ನಮ್ಮ ಮೆಟ್ರೋಗೂ ಬರಲಿದೆ ಸ್ಕೈವಾಕ್ ಟ್ರಾವೆಲೇಟರ್!
ಸಿಲಿಕಾನ್ ಸಿಟಿಯ ಸಂಚಾರ ಜೀವನಾಡಿ ನಮ್ಮ ಮೆಟ್ರೋ ಎಂದೇ ಹೇಳಬಹುದು. ಆಫೀಸ್‌ಗೆ ಹೋಗಲು, ಕಾಲೇಜ್‌ಗೆ ಹೋಗಲು ಸಾವಿರಾರು ಮಂದಿ ಮೆಟ್ರೋವನ್ನೇ ಅವಲಂಭಿಸಿದ್ದಾರೆ. ಅನೇಕರು ಪ್ರಯಾಣಕ್ಕಾಗಿ ನಮ್ಮ ಮೆಟ್ರೋವನ್ನೇ ಅವಲಂಬಿಸಿರೋದ್ರಿಂದ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಪ್ರಯಾಣಿಕರಿಗೆ ಬೇಕಾದ ಸೌಕರ್ಯಗಳನ್ನು ಒದಗಿಸುತ್ತಾ ಬಂದಿದೆ. ಇದೀಗ ಮೆಟ್ರೋ ಪ್ರಯಾಣಿಕರಿಗಾಗಿ ಬಿಎಂಆರ್‌ಸಿಎಲ್ ಮತ್ತೊಂದು ಸೌಲಭ್ಯವನ್ನು ತರುತ್ತಿದೆ.
ಇದನ್ನೂ ಓದಿ: ಸಿಲಿಕಾನ್ ಸಿಟಿ ಬೆಂಗಳೂರಿನ ಅಪಾರ್ಟ್ಮೆಂಟ್ಗಳಲ್ಲಿ ನೀರಿನ ಸಂಕಷ್ಟ – ಫ್ಲ್ಯಾಟ್ ಬಾಡಿಗೆ ಕಡಿಮೆ ಮಾಡಲು ಹೆಚ್ಚಾಯ್ತು ಆಗ್ರಹ
ಬೆಂಗಳೂರು ‘ನಮ್ಮ ಮೆಟ್ರೋ’ ರೈಲು ನಿಗಮವು ಪ್ರಮುಖ ಜಂಕ್ಷನ್‌ನಲ್ಲಿ 250 ಮೀಟರ್ ಸ್ಕೈವಾಕ್ ಅನ್ನು ನಿರ್ಮಿಸುವ ಯೋಜನೆಗೆ ಕೈಹಾಕಿದೆ. ಈ ಸ್ಕೈವಾಕ್‌ಅನ್ನು ಹಳದಿ ಮಾರ್ಗದ ಮೆಟ್ರೋ ನಿಲ್ದಾಣ (ಆರ್‌ವಿ ರಸ್ತೆ – ಬೊಮ್ಮಸಂದ್ರ) ಮತ್ತು ನೀಲಿ ಮಾರ್ಗದ ನಿಲ್ದಾಣ (ಕೆಆರ್ ಪುರಂನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ಮಧ್ಯೆ ನಿರ್ಮಿಸಲಿದೆ. ಹಳದಿ ಮಾರ್ಗದಿಂದ ನೀಲಿ ಮಾರ್ಗಕ್ಕೆ ತೆರಳಲು 250 ಮೀಟರ್ ದೂರವಿರುವುದರಿಂದ ಈ ಯೋಜನೆಯನ್ನು ಬಿಎಂಆರ್‌ಸಿಎಲ್ ಕೈಗೆತ್ತಿಕೊಂಡಿದೆ
ನಮ್ಮ ಮೆಟ್ರೋ ವ್ಯಾಪ್ತಿಯಲ್ಲಿ ಇಂತದ್ದೊಂದು ಟ್ರಾವೆಲೇಟರ್ ಸ್ಕೈವಾಕ್ ಸ್ಥಾಪನೆಯ ಮೊದಲ ಯೋಜನೆ ಇದಾಗಿದೆ. ಬೆಂಗಳೂರು ಮೆಟ್ರೋ ಜಾಲದ ಎರಡು ಪ್ರಮುಖ ಮಾರ್ಗಗಳ ಮಧ್ಯೆ ಸಂಪರ್ಕವನ್ನು ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ. ಈ ಯೋಜನೆಯಿಂದ ಎರಡು ಮೆಟ್ರೋ ಮಾರ್ಗಗಳ ಇಂಟರ್‌ಚೇಂಜ್ ಮೆಟ್ರೊ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಿದೆ.