ಸ್ಮೃತಿಗಾಗಿ ಬೃಂದಾವನದಲ್ಲಿ ಪಲಾಶ್ – ಇನ್ನಾದ್ರೂ ಮದುವೆಗೆ ಒಪ್ಪುತ್ತಾರಾ ಸ್ಮೃತಿ?
ಸ್ಮೃತಿ ಪಲಾಶ್ಗೆ ಗುರು ಬಲ

ಸ್ಮೃತಿಗಾಗಿ ಬೃಂದಾವನದಲ್ಲಿ ಪಲಾಶ್  – ಇನ್ನಾದ್ರೂ ಮದುವೆಗೆ ಒಪ್ಪುತ್ತಾರಾ ಸ್ಮೃತಿ?ಸ್ಮೃತಿ ಪಲಾಶ್ಗೆ  ಗುರು ಬಲ

ಆರ್‌ಸಿಬಿ ಕ್ರಶ್,  ಟೀಂ ಇಂಡಿಯಾದ ಕ್ವೀನ್ ಸ್ಮೃತಿ ಮಂದಾನ ಮದುವೆ ನಿಂತಿದ್ದು ನಿಮ್ಗೆಲ್ಲಾ ಗೊತ್ತಿದೆ. 4 ವರ್ಷಗಳಿಂದ ಪ್ರೀತಿಸಿ ಅವನನ್ನೇ ಮದುವೆ ಆಗೋಕೆ ಹೋದ ಸ್ಮೃತಿ ಬದುಕಲ್ಲಿ ಪ್ರೀತಿಸಿದವನೇ ಆಟ ಆಡಿದ್ದ.. ಮೇರಿ ಡಿಕೋಸ್ಟಾ ಜೊತೆ ಪಲಾಶ್ ಮಾಡಿದ ಚಾಟ್ ವೈರಲ್ ಆಯ್ತು.. ಈ  ವಿಷ್ಯ ಗೊತ್ತಾಗಿಯೇ ಸ್ಮೃತಿ ತಂದೆಗೆ ಹೃದಯಘಾತ ಆಯ್ತು.. ಹೀಗಾಗಿಯೇ ಮದುವೆ ಮರಿದು ಬಿತ್ತು ಅನ್ನೋದು ಇಡೀ ಜತ್ತಿಗೆ ಗೊತ್ತಿರೋ ವಿಷ್ಯ. ಮದುವೆ ನಿಂತ ಬೆನ್ನಲ್ಲೇ ಸ್ಮೃತಿ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಿಂದ ಮದುವೆಯ ಫೋಟೊಗಳನ್ನು ಡಿಲೀಟ್ ಮಾಡಿದ್ರು. ಆದ್ರೆ ಇದೇ ಕಾರಣಕ್ಕೆ ಮದುವೆ ಕ್ಯಾನ್ಸಲ್ ಆಯ್ತು ಅಂತ ಪಲಾಶ್ ಆಗಲಿ ಸ್ಮೃತಿ ಆಗಲಿ,  ಇವರ ಕುಟುಂಬದ ಸದಸ್ಯರಾಗಲಿ ಎಲ್ಲೂ ಹೇಳಿಲ್ಲ.

ಮದುವೆ ನಿಂತು ಎರಡು ವಾರ ಕಳೆದಿದೆ. ಸ್ಮೃತಿ ತಂದೆ ಕೂಡ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ. ಎಲ್ಲವೂ ಸರಿ ಆಗಿದೆ. ಇವರ ಕುಟುಂಬವೇ ಹೇಳಿದ್ದಂತೆ ಕೇವಲ ಸ್ಮೃತಿ ತಂದೆಗೆ ಹೃದಯಾಘಾತ ಆಗಿದ್ದಕ್ಕೆ ಮದುವೆ ನಿಂತು ಹೋಗಿದ್ರೆ, ಇಷ್ಟೋತ್ತಿಗೆ ಮದುವೆ ಹೊಸ ಡೇಟ್ ಅನೌನ್ಸ್ ಮಾಡಬೇಕಿತ್ತು. ಸೋಷಿಯಲ್ ಮೀಡಿಯಾದಲ್ಲಿ ಸ್ಮೃತಿ ಮತ್ತು ಪಲಾಶ್ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕಿತ್ತು. ಫ್ಯಾನ್ಸ್‌ ಗೆ  ಮದುವೆ ನಿಂತ ಬಗ್ಗೆ ಅಪ್ಡೆಟ್ ಕೊಡಬೇಕಿತ್ತು. ಆದ್ರೆ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರು ಕೇವಲ ಬಯೋದಲ್ಲಿ ಇಮೋಜ್ ಚೇಂಜ್ ಮಾಡಿದ್ದು ಬಿಟ್ಟು ಬೇರೆ ಯಾವ ಮಾಹಿತಿ ಕೂಡ ಹಂಚಿಕೊಂಡಿಲ್ಲ. ಮದುವೆ ಆಗ್ತಾರಾ ಆಗಲ್ವಾ ಅನ್ನೋದು ಕೂಡ ಕನ್ಫರ್ಮ್ ಇಲ್ಲ..ಇದೇ ಡಿಸೆಂಬರ್ 7ಕ್ಕೆ ಸ್ಮೃತಿ ಮಂಧಾನ ಮತ್ತು ಪಲಾಶ್ ಮದುವೆ ಅನ್ನೋ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದ್ರೆ ಇದ್ರ ಬಗ್ಗೆ ಸ್ಪಷ್ಟನೆ ಕೊಟ್ಟ ಸ್ಮೃತಿ ಮಂಧಾನ ಅಣ್ಣ ಡಿಸೆಂಬರ್ 7ಕ್ಕೆ ಸ್ಮೃತಿ ಮದುವೆ  ಅನ್ನೋದು ಸುಳ್ಳು.. ದಯವಿಟ್ಟು ಸುಳ್ಳು ಮಾಹಿತಿಯನ್ನ ಹಂಚಬೇಡಿ ಅನ್ನೋ ಸ್ಪಷ್ಟನೆ ಕೊಟ್ಟಿದ್ದಾರೆ.

