ಫ್ಲೈಟ್ ನಲ್ಲಿ ಬಾಟಲ್ ಹಿಡಿದು ಬಡಿದಾಟ – ವಿಮಾನ ತುರ್ತು ಭೂಸ್ಪರ್ಶ

ಫ್ಲೈಟ್ ನಲ್ಲಿ ಬಾಟಲ್ ಹಿಡಿದು ಬಡಿದಾಟ – ವಿಮಾನ ತುರ್ತು ಭೂಸ್ಪರ್ಶ

ಕ್ಯಾನ್ಬೆರಾ: ವಿಮಾನದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಕ್ಷುಲ್ಲಕ ಕಾರಣಕ್ಕೆ ಬಡಿದಾಡಿಕೊಂಡಿದ್ದಾರೆ. ಈ ಜಗಳ ತಾರಕಕ್ಕೇರಿದ ಹಿನ್ನೆಲೆಯಲ್ಲಿ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

ಕೈರ್ನ್ಸ್‌ನಿಂದ ಆಸ್ಟ್ರೇಲಿಯಾದ ಉತ್ತರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರ ಗುಂಪೊಂದು ಪರಸ್ಪರ ಬಡಿದಾಟಕ್ಕೆ ಮುಂದಾಗಿದೆ. ಈ ವೇಳೆ ಸಹ ಪ್ರಯಾಣಿಕ ಮಹಿಳೆಯೊಬ್ಬಳು ಬಾಟಲಿ ಹಿಡಿದುಕೊಂಡು ಮತ್ತೋರ್ವ ಪ್ರಯಾಣಿಕನಿಗೆ ಹೊಡೆಯಲು ಮುಂದಾಗಿದ್ದಾಳೆ. ಈ ಕುರಿತ ವಿಡಿಯೋ ಸಾಮಾಜಿಕ  ಜಾಲತಾಣದಲ್ಲಿ ಹರಿದಾಡುತ್ತಿದೆ. ಘಟನೆ ನಡೆಯುತ್ತಿದ್ದಂತೆ ವಿಮಾನ ಕ್ವೀನ್ಸ್ಲ್ಯಾಂಡ್‌ಗೆ ಹಿಂತಿರುಗಿಸಿ, ಮಹಿಳೆಯರ ಮೇಲೆ ಆರೋಪ ಹೊರಿಸಲಾಗಿತ್ತು. ಈ ಹಿನ್ನೆಲೆ ನಾಲ್ವರು ಪ್ರಯಾಣಿಕರನ್ನ ಬಂಧಿಸಲಾಗಿದೆ ಎಂದು ಆಸ್ಟ್ರೇಲಿಯನ್ ಫೆಡರಲ್ ಪೊಲೀಸರು ಹಾಗೂ ಎನ್‌ಟಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಆಪರೇಷನ್ ಕಾವೇರಿ – ಸುಡಾನ್ ನಿಂದ 3 ನೇ ಬ್ಯಾಚ್ ನಲ್ಲಿ 135 ಭಾರತೀಯರು ತಾಯ್ನಾಡಿಗೆ

23 ವರ್ಷದ ವ್ಯಕ್ತಿಯೊಬ್ಬನ ಮೇಲೆ ಮಹಿಳೆಯೊಬ್ಬಳು ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಿದ್ದಾಳೆ. ಇದರಿಂದ ವಿಮಾನಕ್ಕೆ ಹಾನಿಯಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ದುರ್ನಡತೆ ಹಾಗೂ ಕೌಟುಂಬಿಕ ಹಿಂಸಾಚಾರ ಆದೇಶವನ್ನು ಉಲ್ಲಂಘಿಸಿದಂತಾಗಿದೆ. ಹಾಗಾಗಿ 23 ವರ್ಷದ ಮತ್ತೊಬ್ಬ ಮಹಿಳೆಯ ಮೇಲೆ ನಿಯಮ ಉಲ್ಲಂಘನೆ ಆರೋಪ ಹೊರಿಸಲಾಗಿದೆ. ಇದೇ ವೇಳೆ 22 ವರ್ಷದ ಮತ್ತೊಬ್ಬ ಪ್ರಯಾಣಿಕ ವಾಣಿಜ್ಯ ಔಷಧ ಪೂರೈಕೆ ಹಾಗೂ ಮಾದಕ ವಸ್ತುಗಳನ್ನು ಹೊಂದಿದ್ದಲ್ಲದೇ ಅಸಭ್ಯ ವರ್ತನೆ ತೋರಿದ್ದಾನೆ. ಜೊತೆಗೆ ನಿಷೇಧಿತ ಪ್ರದೇಶದಲ್ಲಿ ಮದ್ಯ ಸಾಗಿಸುತ್ತಿರುವುದು ಕಂಡುಬಂದಿದೆ. ಅದಕ್ಕಾಗಿ ಅವರನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

suddiyaana