‘ಸಿಕ್ಸರ್ ರಿಂಕು ಸಿಂಗ್ ಸೂಪರ್ ಮ್ಯಾನ್’ -ಬಾಲಿವುಡ್ ಸೆಲೆಬ್ರಿಟಿಗಳ ಕಣ್ಣಲ್ಲಿ ರಿಯಲ್ ಹೀರೋ ಆದ ಕ್ರಿಕೆಟಿಗ

‘ಸಿಕ್ಸರ್ ರಿಂಕು ಸಿಂಗ್ ಸೂಪರ್ ಮ್ಯಾನ್’ -ಬಾಲಿವುಡ್ ಸೆಲೆಬ್ರಿಟಿಗಳ ಕಣ್ಣಲ್ಲಿ ರಿಯಲ್ ಹೀರೋ ಆದ ಕ್ರಿಕೆಟಿಗ

6,6,6,6,6 ಬರೋಬ್ಬರಿ 5 ಸಿಕ್ಸ್ ಬಾರಿಸಿ ರಿಂಕು ಸಿಂಗ್ ಐಪಿಎಲ್ ಟೂರ್ನಿಯಲ್ಲಿ ಸೂಪರ್ ಮ್ಯಾನ್ ಆಗಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಚೇಸಿಂಗ್ ಗೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಸಾಕ್ಷಿಯಾಗಿತ್ತು. ಗುಜರಾತ್ ಟೈಟಾನ್ಸ್ ವಿರುದ್ಧ ಕೆಕೆಆರ್ ತಂಡ ಐತಿಹಾಸಿಕ ಗೆಲುವು ಸಾಧಿಸಿದ್ದು ರೋಚಕವಾಗಿತ್ತು. ಅದರಲ್ಲೂ ಕೊನೇ ಓವರ್‌ನಲ್ಲಿ ಬ್ಯಾಕ್ ಟು ಬ್ಯಾಕ್ 5 ಸಿಕ್ಸ್ ಬಾರಿಸಿದ ರಿಂಕು ಸಿಂಗ್ ರಾತ್ರಿ ಬೆಳಗಾಗುವುದರಲ್ಲಿ ಹೀರೋ ಆಗಿದ್ದಾರೆ. ಅದು ಕೂಡಾ ಬಾಲಿವುಡ್ ಸೆಲೆಬ್ರೆಟಿಗಳ ಪಾಲಿನ ಸೂಪರ್ ಮ್ಯಾನ್ ಆಗಿದ್ದಾರೆ.

ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿಂದು RCB Vs LSG ಫೈಟ್ – ಎಲ್ಲೆಲ್ಲಿ ಸಂಚಾರ ನಿಷೇಧ.. ಬದಲಿ ಮಾರ್ಗಗಳ್ಯಾವುವು?

ಕೆಕೆಆರ್ ಮಾಲೀಕ ಶಾರುಖ್ ಖಾನ್, ಅವರ ಮಗ ಆರ್ಯನ್ ಖಾನ್, ರಣವೀರ್ ಸಿಂಗ್, ಅನನ್ಯಾ ಪಾಂಡೆ ಸೇರಿದಂತೆ ಬಾಲಿವುಡ್ ಸೆಲೆಬ್ರಿಟಿಗಳು ರಿಂಕು ಆಟವನ್ನು ಕೊಂಡಾಡಿದ್ದಾರೆ. ಕೆಕೆಆರ್ ಟೀಮ್‌ನ ರಿಂಕು ಸಿಂಗ್ ತನ್ನ ಭರ್ಜರಿ ಸಿಕ್ಸರ್‌ಗಳ ಮೂಲಕ ಅಭಿಮಾನಿಗಳ ಪಾಲಿನ ರಿಯಲ್ ಹೀರೋ ಅನ್ನಿಸಿಕೊಂಡಿದ್ದಾರೆ. ಇನ್ನು ರಿಂಕು ಸಿಂಗ್ ಆಟವನ್ನು ಕೊಂಡಾಡಿದ ಶಾರುಖ್ ಖಾನ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಜೂಮೆ ಜೋ ಪಠಾಣ್..’ ಬದಲು ‘ಜೂಮೆ ಜೋ ರಿಂಕು..’ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ ‘ಮೈ ಬೇಬಿ ರಿಂಕು’ ಎಂದು ಕರೆದಿದ್ದಾರೆ.

ರಣವೀರ್ ಸಿಂಗ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ‘ರಿಂಕು.. ರಿಂಕು.. ರಿಂಕು..’ ಎಂದು ಚಿಯರ್ ಮಾಡಿದ್ದಾರೆ. ರಿಂಕು ಅವರ ಫೋಟೋ ಅನ್ನು ಸ್ಟೇಟಸ್‌ನಲ್ಲಿ ಹಾಕಿ ‘ಬೀಸ್ಟ್’ ಎಂದು ಆರ್ಯನ್ ಖಾನ್ ಬರೆದುಕೊಂಡಿದ್ದಾರೆ. ಹಾಟ್ ತಾರೆ ಅನನ್ಯ ಪಾಂಡೆ ಹಾಗೂ ಶಾರುಖ್ ಪುತ್ರಿ ಸುಹಾನಾ ಖಾನ್ ತಮ್ಮ ಸ್ಟೇಟಸ್‌ನಲ್ಲಿ ರಿಂಕು ಸಿಂಗ್ ಬ್ಯಾಟಿಂಗ್ ಮಾಡುವ ಫೋಟೋವನ್ನ ಹಂಚಿಕೊಂಡಿದ್ದಾರೆ. ಖಾರೂಖ್ ಖಾನ್ ಪುತ್ರಿ ಇದನ್ನೂ ಊಹಿಸಲು ಅಸಾಧ್ಯ ಎಂದರೆ, ಅನ್ಯನ್ಯ ಪಾಂಡೆ ನಿಜಕ್ಕೂ ನಂಬಲಾಗುತ್ತಿಲ್ಲ ರಿಂಕು ಕಿಂಗ್ʼ ಎಂದು ತಮ್ಮ ಇನ್ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ ಬರೆದುಕೊಂಡಿದ್ದಾರೆ.

suddiyaana