ನವೆಂಬರ್ 23ಕ್ಕೆ ಸ್ಮೃತಿ ಮಂಧಾನ ಮದುವೆ – ಗೆಳೆಯ ಪಲಾಶ್ ಮುಚ್ಚಲ್ ಜೊತೆ ವಿವಾಹಕ್ಕೆ ಸಿದ್ಧತೆ

ಭಾರತ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂಧಾನ ಅವರು ಅಧಿಕೃತವಾಗಿ ಮತ್ತೊಂದು ಇನ್ನಿಂಗ್ಸ್ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ. ಗೆಳೆಯ ಪಲಾಶ್ ಮುಚ್ಚಲ್ ಜೊತೆ ನಿಶ್ಚಿತಾರ್ಥ ನೆರವೇರಿದೆ. ನವೆಂಬರ್ 23ಕ್ಕೆ ಸ್ಮೃತಿ ಮಂಧಾನ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಇದನ್ನೂ ಓದಿ:8 ಕ್ಯಾಪ್ಟನ್ಸ್ ಫಿಕ್ಸ್.. RR & KKR? – 2026ರ IPLನಲ್ಲಿ ಇಬ್ಬರಿಗೆ ಲಕ್?
ಭಾರತದ ಮಹಿಳಾ ತಂಡದ ಸ್ಟಾರ್ ಕ್ರಿಕೆಟರ್ ಸ್ಮೃತಿ ಮಂದಾನ ತಮ್ಮ ದೀರ್ಘಕಾಲದ ಗೆಳೆಯ ಪಲಾಶ್ ಮುಚ್ಚಲ್ ಜೊತೆ ಮದುವೆಯಾಗಲಿದ್ದಾರೆ. ಪಲಾಶ್ ಅವರು ಚಲನಚಿತ್ರ ನಿರ್ಮಾಪಕ ಮತ್ತು ಗಾಯಕ ಪಾಲಕ್ ಮುಚ್ಚಲ್ ಅವರ ಕಿರಿಯ ಸಹೋದರ. ಸ್ಮೃತಿ ಮಂಧಾನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ರೀಲ್ ಪೋಸ್ಟ್ ಮಾಡುವ ಮೂಲಕ ಪಲಾಶ್ ಅವರೊಂದಿಗಿನ ಎಂಗೇಜ್ಮೆಟ್ ಆಗಿರುವುದನ್ನು ದೃಢಪಡಿಸಿದ್ದಾರೆ. ಟೀಮ್ ಇಂಡಿಯಾದ ಮತ್ತೊಬ್ಬ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ಅವರು ಕೂಡ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸ್ಮೃತಿ ನಿಶ್ಚಿತಾರ್ಥದ ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ, ಮಂಧಾನ ತಮ್ಮ ಎಂಗೇಜ್ಮೆಟ್ ಅನ್ನು ಎಲ್ಲಾ ಟೀಮ್ ಇಂಡಿಯಾ ಆಟಗಾರ್ತಿರೊಂದಿಗೆ ಸಂಭ್ರಮಿಸುತ್ತಿರುವುದನ್ನು ಕಾಣಬಹುದು.
ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ನವೆಂಬರ್ 23 ರಂದು ವಿವಾಹವಾಗಲಿದ್ದಾರೆ. ಈ ಅದ್ಧೂರಿ ಮದುವೆಯ ಆಮಂತ್ರಣ ಪತ್ರಗಳನ್ನು ಇಂದೋರ್‌ನ ಮುಚ್ಚಲ್ ಕುಟುಂಬದ ಸಂಬಂಧಿಕರು ಮತ್ತು ಅತಿಥಿಗಳಿಗೆ ವಿತರಿಸಲಾಗಿದೆ. ಮದುವೆ ಮತ್ತು ಅದರ ನಂತರ ನಡೆಯಲಿರುವ ಪಾರ್ಟಿ ಸಾಂಗ್ಲಿಯಲ್ಲಿ ನಡೆಯಲಿದೆ. ವಿವಾಹದ ನಂತರ ಇಂದೋರ್‌ನಲ್ಲಿ ಆರತಕ್ಷತೆ ನಡೆಯಲಿದೆ.

ನೋಡಿರಿ

