ಸ್ಮೃತಿ ಮಂದಾನ ಮದುವೆ ರದ್ದು ರಹಸ್ಯ ರಿವೀಲ್ – ಪಾಂಡ್ಯ ಮಾಜಿ ಪತ್ನಿ ಜತೆಗೂ ನಂಟು
ಪಲಾಶ್ ಗಿತ್ತಾ ಯುವತಿಯರ ಶೋಕಿ?

ಸ್ಮೃತಿ ಮಂದಾನ ಮದುವೆ ರದ್ದು ರಹಸ್ಯ ರಿವೀಲ್ – ಪಾಂಡ್ಯ ಮಾಜಿ ಪತ್ನಿ ಜತೆಗೂ ನಂಟುಪಲಾಶ್ ಗಿತ್ತಾ ಯುವತಿಯರ ಶೋಕಿ?

ಟೀಂ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಮದುವೆ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡ್ತಿವೆ. ಆರಂಭದಲ್ಲಿ ಸ್ಮೃತಿ ತಂದೆ ಶ್ರೀನಿವಾಸ ಅವ್ರಿಗೆ ಅನಾರೋಗ್ಯದಿಂದಾಗಿ ಮದುವೆ ಮುಂದೂಡಿಕೆ ಅನ್ನೋ ಸುದ್ದಿ ಹೊರಬಿದ್ದಿತ್ತು. ಬಟ್ ಮಾರನೇ ದಿನವೇ ಒಂದಷ್ಟು ಸ್ಕ್ರೀನ್ ಶಾಟ್​ಗಳು ವೈರಲ್ ಆಗಿದ್ವು. ಅದೂ ಕೂಡ ಮದುಮಗ ಪಲಾಶ್ ಮುಚ್ಚಲ್ ಬೇರೊಬ್ಬ ಯುವತಿ ಜೊತೆ ಫ್ಲರ್ಟ್ ಮಾಡಿದ್ದಾರೆ. ಇದ್ರಿಂದಾಗಿ ಮದುವೆನೇ ರದ್ದಾಗಿದೆ ಅನ್ನೋದು. ಬಟ್ ಈಗ ಅದಕ್ಕಿಂತ್ಲೂ ಗಂಭೀರ ಆರೋಪ ಕೇಳಿ ಬಂದಿದೆ. ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ಜೊತೆಗಿನ ವಿಡಿಯೋ ವೈರಲ್ ಆಗಿದೆ. ಲವ್ ಪ್ರಪೋಸಲ್ ಫೋಟೋಸ್ ಹೊರ ಬೀಳ್ತಿವೆ.

ಇದನ್ನೂ ಓದಿ : WPL ಹಾರಾಜಿನ ನಂತ್ರ ಯಾವ ಆಟಗಾರರು ಯಾವೆಲ್ಲಾ ತಂಡದಲ್ಲಿದ್ದಾರೆ – ಇಲ್ಲಿದೆ ಕಂಪ್ಲೀಟ್ ಮಾಹಿತಿ

