ಕೆಣಕಿ ಕೆಟ್ಟ ಭಾರತ.. ಗೆದ್ದ ಇಂಗ್ಲೆಂಡ್ – ಭಾರತಕ್ಕೆ ಸ್ಲೆಡ್ಜ್ ರಿವರ್ಸ್ ಆಯ್ತಾ?

ಕೆಣಕಿ ಕೆಟ್ಟ ಭಾರತ.. ಗೆದ್ದ ಇಂಗ್ಲೆಂಡ್ – ಭಾರತಕ್ಕೆ ಸ್ಲೆಡ್ಜ್ ರಿವರ್ಸ್ ಆಯ್ತಾ?

ಫಸ್ಟ್ ಇನ್ನಿಂಗ್ಸ್​ನಲ್ಲಿ ಉಭಯ ತಂಡಗಳ ಸ್ಕೋರ್ ಟೈ. ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಬಾಝ್ ಬಾಲೇ ನಮ್ಮ ಅಸ್ತ್ರ ಅಂತೇಳ್ತಿದ್ದ ಇಂಗ್ಲೆಂಡ್ ತಂಡ 192 ರನ್​ಗಳಿಗೆ ಆಲೌಟ್.. ಇನ್ನೇನು ಟೀಂ ಇಂಡಿಯಾದಲ್ಲಿ ಶತಕವೀರರೇ ಇದ್ದಾರೆ. ಅದೂ ಅಲ್ದೇ ಕ್ಯಾಪ್ಟನ್ ಶುಭ್​ಮನ್ ಗಿಲ್ ಸೆಕೆಂಡ್ ಮ್ಯಾಚಲ್ಲಿ ಡಬಲ್ ಸೆಂಚುರಿ. ಇದ್ಯಾವ ಟಾರ್ಗೆಟ್. ವಿಕೆಟ್​​ಲೆಸ್ ಆಗಿ ಟಾರ್ಗೆಟ್ ರೀಚ್ ಆದ್ರೂ ಆಗ್ಬೋದು ಅಂತಾ ಕೋಟ್ಯಂತರ ಭಾರತೀಯ ಅಭಿಮಾನಿಗಳು ಆಲ್ರೆಡಿ ಮ್ಯಾಚ್ ಗೆದ್ದಷ್ಟೇ ಖುಷಿಯಲ್ಲಿದ್ರು. ಬಟ್ ಇದನ್ನೆಲ್ಲಾ ಉಲ್ಟಾ ಮಾಡಿದ್ದು ಆಂಗ್ಲ ಬೌಲರ್​ಗಳು ಮತ್ತು ಅವ್ರ ಸೈಕಲಾಜಿಕಲ್ ಸ್ಟ್ರಾಟರ್ಜಿ. ಚಿಲ್ರೆ ಸ್ಕೋರ್​ನ ಡಿಫೆನ್ಸ್ ಮಾಡಿಕೊಳ್ಳೋಕೆ ಮೈಂಡ್ ಗೇಮ್ ಅಸ್ತ್ರ ಬಳಸಿ ಸಕ್ಸಸ್ ಕೂಡ ಆದ್ರು. ಬ್ಯಾಟಿಂಗ್​ನಲ್ಲೂ ಟೈಂ ಪಾಸ್ ಮಾಡ್ತಾ ಭಾರತದ ಆಟಗಾರರನ್ನ ಕೆರಳಿಸಿದ್ರು.

ಇದನ್ನೂ ಓದಿ : ವೀಸಾ ಹಿಂದಿಕ್ಕಿದ ಯುಪಿಐ! – 65 ಕೋಟಿ ರೂ. ವಹಿವಾಟು.. ವಿಶ್ವದಲ್ಲೇ ನಂಬರ್‌ 1 ಡಿಜಿಟಲ್ ಪೇಮೆಂಟ್‌

ಟೈಂ ಪಾಸ್ ಮಾಡ್ತಿದ್ದ ಕ್ರಾಲಿಗೆ ಧೈರ್ಯ ತುಂಬಿದ್ದ ಗಿಲ್!

