RCB ಕ್ವೀನ್ ಸ್ಮೃತಿ ಮಂದಾನ ಬೆಂಗಳೂರಿನ ಸೊಸೆಯಾಗ್ತಾರಾ?

RCB ಕ್ವೀನ್ ಸ್ಮೃತಿ ಮಂದಾನ ಬೆಂಗಳೂರಿನ ಸೊಸೆಯಾಗ್ತಾರಾ?

ಐಪಿಎಲ್ ಅಂದ್ರೆ ಭಾರತೀಯರ ಪಾಲಿಗೆ ಅದೊಂದು ದೊಡ್ಡ ಹಬ್ಬ. ಅದ್ರಲ್ಲೂ ಆರ್​ಸಿಬಿ ಫ್ಯಾನ್ಸ್​ಗೆ ಒಂಥರಾ ಎಮೋಷನ್.. ಸೆಲೆಬ್ರೇಷನ್.. ಎಲ್ಲವೂ.. ಮೆನ್ಸ್​ ಐಪಿಎಲ್​ಗೆ ಕೆಲ ದಿನಗಳಷ್ಟೇ ಬಾಕಿ ಉಳಿದಿದ್ದು, ಫಸ್ಟ್ ಮ್ಯಾಚ್​ನಲ್ಲೇ ಬದ್ಧವೈರಿಗಳಾದ ಆರ್​ಸಿಬಿ ಮತ್ತು ಸಿಎಸ್​ಕೆ ಟೀಂ ಮುಖಾಮುಖಿಯಾಗಲಿವೆ. ಇದೀಗ ವುಮೆನ್ಸ್ ಪ್ರೀಮಿಯಲ್ ಲೀಗ್ ಅಭಿಮಾನಿಗಳಿಗೆ ಫುಲ್ ಮೀಲ್ಸ್ ಬಡಿಸ್ತಿದೆ. ಅದ್ರಲ್ಲೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ಮತ್ತು ಆರ್​ಸಿಬಿ ಕ್ಯಾಪ್ಟನ್ ಸ್ಮೃತಿ ಮಂದಾನ ಕ್ರೇಜ್ ಮುಗಿಲು ಮುಟ್ಟುತ್ತಿದೆ. ಮಂದಾನರನ್ನ ನೋಡೋಕಂತ್ಲೇ ಫ್ಯಾನ್ಸ್ ಚಿನ್ನಸ್ವಾಮಿ ಸ್ಟೇಡಿಯಂಗೆ ಲಗ್ಗೆ ಇಡ್ತಿದ್ದಾರೆ. ಗ್ಯಾಲರಿಯಲ್ಲೇ ಕೂತ್ಕೊಂಡು ಮದುವೆ ಪ್ರಪೋಸಲ್ ಇಡ್ತಿದ್ದಾರೆ. ಆರ್​ಸಿಬಿ ಕ್ರೇಜ್ ಹೇಗಿದೆ..? ಸ್ಮೃತಿ ಮಂದಾನ ಮೇಲೆ ಹುಡುಗರಿಗೆ ಕ್ರಶ್ ಆಗಿದ್ದೇಗೆ? ಮಿಲ್ಕಿ ಬ್ಯೂಟಿ ಮಂದಾನ ರಿಯಲ್ ಲವರ್ ಯಾರು..? ಬೆಂಗಳೂರು ಸೊಸೆಯಾಗ್ತಾರಾ ಸ್ಟಾರ್ ವುಮೆನ್ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:   ಚೈತ್ರಾ ಆಚಾರ್‌ ಸಿಕ್ಕಾಪಟ್ಟೆ ಬೋಲ್ಡ್‌ – ಪಡ್ಡೆ ಹುಡುಗರ ಹೃದಯ ಕದ್ದ ನಟಿ

