ಮಳೆಗಾಲದಲ್ಲಿ ಚರ್ಮದ ಸಮಸ್ಯೆ ನಿಮ್ಮನ್ನ ಕಾಡುತ್ತಾ? – ಸ್ಕಿನ್‌ ಕೇರ್‌ ಹೀಗೆ ಮಾಡ್ಕೊಳ್ಳಿ!

ಮಳೆಗಾಲದಲ್ಲಿ ಚರ್ಮದ ಸಮಸ್ಯೆ ನಿಮ್ಮನ್ನ ಕಾಡುತ್ತಾ? – ಸ್ಕಿನ್‌ ಕೇರ್‌ ಹೀಗೆ ಮಾಡ್ಕೊಳ್ಳಿ!

ಮಳೆಗಾಲ ಆರಂಭವಾಗುತ್ತಿದ್ದಂತೆ ಒಂದೊಂದೇ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಶೀತ, ಕೆಮ್ಮು, ಜ್ವರ ಜೊತೆಗೆ ಚರ್ಮದ ಸಮಸ್ಯೆ ಕೂಡ ಹಲವರನ್ನು ಕಾಡುತ್ತದೆ. ಹೀಗಾಗಿ ಚರ್ಮದ ಆರೈಕೆ ಕೂಡ ಬಹಳ ಮುಖ್ಯ. ಮಳೆಗಾಲದಲ್ಲಿ ಚರ್ಮದ ಆರೈಕೆ ಹೇಗೆ ಮಾಡಬೇಕು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ತಿಮ್ಮಪ್ಪನ ಭಕ್ತರೇ ದಯವಿಟ್ಟು ಗಮನಿಸಿ – ತಿರುಪತಿ ಬೆಟ್ಟದಲ್ಲಿ ಹಾರ್ನ್‌ ಮಾಡಿದ್ರೆ ಬೀಳುತ್ತೆ ದಂಡ

ಮಳೆಗಾಲದಲ್ಲಿ ತಂಪು ವಾತಾವರಣವು ತ್ವಚೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಮಳೆಗಾಲ್ಲಿ ತ್ವಚೆ ಕೆಂಪಾಗುವುದು, ದದ್ದು ಉಂಟಾಗುವುದು ಮತ್ತು ತುರಿಕೆ ಸಮಸ್ಯೆ ಕಾಡುತ್ತದೆ. ಹೀಗಾಗಿ ಮಳೆಗಾಲದಲ್ಲಿ ತ್ವಚೆಯ ಕಾಳಜಿಗೆ ತುಂಬಾ ಗಮನ ಹರಿಸಬೇಕಾಗುತ್ತದೆ. ಮುಖದ ಮೇಲಾಗುವ ವೈಟ್ ಹೆಡ್ಸ್ ಮತ್ತು ಬ್ಲ್ಯಾಕ್ ಹೆಡ್ಸ್, ಬ್ಯಾಕ್ಟೀರಿಯಾ ಮತ್ತು ಫಂಗಲ್ ಸೋಂಕು, ಚರ್ಮದ ಕಿರಿಕಿರಿ, ಕೆಂಪು ದದ್ದು ಇತ್ಯಾದಿಗಳು ಹೆಚ್ಚುತ್ತವೆ.ಈ ಸಮಯದಲ್ಲಿ ಚರ್ಮವನ್ನು ಎಫ್ಫೋಲಿಯೇಟ್ ಮಾಡಬೇಕು. ಎಣ್ಣೆಯುಕ್ತ ಚರ್ಮದವರು ಮುಖ್ಯವಾಗಿ ಚರ್ಮವನ್ನು ಎಪ್ಪೋಲಿಯೇಟ್ ಮಾಡುವುದನ್ನು ಮರೆಯಬಾರದು. ಒಣ ತ್ವಚೆ ಇದ್ದವರು ಮಾಯಿಶ್ಚರೈಸಿಂಗ್ ಮಾಡಬೇಕಾಗುತ್ತದೆ.