3ನೇ ದಿನದಂದು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ ಮೇಲೆ ಫಸ್ಟ್ ಸ್ಲೆಡ್ಜಿಂಗ್ ಮಾಡಿದ್ದೇ ಶುಭ್​ಮನ್ ಗಿಲ್. ಎರಡನೇ ಇನ್ನಿಂಗ್ಸ್​ನಲ್ಲಿ ಬೆನ್ ಡಕೆಟ್ 12 ರನ್, ಓಲಿ ಪೋಪ್ 4 ರನ್​ಗಳಿಗೆ ಔಟ್ ಆಗ್ತಿದ್ದಂತೆ ಇಂಗ್ಲೆಂಡ್​ನ ಅಸಲಿ ಆಟ ಶುರುವಾಗಿತ್ತು. ಬುಮ್ರಾ ಬೌಲಿಂಗ್​ನಲ್ಲಿ ಜಾಕ್ ಕ್ರಾಲಿ ಬೇಕಂತಲೇ ಟೈಂ ಪಾಸ್ ಮಾಡ್ತಿದ್ರು. ಈ ವೇಳೆ ಸಿಟ್ಟಾದ ಗಿಲ್ ಧೈರ್ಯದಿಂದ ಇರಿ ಹಾಗೇ ಬ್ಯಾಟಿಂಗ್ ಕಂಟಿನ್ಯೂ ಮಾಡಿ ಅಂತೇಳಿದ್ರು. ಆಗ ಮೈದಾನದಲ್ಲಿ ಕೆಲ ಕಾಲ ಉದ್ವಿಘ್ನ ಸ್ಥಿತಿ ನಿರ್ಮಾಣವಾಗಿತ್ತು.

ಡಕೆಟ್ ವಿಕೆಟ್.. ಸಿರಾಜ್ ಅಗ್ರೆಶನ್ ಗೆ ಬಿತ್ತು ದಂಡ!

ಇನ್ನು ಮೊಹಮ್ಮದ್ ಸಿರಾಜ್ ಸೆಲೆಬ್ರೇಷನ್ ಕೂಡ ಸಾಕಷ್ಟು ಕಾಂಟ್ರವರ್ಸಿ ಆಗಿದೆ. ನಾಲ್ಕನೇ ದಿನ ಆತಿಥೇಯ ತಂಡದ ಆರಂಭಿಕ ಬ್ಯಾಟರ್‌ ಬೆನ್‌ ಡಕೆಟ್‌ ವಿಕೆಟ್‌ ಪಡೆದ ಸಿರಾಜ್‌ ಆಕ್ರಮಣಕಾರಿಯಾಗಿ ಸೆಲೆಬ್ರೇಟ್ ಮಾಡಿದ್ರು. 12 ರನ್‌ಗಳಿಗೆ ಔಟ್‌ ಮಾಡಿದ ಬಳಿಕ ಸಿರಾಜ್‌ ಫಾಲೋ-ಥ್ರೂನಲ್ಲಿ ಬ್ಯಾಟ್ಸ್‌ಮನ್‌ಗೆ ಮುಖಾಮುಖಿಯಾಗಿ ಸಂಭ್ರಮಾಚರಣೆ ಮಾಡಿದರು. ಡಿಎಸ್​​ಪಿ ಸಿರಾಜ್ ಅಗ್ರೆಶನ್ ಸಾಕಷ್ಟು ವಿವಾದಕ್ಕೂ ಕಾರಣ ಆಗಿತ್ತು. ಇದೇ ವರ್ತನೆಗಾಗಿ ಸಿರಾಜ್​ಗೆ ಐಸಿಸಿ ದಂಡದ ಬರೆಯನ್ನೂ ಎಳೆದಿದೆ. ಪಂದ್ಯ ಸಂಭಾವನೆ ಕಡಿತದ ಜತೆಗೆ ಸಿರಾಜ್‌ರಿಗೆ ಒಂದು ಡಿಮೆರಿಟ್‌ ಅಂಕವನ್ನು ನೀಡಲಾಗಿದೆ. ಸೋ ಭಾರತೀಯ ಆಟಗಾರರಿಗೆ ಕೌಂಟರ್ ಕೊಡೋಕೆ ಕಾಯ್ತಿದ್ದ ಆಂಗ್ಲರು ತಮ್ಮ ಬೌಲಿಂಗ್ ಟರ್ಮ್ ಬಂದಾಗ ಅದನ್ನೇ ಅಸ್ತ್ರ ಮಾಡ್ಕೊಂಡು ರಿವರ್ಸ್ ಬಿಟ್ಟಿದ್ರು. ಐದನೇ ದಿನದಾಟದಲ್ಲಿ ಕೈಯಲ್ಲಿ ಬಾಲ್ ಬದಲು ಗ್ಲೌಸ್​ಗಳನ್ನ ಹಾಕಿಕೊಂಡು ಮೈದಾನಕ್ಕೆ ಇಳಿದವ್ರಂತೆ ಟೀಂ ಇಂಡಿಯಾ ಬ್ಯಾಟರ್​ಗಳಿಗೆ ಪಂಚ್​ ಮೇಲೆ ಪಂಚ್ ಕೊಟ್ಟಿದ್ರು.

