ಸೀನುವುದನ್ನ ತಡೆಯಲು ಬಲವಂತವಾಗಿ ಮೂಗು, ಬಾಯಿ ಮುಚ್ಚಿಕೊಂಡ -ಆಸ್ಪತ್ರೆ ಪಾಲಾದವನ ಬಗ್ಗೆ ವೈದ್ಯರು ಹೇಳಿದ್ದು ಆಘಾತಕಾರಿ ಸತ್ಯ

ಸೀನುವುದನ್ನ ತಡೆಯಲು ಬಲವಂತವಾಗಿ ಮೂಗು, ಬಾಯಿ ಮುಚ್ಚಿಕೊಂಡ -ಆಸ್ಪತ್ರೆ ಪಾಲಾದವನ ಬಗ್ಗೆ ವೈದ್ಯರು ಹೇಳಿದ್ದು ಆಘಾತಕಾರಿ ಸತ್ಯ

ಶೀತವಾದಾಗ ಸೀನು ಬರುವುದು ಸಾಮಾನ್ಯ. ಅಥವಾ ಅಲರ್ಜಿಯಾದಾಗ, ಹೆಚ್ಚು ಧೂಳಿನ ಕಣ ಇದ್ದಾಗ ಸೀನು ಬರುತ್ತದೆ. ಅದು ಕೂಡ ಸಹಜ. ಕೆಲವೊಮ್ಮೆ ಮೂಗಿಗೆ ಹೆಚ್ಚು ಪರಿಮಳದ ಸುವಾಸನೆ ಹೋದಾಗ, ಕೀಟಗಳು ಹೊಕ್ಕಿದಾಗ ಸೀನು ಸಹಜ. ಕೆಲವರಿಗೆ ಒಂದೆರಡು ಸೀನು ಬಂದರೆ ಇನ್ನೂ ಕೆಲವರಿಗೆ ನಿರಂತರವಾಗಿ ಸೀನು ಕಾಡುತ್ತದೆ. ಒಮ್ಮೆ ಆರಂಭವಾದ ಸೀನು 10 ರಿಂದ 20ರವೆರಗೂ ಹೋಗುವ ಸಾಧ್ಯತೆಗಳಿರುತ್ತದೆ. ಇದಕ್ಕೆ ಹಲವು ಕಾರಣಗಳಿರುತ್ತದೆ. ಅದೆಲ್ಲ ಒಂದು ಕಡೆಯಾದರೆ ಹೀಗೆ ಬರುವ ಸೀನನ್ನ ತಡೆ ಹಿಡಿದರೆ ದುಬಾರಿ ದಂಡವನ್ನೇ ತೆರಬೇಕಾಗುತ್ತದೆ.

ಇದನ್ನೂ ಓದಿ : ನಿದ್ದೆಗೂ ಹಾರ್ಟ್‌ ಅಟ್ಯಾಕ್‌ಗೂ ನಂಟು ಇದ್ಯಾ? – ತಜ್ಞರ ವರದಿಯಿಂದ ಬಯಲಾಯ್ತು ಸ್ಪೋಟಕ ಸತ್ಯ!

ಮನುಷ್ಯರಷ್ಟೇ ಏಕೆ ಪ್ರಾಣಿಗಳೂ ಸಹ ಸೀನುತ್ತವೆ. ನೈಸರ್ಗಿಕ ಪ್ರಕ್ರಿಯೆಗಳನ್ನು ನಿಲ್ಲಿಸಬಾರದು ಕೂಡ. ಹಾಗೆ ಮಾಡಿದರೆ ಮುಂದೆ ಅನೇಕ ಅನಾಹುತಗಳನ್ನು ಎದುರಿಸಬೇಕಾಗುತ್ತದೆ ಎಂದೂ ಎಚ್ಚರಿಸುತ್ತಾರೆ. ಆದರೆ ಕೆಲವರು ಈ ರೀತಿಯ ವಿಷಯಗಳನ್ನು ತುಂಬಾ ಲಘುವಾಗಿ ಪರಿಗಣಿಸಿ ನಿರ್ಲಕ್ಷಿಸುತ್ತಾರೆ. ಹೀಗೆ ಮಾಡಿ ವ್ಯಕ್ತಿಯೊಬ್ಬ ಸೀನು ತಡೆಯಲು ಹೋಗಿ ಜೀವನವನ್ನೇ ಪಣಕ್ಕಿಟ್ಟಿರುವ ಘಟನೆ ನಡೆದಿದೆ. ಬ್ರಿಟನ್‌ನ 34 ವರ್ಷದ ವ್ಯಕ್ತಿಯೊಬ್ಬನಿಗೆ ಸೀನು ಬಂದಿದ್ದು, ಈ ವೇಳೆ ಆತ ಸೀನು ಬರದಂತೆ ಮೂಗು ಮತ್ತು ಬಾಯಿಯನ್ನು ಬಿಗಿಯಾಗಿ ಮುಚ್ಚಿಕೊಂಡಿದ್ದ. ಸೀನು ನಿಲ್ಲಿಸಿದ ನಂತರ ಆತ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು, ಯಾವುದೇ ಆಹಾರವನ್ನು ನುಂಗಲು ಆಗದೇ ಇರುವುದು, ಗಂಟಲಿನಲ್ಲಿ ಏನೋ ಕಿರಿಕಿರಿ, ಕುತ್ತಿಗೆ ಊತ, ಅಸಹನೀಯ ನೋವು ಹೀಗೆ ಅನೇಕ ತೊಂದರೆಗಳು ಕಾಣಿಸಿಕೊಂಡಿದ್ದು ಆತ ಆಸ್ಪತ್ರೆಗೆ ತೆರಳಿದ್ದಾನೆ.

ಆತನ ವೈದ್ಯಕೀಯ ಪರೀಕ್ಷೆ ವೇಳೆ ವೈದ್ಯರು ಆತನ ಗಂಟಲಿನ ಅಂಗಾಂಶ ಬಿರುಕು ಬಿಟ್ಟಿದ್ದನ್ನು ಪತ್ತೆ ಹಚ್ಚಿದ್ದು, ಇದೊಂದು ಅಪರೂಪದ ಘಟನೆ ಎಂದು ವೈದ್ಯರು ತೀರ್ಮಾನಿಸಿದ್ದಾರೆ. ಹಾಗೂ ಆತನಿಗೆ ಕುತ್ತಿಗೆ ಸೋಂಕು ತಗಲುವ ಅಪಾಯವಿದೆಯೇ ಎಂದು ತಿಳಿಯಲು ಹೆಚ್ಚಿನ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವಂತೆ ಆಸ್ಪತ್ರೆ ಸಿಬ್ಬಂದಿಗೆ ಸೂಚಿಸಿದ್ದಾರೆ. ಬಳಿಕೆ ವೈದ್ಯರು ಆತನಿಗೆ ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಆ ಸಮಯದಲ್ಲಿ ಟ್ಯೂಬ್‌ಗಳ ಮೂಲಕ ಆ್ಯಂಟಿಬಯೋಟಿಕ್​ಗಳನ್ನು ಮಾತ್ರ ನೀಡಲಾಗುತ್ತಿತ್ತು. ತದನಂತರ ಹಲವು ದಿನಗಳ ಬಳಿಕ ಯುವಕ ಚೇತರಿಸಿಕೊಂಡು ಮೃದುವಾದ ಆಹಾರವನ್ನು ತಿನ್ನಲು ಪ್ರಾರಂಭಿಸಿದ್ದಾನೆ.

suddiyaana