ಐಪಿಎಲ್ ಟೂರ್ನಿ ಭಾರತೀಯರ ಭಾವನೆ ಜೊತೆ ಬೆರೆತು ಹೋಗಿದೆ. ಹೀಗಾಗಿಯೇ ಐಪಿಎಲ್ ಶುರುವಾಯ್ತು ಅಂದರೆ ಅಭಿಮಾನಿಗಳು ಉಸಿರು ಬಿಗಿ ಹಿಡಿದು ಎಲ್ಲ ಪಂದ್ಯಕ್ಕೂ ಕಾಯ್ತಿರ್ತಾರೆ. ಇದೀಗ ವುಮೆನ್ಸ್ ಪ್ರೀಮಿಯರ್ ಲೀಗ್​ನೂ ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಿದ್ದಾರೆ. ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ವುಮೆನ್ ಸ್ಮೃತಿ ಮಂಧಾನ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ‘ಕ್ರಿಕೆಟ್​ ಲೋಕದ ಕ್ರಶ್’ ಎಂದೇ ಫೇಮಸ್ ಆಗಿರುವ ಸ್ಮೃತಿ ಮೇಲೆ ನಮ್ಮ ಆರ್​ಸಿಬಿ ಫ್ಯಾನ್ಸ್​ಗೂ ಕ್ರಶ್ ಆಗಿದೆ. ಮೆನ್ಸ್ ಟೀಮ್​ನಲ್ಲಿ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿಗೆ ಆರ್​ಸಿಬಿ ಅಭಿಮಾನಿಗಳು ಬೆಟ್ಟದಷ್ಟು ಪ್ರೀತಿ ಕೊಟ್ಟಿದ್ದಾರೆ. ಕೊಹ್ಲಿ ಸಹ ದುಡ್ಡಿಗೆ ಮಣೆ ಹಾಕದೆ ಆರ್‌ಸಿಬಿ ಅಭಿಮಾನಿಗಳ ಪ್ರೀತಿಗೆ ಮನಸೋತು ತಂಡದಲ್ಲೇ ಉಳಿದುಕೊಂಡಿದ್ದಾರೆ. ಕೊಹ್ಲಿ ರೀತಿಯಲ್ಲೇ ಆರ್‌ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂದನಾಗೂ ಪ್ರೀತಿ ತೋರಿಸುತ್ತಿದ್ದಾರೆ. ಇದನ್ನು ಕಣ್ಣಾರೆ ಕಂಡು ಸ್ಮೃತಿ ಮಂದಾನ ಅವರೇ ದಂಗಾಗಿದ್ದಾರೆ. ಅದ್ರಲ್ಲೂ ತಮ್ಮ ಮೇಲೆ ಅಭಿಮಾನಿಗಳಿಗೆ ಇರೋ ಕ್ರೇಜ್ ನೋಡಿ ಶಾಕ್ ಆಗಿದ್ದಾರೆ.

ಐಪಿಲ್​ನಲ್ಲಿ ಬೇರೆ ಯಾವ ಟೀಂಗೂ ಸಿಗದಷ್ಟು ಅಭಿಮಾನ ಬೆಂಗಳೂರು ತಂಡಕ್ಕೆ ಸಿಕ್ಕಿದೆ. ಅದಕ್ಕಿಂತ ಹೆಚ್ಚಾಗಿ ಲಾಯಲ್ ಫ್ಯಾನ್ಸ್ ಇದ್ದಾರೆ. ಪುರುಷರ 16 ಸೀಸನ್​ಗಳಲ್ಲಿ ಒಂದು ಸಲವೂ ಕಪ್ ಗೆಲ್ಲದಿದ್ರೂ ಕಿಂಚಿತ್ತೂ ಪ್ರೀತಿ ಕಮ್ಮಿ ಆಗಿಲ್ಲ. ಪ್ರತೀ ಸೀಸನ್ ಆರಂಭದಲ್ಲೂ ಈ ಸಲ ಕಪ್ ನಮ್ದೇ ಈ ಸಲ ಕಪ್ ನಮ್ದೇ ಅನ್ನೋ ಟ್ರೆಂಡ್ ಶುರುವಾಗುತ್ತೆ. ಇದೀಗ ವುಮೆನ್ಸ್ ಟೂರ್ನಿಯಲ್ಲೂ ಅದೇ ಆಗ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಸೀಸನ್ 2 ಪಂದ್ಯಗಳಿಗೆ ಚಾಲನೆ ಸಿಕ್ಕಿತ್ತು. ಬಾಲಿವುಡ್ ಸೇರಿದಂತೆ ವಿವಿಧ ಸಿನಿಮಾ ರಂಗದ ಸಾಕಷ್ಟು ಸ್ಟಾರ್ಸ್ ಭಾಗಿಯಾಗಿದ್ರು. ಆದರೆ ಸಿನಿಮಾ ಮಂದಿಗೂ ಸಿಗದಷ್ಟು ಬೆಂಬಲ ನಮ್ಮ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂದಾನ ಅವರಿಗೆ ಸಿಕ್ಕಿತ್ತು.