ಟೀಂ ಇಂಡಿಯಾದ ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ಆಟಗಾರ್ತಿ ಸ್ಮೃತಿ ಮಂದಾನ. ಅದ್ರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫ್ಯಾನ್ಸ್​ ಪಾಲಿನ ಕ್ವೀನ್ ಮತ್ತು ಕ್ರಶ್. ಆರ್​ಸಿಬಿಗೆ ಫಸ್ಟ್ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕಿಯೂ ಸ್ಮೃತಿಯೇ. ಕ್ರಿಕೆಟ್ ಕರಿಯರ್​ನಲ್ಲಿ ಸಣ್ಣ ಕಪ್ಪುಚುಕ್ಕೆಯೂ ಇಲ್ಲದಂತೆ ದಿನದಿಂದ ದಿನಕ್ಕೆ ಚರಿತ್ರೆ ಸೃಷ್ಟಿಸುತ್ತಾ ಹೊರಟಿರೋ ಇದೇ ಸ್ಮೃತಿ ಮಂದಾನ ಪರ್ಸನಲ್ ಲೈಫ್​ನಲ್ಲಿ ಎಡವಿದ್ರಾ ಅನ್ನೋ ಅನುಮಾನ ಮೂಡಿದೆ. ಅದಕ್ಕೆ ಕಾರಣ ಅವ್ರೇ ಆಯ್ಕೆ ಮಾಡಿಕೊಂಡ ಹುಡುಗ. ಕಳೆದ ಐದಾರು ವರ್ಷಗಳಿಂದ ಯಾರನ್ನ ಲೈಫ್ ಪಾರ್ಟ್ನರ್ ಆಗಿ ಮಾಡಿಕೊಳ್ಬೇಕು ಅಂತಾ ಪ್ರೀತಿಸ್ತಿದ್ರೋ ಅದೇ ಹುಡುಗ ಈಗ ಸ್ಮೃತಿ ಅವ್ರ ನಿಶ್ಕಲ್ಮಶ ಪ್ರೀತಿಗೆ ಮೋಸ ಮಾಡಿದ್ದಾನೆ. ಬೇರೆ ಬೇರೆ ಹುಡುಗಿಯರ ಜೊತೆ ಚೆಲ್ಲಾಟ ಆಡಿರೋ ಮೆಸೇಜ್, ಫೋಟೋ, ವಿಡಿಯೋಗಳು ವೈರಲ್ ಆಗ್ತಿದೆ. ಇದೇ ಕಾರಣಕ್ಕೆ ಇಬ್ಬರ ಮದುವೆ ಮುರಿದು ಬಿದ್ದಿದೆ ಅನ್ನೋ ಸುದ್ದಿ ಹೊರ ಬಿದ್ದಿದೆ. ನವೆಂಬರ್ 23ಕ್ಕೆ ಅಂದ್ರೆ ಕಳೆದ ಭಾನುವಾರ ಇಬ್ಬರ ಮದುವೆ ನಿಗದಿಯಾಗಿತ್ತು. ಆದ್ರೆ ಹಿಂದಿನ ದಿನವೇ ಪಲಾಶ್ ನಿಜಬಣ್ಣ ಬಯಲಾಗಿ ಮದುವೆ ಮನೆಯಲ್ಲೇ ಗಲಾಟೆಯಾಗಿದೆ. ಆ ನಂತ್ರ ಮದ್ವೆ ನಿಲ್ಸೋ ನಿರ್ಧಾರಕ್ಕೆ ಬಂದಿದ್ದು ಅಷ್ಟ್ರಲ್ಲಿ ಸ್ಮೃತಿ ಮಂದಾನ ಅವ್ರ ತಂದೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ರು. ಈಗ ಮದುವೆ ನಿಂತಿದ್ದರ ಅಸಲಿಯತ್ತು ಬಯಲಾಗ್ತಿದೆ. ಹಾಗೇ ಪಲಾಶ್ ನಿಜಬಣ್ಣವೂ ಹೊರಬೀಳ್ತಿದೆ.

ಮದುವೆ ಮನೆಯಲ್ಲೇ ಪಲಾಶ್ ಕಳ್ಳಾಟ ಬಯಲು!