ಐಪಿಎಲ್ ಪ್ರಸ್ತಾಪಿಸಿ ರೆಡ್ಡಿಯನ್ನ ಕಾಡಿದ ಹ್ಯಾರಿ ಬ್ರೂಕ್!

ಟಾಪ್ ಆರ್ಡರ್ ವಿಕೆಟ್​ಗಳು ಬಿದ್ದಾಗ ಆಲ್ ರೌಂಡರ್​ಗಳಾದ ರವೀಂದ್ರ ಜಡೇಜಾ ಹಾಗೂ ನಿತೀಶ್ ಕುಮಾರ್ ರೆಡ್ಡಿ ಭಾರತಕ್ಕೆ ಗೆಲ್ಲೋ ಭರವಸೆ ಮೂಡಿಸಿದ್ರು. ಇಬ್ಬರ ಪಾರ್ಟರ್​ಶಿಪ್ ಬಿಲ್ಡ್ ಆಗ್ತಾ ಹೋಗ್ತಿತ್ತು. ಈ ವೇಳೆ ಈ ಜೊತೆಯಾಟವನ್ನ ಬ್ರೇಕ್ ಮಾಡೋಕೆ ಹ್ಯಾರಿ ಬ್ರೂಕ್ ಮೈಂಡ್ ಗೇಮ್ ಶುರು ಮಾಡಿದ್ರು. ಅದೂ ಕೂಡ ರೆಡ್ಡಿಗೆ ಐಪಿಎಲ್​ ನಲ್ಲಿ ಎಸ್ಆರ್​ಹೆಚ್ ಟೀಂ ನಲ್ಲಿ ಜೊತೆಯಲ್ಲೇ ಆಡಿದ ದಿನಗಳನ್ನ ಹೇಳಿದ್ರು. ನಾವಿಬ್ಬರು ಸನ್‌ರೈಸರ್ಸ್‌ನೊಂದಿಗೆ ಇದ್ದಾಗ ನೀವು ಅಲ್ಲಿ ಏನನ್ನೂ ಹೇಳಲಿಲ್ಲ ಅನ್ನೋದು ನನಗೆ ಗೊತ್ತಿದೆ. ಜಡ್ಡು ಎಲ್ಲಾ ರನ್‌ಗಳನ್ನು ಗಳಿಸಬೇಕು. ಇದು ಐಪಿಎಲ್ ಅಲ್ಲ ಅಂದ್ರು. ಇಂಟ್ರೆಸ್ಟಿಂಗ್ ಅಂದ್ರೆ ಬ್ರೂಕ್ ಮತ್ತು ನಿತೀಶ್ ರೆಡ್ಡಿ ಸನ್‌ರೈಸರ್ಸ್ ಹೈದರಾಬಾದ್‌ನಲ್ಲಿ ಸಹ ಆಟಗಾರರಾಗಿದ್ದರು. ನಿತೀಶ್ ಅವರನ್ನು ಎಸ್‌ಆರ್‌ಹೆಚ್ ಉಳಿಸಿಕೊಂಡರೆ, ಬ್ರೂಕ್ ಅವರನ್ನು ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತು. ಆದಾಗ್ಯೂ, ಇಂಗ್ಲೆಂಡ್ ಬ್ಯಾಟ್ಸ್‌ಮನ್ ಬ್ರೂಕ್ ಐಪಿಎಲ್‌ನಿಂದ ಹೊರಬಂದರು. ಇದೇ ಕಾರಣಕ್ಕೆ ಲೀಗ್‌ನಲ್ಲಿ ಭಾಗವಹಿಸದಂತೆ ಎರಡು ವರ್ಷಗಳ ನಿಷೇಧವನ್ನು ವಿಧಿಸಲಾಗಿತ್ತು. ಆದ್ರೆ ತಾವು ಒಟ್ಟಿಗೆ ಆಡಿದ್ದ ದಿನಗಳನ್ನೇ ಹೇಳಿ ರೆಡ್ಡಿ ಕಾನ್ಸಂಟ್ರೇಷನ್​ ಬ್ರೇಕ್ ಮಾಡಿದ್ರು. ಇದಾದ ನೆಕ್ಸ್​ಟ್ ಓವರ್​ನಲ್ಲೇ ಕ್ರೀಸ್ ವೋಕ್ಸ್ ಬೌಲಿಂಗ್​ನಲ್ಲಿ ರೆಡ್ಡಿ ವಿಕೆಟ್ ಒಪ್ಪಿಸಿದ್ರು.