ಭಾರತೀಯ ಮಹಿಳಾ ತಂಡದಲ್ಲಿ ಸೆನ್ಸ್‌ಸೇಷನ್‌ ಕ್ರಿಯೇಟ್‌ ಮಾಡಿದ್ದ ಸ್ಮೃತಿ ಈಗ ಆರ್​ಸಿಬಿ ಫ್ಯಾನ್ಸ್ ನಿದ್ದೆ ಕದ್ದಿದ್ದಾರೆ. ಯಾವ ಬಾಲಿವುಡ್‌ ಸ್ಟ್ರಾರ್‌ ಕಮ್ಮಿ ಇಲ್ಲ ಎನ್ನುವಂತಿರೋ ಈ ಮಿಲ್ಕಿ ಬ್ಯೂಟಿ ಸ್ಮೃತಿ ಮಂದಾನ ಸಿಕ್ಕಾಪಟ್ಟೆ ಟ್ರೆಂಡ್​ನಲ್ಲಿದ್ದಾರೆ. ಮಂದಾನ ಜಸ್ಟ್ ಬ್ಯೂಟಿ ಕ್ವೀನ್ ಮಾತ್ರ ಅಲ್ಲ. ಬ್ಯಾಟ್‌ ಹಿಡಿದು ಫೀಲ್ಡ್‌ಗಿಳಿದ್ರೆ ಹೊಡಿ ಬಡಿ ಆಟ ಆಡ್ತಾರೆ. ಎಂತಹ ಕಠಿಣ ಪರಿಸ್ಥಿತಿಯಲ್ಲಾದ್ರೂ ತಂಡವನ್ನು ದಡ ಸೇರಿಸೋ ತಾಕತ್ತು ಇವರಲ್ಲಿದೆ. ಇನ್ನೂ ಫೀಲ್ಡಿಂಗ್‌ ವಿಚಾರಕ್ಕೆ ಬಂದ್ರೆ ಅಂತೂ ಕೇಳೋದೇ ಬೇಡ. ಹುಡುಗರಿಗೆ ಸರಿ ಸಮನಾಗಿ ಫೀಲ್ಡಿಂಗ್‌ ಮಾಡೋ ಕೆಪಾಸಿಟಿ ಸ್ಮೃತಿಗಿದೆ. ಬ್ಯೂಟಿಕ್ವೀನ್ ಮಾತ್ರವಲ್ಲದೆ ಆಟದಲ್ಲೂ ಕೂಡ ಸೈ ಅನ್ನಿಸಿಕೊಂಡಿದ್ದಾರೆ.

