ಸ್ಲಿಮ್‌ ಲ್ಯಾಂಡರ್‌ ಸ್ವಾಫ್ಟ್‌ ಲ್ಯಾಂಡಿಂಗ್‌ ಸಕ್ಸಸ್‌! – ಚಂದ್ರನ ಮೇಲೆ ಇಳಿದ ಐದನೇ ದೇಶ ಜಪಾನ್‌

ಸ್ಲಿಮ್‌ ಲ್ಯಾಂಡರ್‌ ಸ್ವಾಫ್ಟ್‌ ಲ್ಯಾಂಡಿಂಗ್‌ ಸಕ್ಸಸ್‌! – ಚಂದ್ರನ ಮೇಲೆ ಇಳಿದ ಐದನೇ ದೇಶ ಜಪಾನ್‌

ಭಾರತ, ರಷ್ಯಾ, ಅಮೆರಿಕ ಮತ್ತು ಚೀನಾ ಈಗಾಗಲೇ ಚಂದ್ರನ ಮೇಲೆ ಕಾಲಿಟ್ಟು  ಯಶಸ್ಸು ಸಾಧಿಸಿವೆ. ಇದೀಗ ಮತ್ತೊಂದು ದೇಶ ಚಂದ್ರನ ಮೇಲೆ ಕಾಲಿಟ್ಟು ಸಕ್ಸಸ್‌ ಕಂಡಿದೆ.

ಹೌದು, ಭಾರತ, ರಷ್ಯಾ, ಅಮೆರಿಕ ಮತ್ತು ಚೀನಾದ ಬಳಿಕ ಇದೀಗ ಜಪಾನ್‌ ಚಂದ್ರನ ಮೇಲೆ ಕಾಲಿಟ್ಟಿದೆ.  ಜಪಾನ್‌ನ ಸ್ಲಿಮ್ ಮೂನ್ ಮಿಷನ್ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿದಿದೆ. ಈಗ ಜಪಾನ್ ಚಂದ್ರನ ಮೇಲ್ಮಯಲ್ಲಿ ಮೃದುವಾಗಿ ಲ್ಯಾಂಡಿಂಗ್ ಮಾಡಿದ ಐದನೇ ದೇಶವಾಗಿದೆ.

ಇದನ್ನೂ ಓದಿ: ಅಯೋಧ್ಯೆಗೆ ಒಂದು‌ ದಿನ‌ ಮೊದಲೇ ಹೊರಟ ಪ್ರಧಾನಮಂತ್ರಿ – ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಭರ್ಜರಿ ಸಿದ್ಧತೆ

SLIM ಎಂದರೆ ಸ್ಮಾರ್ಟ್ ಲ್ಯಾಂಡರ್ ಫಾರ್ ಇನ್ವೆಸ್ಟಿಗೇಟಿಂಗ್ ಮೂನ್ ಮಿಷನ್. ಲ್ಯಾಂಡಿಂಗ್‌ಗಾಗಿ 600×4000 ಕಿಮೀ ಪ್ರದೇಶವನ್ನು ಶೋಧಿಸಲಾಗಿದೆ ಎಂದು ಜಪಾನಿನ ಬಾಹ್ಯಾಕಾಶ ಸಂಸ್ಥೆ JAXA ಹೇಳಿದೆ. ಸ್ಲಿಮ್ ಈ ಪ್ರದೇಶದಲ್ಲಿ ಇಳಿದಿದೆ. ಈ ಸ್ಥಳವು ಚಂದ್ರನ ಧ್ರುವ ಪ್ರದೇಶದಲ್ಲಿದೆ. ವಾಹನವು ಲ್ಯಾಂಡಿಂಗ್‌ಗಾಗಿ ಆಯ್ಕೆ ಮಾಡಿದ ಸ್ಥಳದ ಬಳಿ ನಿಖರವಾಗಿ ಲ್ಯಾಂಡಿಂಗ್ ಮಾಡಿದೆ. ಏಕೆಂದರೆ ತನ್ನ ಬಾಹ್ಯಾಕಾಶ ನೌಕೆಯು ಲ್ಯಾಂಡಿಂಗ್ ಸೈಟ್‌ನಿಂದ 100 ಮೀಟ‌ರ್ ಒಳಗೆ ಇಳಿಯಬೇಕು ಎಂಬುದು ಜಪಾನ್‌ನ ಗುರಿಯಾಗಿತ್ತು. ಹಾಗಾಗಿ ಅವರು ಈ ಕೆಲಸದಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ.

ಈ ಲ್ಯಾಂಡಿಂಗ್ ಪ್ರದೇಶದ ಹೆಸರು ಶಿಯೋಲಿ ಕ್ರೇಟರ್. ಇದು ಚಂದ್ರನ ಮೇಲಿರುವ ಕಪ್ಪು ಚುಕ್ಕೆ ಎಂದು ಹೇಳಲಾಗುತ್ತದೆ. ಮತ್ತೊಂದು ಸಂಭವನೀಯ ಲ್ಯಾಂಡಿಂಗ್ ಪ್ರದೇಶ ಮೇರ್ ನೆಕ್ಟರಿಸ್ ಆಗಿದೆ. ಇದನ್ನು ಚಂದ್ರನ ಸಮುದ್ರ ಎಂದು ಕರೆಯಲಾಗುತ್ತದೆ. ಸ್ಲಿಮ್ ಸುಧಾರಿತ ಆಪ್ಟಿಕಲ್ ಮತ್ತು ಇಮೇಜ್ ಪ್ರೊಸೆಸಿಂಗ್ ತಂತ್ರಜ್ಞಾನವನ್ನು ಹೊಂದಿದೆ.

ಎಕ್ಸ್-ರೇ ಇಮೇಜಿಂಗ್ ಮತ್ತು ಸ್ಪೆಕ್ಟೋಸ್ಕೋಪಿ ಮಿಷನ್ (XRISM) ಸಹ SLIM ನೊಂದಿಗೆ ಹೋಗಿದೆ. ಇದು ಚಂದ್ರನ ಸುತ್ತ ಸುತ್ತುತ್ತದೆ ಮತ್ತು ಚಂದ್ರನ ಮೇಲೆ ಹರಿಯುವ ಪ್ಲಾಸ್ಮಾ ಮಾರುತಗಳನ್ನು ತನಿಖೆ ಮಾಡುತ್ತದೆ. ಇದರಿಂದ ವಿಶ್ವದಲ್ಲಿ ನಕ್ಷತ್ರಗಳು ಮತ್ತು ಗೆಲಕ್ಸಿಗಳ ಮೂಲವನ್ನು ತಿಳಿಯಬಹುದು. ಇದನ್ನು ಜಪಾನ್, ನಾಸಾ ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಜಂಟಿಯಾಗಿ ರಚಿಸಿದೆ.

Shwetha M