ಮಳೆಗಾಲದಲ್ಲಿ ಚರ್ಮದ ಆರೈಕೆಯಲ್ಲಿ ಮುಖ್ಯವಾಗಿ ತ್ವಚೆಯು ಎಫ್ಫೋಲಿಯೇಟಿಂಗ್, ಆರ್ಧ್ರಕಗೊಳಿಸುವಿಕೆ ಮತ್ತು ಹೈಡ್ರೇಟಿಂಗ್ ಪ್ರಕ್ರಿಯೆ ಇದೆ. ಆದರೆ ಇದಕ್ಕಾಗಿ ನೀವು ಸುಗಂಧ ಆಧಾರಿತ ಉತ್ಪನ್ನಗಳ ಬಳಕೆ ಮಾಡುತ್ತಿದ್ದರೆ ತಪ್ಪಿಸಿ. ಇದು ಚರ್ಮದ ಕಿರಿಕಿರಿ ಉಂಟು ಮಾಡುತ್ತದೆ.

ಮಾನ್ಸೂನ್ ಸಮಯದಲ್ಲಿ ತ್ವಚೆಯ ಕಾಳಜಿಗೆ ನೀವು ನಿಯಮಿತ ಫೇಸ್ ವಾಶ್ ಬಳಸಿ. ದಿನಕ್ಕೆ ಮೂರು ಬಾರಿ ಮುಖ ತೊಳೆಯಿರಿ. ಇದು ಫಂಗಸ್ ನಿಂದ ಉಂಟಾಗುವ ಸೋಂಕನ್ನು ತಡೆಯುತ್ತದೆ. ಸತ್ತ ಚರ್ಮವನ್ನು ತೆಗೆದು ಹಾಕಲು ಎಫ್ಫೋಲಿಯೇಟಿಂಗ್ ಮಾಡಿ. ಹಸಿರು ಚಹಾ ಅಥವಾ ಚಹಾ ಮರದ ಫೇಸ್ ಪ್ಯಾಕ್ ಹಚ್ಚಿರಿ.

ಮಾಯಿಶ್ಚರೈಸ್ ಮಾಡಿ. ಮಾನ್ಸೂನ್ ಋತುವಿನಲ್ಲಿ ಚರ್ಮವು ಒಣಗಿದರೆ ಹೈಡ್ರೇಟ್ ಮಾಡಿ. ಹೆಚ್ಚು ನೀರು ಕುಡಿಯಿರಿ. ಜೊತೆಗೆ ಮಾಯಿಶ್ಚರೈಸರ್ ಹಚ್ಚಿರಿ. ತ್ವಚೆ ಹೈಡ್ರೇಟ್ ಆಗಿದ್ದರೆ ಚರ್ಮವು ಮೊಡವೆ ಸಮಸ್ಯೆಗಳಿಂದ ಮುಕ್ತವಾಗಿರಲು ಸಾಧ್ಯವಾಗುತ್ತದೆ.

ಇನ್ನು ನೈಸರ್ಗಿಕ ವಿಧಾನಗಳ ಮೂಲಕ ಚರ್ಮವನ್ನು ಪೋಷಿಸಲು ಅನೇಕ ಮನೆಮದ್ದುಗಳಿವೆ. ಅವುಗಳನ್ನು ದಿನವೂ ಹಚ್ಚಿರಿ. ನೈಸರ್ಗಿಕವಾಗಿ ಮನೆಯಲ್ಲಿಯೇ ಕೆಲವು ಪದಾರ್ಥಗಳಿಂದ ಫೇಸ್ ಪ್ಯಾಕ್ ಮಾಡಿದರೆ ಇದು ತ್ವಚೆಯ ಅಡ್ಡ ಪರಿಣಾಮ ತಡೆಯುತ್ತದೆ.

ತ್ವಚೆಯ ಉರಿಯೂತದ ಸಮಸ್ಯೆ ತಡೆಗೆ ನೀವು ಸಿಂಪಲ್ ಮನೆಮದ್ದು ಟ್ರೈ ಮಾಡಿ. ಇದಕ್ಕಾಗಿ ಒಂದು ಪಾತ್ರೆಯಲ್ಲಿ ರೋಸ್ ವಾಟರ್ ತೆಗೆದುಕೊಳ್ಳಿ. ಅದಕ್ಕೆ ಕಿತ್ತಳೆ ಸಿಪ್ಪೆ, ಕೆಂಪು ಬೇಳೆ ಪುಡಿ ಮತ್ತು ಓಟ್‌ಮೀಲ್ ಸೇರಿಸಿ. ಪೇಸ್ಟ್ ಮಾಡಿ, ಚರ್ಮಕ್ಕೆ ಹಚ್ಚಿರಿ. ಒಣಗಿದ ನಂತರ ತೊಳೆಯಿರಿ.

Shwetha M

Leave a Reply

Your email address will not be published. Required fields are marked *