ಮೇಕಪ್‌ ಮಾಡಿದ್ರೆ ಮಾತ್ರ ಸುಂದರವಾಗಿ ಕಾಣೋದು ಅನ್ನುವವರ ಮಧ್ಯೆ ನೋ ಮೇಕಪ್‌ ಲುಕ್‌ನಲ್ಲಿ ಸ್ಮೃತಿ ಮುದ್ದು ಮುದ್ದಾಗಿ ಕಾಣ್ತಾರೆ. ಇವ್ರ ಆಟ ನೋಡ್ಬೇಕು ಅನ್ನೋರಿಗಿಂತ ಹೆಚ್ಚಾಗಿ ಸ್ಮೃತಿಯನ್ನು ನೋಡಿ ಕಣ್ತುಂಬಿಕೊಳ್ಳೋಣ ಅನ್ನೋರೇ ಹೆಚ್ಚು. ಆ ರೇಂಜ್​ಗೆ ಪಡ್ಡೆ ಹುಡುಗರು ಕ್ಲೀನ್‌ ಬೋಲ್ಡ್‌ ಆಗಿದ್ದಾರೆ. ನಿಮಗೆಲ್ಲಾ ಗೊತ್ತಿರೋ ಹಾಗೇ ವಿರಾಟ್‌ ಕೊಹ್ಲಿಗೆ ಡೈ ಹಾರ್ಟ್ ಫ್ಯಾನ್ಸ್‌ ಇದ್ದಾರೆ. ಇನ್ನೂ ವುಮೆನ್ಸ್‌ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ರೇಂಜ್‌ಗೆ ಸೌಂಡ್‌ ಮಾಡ್ತಿರೋರು ನಮ್ಮ ಸ್ಮೃತಿ ಮಂದಾನ ಒಬ್ಬರೇ. ಸ್ಮೃತಿ ಏನೇ ಮಾಡಿದ್ರು ಸುದ್ದಿಯಾಗುತ್ತೆ. ಸ್ಮೃತಿಯನ್ನು ನೋಡ್ಬೇಕು ಅನ್ನೋ ಕ್ರೇಜ್‌ಗೆ ಅಭಿಮಾನಿಗಳು ಮ್ಯಾಚ್‌ಗೆ ಹೋಗ್ತಾರೆ. ಸ್ಮೃತಿ ಆರ್‌ಸಿಬಿಗೆ ಕಾಲಿಟ್ಟಾಗಲೇ ಕರ್ನಾಟಕದ ಜನತೆ ಸ್ಮೃತಿಗೆ ತಮ್ಮ ಹಾರ್ಟ್‌ನಲ್ಲಿ ಜಾಗ ರಿಸರ್ವ್ ಮಾಡಿದ್ರು. ಈಗ ಎರಡನೇ ಸೀಸನ್ ಶುರುವಾದ ಮೇಲಂತೂ ನಮ್ಮ ಹುಡುಗ್ರು ಮೀಮ್ಸ್‌  ತುಂಬೆಲ್ಲಾ ಬರೀ ಸ್ಮೃತಿ ಜಪಾನೇ ಮಾಡ್ತಿದ್ದಾರೆ. ಕೆಲವ್ರು ಗ್ಯಾಲರಿಯಲ್ಲೇ ಕುಳಿತು ಸ್ಮೃತಿಗೆ ಲವ್ ಪ್ರಪೋಸ್ ಮಾಡ್ತಿದ್ದಾರೆ.