ಸ್ಮೃತಿ ಮಂದನಾ ಹಾಗೂ ಪಲಾಶ್ ಮುಚ್ಚಾಲ್ ಮದುವಗೆ ಹಲವು ಸೆಲೆಬ್ರೆಟಿಗಳು, ಟೀಂ ಇಂಡಿಯಾ ಕ್ರಿಕೆಟಿಗರು ಶುಭ ಹಾರೈಸಿದ್ದರು. ಮಹೆಂದಿ, ಹಳದಿ, ಸಂಗೀತ್ ಕಾರ್ಯಕ್ರಮದಲ್ಲಿ ಸ್ಮೃತಿ ಮಂದನಾ ಸೇರಿದಂತೆ ಭಾರತೀಯ ಮಹಿಳಾ ಕ್ರಿಕೆಟಿಗರು ಕುಣಿದು ಕುಪ್ಪಳಿಸಿದ್ದರು. ಅದ್ಧೂರಿಯಾಗಿ ಎಲ್ಲಾ ಕಾರ್ಯಕ್ರಮಗಳು ನಡೆದಿತ್ತು. ಮದುವೆ ಹಿಂದಿನ ದಿನ ಹಳದಿ, ಸಂಗೀತ್ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಆದ್ರೆ ಕಾರ್ಯಕ್ರಮ ಮುಗಿದ ತಡ ರಾತ್ರಿಯೇ ಪಲಾಶ್ ಮುಚ್ಚಾಲ್ ನಿಜಬಣ್ಣ ಗೊತ್ತಾಗಿದೆ. ಅಂದ್ರೆ ನಂದಿಕಾ ದ್ವಿವೇದಿ ಅನ್ನೋ ಯುವತಿ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ರಂತೆ. ಅಂದ್ರೆ ಪಲಾಶ್ ಬೇರೆ ಯುವತಿಯರ ಜೊತೆಗಿನ ಸಂಬಂಧ, ಕದ್ದುಮುಚ್ಚಿ ಇದ್ದ ರಿಲೇಶಿಪ್ ವಿಚಾರ ಮದುವೆ ಮಂಟಪದವರಗೆ ತಲುಪಿದೆ. ಆದ್ರೆ ಸ್ಮೃತಿಗೆ ಮಾತ್ರ ಇದ್ಯಾವುದೂ ಗೊತ್ತಿರಲಿಲ್ಲ. ಬಟ್ ಡ್ಯಾನ್ಸ್ ತರಬೇತಿ ನೀಡಲು ಎಂದು ಹೇಳಿ ಬಂದಿದ್ದ ನಂದಿಕಾ ದ್ವಿವೇದಿ ಜೊತೆ ಪಲಾಶ್ ಮುಚ್ಚಾಲ್ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬೀಳುತ್ತಿದ್ದಂತೆ ಮದುವೆಗೇ ಬ್ರೇಕ್ ಬಿದ್ದಿದೆ. ಅಷ್ಟೇ ಅಲ್ದೇ ಪಲಾಶ್ ವಿಚಾರವಾಗಿ ದಿನಕ್ಕೊಂದು ಫೋಟೋ, ವಿಡಿಯೋಸ್ ಹೊರಬೀಳ್ತಿವೆ.

ಮೋಸಗಾರ ಪಲಾಶ್ ಮುಚ್ಚಲ್?

ಮೇರಿ ಡಿ ಕೋಸ್ಟಾ ಜೊತೆ ಇನ್ಸ್ ಟಾದಲ್ಲಿ ಚಾಟಿಂಗ್

2017ರಲ್ಲಿ ಬಿರ್ವಾ ಶಾ ಹೆಸರಿನ ಯುವತಿಗೂ ಪ್ರಪೋಸ್

ಪಾಂಡ್ಯ ಮಾಜಿ ಪತ್ನಿ ನತಾಶ ಜೊತೆಗಿನ ವಿಡಿಯೋ ವೈರಲ್

ಹೀಗೆ ಪಲಾಶ್ ಮುಚ್ಚಲ್​ಗೆ ಸಂಬಂಧ ಪಟ್ಟ ಒಂದೊಂದೇ ವಿಚಾರಗಳು ಹೊರ ಬೀಳ್ತಿದ್ದು ನಿಜಕ್ಕೂ ಸ್ಮೃತಿ ಮಂದಾನ ಮೋಸ ಹೋದ್ರಾ ಅನ್ನೋ ಅನುಮಾನ ಶುರುವಾಗಿದೆ. ಯಾಕಂದ್ರೆ ಮದುವೆ ಮರಿದುಬಿದ್ದ ಬಳಿಕ ಪಲಾಶ್ ಜೊತೆಗಿನ ಮದುವೆಗೆ ಸಂಬಂಧಪಟ್ಟ ಪೋಸ್ಟ್​ಗಳನ್ನ ಡಿಲೀಡ್ ಮಾಡಿದ್ರು. ಅಲ್ದೇ ಈಗ ಜೆಮಿಮಾ ರೋಡ್ರಿಗಸ್ ತೆಗೆದುಕೊಂಡಿರೋ ನಿರ್ಧಾರ ಇದಕ್ಕೆ ಪುಷ್ಠಿ ನೀಡ್ತಿದೆ. ಸ್ನೇಹ ಮೊದ್ಲು ಟೂರ್ನಮೆಂಟ್ ಅಲ್ಲ ಅಂತಾ ಜೆಮಿಮಾ ರೊಡ್ರಿಗಸ್ ಮಹಿಳಾ ಬಿಗ್ ಬ್ಯಾಷ್ ಲೀಗ್ ತೊರೆಯುವ ನಿರ್ಧಾರ ಮಾಡಿದ್ದಾರೆ. ಆಘಾತದಲ್ಲಿರೋ ಸ್ಮೃತಿ ಮಂದಾನ ಅವ್ರ ಜೊತೆಗಿರೋ ನಿರ್ಧಾರ ಮಾಡಿದ್ದಾರೆ. ಜೆಮಿಮಾ ರೊಡ್ರಿಗಸ್ ಆಲ್ರೆಡಿ WBBL ನಲ್ಲಿ ಬ್ರಿಸ್ಬೇನ್ ಹೀಟ್ ಪರ ಆಡುತ್ತಿದ್ದರು. ಬಟ್ ಸ್ಮೃತಿ ಅವರ ಮದುವೆಗೆಂದೇ 10 ದಿನಗಳ ಹಿಂದಷ್ಟೇ ಭಾರತಕ್ಕೆ ಬಂದಿದ್ರು. ಆದ್ರೆ ಈಗ ಬಿಬಿಎಲ್​ಗೆ ವಾಪಸ್ ಹೋಗಲು ನಿರ್ಧಾರ ಮಾಡಿದ್ದಾರೆ. ಸ್ಮೃತಿ ಜೊತೆ ನಿಲ್ಲಲು ತೀರ್ಮಾನಿಸಿರೋದೇ ಅಚ್ಚರಿಗೆ ಕಾರಣವಾಗಿದೆ. ಇಲ್ಲಿ ಇನ್ನೊಂದು ವಿಚಾರ ಹೇಳಲೇಬೇಕು. ಸ್ಮೃತಿ ಮಂದಾನ ಈ ವಿಚಾರದಲ್ಲಿ ಸೈಲೆಂಟ್ ಆಗಿರೋದು ಕೂಡ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕ್ಲಾರಿಟಿ ಕೊಟ್ಟಿಲ್ಲ ಯಾಕೆ?