ಮದುವೆ ನಿಂತ ಮೇಲೆ ಸ್ಮೃತಿ ಎಲ್ಲೂ ಕೂಡ ಕಾಣಿಸಿಕೊಂಡಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಒಂದೇ ಒಂದು ಪೋಸ್ಟ್ ಕೂಡ ಹಾಕಿಲ್ಲ.  ಆದ್ರೆ ಪಲಾಶ್ ಮಾತ್ರ 4-5 ದಿನಗಳ ಹಿಂದೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ಪಲಾಶ್ ನಂತ್ರ ಪ್ರೇಮಾನಂದ ಸ್ವಾಮೀಜಿ ಆಶ್ರಮಕ್ಕೆ ಭೇಟಿ ನೀಡಿದ್ದಾರೆ.  ಮಾಸ್ಕ್ ಧರಿಸಿ ಕುಳಿತಿರುವ ಪಲಾಶ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಬೃಂದಾವನದಲ್ಲಿರುವ ಈ ಆಶ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಭೇಟಿ ನೀಡುತ್ತಾರೆ. ನಮ್ಮ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ತಮ್ಮ ಮಕ್ಕಳೊಂದಿಗೆ ಆಶ್ರಮಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆರ್ಶೀವಾದ ಪಡೆದುಕೊಂಡಿದ್ದರು. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಸಹ ಇತ್ತೀಚೆಗೆ ಈ ಆಶ್ರಮಕ್ಕೆ ಭೇಟಿ ನೀಡಿದ್ದರು. ಇದ್ರ ಬೆನ್ನಲ್ಲೇ ಪಲಾಶ್ ಕೂಡ ಈ ಆಶ್ರಮಕ್ಕೆ ಭೇಟಿ ನೀಡಿದ್ದು, ಎಲ್ಲವೂ ಸರಿ ಆಗ್ಲಿ ಅಂತ ಬೇಡಿಕೊಳ್ಳುವುದ್ದಕ್ಕೆ ಹೋಗಿರಬೇಕು ಅಂತ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ. ಒಂದು ವೇಳೆ ಪಲಾಶ್ ಮೋಸ ಮಾಡಿಲ್ಲ ಅಂದಿದ್ರೆ ಇಷ್ಟೋತ್ತಿಗೆ ನಾನು ಹಾಗೇ ಮಾಡಿಲ್ಲ, ಇದೆಲ್ಲಾ ಸುಳ್ಳು ಅಂತ ತಿಳಿಸಬೇಕಿತ್ತು. ಆದ್ರೆ ಪಲಾಶ್ ಏನೋ ಹೇಳದೇ ಸೈಲೆಂಟ್ ಆಗಿದ್ದಾರೆ. ಇದು ಹಲವು ಅನುಮಾನಕ್ಕೆ ಕಾರಣವಾಗಿದ್ದು, ಇವರ ಪ್ರೀತಿ ಮುರಿದು ಬಿದ್ದಿರೋದು ಎದ್ದು ಕಾಣ್ತಿದೆ.  ಕ್ರಿಕೆಟ್ ಕರಿಯರ್​ನಲ್ಲಿ ಸಣ್ಣ ಕಪ್ಪುಚುಕ್ಕೆಯೂ ಇಲ್ಲದಂತೆ ದಿನದಿಂದ ದಿನಕ್ಕೆ ಚರಿತ್ರೆ ಸೃಷ್ಟಿಸುತ್ತಾ ಹೊರ  ಹೊರಟಿರೋ ಸ್ಮೃತಿ ಮಂದಾನ ಪರ್ಸನಲ್ ಲೈಫ್​ನಲ್ಲಿ ಎಡವಿದ್ದು ನಿಜಕ್ಕೂ ವಿಪರ್ಯಾಸ.

Kishor KV