ಆರೆಂಜ್ ಆರ್ಮಿಗೆ ಕನ್ನಡಿಗ ಎಂಟ್ರಿ! SRH ಗೇಮ್ ಚೇಂಜರ್ ಆಗ್ತಾನಾ ಸ್ಮರಣ್?
ಕಾವ್ಯಾ ಕಣ್ಣಿಗೆ ಬಿದ್ದಿದ್ದೇಗೆ ರವಿಚಂದ್ರನ್?

ಆರೆಂಜ್ ಆರ್ಮಿಗೆ ಕನ್ನಡಿಗ ಎಂಟ್ರಿ! SRH ಗೇಮ್ ಚೇಂಜರ್ ಆಗ್ತಾನಾ ಸ್ಮರಣ್?ಕಾವ್ಯಾ ಕಣ್ಣಿಗೆ ಬಿದ್ದಿದ್ದೇಗೆ ರವಿಚಂದ್ರನ್?

ಕರ್ನಾಟಕದ ಸ್ಪೋಟಕ ಎಡಗೈ ದಾಂಡಿಗ ಸ್ಮರಣ್ ರವಿಚಂದ್ರನ್  ಸನ್​ರೈಸರ್ಸ್​ ಹೈದರಾಬಾದ್  ಫ್ರಾಂಚೈಸಿ ಸ್ಮರಣ್ ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಆಯ್ಕೆ ಮಾಡಿಕೊಂಡಿದೆ. 21 ವರ್ಷದ ಉದಯೋನ್ಮುಖ ಎಡಗೈ ಬ್ಯಾಟರ್ ಅನ್ನು 30 ಲಕ್ಷ ರೂಪಾಯಿ ಮೂಲಬೆಲೆಗೆ ಹೈದರಾಬಾದ್ ಫ್ರಾಂಚೈಸಿಯು ಖರೀದಿಸಿದೆ. ಇವರು ಕರ್ನಾಟಕ ರಣಜಿ ತಂಡದ ಆಟಗಾರ. ಕಳೆದ ಬಾರಿ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಗೆಲ್ಲುವಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ರು.  ಫೈನಲ್ ನಲ್ಲಿ 101 ರನ್ ಬಾರಿಸುವ ಮೂಲಕ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು.

 ಸ್ಮರಣ್ ಆರೆಂಜ್ ಆರ್ಮಿ ಪಾಲು

ಕಳೆದ ಹರಾಜು ವೇಳೆ ಅನ್ ಸೋಲ್ಡ್ ಆಗಿದ್ದ ಅವರು 2025ರ ಹರಾಜು ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇದರಿಂದಾಗಿ ಹರಾಜು ಪ್ರಕ್ರಿಯೆಯಲ್ಲಿ ಅವರನ್ನು ಖರೀದಿಸಲು ಮನಸ್ಸು ಮಾಡದ ಫ್ರಾಂಚೈಸಿಗಳು ಕೈ ಕೈ ಹಿಸುಕಿಕೊಳ್ಳುವಂತಾಗಿತ್ತು. ಇದೀಗ ಆರೆಂಜ್ ಆರ್ಮಿ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಸ್ಮರಣ್ ಅವರು ಏಳು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಪಂಜಾಬ್ ವಿರುದ್ಧ ದ್ವಿಶತಕ ಸೇರಿದಂತೆ 64.50 ಸರಾಸರಿಯಲ್ಲಿ 500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 2024 ರಲ್ಲಿ ಪದಾರ್ಪಣೆ ಮಾಡಿದ ಅವರು 10 ಲಿಸ್ಟ್ ಎ ಪಂದ್ಯಗಳನ್ನು ಆಡಿದ 72.16 ಸರಾಸರಿಯಲ್ಲಿ 433 ರನ್ ಗಳಿಸಿದ್ದಾರ. ಅದರಲ್ಲಿ, ಎರಡು ಶತಕಗಳು ಸೇರಿವೆ. ಇನ್ನು ಚುಟುಕು ಕ್ರಿಕೆಟ್ ನಲ್ಲಿಯೂ ಅವರು ಎತ್ತಿದ ಕೈ. ಆಡಿರುವ ಆರು ಟಿ20 ಪಂದ್ಯಗಳಲ್ಲಿ 170 ಸ್ಟ್ರೈಕ್ ರೇಟ್‌ನಲ್ಲಿ 170 ರನ್ ಗಳಿಸಿದ್ದಾರೆ.

ಸಿಕೆ ನಾಯ್ಡು ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ಸಿಕೆ ನಾಯ್ಡು ಟ್ರೋಫಿಯಲ್ಲಿ ಅವರು ಒಟ್ಟು 829 ರನ್ ಕಲೆ ಹಾಕಿದಾಗಲೇ ಅವರು ಗಮನ ಸೆಳೆದಿದ್ದರು. ಇನ್ನು ಮಹಾರಾಜ ಟಿ20 ಟ್ರೋಫಿಯಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡದ ಪರವಾಗಿ ಆಡುವ ಇವರು 2024ರ ಸೀಸನ್ ನಲ್ಲಿ 43.14 ಸರಾಸರಿಯಲ್ಲಿ 302 ರನ್ ಕಲೆ ಹಾಕಿದ್ದರು. ಇದರಲ್ಲಿ 2 ಅರ್ಧಶತಕಗಳಿದ್ದವು.

ಇನ್ನೂ ಎಸ್‌ಆರ್‌ಹೆಚ್ ತಂಡದಲ್ಲಿ ಒಳ್ಳೆಯ ಬ್ಯಾಟ್ಸ್‌ಮನ್ಸ್ ಇದ್ದರು 6 ಪಂದ್ಯದಲ್ಲಿ ಕೇವಲ 2 ಪಂದ್ಯ ಮಾತ್ರ ಗೆದ್ದಿದೆ.  ಈಗ ನಮ್ಮ ಕನ್ನಡದ ಹುಡುಗ  ಸ್ಮರಣ್ ರವಿಚಂದ್ರನ್ ಎಂಟ್ರಿಕೊಟ್ಟಿದ್ದು, ಇನ್ನಾದ್ರೂ ಎಸ್‌ಆರ್‌ಹೆಚ್ ಲಕ್ ಬದಲಾಗುತ್ತಾ? ಸಿಕ್ಕ ಅವಕಾಶವನ್ನ ಸ್ಮರಣ್ ಹೇಗೆ ಬಳಸಿಕೊಳ್ಳುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

Kishor KV

Leave a Reply

Your email address will not be published. Required fields are marked *