ಸ್ಮಾರ್ಟ್ ಫೋನ್ ಪಕ್ಕದಲ್ಲಿ ಇಟ್ಟುಕೊಂಡು ಮಲಗಿದರೆ ಹುಷಾರ್ – ನಿಮಗೂ ಕಾಡಬಹುದು ಈ ಸಮಸ್ಯೆಗಳು

 ಸ್ಮಾರ್ಟ್ ಫೋನ್ ಪಕ್ಕದಲ್ಲಿ ಇಟ್ಟುಕೊಂಡು ಮಲಗಿದರೆ ಹುಷಾರ್ – ನಿಮಗೂ ಕಾಡಬಹುದು ಈ ಸಮಸ್ಯೆಗಳು

ಈಗಂತೂ ಸ್ಮಾರ್ಟ್ ಫೋನ್ ಜಮಾನ. ಬೆಳಗ್ಗೆ ಎದ್ದಾಗಿಂದ ಹಿಡಿದು ರಾತ್ರಿ ಮಲಗೋವರೆಗೂ ಮೊಬೈಲ್ ಕೈಯಲ್ಲೇ ಇರಬೇಕು. ಅದೆಷ್ಟರ ಮಟ್ಟಿಗೆ ಅಂದ್ರೆ ಕೆಲವರು ಫೋನ್​ನ ತಮ್ಮ ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗುತ್ತಾರೆ. ಆದರೆ ಇದು ಸಖತ್ ಡೇಂಜರಸ್ ಅನ್ನೋದು ಸಂಶೋಧನೆಯಿಂದ ಗೊತ್ತಾಗಿದೆ.

ಮೊಬೈಲ್​ನ ಹತ್ತಿರ ಇಟ್ಟುಕೊಂಡು ಮಲಗೋರು ಹಲವು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ ಅಂತಾ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಮೊಬೈಲ್ ಫೋನ್​ನಿಂದ ವಿಕಿರಣಗಳು ಹೊರಬರುತ್ತವೆ. ಹೀಗೆ ಬರುವ ವಿಕಿರಣಗಳು ಸ್ನಾಯು ನೋವು, ತಲೆನೋವಿಗೆ ಕಾರಣವಾಗುತ್ತವೆ. ಫೋನ್​ಗಳಿಂದ ಬರುವ ನೀಲಿ ಬೆಳಕು ನಿದ್ರೆಗೆ ತೊಂದರೆ ಉಂಟು ಮಾಡುತ್ತದೆ. ಇದನ್ನ ತಪ್ಪಿಸಲು ಮಲಗುವ ವೇಳೆ ಸ್ಮಾರ್ಟ್ ಫೋನ್​ನ ಕನಿಷ್ಠ ಮೂರು ಅಡಿ ದೂರದಲ್ಲಿ ಇಡಬೇಕು. ಹೀಗೆ ಮಾಡೋದ್ರಿಂದ ಮೊಬೈಲ್ ಫೋನ್ ಹೊರಸೂಸುವ ರೆಡಿಯೋ ಫ್ರೀಕ್ವೆನ್ಸಿ ಎಲೆಕ್ಟ್ರೋ ಮ್ಯಾಗ್ನೆಟಿಕ್ ಶಕ್ತಿ ಕಡಿಮೆಯಾಗಿ ಯಾವುದೇ ಅಪಾಯ ಆಗೋದಿಲ್ಲ.

ಇದನ್ನೂ ಓದಿ : ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಡೆಂಘೀ ಪ್ರಕರಣ – ಸೊಳ್ಳೆ ನಿಯಂತ್ರಣಕ್ಕೆ ಡ್ರೋನ್‌ ಬಳಕೆ!

ಮೊಬೈಲ್​ ಫೋನನ್ನ ಪಕ್ಕದಲ್ಲೇ ಇಟ್ಟುಕೊಂಡು ಮಲಗುವುದರಿಂದ ನಿದ್ರಾ ಸಮಸ್ಯೆ ಬರಬಹುದು. ಅಷ್ಟೇ ಅಲ್ಲ ಭಯಂಕರ ಕನಸುಗಳೂ ಬೀಳಬಹುದು ಅಂತಾರೆ ಸೈಂಟಿಸ್ಟ್. ಇನ್ನೊಂದು ಇಂಟರೆಸ್ಟಿಂಗ್ ವಿಷಯವೆಂದರೆ. ಮೊಬೈಲ್​ಗೆ ಕಣ್ಣು ಕೀಲಿಸಿಕೊಂಡೇ ಕೂತಿದ್ದು ಮಲಗೋದು, ತಡರಾತ್ರಿಯವರೆಗೆ ಮೊಬೈಲ್ ಬಳಸಿ ಮಲಗೋದು. ಪಕ್ಕದಲ್ಲೇ ಮೊಬೈಲ್ ಫೋನ್ ಇಟ್ಟುಕೊಂಡು ಮಲಗಿದರೆ ನಿದ್ರಾ ಸಮಸ್ಯೆ ಬರುತ್ತೆ ನಿಜ. ನಿದ್ರೆಯ ಸಮಸ್ಯೆ ಇದ್ದರೆ ಆರೋಗ್ಯದ ಸಮಸ್ಯೆಯೂ ಖಂಡಿತಾ ಉಂಟಾಗುತ್ತೆ.

ಇನ್ನೂ ಕೆಲವು ಮಹಿಳೆಯರು ಮೊಬೈಲ್ ನ ಮೇಲಿನ ಒಳ ಉಡುಪಿನಲ್ಲಿ ಇಟ್ಟುಕೊಳ್ಳುವುದು ಅಭ್ಯಾಸ. ಅದು ನಿಜಕ್ಕೂ ಡೇಂಜರಸ್ ಅಭ್ಯಾಸ. ಯಾಕೆಂದರೆ ಸತತವಾಗಿ ಹಾಗೆ ಮೊಬೈಲ್ ಇಟ್ಟುಕೊಳ್ಳುವುದರಿಂದ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇದೆಯಂತೆ. ಅಷ್ಟೇ ಅಲ್ಲ, ಗಂಟೆಗಟ್ಟಲೆ ಮೊಬೈಲ್ ಫೋನನ್ನ ಕಿವಿ ಬಳಿ ಇಟ್ಟುಕೊಂಡು ಮಾತಾಡುವವರಿಗೂ ಕಿವಿ ಮತ್ತು ದವಡೆಯಲ್ಲಿ ಕ್ಯಾನ್ಸರ್​ ಕಂಡುಬರುವ ಚಾನ್ಸಸ್ ಇದೆಯಂತೆ. ಹೀಗಾಗಿ ಮೊಬೈಲ್ ಬಳಕೆದಾರರು ಎಚ್ಚರಿಕೆಯಿಂದಿರಿ.

Shantha Kumari