ನಮ್ಮನೆ ಸೊಸೆಯಾಗ್ತೀಯಾ ಅಂತಾ ಕೇಳ್ತಿರೋ ಸ್ಮೃತಿ ಮಂದಾನ ಫ್ಯಾನ್ಸ್ ಗೆ ಹಾರ್ಟ್​ ಬ್ರೇಕಾಗುವಂಥ ನ್ಯೂಸ್ ಇದು. ಆರ್​​ಸಿಬಿಯ ಈ ಬ್ಯೂಟಿ ಬಾಲಿವುಡ್​ನ ಫೇಮಸ್ ಸಿಂಗರ್ ಪಾಲಕ್ ಮುಚ್ಚಲ್ ಅವರ ಸಹೋದರನ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಪಲಾಶ್ ಮುಚ್ಚಲ್ ಅವರ ಬರ್ತಡೇ ದಿನ ಸ್ಮೃತಿ ಜೊತೆಗಿನ ಫೋಟೋಸ್ ವೈರಲ್ ಆಗಿದ್ದವು. ಇದಕ್ಕೆ ಕೆಲವ್ರು ಹಾರ್ಟ್​ ಬ್ರೇಕ್​​ ಎಮೋಜಿ ಹಾಕಿ ಬೇಸರ ಹೊರಹಾಕಿದ್ರೆ ಇನ್ನೂ ಕೆಲವರು ಲವ್​ಬರ್ಡ್ಸ್​ ಎಂದು ಕರೆದಿದ್ದರು. ಹಾಗಂತ ಸ್ಮೃತಿ ಮತ್ತು ಪಲಾಶ್ ಒಟ್ಟಿಗೆ ಕಾಣಿಸಿಕೊಂಡಿದ್ದು ಅದೇ ಮೊದಲೇನಲ್ಲ. ಜೊತೆಗೆ ಪಲಾಶ್ ತಮ್ಮ ಕೈ ಮೇಲೆ SM18 ಅಂತ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಎಸ್​ಎಮ್ ಅಂದ್ರೆ ಸ್ಮೃತಿ ಮಂದಾನ.. ನಂಬರ್ 18 ಮಂದನಾ ಅವ್ರ ಜೆರ್ಸಿ ನಂಬರ್​. ಹೀಗಾಗಿ ಇಬ್ಬರು ಪ್ರೀತಿ ಬಲೆಯಲ್ಲಿ ಬಿದ್ದಿರೋದು ಪಕ್ಕಾ ಎನ್ನಲಾಗಿದೆ. ಆದ್ರೆ ಇಬ್ರೂ ಜಸ್ಟ್ ಫ್ರೆಂಡ್ಸಾ ಅಥವಾ ಲವ್ ಬರ್ಡ್ಸಾ ಅನ್ನೋದ್ರ ಬಗ್ಗೆ ಯಾರೊಬ್ರೂ ಕ್ಲಾರಿಟಿ ಕೊಟ್ಟಿಲ್ಲ.  ಹೀಗಾಗಿ ನಮ್ಮ ಆರ್​ಸಿಬಿ ಹುಡುಗ್ರು ಗುಂಡಿಗೆನ ಗಟ್ಟಿ ಮಾಡ್ಕೊಳಿ.

ಒಟ್ಟಾರೆ ಆರ್‌ಸಿಬಿ ವುಮೆನ್ಸ್‌ ಟೀಮ್‌ನ ಸಾರಥ್ಯ ವಹಿಸಿರೋ ಸ್ಮೃತಿ ಮಂದಾನ ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಪುರುಷರ ತಂಡದಲ್ಲಿ ಆರ್‌ಸಿಬಿಗೆ ಕಪ್‌ ಗೆಲ್ಲೋ ಆಸೆ ಇದುವರೆಗೂ ಈಡೇರಿಲ್ಲ. ಆದ್ರೆ ಈ ಬಾರಿ ಮಹಿಳೆಯರಾದ್ರು ಕಪ್‌ ತಂದುಕೊಡ್ತಾರಾ ಅನ್ನೋದೇ ಕುತೂಹಲ ಹುಟ್ಟಿಸಿದೆ. ಆಟದ ಹೊರತಾಗಿ ಯಾವುದೇ ಸೆಲೆಬ್ರಿಟಿಗೂ ಸಿಗದಷ್ಟು ಬೆಂಬಲ, ಪ್ರೀತಿ ವಿರಾಟ್ ಕೊಹ್ಲಿ ಹಾಗೂ ಸ್ಮೃತಿ ಅವರಿಗೆ ಸಿಗುತ್ತಿದೆ. ನಿಷ್ಠಾವಂತ ಅಭಿಮಾನಿಗಳನ್ನು ಹೊಂದಲು ಅದೃಷ್ಟ ಮಾಡಿದ್ವಿ ಅಂತಾ ಕೊಹ್ಲಿ ಮತ್ತು ಸ್ಮೃತಿ ಹೇಳಿಕೊಂಡಿದ್ದಾರೆ.

Shwetha M