ಸ್ಮೃತಿ ಮಂದಾನಗೆ ಪಲಾಶ್ ಮೋಸ – ಯುವತಿ ಜತೆ ಫ್ಲರ್ಟ್.. ಮದುವೆ ಕ್ಯಾನ್ಸಲ್?
ಅಪ್ಪನ ಅನಾರೋಗ್ಯ ನೆಪ ಹೇಳಿದ್ರಾ?

ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಟೀಂ ಇಂಡಿಯಾದ ಸ್ಟಾರ್ ಆಟಗಾರ್ತಿ ನಮ್ಮ ಆರ್ಸಿಬಿ ತಂಡದ ನಾಯಕಿಯೂ ಆಗಿರುವ ಸ್ಮೃತಿ ಮಂದಾನ ಅವ್ರ ಮದುವೆ ಕಳೆದ ಭಾನುವಾರ ಅದ್ಧೂರಿಯಾಗಿ ನೆರವೇರಬೇಕಿತ್ತು. ಆದ್ರೆ ಮದುವೆ ಸಂಭ್ರಮದಲ್ಲೇ ಹಾರ್ಟ್ ಅಟ್ಯಾಕ್ ಅನ್ನೋ ಬರಸಿಡಿಲು ಬಂದೆರಗಿತ್ತು. ಮದುವೆ ಪೋಸ್ಟ್ಪೋನ್ ಆಗಿತ್ತು. ಛೇ ಹೀಗಾಗಬಾರದಿತ್ತು ಅಂತ ಕೋಟ್ಯಂತರ ಅಭಿಮಾನಿಗಳ ಹೃದಯ ಛಿದ್ರವಾಗಿತ್ತು. ಆದ್ರೀಗ ಅದಕ್ಕಿಂತಲೂ ಘನಘೋರವಾದ ವಿಚಾರವೊಂದು ಹೊರ ಬಿದ್ದಿದೆ. ಮದುವೆ ನಿಂತದ್ದು ಹೃದಯಾಘಾತದಿಂದಲ್ಲ ಮಧುಮಗ ಮಾಡಿದ ಮಹಾಮೋಸದಿಂದ ಅನ್ನೋ ಸ್ಫೋಟಕ ಸುದ್ದಿ ಸದ್ದು ಮಾಡ್ತಿದೆ.
ಇದನ್ನೂ ಓದಿ : 549 ರನ್ಸ್.. ಭಾರತಕ್ಕಿದೆ ಡ್ರಾ ಚಾನ್ಸ್! 5ನೇ ದಿನ ALL OUT ತಪ್ಪಿಸ್ತಾರಾ?
ಬ್ಯೂಟಿ ವಿತ್ ಬ್ರೇನ್ ಎನ್ನುವಂತ ಹುಡುಗಿ ಸ್ಮೃತಿ ಮಂದಾನ. ಕೋಟ್ಯಂತರ ಹುಡುಗರ ಕ್ರಶ್ ಕೂಡ ಹೌದು. ಆರ್ಸಿಬಿ ಫ್ಯಾನ್ಸ್ ಅಂತೂ ಕರುನಾಡಿನ ಕ್ವೀನ್ ಅಂತಾನೇ ಒಪ್ಪಿಕೊಂಡಿದ್ದಾರೆ. ಇಂಥಾ ಟ್ಯಾಲೆಂಟೆಡ್ ಗರ್ಲ್ ಈಗ ದಾಂಪತ್ಯ ಜೀವನಕ್ಕೆ ಕಾಲಿಡೋಕೆ ಸಜ್ಜಾಗಿದ್ರು. ತಮ್ಮ ಬಹುಕಾಲದ ಗೆಳೆಯ ಫಿಲ್ಮ್ ಮೇಕರ್ ಹಾಗೂ ಖ್ಯಾತ ಸಿಂಗರ್ ಆಗಿರುವ ಪಲಾಶ್ ಮುಚ್ಚಲ್ ಜೊತೆ ಸಪ್ತಪದಿ ತುಳಿಯೋಕೆ ರೆಡಿಯಾಗಿದ್ರು. ಕಳೆದ ಭಾನುವಾರ ಮದುವೆ ಕೂಡ ಫಿಕ್ಸ್ ಆಗಿತ್ತು. ನವೆಂಬರ್ 23ರಂದು ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಮದುವೆಯಾಗೋಕೆ ಕೆಲವೇ ಕೆಲ ಕ್ಷಣಗಳು ಬಾಕಿ ಇರುವಾಗ ಮದುವೆ ಮುಂದೂಡಿಕೆ ಅನ್ನೋ ಸುದ್ದಿ ಹಲ್ಚಲ್ ಎಬ್ಬಿಸಿತ್ತು. ಸ್ಮೃತಿ ಮಂದಾನ ಅವ್ರ ತಂದೆಗೆ ಹೃದಯಾಘಾತವಾಗಿದೆ. ಅವ್ರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೀಗಾಗಿ ಮದುವೆಯನ್ನ ಮುಂದೂಡಿಕೆ ಮಾಡಲಾಗಿದೆ ಅನ್ನೋ ಸುದ್ದಿ ಹೊರಬಿದ್ದಿತ್ತು. ಮದುಮಗ ಪಲಾಶ್ ಮುಚ್ಚಲ್ ಅವ್ರ ಸಹೋದರಿ ಪಲಕ್ ಮುಚ್ಚಲ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿಯಲ್ಲಿ ಈ ಮಾಹಿತಿ ಶೇರ್ ಮಾಡಿದ್ರು. ಈ ವಿಚಾರ ಕೇಳಿ ಕೋಟ್ಯಂತರ ಭಾರತೀಯ ಅಯ್ಯೋ ಹೀಗಾಗಬಾರದಿತ್ತು. ಸ್ಮೃತಿ ಅವ್ರ ತಂದೆ ಬೇಗ ರಿಕವರ್ ಆಗ್ಲಿ ಅಂತಾ ಪ್ರಾರ್ಥಿಸಿದ್ರು. ಆದ್ರೆ ಮದುವೆ ನಿಲ್ಲೋಕೆ ಬೇರೆಯದ್ದೇ ಕಾರಣ ಇರೋ ಆರೋಪ ಕೇಳಿ ಬಂದಿದೆ.
