೆ ಮನವಿ ಮಾಡಿದರು. 508 ಟೊಮ್ಯಾಟೊಗಳಿಂದ ಮಾಲೆಗಳನ್ನು ಮಾಡಿ ಅಮ್ಮನಿಗೆ ಅರ್ಪಿಸಿದ್ದಾರೆ. ಅರ್ಚಕರು ದೇವಿಯ ಕೊರಳಲ್ಲಿದ್ದ ಟೊಮ್ಯಾಟೊವನ್ನು ಭಕ್ತರಿಗೆ ಪ್ರಸಾದವಾಗಿ ಹಂಚುತ್ತಿದ್ದಾರೆ. ಆ ಟೊಮ್ಯಾಟೊಗಳನ್ನು ಪಡೆಯಲು ಭಕ್ತರು ಪೈಪೋಟಿ ನಡೆಸುತ್ತಿದ್ದಾರೆ.
ಮಕ್ಕಳು, ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ತೊಂದರೆಗಳನ್ನು ಪಡೆಯಲು ಸಾಮಾನ್ಯವಾಗಿ ಮಹಾ ಮಾರಿಯಮ್ಮನ್ ಮತ್ತು ನಾಗಮ್ಮನನ್ನು ದೇವಾಲಯಗಳಲ್ಲಿ ಪೂಜಿಸಲಾಗುತ್ತದೆ. ಆದರೆ ದಿನದಿಂದ ದಿನಕ್ಕೆ ಗಗನದತ್ತ ನೋಡುತ್ತಿರುವ ಟೊಮ್ಯಾಟೊ ಬೆಲೆ ಇಳಿಸುವಂತೆ ಮೊರೆ ಹೋಗುತ್ತಿದ್ದಾರೆ.