ಅಫ್ಘಾನಿಸ್ತಾನದಲ್ಲಿ 80ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ವಿಷಪ್ರಾಶನ – ತನಿಖೆಯಲ್ಲಿ ಬಯಲಾಗಿದ್ದೇನು?

ಅಫ್ಘಾನಿಸ್ತಾನದಲ್ಲಿ 80ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ವಿಷಪ್ರಾಶನ – ತನಿಖೆಯಲ್ಲಿ ಬಯಲಾಗಿದ್ದೇನು?

ತಾಲಿಬಾನಿಗಳ ಕೈಗೆ ಸಿಲುಕಿ ನಲುಗುತ್ತಿರೋ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ಥಿತಿ ದಿನ ದಿನಕ್ಕೂ ಶೋಚನೀಯವಾಗುತ್ತಿದೆ. ಇದೀಗ ಉತ್ತರ ಅಫ್ಘಾನಿಸ್ತಾನದಲ್ಲಿ 80ಕ್ಕೂ ಹೆಚ್ಚು ಶಾಲಾ ಬಾಲಕಿಯರಿಗೆ ವಿಷಪ್ರಾಶನ ಮಾಡಿರುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಉತ್ತರದ ಸರ್-ಎ-ಪುಲ್ ಪ್ರಾಂತ್ಯದಲ್ಲಿ ಶನಿವಾರ ಮತ್ತು ಭಾನುವಾರ ಈ ಭೀಭತ್ಸ ಕೃತ್ಯ ನಡೆದಿದೆ. ಪ್ರಾಂತೀಯ ಶಿಕ್ಷಣ ಇಲಾಖೆ ನಿರ್ದೇಶಕ ಮೊಹಮ್ಮದ್ ರಹಮಾನಿ ಈ ಘೋರ ಘಟನೆಯನ್ನ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ : ಬಂಗಾಳಕೊಲ್ಲಿಯಲ್ಲಿ ಮತ್ತೆ ಸಂಭವಿಸಿದ ಭೂಕಂಪ – 7 ತಿಂಗಳಲ್ಲಿ 3 ಬಾರಿ ಸಂಭವಿಸಿದ ಭೂಕಂಪ..!

ಸಂಚರಕ್ ಜಿಲ್ಲೆಯಲ್ಲಿ 1 ರಿಂದ 6 ನೇ ತರಗತಿಯ ವಿದ್ಯಾರ್ಥಿನಿಯರಿಗೆ ವಿಷಪ್ರಾಶನ ಮಾಡಲಾಗಿದೆ. ನಸ್ವಾನ್-ಎ-ಕಬೋದ್ ಆಬ್ ಶಾಲೆಯಲ್ಲಿ 60 ಮತ್ತು ನಸ್ವಾನ್-ಎ-ಫೈಜಾಬಾದ್ ಶಾಲೆಯಲ್ಲಿ 17 ಮಕ್ಕಳು ವಿಷ ಸೇವಿಸಿದ್ದಾರೆ. ಎರಡೂ ಪ್ರಾಥಮಿಕ ಶಾಲೆಗಳು ಹತ್ತಿರದಲ್ಲಿದ್ದು, ವಿಷ ಸೇವಿಸಿ ಅಸ್ವಸ್ಥರಾದ ವಿದ್ಯಾರ್ಥಿನಿಯರನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಕ್ಷಣ ಇಲಾಖೆ ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಪ್ರಾಥಮಿಕ ತನಿಖೆಯಲ್ಲಿ ಯಾರೋ ದ್ವೇಷದಿಂದ ಮಕ್ಕಳಿಗೆ ವಿಷ ನೀಡಲು ವ್ಯಕ್ತಿಗೆ ಹಣ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಇನ್ನು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಶುರುವಾದ ಬಳಿಕ ವಿಶ್ವವಿದ್ಯಾನಿಲಯ ಸೇರಿದಂತೆ ಆರನೇ ತರಗತಿಯ ನಂತರದ ಶಿಕ್ಷಣದಿಂದ ಹುಡುಗಿಯರನ್ನು ನಿಷೇಧಿಸಲಾಗಿದೆ. ಹಾಗೇ ಉದ್ಯೋಗಗಳು ಮತ್ತು ಸಾರ್ವಜನಿಕ ಸ್ಥಳಗಳಿಂದ ಮಹಿಳೆಯರನ್ನು ನಿರ್ಬಂಧಿಸಲಾಗಿದೆ.

suddiyaana