ಮದುವೆ ನಿಂತ ಮೇಲೆ ಯಾರೂ ಕ್ಲಾರಿಟಿ ಕೊಟ್ಟಿಲ್ಲ

ಪಲಾಶ್ ವಿಚಾರವಾಗಿ ಸುದ್ದಿ ಹರಿದಾಡ್ತಿದ್ರೂ ಸೈಲೆಂಟ್

ಸೋಶಿಯಲ್ ಮೀಡಿಯಾದಲ್ಲಿ ಹತ್ತಾರು ಬಗೆಯ ಅನುಮಾನ

ಮದುವೆ ನಿಲ್ಲಿಸಿದ್ದಾ, ಮತ್ತೆ ನಡೆಯುತ್ತಾ ಅನ್ನೋದು ಹೇಳಿಲ್ಲ

ಹೀಗೆ ಸ್ಮೃತಿ ಮದುವೆ ವಿಚಾರವಾಗಿ ದಿನಕ್ಕೊಂದು ಸುದ್ದಿ ಹೊರ ಬೀಳ್ತಾನೇ ಇದೆ. ಆದ್ರೆ ಯಾವುದನ್ನೂ ಅಧಿಕೃತವಾಗಿ ಯಾರೂ ಹೇಳಿಲ್ಲ. ಬಟ್ ಈಗ ಆಗ್ತಿರೋ ಡವಲಪ್​ಮೆಂಟ್ಸ್ ನೋಡ್ತಿದ್ರೆ ಬಹುಶಃ ಮದುವೆ ನಿಂತಂತೆಯೇ ಲೆಕ್ಕ. ಆದ್ರೆ ಪಲಾಶ್ ಮುಚ್ಚಲ್ ಮೋಸ ಮಾಡಿದ್ದು ನಿಜವೇ ಆಗಿದ್ರೆ ಆತನಿಗೆ ತಕ್ಕ ಶಾಸ್ತಿಯಾಗಲೇಬೇಕಿದೆ. ಆತನನ್ನ ಬ್ಲೈಂಡ್ ಆಗಿ ನಂಬಿ ನಿಶ್ಕಲ್ಮನಶವಾಗಿ ಪ್ರೀತಿಸಿದ ಸ್ಮೃತಿ ಮಂದಾನ ಈಗ ನಿಜಕ್ಕೂ ಆಘಾತದಲ್ಲಿ ಇರ್ತಾರೆ. ಬಟ್ ಮದುವೆಗೂ ಮುಂಚೆಯೇ ಗೊತ್ತಾಗಿದ್ದು ಒಳ್ಳೇದೇ ಆಯ್ತು ಅನ್ನೋದಷ್ಟೇ ಸಮಾಧಾನ.

Shantha Kumari