ಚಪ್ಪಲಿ ಅಥವಾ ಶೂ ಕಚ್ಚಿ ಕಾಲಿಗೆ ಗಾಯವಾಗಿದ್ಯಾ? – ಕಡೆಗಣಿಸಿದ್ರೆ ಕಾಡುತ್ತೆ ಗಂಭೀರ ಸಮಸ್ಯೆ!

ಚಪ್ಪಲಿ ಅಥವಾ ಶೂ ಕಚ್ಚಿ ಕಾಲಿಗೆ ಗಾಯವಾಗಿದ್ಯಾ? – ಕಡೆಗಣಿಸಿದ್ರೆ ಕಾಡುತ್ತೆ ಗಂಭೀರ ಸಮಸ್ಯೆ!

ಇದು ಮಾರ್ಡನ್ ಯುಗ.. ತಮ್ಮ ಡ್ರೆಸ್ ಗೆ ತಕ್ಕಂತೆ ಜನರು  ವಿವಿಧ ರೀತಿಯ ಚಪ್ಪಲಿಗಳನ್ನು ಧರಿಸಿ ಸ್ಟೈಲಿಶ್ ಆಗಿ ಕಾಣಲು ಬಯಸುತ್ತಾರೆ. ಹೀಗಾಗಿ ದುಬಾರಿ ಶೂಗಳನ್ನು ಖರೀದಿಸುತ್ತಾರೆ. ಆದರೆ ಶೂ ನಮ್ಮ ಪಾದಗಳಿಗೆ ಸರಿ ಹೊಂದಲಿಲ್ಲ ಎಂದಾದರೆ ಪಾದಗಳ ಮೇಲೆ ಗುಳ್ಳೆಗಳಿಗೆ ಎಳುತ್ತೆ. ಇದ್ರಿಂದಾಗಿ ಕೆಲವು ದಿನಗಳ ಕಾಲ ನೋವು ತಿನ್ನಬೇಕಾಗುತ್ತೆ.

ಸಾಮಾನ್ಯವಾಗಿ ಹೊಸ ಪಾದರಕ್ಷೆ ನಮ್ಮ ಪಾದಗಳಲ್ಲಿ ಹೊಂದಿಕೊಳ್ಳುವವರೆಗೂ ಎಲ್ಲಾದರೊಂದು ಗಾಯವಾಗುತ್ತದೆ.  ಇದನ್ನೇ ಚಪ್ಪಲಿ ಕಚ್ಚುವುದು ಎನ್ನುತ್ತಾರೆ.  ಇದನ್ನ ಕಡೆಗಣಿಸಿದ್ರೆ ಗಂಭೀರ ಸಮಸ್ಯೆ ಕಾಣಿಸಿಕೊಳ್ಳೋ ಸಾಧ್ಯೆತೆಯಿದೆ. ಪಾದದಲ್ಲಿ ಯಾವುದಾದರೂ ಗಾಯ ಇದ್ರೆ ಶೂ ಧರಿಸಬಾರದು. ಈ ವೇಳೆ ಶೂ ಧರಿಸಿದ್ರೆ ಗಾಯವಾದ ಪ್ರದೇಶದಲ್ಲಿ ಬ್ಯಾಕ್ಟೀರಿಯಾಗಳು ಸಂಗ್ರಹಗೊಳ್ಳೋ ಸಾಧ್ಯತೆ ಇದೆ. ಬಳಿಕ ಇದು ಸೋಂಕಿಗೆ ಕಾರಣವಾಗಬಹುದು. ಇಂತಹ ಸಮಸ್ಯೆ ಎದುರಾದಾಗ ಕೆಲವೊಂದು ಟಿಪ್ಸ್ ಮೂಲಕ ಅದರಿಂದ ಹೊರಬರಬಹುದು.

ಇದನ್ನೂ ಓದಿ: ವಧು – ವರರಿಗಾಗಿಯೇ ವಿನ್ಯಾಸಗೊಳಿಸಿದ ಬೆಳ್ಳಿ ಚಪ್ಪಲಿ! – ಇದರ ಬೆಲೆ ಎಷ್ಟು ಗೊತ್ತಾ?

ಪಾದರಕ್ಷೆ ಕೊಳ್ಳಲು ಅಂಗಡಿಗಳಿಗೆ ಹೋದಾಗ ಒಮ್ಮೆ ಹಾಕಿಕೊಂಡು ಅತ್ತಿಂದಿತ್ತ ನಡೆಯಿರಿ. ಪಾದಗಳು ಎಲ್ಲಿಯಾದರೂ ಬಾಗುತ್ತದೆ, ಕಂಫರ್ಟ್ ಇಲ್ಲ ಅಂತಾ ಫೀಲ್ ಆದ್ರೆ ಆ ಶೂ ಅಥವಾ ಚಪ್ಪಲಿಯನ್ನು ಪರ್ಚೇಸ್ ಮಾಡ್ಬೇಡಿ. ಇನ್ನು ಶೂ ಧರಿಸಿದ ನಂತರ ಪಾದದ ತೊಂದರೆಗಳು ಕಾಣಿಸಿಕೊಂಡರೆ, ಅವುಗಳನ್ನು ಧರಿಸದೆ ಇರೋದು ಉತ್ತಮ.

ಸದಾ ಚಪ್ಪಲಿ ಮತ್ತು ಶೂಗಳನ್ನು ಕೊಳ್ಳುವ ಮುನ್ನ ಧರಿಸಿ ನಿಮ್ಮ ಪಾದಕ್ಕೆ ಅತಿ ಸೂಕ್ತವಾಗಿವೆ ಎಂದು ಖಚಿತಪಡಿಸಿದ ಬಳಿಕವೇ ಕೊಳ್ಳಿ. ಸದಾ ಶೂವನ್ನು ಸಾಕ್ಸ್ ಧರಿಸಿಯೇ ತೊಟ್ಟುಕೊಳ್ಳಿ. ಚಪ್ಪಲಿ ಅಥವಾ ಶೂ ಹೊಸದಿದ್ದಾಗ ಒಳಭಾಗದಲ್ಲಿ ಕೊಬ್ಬರಿ ಎಣ್ಣೆ ಅಥವಾ ವ್ಯಾಸೆಲಿನ್ ಹಚ್ಚಿದ ಬಳಿಕ ಧರಿಸಿ. ಪ್ರಾರಂಭದ ಒಂದೆರಡು ದಿನ ಮಾಡಿದರೆ ಸಾಕು. ವಿಶೇಷವಾಗಿ ಚರ್ಮದ ಚಪ್ಪಲಿ ಶೂಗಳಿಗೆ ಈ ಕ್ರಮವನ್ನು ಅನುಸರಿಸುವ ಮೂಲಕ ಇವು ಮೃದುವಾಗಿ ಕಚ್ಚದೇ ಇರಲು ಸಾಧ್ಯವಾಗುತ್ತದೆ.

Shwetha M