ಕ್ಯಾಪ್ಟನ್ಸಿಯಿಂದ ಸೂರ್ಯ ಔಟ್ – T-20I ಸ್ಪೆಷಲಿಸ್ಟ್ ಫ್ಲ್ಯಾಪ್ ಆಗಿದ್ದೇಕೆ?
2026ರ ವಿಶ್ವಕಪ್ ಬೆನ್ನಲ್ಲೇ ವಿದಾಯ?

ಕ್ಯಾಪ್ಟನ್ಸಿಯಿಂದ ಸೂರ್ಯ ಔಟ್ – T-20I ಸ್ಪೆಷಲಿಸ್ಟ್ ಫ್ಲ್ಯಾಪ್ ಆಗಿದ್ದೇಕೆ?2026ರ ವಿಶ್ವಕಪ್ ಬೆನ್ನಲ್ಲೇ ವಿದಾಯ?

ಟೀಂ ಇಂಡಿಯಾದ ಟಿ-20ಐ ತಂಡದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಅವ್ರೇ ಖಳನಾಯಕನಾಗಿ ಕಾಣ್ತಿದ್ದಾರೆ. ಮೊದ್ಲೆಲ್ಲಾ 360 ಡಿಗ್ರಿನಲ್ಲಿ ಬ್ಯಾಟ್ ಬೀಸ್ತಿದ್ದ ಸೂರ್ಯನಿಗೆ ಈಗ ಗ್ರಹಣ ಹಿಡಿದಂತಾಗಿದೆ. ಈ ಗ್ರಹಣ ಬಿಡಿಸಿಕೊಳ್ದೇ ಇದ್ರೆ ಇನ್ನು ಮೂರು ತಿಂಗಳಲ್ಲೇ ಹೊಸ ನಾಯಕ ಬರೋ ಮುನ್ಸೂಚನೆ ಸಿಕ್ಕಿದೆ. ಮಾರ್ಡ್ರೆನ್ ಕ್ರಿಕೆಟ್​ನ ಫೇವರೆಟ್ ಫಾರ್ಮೆಟ್ ಅಂದ್ರೆ ಅದು ಟಿ-20ಐ. ಈ ಮಾದರಿಯಲ್ಲಿ ಜಗತ್ತಿನಲ್ಲೇ ಭಾರತ ನಂಬರ್ 1 ಟೀಂ. 2024ರ ವಿಶ್ವಕಪ್​ನ ಹಾಲಿ ಚಾಂಪಿಯನ್ಸ್. ಌಂಡ್ ಇತ್ತೀಚೆಗಷ್ಟೇ ಏಷ್ಯಾಕಪ್​ನಲ್ಲೂ ಟ್ರೋಫಿ ವಿನ್ನರ್ಸ್. ಕಳೆದ 18 ತಿಂಗಳಿಂದ ಒಂದೇ ಒಂದು ಸರಣಿನೂ ಸೋತಿಲ್ಲ. ಬ್ಯಾಕ್ ಟು ಬ್ಯಾಕ್ ಮ್ಯಾಚ್​ನೂ ಬಿಟ್ಕೊಟ್ಟಿಲ್ಲ. ಒಂದು ಮ್ಯಾಚ್ ಸೋತ್ರೂ ಌಂಡ್ ನೆಕ್ಸ್​ಟ್ ಕಮ್ ಬ್ಯಾಕ್ ಮಾಡೇ ಮಾಡ್ತಾರೆ. ಗೆದ್ದೇ ಗೆಲ್ತಾರೆ. ರರಿಸಲ್ಟ್​ನಲ್ಲೇನೂ ಪ್ರಾಬ್ಲಂ ಇಲ್ಲ. ಬಟ್ ಇರೋ ಪ್ರಾಬ್ಲಂ ಅಂದ್ರೆ ಸೂರ್ಯಕುಮಾರ್ ಯಾದವ್ ಕಳಪೆ ಫಾರ್ಮ್.