ಜಡ್ಡುಗೆ ಡಿಕ್ಕಿ ಹೊಡೆದ ಬ್ರೈಡನ್ ಕಾರ್ಸ್!

ಭಾರತ ಇನ್ನೇನು ಸೋಲುತ್ತೆ ಅನ್ನೋ ಟೈಮಲ್ಲಿ ನಾವು ಗೆಲ್ಲಬಲ್ಲೆವು ಅನ್ನೋ ಭರವಸೆ ಮೂಡಿಸಿ ಏಕಾಂಗಿಯಾಗಿ ಹೋರಾಡಿದ್ದು ರವೀಂದ್ರ ಜಡೇಜಾ. ಜಡ್ಡು ಆಟ ಇಂಗ್ಲೆಂಡ್​ ಬೌಲರ್ಸ್​ಗೆ ಅಕ್ಷರಶಃ ನೀರು ಕುಡಿಸಿತ್ತು. ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದ ಕೆಎಲ್ ರಾಹುಲ್ ಬೆನ್ ಸ್ಟೋಕ್ಸ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಆಗಿ ಔಟ್ ಆದರು. ರಾಹುಲ್ 39 ರನ್ ಗಳಿಸಿದರು. ಇದಾದ ನಂತರ, ವಾಷಿಂಗ್ಟನ್ ಸುಂದರ್ ಅವರನ್ನು ಆರ್ಚರ್ ಔಟ್ ಮಾಡಿದರು. ಸುಂದರ್ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದರು. ಭಾರತದ ಇನ್ನಿಂಗ್ಸ್ ಕುಸಿಯಿತು. 137 ರನ್‌ಗಳಿಗೆ 8 ವಿಕೆಟ್‌ ಕಳ್ಕೊಂಡಿತ್ತು. ಟೀಂ ಇಂಡಿಯಾದ ಎರಡನೇ ಇನ್ನಿಂಗ್ಸ್‌ನ 35 ನೇ ಓವರ್ ಅನ್ನು ಬ್ರೈಡನ್ ಕಾರ್ಸ್ ಬೌಲಿಂಗ್ ಮಾಡ್ತಿದ್ರು. ಈ ಓವರ್‌ನ ಕೊನೆಯ ಎಸೆತದಲ್ಲಿ, ಜಡೇಜಾ ರನ್ ತೆಗೆದುಕೊಳ್ಳಲು ಓಡುತ್ತಿದ್ದಾಗ, ಇಂಗ್ಲೆಂಡ್ ಬೌಲರ್ ಬ್ರೈಡನ್ ಕಾರ್ಸ್​ಗೆ ಡಿಕ್ಕಿ ಹೊಡೆದರು. ಈ ಡಿಕ್ಕಿಯ ನಂತರ, ಇಬ್ಬರು ಆಟಗಾರರ ನಡುವೆ ವಾಗ್ವಾದ ನಡೀತು. ಜಡ್ಡು ಕೂಲ್ ಆಗಿ ಹೇಳಿದ್ರೂ ಕೂಡ ಕಾರ್ಸ್ ಓವರ್ ರಿಯಾಕ್ಟ್ ಮಾಡ್ತಿದ್ರು. ಆ ಬಳಿಕ ತಂಡದ ಇತರೆ ಆಟಗಾರರು ಬಂದು ಪರಿಸ್ಥಿತಿಯನ್ನ ತಿಳಿಗೊಳಿಸಿದ್ರು.

ಆಕಾಶ್ ದೀಪ್ ಮತ್ತು ಕಾರ್ಸ್ ನಡುವೆಯೂ ವಾಗ್ವಾದ!

