ಸ್ಮೃತಿ ಮಂಧಾನ ವಿಶ್ವದಾಖಲೆಯ ಶತಕ- ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ವೈಟ್‌ವಾಶ್ ಮುಖಭಂಗ

ಸ್ಮೃತಿ ಮಂಧಾನ ವಿಶ್ವದಾಖಲೆಯ ಶತಕ- ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ವೈಟ್‌ವಾಶ್ ಮುಖಭಂಗ

ಟೀಮ್ ಇಂಡಿಯಾ ವನಿತೆಯರ ತಂಡ ಆಸ್ಟ್ರೇಲಿಯಾ ವಿರುದ್ಧ 83ರನ್‌ಗಳಿಂದ ಹೀನಾಯವಾಗಿ ಸೋತಿದೆ. ಈ ಮೂಲಕ ಆಸೀಸ್ ತಂಡ ಭಾರತವನ್ನ ವೈಟ್ ವಾಶ್ ಮಾಡುವಲ್ಲಿ ಸಕ್ಸಸ್ ಆಗಿದೆ. 299ರನ್​ಗಳ ಗುರಿ ಬೆನ್ನಟ್ಟಿದ ಭಾರತ ತಂಡ ಕೊನೆ 35 ಓವರ್​ ತನಕ ಚೇಸಿಂಗ್​ನಲ್ಲಿ ಉತ್ತಮ ಹಿಡಿತ ಸಾಧಿಸಿತ್ತು. ಆದರೆ 36ನೇ ಓವರ್​ನಲ್ಲಿ ಸ್ಮತಿ ಮಂಧಾನ ಔಟ್ ಆಗ್ತಿದ್ದಂತೆ ಟೀಮ್ ಇಂಡಿಯಾ ಸೋಲು ಕೂಡಾ ಖಚಿತವಾಗಿತ್ತು. 45.1 ಓವರ್ ನಲ್ಲಿ 215ಕ್ಕೆ ಆಲೌಟ್ ಆಗೋ ಮೂಲಕ ಟೀಮ್ ಇಂಡಿಯಾ 83 ರನ್​ಗಳಿಂದ ಸೋಲು ಕಂಡಿತು.

ಇದನ್ನೂ ಓದಿ:ಭಾರತದ ಸಿರಾಜ್‌ಗೆ ಕಠಿಣ ಶಿಕ್ಷೆ – ಆಸ್ಟ್ರೇಲಿಯಾದ ಹೆಡ್‌ಗೆ ಕೇವಲ ದಂಡ – ಶಿಕ್ಷೆಯಲ್ಲೂ ಐಸಿಸಿ ತಾರತಮ್ಯ ಮಾಡಿದ್ಯಾಕೆ?

ಏಕದಿನ ಕ್ರಿಕೆಟ್​ನಲ್ಲಿ ಸ್ಮೃತಿ ಮಂಧಾನ ಚರಿತ್ರೆ ಸೃಷ್ಟಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಸ್ಮೃತಿ ಮಂಧಾನ ಶತಕ ಸಿಡಿಸಿ ವಿಶ್ವದಾಖಲೆ ಬರೆದ್ರು. ಈ ವರ್ಷ ಏಕದಿನ ಪಂದ್ಯಗಳಲ್ಲಿ ಮಂಧಾನ ಸಿಡಿಸಿದ್ದು ಇದು ನಾಲ್ಕನೇ ಶತಕ. ವರ್ಷದಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಮಂಧನಾ ಪಾತ್ರರಾಗಿದ್ದಾರೆ.

ಒಂದೇ ವರ್ಷದಲ್ಲಿ ಹೆಚ್ಚು ಶತಕ ಸಿಡಿಸಿದ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ ಸ್ಮೃತಿ ಮಂಧಾನ. ಆಸ್ಟ್ರೇಲಿಯಾದ ಬೆಲಿಂಡಾ ಕ್ಲಾರ್ಕ್ (1997), ಮೆಗ್ ಲ್ಯಾನಿಂಗ್ (2016), ನ್ಯೂಜಿಲ್ಯಾಂಡ್​ನ ಆಮಿ ಸ್ಯಾಟರ್ತ್​ವೈಟ್ (2016), ಸೋಫಿ ಡಿವೈನ್ (2018), ಪಾಕಿಸ್ತಾನದ ಸಿದ್ರಾ ಅಮೀನ್ (2012), ಇಂಗ್ಲೆಂಡ್​ನ ನ್ಯಾಟ್ ಸಿವರ್ (2023), ದಕ್ಷಿಣ ಆಫ್ರಿಕಾದ ಲಾರಾ ವೋಲ್ವಾರ್ಟ್ (2024) ತಲಾ ಮೂರು ಶತಕಗಳನ್ನು ಬಾರಿಸಿದ್ದಾರೆ. ಮಹಿಳಾ ಏಕದಿನ ಕ್ರಿಕೆಟ್​ನಲ್ಲಿ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಈ ವರ್ಷ ನಾಲ್ಕು ಶತಕಗಳನ್ನು ದಾಖಲಿಸಿದ ಸ್ಮೃತಿ ಮಂಧಾನ ಈ ಸಾಧನೆ ಮಾಡಿದ ಮೊದಲ ಬ್ಯಾಟರ್​ ಎನಿಸಿಕೊಂಡರು.

suddiyaana

Leave a Reply

Your email address will not be published. Required fields are marked *