ಇದನ್ನೂ ಓದಿ : ಅಭಿಷೇಕ್ ONE MAN SHOW – AUS ಎದುರು ಗೆದ್ದು ಸೋತ ಭಾರತ

ಕ್ಯಾಪ್ಟನ್ ಗೂ ಮುನ್ನ ಹೀರೋ.. ನಾಯಕನಾದ್ಮೇಲೆ ಝೀರೋ!

2024ರ ಟಿ-20 ವಿಶ್ವಕಪ್ ಆದ್ಮೇಲೆ ರೋಹಿತ್ ಟಿ-20ಐಗೆ ಗುಡ್ ಬೈ ಹೇಳ್ತಾರೆ. ಈ ಟೈಮಲ್ಲಿ ಶುಭ್​ಮನ್ ಗಿಲ್, ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್ ಅಂತಾ ಸಾಕಷ್ಟು ಹೆಸರುಗಳು ನಾಯಕತ್ವದ ರೇಸ್​ನಲ್ಲಿದ್ವು. ಬಟ್ ಅಚ್ಚರಿ ಎನ್ನುವಂತೆ ಮ್ಯಾನೇಜ್​ಮೆಂಟ್ ಸೂರ್ಯಕುಮಾರ್ ಯಾದವ್​ಗೆ ಪಟ್ಟ ಕಟ್ಟಿತ್ತು. ಅದಕ್ಕೆ ಕಾರಣ ಟಿ-20ಐ ಫಾರ್ಮೆಟ್​ನ ಸ್ಪೆಷಲಿಸ್ಟ್ ಬ್ಯಾಟರ್ ಆಗಿದ್ದ ಸೂರ್ಯ. 360 ಡಿಗ್ರಿ ಌಂಗಲ್​ನಲ್ಲಿ ಬ್ಯಾಟ್ ಬೀಸ್ತಿದ್ದ ಸೂರ್ಯನಿಗೆ ಆ ಟೈಮಲ್ಲಿ ಯಾರೂ ಸರಿಸಾಟಿನೇ ಇರ್ಲಿಲ್ಲ. ಹೀಗಾಗಿ ಬಿಸಿಸಿಐ ತುಂಬಾ ಕಾನ್ಫಿಡೆನ್ಸ್​ನಿಂದಲೇ ನಾಯಕತ್ವ ವಹಿಸಿತ್ತು. ಆದ್ರೆ ಆಟಗಾರನಾಗಿ ಅಬ್ಬರಿಸ್ತಿದ್ದ ಸೂರ್ಯನಿಗೆ ನಾಯಕನಾಗಿ ಶೈನ್ ಆಗೋಕೆ ಆಗ್ಲೇ ಇಲ್ಲ. ಕ್ಯಾಪ್ಟನ್ ಆಗೋ ಮುನ್ನ 43.40 ಆವರೇಜ್​ನಲ್ಲಿ ಬ್ಯಾಟ್ ಬೀಸ್ತಿದ್ದ ಸೂರ್ಯ ನಾಯಕ ಆದ್ಮೇಲೆ 26.57ಕ್ಕೆ ಇಳಿದಿದೆ. ವರ್ಷದ ಹಿಂದೆ ಹೀರೋ ಆಗಿದ್ದ ಸ್ಕೈ ಈಗ ಝೀರೋ ಆಗ್ಬಿಟ್ಟಿದ್ದಾರೆ. ಇನ್ನು 2025ರಲ್ಲಂತೂ ಅವ್ರ ಬ್ಯಾಟಿಂಗ್ ಪ್ರದರ್ಶನ ಇನ್ನೂ ಕರಾಬಾಗಿದೆ.

2025ರಲ್ಲಿ ಒಂದೇ ಒಂದು ಅರ್ಧಶತಕವನ್ನೂ ಸಿಡಿಸದ ಸೂರ್ಯ!