ಬೇರೆ ಯುವತಿ ಜತೆ ಪ್ಲರ್ಟ್.. ಸ್ಮೃತಿಗೆ ಪಲಾಶ್ ಮೋಸ?
ಕೇಳೋಕೆ ನಿಜಕ್ಕೂ ಇದು ಶಾಕಿಂಗ್ ವಿಚಾರವೇ. ಸ್ಮೃತಿ ಹಾಗೇ ಪಲಾಶ್ ಇಬ್ಬೂ ಎಂಥಾ ಒಳ್ಳೆ ಜೋಡಿ ಅನ್ನೋದನ್ನ ಸೋಶಿಯಲ್ ಮೀಡಿಯಾದಲ್ಲಿ ಪದೇ ಪದೆ ನೋಡ್ತಾನೇ ಇರ್ತೇವೆ. ಇಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರ್ತಾವೆ. ಸ್ಮೃತಿ ಮಂದಾನ ಅವ್ರ ಪ್ರತೀ ಸೋಲು, ಗೆಲುವಿನಲ್ಲೂ ಪಲಾಶ್ ಜೊತೆಗಿದ್ದೇ ಸಪೋರ್ಟ್ ಮಾಡ್ತಾರೆ. ಆದ್ರೀಗ ಶಾಕಿಂಗ್ ಎನ್ನುವಂತೆ ಮಹಿಳೆಯೊಬ್ಬರು ಪಲಾಶ್ ಮುಚ್ಚಲ್ ಅವರೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಚಾಟ್ ಮಾಡಿರುವ ಸ್ಕ್ರೀನ್‌ಶಾಟ್ ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿವೆ. ಮದುವೆಗೆ ಕೆಲವೇ ಹೊತ್ತಿಗೂ ಮುನ್ನ ಈ ಸ್ಕ್ರೀನ್‌ಶಾಟ್ ರಿವೀಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗ್ತಿವೆ. ಮೇರಿ ಡಿ’ಕೋಸ್ಟಾ ಎನ್ನುವ ಮಹಿಳೆ ಈ ಸ್ಕ್ರೀನ್‌ಶಾಟ್ ಅನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಈ ಚಾಟ್‌ನಲ್ಲಿ ಪಲಾಶ್ ಮುಚ್ಚಲ್, ಸ್ಮೃತಿ ಮಂಧನಾ ಜತೆಗಿನ ಲಾಂಗ್ ಡಿಸ್ಟೆನ್ಸ್ ರಿಲೇಷನ್‌ಶಿಪ್ ಹಾಗೂ ಅವ್ರ ಜತೆ ಟೂರ್ ಹೋಗುವುದರ ಬಗ್ಗೆ ಆಗುವ ಸವಾಲುಗಳ ಬಗ್ಗೆ ಚಾಟ್ ಮಾಡಿದ್ದಾರೆ. ಇದೇ ವಿಚಾರ ಈಗ ಮದುವೆ ನಿಲ್ಲೋಕೆ ಕಾರಣ ಆಗಿದೆ ಅನ್ನೋ ಆರೋಪಗಳು ಕೇಳಿ ಬರ್ತಿವೆ.
ಮದುವೆ ಫೋಟೋಗಳು & ಪೋಸ್ಟ್ ಡಿಲೀಟ್ ಮಾಡಿದ ಸ್ಮೃತಿ!
