ವೈಭವ್‌ ಸೂರ್ಯವಂಶಿ ಸ್ಫೋಟಕ ಅರ್ಧಶತಕ ಬಲ – ಆರ್‌ ಆರ್‌ ವಿರುದ್ಧ ಹೀನಾಯವಾಗಿ ಸೋತ CSK

ವೈಭವ್‌ ಸೂರ್ಯವಂಶಿ  ಸ್ಫೋಟಕ ಅರ್ಧಶತಕ  ಬಲ –  ಆರ್‌ ಆರ್‌ ವಿರುದ್ಧ ಹೀನಾಯವಾಗಿ ಸೋತ  CSK

ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗದಲ್ಲಿ ಅದ್ಭುತ ಪ್ರದರ್ಶನವನ್ನು ತೋರಿದ ರಾಜಸ್ಥಾನ್‌ ರಾಯಲ್ಸ್‌ ತಂಡ ತನ್ನ ಆರಂಭಿಕ ಪಂದ್ಯದಲ್ಲಿ  ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 8 ವಿಕೆಟ್‌ಗಳ ಸುಲಭ ಗೆಲುವು ಪಡೆಯಿತು. ಆ ಮೂಲಕ ರಿಯಾನ್‌ ಪರಾಗ್‌ ನಾಯಕತ್ವದ ರಾಜಸ್ಥಾನ್‌ ತಂಡ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌  ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಇನ್ನು ಎಂಎಸ್‌ ಧೋನಿಯ   ಅನುಪಸ್ಥಿತಿಯಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಸಿಎಸ್‌ಕೆ, ತನ್ನ ಆರಂಭಿಕ ಪಂದ್ಯದಲ್ಲಿಯೇ ಸೋತು ನಿರಾಶೆ ಅನುಭವಿಸಿದೆ.

ಸೋಮವಾರ ಇಲ್ಲಿನ ಬರ್ಸಪರ ಕ್ರೀಡಾಂಗಣದಲ್ಲಿ ನಡೆದಿದ್ದ19ನೇ ಆವೃತ್ತಿಯ ಐಪಿಎಲ್‌ ಅತ್ಯಂತ ನೀರಸವಾಗಿತ್ತು. ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು ಹಾಗೂ 19.4 ಓವರ್‌ಗಳಿಗೆ 127 ರನ್‌ಗಳಿಗೆ ಆಲ್‌ಔಟ್‌ ಆಯಿತು. ಬಳಿಕ ಸಾಧಾರಣ ಗುರಿಯನ್ನು ಹಿಂಬಾಲಿಸಿದ ರಾಜಸ್ಥಾನ್‌, ವೈಭವ್‌ ಸೂರ್ಯವಂಶಿ ಅವರ ಸ್ಪೋಟಕ ಅರ್ಧಶತಕದ ಬಲದಿಂದ ಕೇವಲ 12.1 ಓವರ್‌ಗಳಿಗೆ 128 ರನ್‌ಗಳನ್ನು ಗಳಿಸಿ ಭರ್ಜರಿಯಾಗಿ ಗೆದ್ದು ಬೀಗಿತು. ಎರಡು ವಿಕೆಟ್‌ ಕಿತ್ತ ನಂಡ್ರೆ ಬರ್ಗರ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

 ಇದನ್ನೂ ಓದಿ: ತುಳಸಿ ಕಟ್ಟೆಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು ಗೊತ್ತಾ – ಈ ರಹಸ್ಯವನ್ನ ತಿಳಿಯಿರಿ

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಹೊಸ ಚೆಂಡಿನಲ್ಲಿ ಜೋಫ್ರಾ ಆರ್ಚರ್‌ ಹಾಗೂ ನಂಡ್ರೆ ಬರ್ಗರ್‌ ಪರಿಣಾಮಕಾರಿ ಬೌಲ್‌ ಮಾಡಿದ್ದರು. ಸಂಜು ಸ್ಯಾಮ್ಸನ್‌, ಋತುರಾಜ್‌ ಗಾಯಕ್ವಾಡ್‌ ಹಾಗೂ ಆಯುಷ್‌ ಮ್ಹಾತ್ರೆ ಅವರನ್ನು ಔಟ್‌ ಮಾಡಿದರು. ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ವಿಭಾಗಕ್ಕೆ ಸಂದೀಪ್‌ ಶರ್ಮಾ, ರವೀಂದ್ರ ಜಡೇಜಾ ಹಾಗೂ ಬ್ರಿಜೇಶ ಶರ್ಮಾ ಶಾಕ್‌ ನೀಡಿದರು. ಆದರೆ, ಕೆಳ ಮಧ್ಯಮ ಕ್ರಮಾಂಕದಲ್ಲಿ ಪ್ರತಿರೋಧ ತೋರಿದ ಜೇಮಿ ಓವರ್ಟನ್‌ 36 ಎಸೆತಗಳಲ್ಲಿ 43 ರನ್‌ ಸಿಡಿಸಿದರು. ಇವರು ಸಿಎಸ್‌ಕೆ ಪರ ವೈಯಕ್ತಿಕ ಗರಿಷ್ಠ ಸ್ಕೋರರ್‌ ಆದರು. ಸರ್ಫರಾಝ್‌ ಖಾನ್‌ ಹಾಗೂ ಕಾರ್ತಿಕ್‌ ಶರ್ಮಾ ಕ್ರಮವಾಗಿ 17 ಮತ್ತು18 ರನ್‌ ಗಳಿಸಿ ಉತ್ತಮ ಆರಂಭ ಪಡೆದರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.

Kishor KV