ಕ್ಯಾಪ್ಟನ್ ಆದ್ಮೇಲೆ ಸೂರ್ಯ ಡಲ್ ಆಗಿದ್ದು ನಿಮ್ಗೆಲ್ಲಾ ಗೊತ್ತೇ ಇದೆ. ಅದ್ರಲ್ಲೂ 2025ರಲ್ಲಂತೂ ಸೂರ್ಯ ಒಮ್ಮೆಯೂ ಪ್ರಜ್ವಲಿಸಲೇ ಇಲ್ಲ. ಈ ವರ್ಷ 13 ಟಿ-20ಐ ಇನ್ನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರೋ ಸೂರ್ಯಕುಮಾರ್ ಒಂದೇ ಒಂದು ಅರ್ಧಶತಕವನ್ನೂ ಗಳಿಸಿಲ್ಲ. 8 ಪಂದ್ಯಗಳಲ್ಲಿ 9 ರನ್​ಗಳ ಒಳಗೇ ಔಟ್ ಆಗಿದ್ದಾರೆ. ಇನ್ನು ಮೂರು ಪಂದ್ಯಗಳಲ್ಲಿ 10 ರಿಂದ 19 ರನ್​ಗಳ ಒಳಗೆ ವಿಕೆಟ್ ಒಪ್ಪಿಸಿದ್ದಾರೆ. ಇನ್ನು 2 ಮ್ಯಾಚ್​ಗಳಲ್ಲಿ 20 ರಿಂದ 49 ರನ್​ಗಳ ಒಳಗೆ ವಿಕೆಟ್ ಕೈ ಚೆಲ್ಲಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಈ 13 ಇನ್ನಿಂಗ್ಸ್​ಗಳಲ್ಲಿ ಒಮ್ಮೆಯೂ ಕೂಡ 50+ ರನ್ಸ್ ಬಂದೇ ಇಲ್ಲ. ಅಂದ್ರೆ ಅರ್ಧಶತಕ ಬಾರಿಸೋಕೂ ಸೂರ್ಯನಿಂದ ಸಾಧ್ಯವಾಗಿಲ್ಲ. ಇದೇ ಈಗ ಬಿಸಿಸಿಐಗೂ ಟೆನ್ಷನ್ ತಂದಿಟ್ಟಿದೆ.

2026ರ ಟಿ-20 ವಿಶ್ವಕಪ್ ಬಳಿಕ ಸೂರ್ಯನಿಗಿಲ್ಲ ನಾಯಕತ್ವ?

ಇಲ್ಲಿ ಸೂರ್ಯನ ಕ್ಯಾಪ್ಟನ್ಸಿ ವಿಚಾರ ಚರ್ಚೆಗೆ ಬರೋಕೆ ಕಾರಣವೂ ಇದೆ. 2026ರ ಫೆಬ್ರವರಿ ಮತ್ತು ಮಾರ್ಚ್​ನಲ್ಲಿ ಟಿ-20 ವಿಶ್ವಕಪ್ ನಡೆಯುತ್ತೆ. 20 ರಾಷ್ಟ್ರಗಳ ನಡುವಿನ ಈ ಟೂರ್ನಿಯನ್ನ ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಸಲಾಗುತ್ತೆ. 10ನೇ ಆವೃತ್ತಿಯ ಟೂರ್ನಿ ಇದಾಗಿದ್ದು 20 ತಂಡಗಳನ್ನ 2 ಗುಂಪುಗಳಾಗಿ ಡಿವೈಡ್ ಮಾಡ್ತಾರೆ. ಸೂಪರ್ 8, ಗ್ರೂಪ್ ಫೋರ್ ಆ ಬಳಿಕ ಫೈನಲ್ ಪಂದ್ಯ ನಿಗದಿ ಮಾಡ್ಲಾಗಿದೆ. ಈ ಟೂರ್ನಿಯಲ್ಲಿ ಭಾರತವೇ ಗೆಲ್ಲುವಂಥ ಮೋಸ್ಟ್ ಫೇವರೆಟ್ ಟೀಂ ಆಗಿದೆ. ಆದ್ರೆ ಈ ಟೂರ್ನಿಯೇ ಸೂರ್ಯನ ಪಾಲಿಗೆ ಅಗ್ನಿಪರೀಕ್ಷೆಯಾಗಲಿದೆ. ಮುಂದಿನ ಪಂದ್ಯಗಳಲ್ಲಿ ಬ್ಯಾಟಿಂಗ್​ನಲ್ಲಿ ಬಿಗ್ ಇನ್ನಿಂಗ್ಸ್ ಬರದೇ ಇದ್ರೆ ಖಂಡಿತ ಸೂರ್ಯನಿಗೆ ಗೇಟ್ ಪಾಸ್ ಕೊಡ್ಲಾಗುತ್ತೆ. ಪರ್ಫಾಮೆನ್ಸ್ ಅಷ್ಟೇ ಅಲ್ದೇ ಬಿಸಿಸಿಐ ಮುಂದೆ ಬೇರೆ ಕಾರಣಗಳೂ ಇವೆ.

ಸೂರ್ಯನಿಗೆ ಗೇಟ್ ಪಾಸ್ ಕಾರಣಗಳು!

  1. ಸೂರ್ಯನಿಗೆ ಸದ್ಯ 35 ವರ್ಷ
  2. 2028ರ ವಿಶ್ವಕಪ್ ವೇಳೆಗೆ 38 ವರ್ಷ
  3. ಟಿ-20ಐನಲ್ಲಿ ಯಂಗ್ ಸ್ಟರ್ಸ್ ಗೆ ಚಾನ್ಸ್
  4. ಪರ್ಫಾಮೆನ್ಸ್ ನಲ್ಲೂ ವೀಕ್
  5. ಆಲ್ ಫಾರ್ಮೆಟ್ ಕ್ಯಾಪ್ಟನ್ ಸಾಧ್ಯತೆ

ಬಿಸಿಸಿಐ ಫ್ಯೂಚರ್ ದೃಷ್ಟಿಯಿಂದ ಸಾಕಷ್ಟು ಕ್ಯಾಲ್ಕುಲೇಷನ್ಸ್ ಮಾಡಿಕೊಳ್ತಿದೆ. ಬಟ್ ಸೂರ್ಯ ಆದಷ್ಟು ಶೈನ್ ಆಗ್ಲೇಬೇಕಿದೆ. ಹಾಗಂತ ನಾಯಕ ಎಂದ ಮಾತ್ರಕ್ಕೆ ಪ್ರತೀ ಮ್ಯಾಚಲ್ಲೂ ಅರ್ಧಶತಕ ಬರ್ಬೇಕು. ಶತಕ ಸಿಡಿಸ್ತಾ ಇರ್ಬೇಕು ಅಂತಾ ಯಾರೋ ಹೇಳೋಕ್ ಆಗಲ್ಲ. ಅಟ್​ಲೀಸ್ಟ್ ಮಿನಿಮಮ್ ಸ್ಕೋರ್ ಅಷ್ಟೇ ಎಕ್ಸ್​ಪೆಕ್ಟ್ ಮಾಡ್ತಾ ಇರೋದು. ತಂಡದ ಉಳಿದ ಆಟಗಾರರಿಗೆ ಮಾದರಿಯಾಗುವಂತೆ ಇರ್ಬೇಕು. ಈ ಸವಾಲ್ ಗೆಲ್ತಾರೋ ಅಥವಾ ಸೈಡ್​ಲೈನ್ ಆಗ್ತಾರೋ ನೋಡ್ಬೇಕು. ಇನ್ನೊಂದು ಚಾಲೆಂಜ್ ಕೂಡ ಇದೆ. ಸೂರ್ಯ ಹೋದ್ಮೇಲೆ ಯಾರನ್ನ ನಾಯಕನಾಗಿ ಮಾಡೋದು ಅನ್ನೋದು. ಗಿಲ್​ ಫಾರ್ಮ್​ನಲ್ಲಿಲ್ಲ. ಯಾರಿಗೆ ನಾಯಕತ್ವ ನೀಡೋದು ಅನ್ನೋ ಪ್ರಶ್ನೆಯೂ ಇದೆ.

Shantha Kumari