ಇನ್ನು ಇಷ್ಟೇ ಅಲ್ಲದೆ ಪಲಾಶ್ ಮೇರಿ ಅವರ ಜತೆ ಫ್ಲರ್ಟ್ ಮಾಡುವ ರೀತಿಯಲ್ಲಿಯೂ ಚಾಟ್ ಮಾಡಿದ್ದಾರೆ. ಇದರ ಜತೆಗೆ ಆಕೆಯನ್ನು ತಮ್ಮ ಜತೆ ಸ್ಮಿಮ್ಮಿಂಗ್ಗೆ ಬರುವಂತೆ ಕರೆದಿರುವುದು ಗೊತ್ತಾಗುತ್ತೆ. ಇದೆಲ್ಲವನ್ನು ಗಮನಿಸಿದ್ರೆ ಪಲಾಶ್ ಮುಚ್ಚಲ್, ಸ್ಮೃತಿ ಮಂಧನಾ ಅವರ ಪ್ರೀತಿಗೆ ಮೋಸ ಮಾಡಿದ್ರಾ ಎನ್ನುವ ಅನುಮಾನ ಶುರುವಾಗಿದೆ. ಇನ್ನು ಇದೆಲ್ಲದ್ರ ನಡುವೆ ಸ್ಮೃತಿ ಮಂದಾನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಾವು ಹಾಕಿದ್ದ ಮೆಹೆಂಡಿ ಹಾಗೂ ಮದುವೆಗೆ ಸಂಬಂಧಿಸಿದ ಫೋಟೋಗಳನ್ನು ಡಿಲೀಟ್ ಮಾಡಿರೋದು ಅನುಮಾನಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಸ್ಮೃತಿ ಮಂದಾನ ಮಾತ್ರವಲ್ಲದೇ ಆಕೆಯ ಗೆಳತಿಯರಾದ ಜೆಮಿಮಾ ರೋಡ್ರಿಗ್ಸ್ ಸೇರಿದಂತೆ ಹಲವು ಆಪ್ತರು ಮದುವೆಗೆ ಸಂಬಂಧಪಟ್ಟ ಫೋಟೋ ಹಾಗೂ ವಿಡಿಯೋಗಳನ್ನು ಡಿಲೀಟ್ ಮಾಡಿರುವುದು ಪಲಾಶ್ ಮುಚ್ಚಲ್ ಹಾಗೂ ಸ್ಮೃತಿ ಮಂಧನಾ ಮದುವೆ ಸಂಬಂಧ ಮುರಿದುಬಿತ್ತಾ ಎನ್ನುವ ಅನುಮಾನ ಹುಟ್ಟುಹಾಕಿದೆ.
ಇನ್ನು ಮದುವೆ ಪೋಸ್ಟ್ಪೋನ್ ಆದ ಬಳಿಕ ಪಲಾಶ್ ಮುಚ್ಚಲ್ ಕೂಡ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ರು. ಸದ್ಯ ಟ್ರೀಟ್ಮೆಂಟ್ ಬಳಿಕ ಪಲಾಶ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದಾರೆ. ಸೋ ಇದನ್ನೆಲ್ಲಾ ಗಮನಿಸಿದ್ರೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ವೆ. ಬಟ್ ಒಂದಂತೂ ಸತ್ಯ. ಪಲಾಶ್ ಏನಾದ್ರೂ ಸ್ಮೃತಿಗೆ ನಿಜಕ್ಕೂ ಮೋಸ ಮಾಡಿದ್ರೆ ಆತನಷ್ಟು ದಡ್ಡ ಜಗತ್ತಿನಲ್ಲಿ ಮತ್ತಿನ್ಯಾರು ಇರೋಕೆ ಸಾಧ್ಯನೇ ಇಲ್ಲ. ಯಾಕಂದ್ರೆ ಸ್ಮೃತಿ ಆಟದಲ್ಲಿ ಎಷ್ಟು ಕ್ಲೀನೋ ರಿಯಲ್ ಲೈಫಲ್ಲೂ ಅಷ್ಟೇ ವೆಲ್ ಬಿಹೇವಡ್ ಗರ್ಲ್. ಯಾವುದೇ ಕಾಂಟ್ರವರ್ಸಿಗೂ ಒಳಗಾಗದ ಬುದ್ಧಿವಂತೆ. ಹರ್ಮನ್ ಪ್ರೀತ್ ಕೌರ್ ಬಳಿಕ ಟೀಂ ಇಂಡಿಯಾದ ನಾಯಕಿ ರೇಸ್ನಲ್ಲಿರೋ ಬ್ರೇವ್ ಗರ್ಲ್. ಬಟ್ ಈಗ ಮದುವೆ ವಿಚಾರದಲ್ಲಿ, ಪ್ರೀತಿ ವಿಷಯದಲ್ಲಿ ಕೇಳಿ ಬರ್ತಿರೋ ಆರೋಪಗಳೆಲ್ಲಾ ಸುಳ್ಳಾಗ್ಲಿ.

ನೋಡಿರಿ

