ಬೆಂಗಳೂರಿನ ಜನತೆಗೆ ನಿದ್ರೆಯೇ ಬರುತ್ತಿಲ್ವಂತೆ! – ಕಾರಣವೇನು ಗೊತ್ತಾ?

ಬೆಂಗಳೂರಿನ ಜನತೆಗೆ ನಿದ್ರೆಯೇ ಬರುತ್ತಿಲ್ವಂತೆ! – ಕಾರಣವೇನು ಗೊತ್ತಾ?

ಮನುಷ್ಯ ಆರೋಗ್ಯದಿಂದ ಇರಲು ಪೌಷ್ಟಿಕಾಂಶಯುಕ್ತ ಆಹಾರ ಎಷ್ಟು ಮುಖ್ಯವೋ ಅದೇ ರೀತಿ ನಿದ್ರೆಯು ಮುಖ್ಯ. ಹಾಗಾಗಿ ವೈದ್ಯರು ಕೂಡ ಪ್ರತಿದಿನ 7 ರಿಂದ 9 ಗಂಟೆಗಳ ನಿದ್ದೆ ಬೇಕು ಅಂತಾ ಹೇಳುತ್ತಾರೆ. ರಾತ್ರಿ ಸರಿಯಾಗಿ ನಿದ್ದೆ ಮಾಡದಿದ್ದರೆ ಹಗಲಿನಲ್ಲಿ ಚಟುವಟಿಕೆಯಿಂದ ಇರಲು ಸಾಧ್ಯವಾಗುವುದಿಲ್ಲ, ದಿನವಿಡೀ ದಣಿವುಂಟಾಗುತ್ತದೆ, ಯಾವುದರ ಮೇಲೆಯೂ ಏಕಾಗ್ರತೆ ಇರಲ್ಲ ಅಂತಾ ಅನೇಕರು ಸಮಯಕ್ಕೆ ಸರಿಯಾಗಿ ನಿದ್ರೆ ಮಾಡುತ್ತಾರೆ. ಆದರೆ ಬೆಂಗಳೂರಿನಲ್ಲಿ ಉದ್ಯೋಗದಲ್ಲಿ ಇರುವವರ ಕುರಿತು ಅತ್ಯಂತ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.

ಇದನ್ನೂ ಓದಿ: ಅಯ್ಯೋ ನನ್ನ ಹೆಂಡ್ತಿ ಯಾವಾಗ್ಲೂ ನಿದ್ದೆ ಮಾಡ್ತಾಳೆ – ಠಾಣೆ ಮೆಟ್ಟಿಲೇರಿದ ಪತಿ

ಬೆಂಗಳೂರಿನ ದೊಡ್ಡ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳಬೇಕು. ಕೈತುಂಬಾ ಸಂಬಳ ಪಡೆಯಬೇಕು ಅಂತಾ ಅನೇಕರ ಕನಸಾಗಿರುತ್ತೆ. ಆದ್ರೆ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿರುವವರ ಕುರಿತು ಅಧ್ಯಯನವೊಂದು ನಡೆದಿದ್ದು, ವರದಿಯಲ್ಲಿ ಶಾಕಿಂಗ್ ವಿಚಾರವೊಂದು ಹೊರಬಿದ್ದಿದೆ. ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿರುವವರ ಪೈಕಿ ಶೇಕಡಾ 30ರಷ್ಟು ಮಂದಿ  ನಿದ್ದೆಯೇ ಮಾಡುತ್ತಿಲ್ಲವಂತೆ.

ವೇಕ್ಫಿಟ್ ಎಂಬ ಸಂಸ್ಥೆ ನಡೆಸಿದ ‘ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್ಕಾರ್ಡ್’ ಎಂಬ ಸಮೀಕ್ಷೆಯಲ್ಲಿ ಈ ಅಂಶ ಹೊರಬಿದ್ದಿದೆ. ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿರುವವರ ಪೈಕಿ ಶೇಕಡಾ 30ರಷ್ಟು ಜನರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಇವರು ಉದ್ಯೋಗ ನಷ್ಟದ ಭೀತಿಯಿಂದ ರಾತ್ರಿಯಿಡೀ ನಿದ್ರೆ ಮಾಡುತ್ತಿಲ್ಲ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.

ಈ ಸಮೀಕ್ಷೆಯಲ್ಲಿ ಬೆಂಗಳೂರಿನ ಸುಮಾರು 4,000 ವೃತ್ತಿಪರ ಉದ್ಯೋಗಿಗಳನ್ನು ಮಾತನಾಡಿಸಲಾಗಿತ್ತು. ಈ ಪೈಕಿ ಶೇಕಡಾ 30 ರಷ್ಟು ಉದ್ಯೋಗಿಗಳು ನಿದ್ರಾಹೀನತೆಯಿಂದ ಬಳಲುತ್ತಿರುವ ಕುರಿತು ಹೇಳಿಕೊಂಡಿದ್ದಾರೆ. ಕೆಲಸದ ಒತ್ತಡ, ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿರುವವರು ಬಳಲುತ್ತಿದ್ದಾರೆ ಎಂಬ ಅಂಶ ಈ ಸಮೀಕ್ಷೆಯಿಂದ ಗೊತ್ತಾಗಿದೆ.

suddiyaana