ಒಂದೇ ಮನೆಯ ಮೂವರು ಮಕ್ಕಳಿಗೆ ಕಚ್ಚಿದ ವಿಷಕಾರಿ ಹಾವು!

ಒಂದೇ ಮನೆಯ ಮೂವರು ಮಕ್ಕಳಿಗೆ ಕಚ್ಚಿದ ವಿಷಕಾರಿ ಹಾವು!

ಮಳೆಗಾಲ ಮುಗಿಯುತ್ತಿದ್ದಂತೆ ಉರಗಗಳ ಕಾಟ ಹೆಚ್ಚಾಗುತ್ತಿದೆ. ಬಿಸಿಲು ಬೀಳುತ್ತಿದ್ದಂತೆ ಈ ಜೀವಿಗಳು ಮನೆಯೊಳಗೆ ಸೇರಿಕೊಳ್ಳುತ್ತವೆ. ಇದೀಗ ಒಂದೇ ಮನೆಯ ಮೂವರಿಗೆ ವಿಷಕಾರಿ ಹಾವು ಕಚ್ಚಿದೆ. ಕಾವು ಕಡಿತದಿಂದಾಗಿ ಮೂವರು ಮಕ್ಕಳು ಆಸ್ಪತ್ರೆ ಸೇರಿದ್ದಾರೆ.

ಇದನ್ನೂ ಓದಿ: ಸಂಪುಟ ಪುನಾರಚನೆಗಾಗಿ ನ.15ಕ್ಕೆ ಸಿಎಂ ದೆಹಲಿಗೆ! – ರಾಹುಲ್, ಖರ್ಗೆ ಜೊತೆ ಮಾತ್ನಾಡ್ತಿನಿ ಅಂದಿದ್ಯಾಕೆ ಸಿದ್ದರಾಮಯ್ಯ?

ಈ ಘಟನೆ ನಿನ್ನೆ ತಡರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಸಮೀಪದ ಕುದ್ರಡ್ಕದಲ್ಲಿ ನಡೆದಿದೆ. ಎಂದಿನಂತೆ ನಿನ್ನೆ ರಾತ್ರಿ ಮಕ್ಕಳು ಊಟ ಮಾಡಿ ಮಲಗಿದ್ದಾರೆ. ಆದ್ರೆ ತಡ ರಾತ್ರಿ 11. 30 ರ ವೇಳೆಗೆ ಕೋಣೆಯೊಳಗೆ ಪ್ರವೇಶಿಸಿದ ವಿಷಕಾರಿ ಹಾವು  ಮೂವರು ಮಕ್ಕಳಿಗೆ ಕಚ್ಚಿದೆ. ಕುದ್ರಡ್ಕ ನಿವಾಸಿ ವಿಜಯ ಮಡೆಕ್ಕಿಲ ಅವರ ಮಗ ದಕ್ಷಿತ್ ಮತ್ತು ಅಕ್ಕನ ಮಕ್ಕಳಾದ ವಿಶ್ಮಿತಾ ಹಾಗೂ ಅನ್ವಿತಾ ಅವರಿಗೆ ವಿಷ ಪೂರಿತ ಕನ್ನಡಿ ಹಾವು ಕಡಿದಿದೆ.

ಮೊದಲು ದಕ್ಷಿತ್‌ನ ಎರಡೂ ಕೈಗಳಿಗೆ ಕಚ್ಚಿತು. ಬಳಿಕ ವಿಶ್ಮಿತಾ ಹಾಗೂ ಅನ್ವಿತಾ ಅವರ ಕೈಗೂ ಕಚ್ಚಿದೆ.  ಈ ಘಟನೆ ತಡರಾತ್ರಿ ಸಂಭವಿಸಿದ್ದರಿಂದ, ಆಸ್ಪತ್ರೆಗೆ ಕರೆದೊಯ್ಯಲು ಯಾವುದೇ ವಾಹನ ಸಿಗದಿದ್ದಾಗ ನಾಟಿವೈದ್ಯರೊಬ್ಬರ ಸಕಾಲಿಕ ನೆರವಿನಿಂದ ಮಕ್ಕಳು ಪಾರಾಗಿದ್ದಾರೆ. ಸದ್ಯ ಮೂವರು ಮಕ್ಕಳನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Shwetha M