ಬೆಳಗ್ಗೆ ಹೊತ್ತಲ್ಲಿ ಸೀನು ಬರುತ್ತಾ? – ಜಸ್ಟ್‌ ಅಕ್ಷಿ ಅಲ್ಲ.. Danger Zone ವಾರ್ನ್‌? 

ಬೆಳಗ್ಗೆ ಹೊತ್ತಲ್ಲಿ ಸೀನು ಬರುತ್ತಾ? – ಜಸ್ಟ್‌ ಅಕ್ಷಿ ಅಲ್ಲ.. Danger Zone ವಾರ್ನ್‌? 

ಕೆಲವರಿಗೆ ಬೆಳಗ್ಗೆ ಎದ್ದ ಕೂಡ್ಲೆ ಕೆಲವರಿಗೆ ಸೀನು ಶುರುವಾಗುತ್ತೆ. ಕೋಲ್ಡ್‌ ಆಗಿಲ್ಲ ಅಂದ್ರೂ ಸೀನು ಬರುತ್ತೆ. ಎಷ್ಟರ ಮಟ್ಟಿಗೆ ಅಂದ್ರೆ ಸ್ವಲ್ಪ ಹೊತ್ತಿಗೆ ಅವರು ಸುಸ್ತಾಗಿ ಹೋಗಿರ್ತಾರೆ. ಹೀಗೆ ಬೆಳಗ್ಗೆ ಹೊತ್ತಲ್ಲಿ ಸೀನು ಬರುವುದನ್ನಅಲರ್ಜಿಕ್ ರಿನಿಟಿಸ್ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಹಸೆಮಣೆ ಏರಬೇಕಿದ್ದ ಜೀವದ ಗೆಳತಿಯರ ಬಾಳಲ್ಲಿ ದುರಂತ! – ಸ್ನೇಹಿತೆಯರ ಖುಷಿ ಕಸಿದುಕೊಂಡ ಯಮರಾಜ!

ಅಲರ್ಜಿಟಿಕ್‌ ರಿನಿಟಸ್‌ ಸಮಸ್ಯೆ ಕಾಣಿಸಿಕೊಳ್ಳಲು  ಕಾರಣ ಏನಂದ್ರೆ,  ಏಕಾಏಕಿ ಹವಾಮಾನ ಬದಲಾವಣೆಯಾದಾಗ, ಧೂಳು  ಮೂಗಿನ ಒಳಗೆ ಹೋದಾಗ, ತೇವಾಂಶವಿದ್ದಾಗ, ಬಣ್ಣದ ವಾಸನೆ  ಅಥವಾ ಸ್ಪ್ರೇ ಹಾಗೂ ಪೊಲ್ಯೂಷನ್, ಇವೆಲ್ಲವೂ ಈ ಅಲರ್ಜಿಕ್ ರಿನಿಟಿಸ್ ಸಮಸ್ಯೆಗೆ ಕಾರಣ. ನಾವು ಉಸಿರಾಡುವಾಗ ಉಸಿರಿನ ಜೊತೆ ಅಪಾಯಕಾರಿ ಅಂಶ ದೇಹ ಸೇರುತ್ತದೆ. ಮೂಗು, ಈ ಅಪಾಯಕಾರಿ ಕಣ ದೇಹದೊಳಗೆ ಸೇರದಂತೆ ತಡೆಯುವ ಪ್ರಯತ್ನ ಮಾಡುತ್ತೆ. ಒಂದ್ವೇಳೆ ಮೂಗಿನಿಂದ ಈ ಕಣ ದೇಹ ಸೇರಿದಾಗ ದೇಹ ಅದಕ್ಕೆ ಪ್ರತಿಕ್ರಿಯೆ ನೀಡುತ್ತದೆ. ಸೀನುವ ಮೂಲಕ ಅದನ್ನು ಹೊರಹಾಕುವ ಪ್ರಯತ್ನ ಮಾಡುತ್ತೆ. ಇದ್ರಿಂದಾಗಿ ಬೆಳಿಗ್ಗೆ ಎದ್ದ ಕೂಡ್ಲೆ ಸೀನು ಬರ್ತಿದೆ.

ಪ್ರತಿ ದಿನ ಬೆಳಿಗ್ಗೆ ನಿಮಗೆ ಸೀನು ಬರುವ ಜೊತೆಗೆ ಗಂಟಲು ನೋಯುತ್ತಿದ್ದರೆ ಅದು ಈ ಅಲರ್ಜಿಕ್‌ ರಿನಿಟಿಸ್ ಲಕ್ಷಣವಾಗಿದೆ. ಇದಲ್ಲದೆ ಕೆಮ್ಮು ಕೂಡ ನಿಮಗೆ ಕಾಣಿಸಿಕೊಳ್ಳುತ್ತದೆ. ನೆಗಡಿಯಾದ ಅನುಭವವಾಗುತ್ತದೆ. ಪದೇ ಪದೇ ತಲೆ ನೋವು ಕಾಣಿಸಿಕೊಳ್ಳುತ್ತದೆ. ಕಣ್ಣಿನ ಕೆಳಗಿನ ಚರ್ಮ ಕಪ್ಪಾಗುವುದಲ್ಲದೆ, ಕಣ್ಣಲ್ಲಿ ನೀರು ಬರುವುದು, ಕಣ್ಣು ಕೆಂಪಾಗುವುದು, ತುಂಬಾ ಸುಸ್ತು ಕಾಣಿಸಿಕೊಳ್ಳುತ್ತದೆ, ಈ ಲಕ್ಷಣ ನಿಮಗೆ ಕಂಡು ಬಂದ್ರೆ ಅಲರ್ಜಿಕ್ ರಿನಿಟಸ್ ಗೆ ನೀವು ತುತ್ತಾಗಿದ್ದೀರಿ ಎಂದರ್ಥ. ಸೋ ನೀವು ಆದಷ್ಟು ಬೇಗ ವೈದ್ಯರ ಬಳಿ ಹೋಗಿ ಆರಂಭದಲ್ಲೇ ಸೂಕ್ತ ಚಿಕಿತ್ಸೆ ಪಡೆಯೋದು ಮುಖ್ಯ. ಇಲ್ಲ ಅಂದ್ರೆ ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀಳೋ ಸಾಧ್ಯತೆ ಇರುತ್ತದೆ.

Shwetha M