ಇಡೀ ಪಂದ್ಯದ ಉದ್ದಕ್ಕೂ ಕೂಡ ಎರಡೂ ತಂಡಗಳ ನಡುವೆ ಮಾತಿನ ಚಕಮಕಿ ಕಂಡುಬಂದಿದ್ದು, ಹಲವು ಬಾರಿ ಆಟಗಾರರ ನಡುವೆ ಸ್ವಲ್ಪ ವಾಗ್ವಾದ ನಡೆದಿತ್ತು. ನಾಲ್ಕನೇ ದಿನದ ಅಂತ್ಯದಲ್ಲಿ ಬ್ರೈಡನ್ ಕಾರ್ಸ್ ಮತ್ತು ಆಕಾಶ್ ದೀಪ್ ನಡುವೆ ವಾಗ್ವಾದ ನಡೆದಿತ್ತು. ಆ ಸಮಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಆಕಾಶ್ ದೀಪ್​ಗೆ ಬ್ರೈಡನ್ ಕಾರ್ಸ್ ಏನೋ ಹೇಳುತ್ತಿರುವುದು ಕಂಡುಬಂದಿತು, ಅದಕ್ಕೆ ಆಕಾಶ್ ದೀಪ್ ಕೂಡ ಏನೋ ಸನ್ನೆ ಮಾಡಿದರು. ಹೀಗೆ ಸಾಕಷ್ಟು ಸನ್ನಿವೇಶಗಳಲ್ಲಿ ಉಭಯ ತಂಡಗಳ ಆಟಗಾರರು ಕೂಡ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ಕಣ್ಣೀರಿಟ್ಟ ಸಿರಾಜ್ ಗೆ ಇಂಗ್ಲೆಂಡ್ ಆಟಗಾರರ ಸಮಾಧಾನ!

ಕ್ರಿಕೆಟ್ ನಲ್ಲಿ ಎಲ್ಲಾ ಥರದ ಎಮೋಷನ್ಸ್ ಇರುತ್ತೆ ಅನ್ನೋದಕ್ಕೆ ಮೊಹಮ್ಮದ್ ಸಿರಾಜ್ ವಿಕೆಟ್ ಉರುಳಿದಾಗ ನಡೆದ ಘಟನೆಯೇ ಸಾಕ್ಷಿ. ಮೈದಾನದಲ್ಲಿ ಪರಸ್ಪರ ವಾಗ್ದಾಳಿ ನಡೆಸಿದವೇ ಕೊನೆಗೇ ಅಪ್ಪುಗೆಯ ಮೂಲಕ ಸಮಾಧಾನ ಪಡಿಸಿದ್ರು.  ಪರಸ್ಪರರ ಕಾಲೆಳೆಯುತ್ತಾ, ಸ್ಲೆಡ್ಜಿಂಗ್‌ ಮಾಡುತ್ತಾ ಏಕಾಗ್ರತೆಯನ್ನು ಹಾಳು ಮಾಡುವ ಪ್ರಯತ್ನ ನಡೆಸಿದ ಎದುರಾಳಿಗಳು ಪಂದ್ಯ ಮುಗಿದ ಮೇಲೆ ಸಮಾಧಾನ ಪಡಿಸಿದ್ರು. ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರನ್ನು, ಇಂಗ್ಲೆಂಡ್‌ ಟೆಸ್ಟ್‌ ತಂಡದ ನಾಯಕ ಬೆನ್‌ ಸ್ಟೋಕ್ಸ್‌ ಸಮಾಧಾನಪಡಿಸಿದ ರೀತಿ ಮಾತ್ರ ಎಲ್ಲರ ಫೆವರಿಟ್‌ ಮೂಮೆಂಟ್‌ ಆಗಿತ್ತು. ಹಾಗೇ ತಂಡದ ಗೆಲುವಿಗಾಗಿ ತಮ್ಮೆಲ್ಲಾ ಸಾಮರ್ಥ್ಯವನ್ನು ಧಾರೆ ಎರೆದ ಮೊಹಮ್ಮದ್‌ ಸಿರಾಜ್‌ ಅವರನ್ನೂ ಇಂಗ್ಲೆಂಡ್‌ ಆಟಗಾರರು ಅಭಿನಂದಿಸಿದರು. ಸೋಲಿನ ಬಳಿಕ ಕಣ್ಣೀರಿಡುತ್ತಿದ್ದ ಮೊಹಮ್ಮದ್‌ ಸಿರಾಜ್‌ ಅವರನ್ನು, ಇಂಗ್ಲೆಂಡ್‌ ಆಟಗಾರರು ಸಮಾಧಾನಪಡಿಸಿದರು. ಬೆನ್‌ ಸ್ಟೋಕ್ಸ್‌ ಕೂಡ ಸಿರಾಜ್‌ ಅವರ ಬಳಿಕ ಸಂತೈಸಿದರು.

Shantha Kumari