ನಿಮ್ಮ ಸ್ಮಾರ್ಟ್ ಫೋನ್ ಬ್ಯಾಟರಿ ಊದಿಕೊಂಡಿದ್ಯಾ? – Smart Phone ತುಂಬಾ ಬಿಸಿಯಾದ್ರೆ ಬ್ಲಾಸ್ಟ್ ಆಗುತ್ತಾ?

ಕೆಲವೊಮ್ಮೆ ಸ್ಮಾರ್ಟ್ ಫೋನ್ ಗಳ ಬ್ಯಾಟರಿಗಳು ಊದಿಕೊಂಡಿರುತ್ತವೆ. ನೀವೇನಾದ್ರೂ ಅದನ್ನ ನೆಗ್ಲೆಕ್ಟ್ ಮಾಡಿದ್ರೆ ಅಪಾಯ ಗ್ಯಾರಂಟಿ. ಹಿಂದೆಲ್ಲಾ ಕೀಪ್ಯಾಡ್ ಮೊಬೈಲ್ ಗಳ ಬ್ಯಾಟರಿಗಳು ದಪ್ಪಗಾಗುತ್ತಿದ್ದವು. ಈಗ ಸ್ಮಾರ್ಟ್ ಫೋನ್ ಗಳಲ್ಲೂ ಬ್ಯಾಟರಿಗಳು ಊದಿಕೊಳ್ಳುತ್ತವೆ. ನೀವೇನಾದ್ರೂ ಕೇರ್ಲೆಸ್ ಮಾಡಿದ್ರೆ ಬ್ಲಾಸ್ಟ್ ಆಗುವ ಚಾನ್ಸಸ್ ಇರುತ್ತೆ.
ಇದನ್ನೂ ಓದಿ : ಈ ಗ್ರಾಮದಲ್ಲಿ ಪಕ್ಷಿಗಳೂ ಆತ್ಮಹತ್ಯೆ ಮಾಡಿಕೊಳ್ಳುತ್ತವೆ – ಹಿಂಡು ಹಿಂಡು ಪಕ್ಷಿಗಳನ್ನು ಕೊಲ್ಲುತ್ತಿವೆಯಾ ಆತ್ಮಗಳು..?
ಕೆಲವರ ಮೊಬೈಲ್ ಗಳಲ್ಲಿ ಅಗತ್ಯಕ್ಕಿಂತ್ಲೂ ಹೆಚ್ಚು ಆ್ಯಪ್ಗಳಿರುತ್ತದೆ. ಇದ್ರಿಂದ ಚಾರ್ಜ್ ಬೇಗ ಖಾಲಿಯಾಗುತ್ತೆ. ಹೆಚ್ಚಿನ ಆ್ಯಪ್ಗಳು ಜಿಪಿಎಸ್, ಕ್ಯಾಮೆರಾ ಅಥವಾ ವಿಡಿಯೋ ಕಾಲ್ಗಳ ಆ್ಯಕ್ಸಸ್ ಕೇಳುತ್ತವೆ. ಇದ್ರಿಂದ ಕೂಡ ಪವರ್ ಮೇಲೆ ಹೊಡೆತ ಬಿಳುತ್ತದೆ. ಅಲ್ಲದೆ ಕೆಲವ್ರು ಌಪ್ ಓಪನ್ ಮಾಡಿದ ಮೇಲೆ ಅದನ್ನ ಮಿನಿಮೈಸ್ ಮಾಡ್ತಾರೆ. ಹೀಗಾಗಿ ಆ ಌಪ್ ಬ್ಯಾಕ್ಗ್ರೌಂಡ್ನಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ. ತುಂಬಾ ಸಮಯದವರೆಗೆ ನಿರಂತರವಾಗಿ ವಿಡಿಯೋ ನೋಡೋದ್ರಿಂದ ಕೂಡ ಬ್ಯಾಟರಿ ಬಿಸಿಯಾಗುತ್ತೆ. ಹೀಗಾಗಿ ಡಿಸ್ ಪ್ಲೇ ಬ್ರೈಟ್ನೆಸ್ ಕಡಿಮೆ ಮಾಡಿ, ಬಳಸದೇ ಇದ್ದಾಗ ಬ್ಲೂಟೂತ್, ವೈ-ಫೈ ಆಫ್ ಮಾಡುವ ಮೂಲಕ ನೀವು ಬ್ಯಾಟರಿ ಸೇವ್ ಮಾಡಬಹುದು. ಹಾಗೇ ಅನಗತ್ಯ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡುವುದು ಒಳ್ಳೆಯದು.