ಸಿಕ್ಸರ್ ರೋಹಿತ್ ಶರ್ಮಾ ವಿಶ್ವ ದಾಖಲೆ – ಹಿಟ್‌ಮ್ಯಾನ್ ಸ್ಫೋಟಕ ಆಟಕ್ಕೆ ಕ್ರಿಸ್ ಗೇಲ್ ಅಭಿನಂದನೆ
ಟೀಂ ಇಂಡಿಯಾ ನಾಯಕ ಹಿಟ್‌ಮ್ಯಾನ್ ಎಂದೇ ಖ್ಯಾತಿ ಪಡೆದಿರುವ ರೋಹಿತ್ ಶರ್ಮಾ ವಿಶ್ವಕಪ್ ಕ್ರಿಕೆಟ್‌ನಲ್ಲಿ ಶತಕ, ಸಿಕ್ಸರ್ ಸಿಡಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. ಎಲ್ಲಾ ಮಾದರಿ ಕ್ರಿಕೆಟ್ ಸೇರಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಸಿಕ್ಸರ್ಗಳನ್ನು ಚಚ್ಚಿದ ಆಟಗಾರನಾಗಿ ರೋಹಿತ್ ಹೊರಹೊಮ್ಮಿದ್ದಾರೆ. ಅದ್ರಲ್ಲೂ ಮುಂದಿನ ಮ್ಯಾಚ್ ಪಾಕಿಸ್ತಾನದ ವಿರುದ್ಧ ಇದೆ. ಅದಕ್ಕೂ ಮುನ್ನ ರೋಹಿತ್ ಅಬ್ಬರಿಸಿರೋದು ಈಗ ಪಾಕಿಸ್ತಾನಕ್ಕೂ ಎಚ್ಚರಿಕೆಯ ಕರೆ ಗಂಟೆಯಾಗಿದೆ.
ಇದನ್ನೂ ಓದಿ: ಶುಭ್ಮನ್ ಆರೋಗ್ಯ ವಿಚಾರದಲ್ಲಿ ಅಭಿಮಾನಿಗಳಿಗೆ ಶುಭಸುದ್ದಿ – ಪಾಕಿಸ್ತಾನದ ವಿರುದ್ಧ ಕಣಕ್ಕಿಳಿಯಲು ಅಹ್ಮದಾಬಾದ್‌ಗೆ ಬಂದ ಗಿಲ್
ಹಿಟ್‌ಮ್ಯಾನ್ ರೋಹಿತ್ ಶರ್ಮಾ ಈಗ ಸಿಕ್ಸ್ ಹೊಡೆಯೋದ್ರಲ್ಲಿ ಯುನಿರ್ವಸಲ್ ಬಾಸ್ ಆಗಿದ್ದಾರೆ. ವೆಸ್ಟ್ಇಂಡೀಸ್ನ ಮಾಜಿ ಕ್ರಿಕೆಟಿಗ ಕ್ರೀಸ್ ಗೇಲ್ ಹೆಸರಲ್ಲಿದ್ದ ರೆಕಾರ್ಡ್ನ್ನ ರೋಹಿತ್ ಬ್ರೇಕ್ ಮಾಡಿದ್ದಾರೆ. ಯುನಿರ್ವಸಲ್ ಬಾಸ್ ಅಂತಾನೆ ಫೇಮಸ್ ಆಗಿರುವ ಕ್ರೀಸ್ ಗೇಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 553 ಸಿಕ್ಸರ್ಗಳನ್ನ ಹೊಡೆದಿದ್ರು. ಆದ್ರೆ ರೋಹಿತ್ ಶರ್ಮಾ ಈಗ ಗೇಲ್ ದಾಖಲೆಯನ್ನ ಕೂಡ ಮುರಿದಿದ್ದಾರೆ. 554 ಸಿಕ್ಸರ್ಗಳನ್ನ ಬಾರಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಸಿಕ್ಸ್ ಹೊಡೆದ ಬ್ಯಾಟ್ಸ್ಮನ್ ಎನ್ನಿಸಿಕೊಂಡಿದ್ದಾರೆ. ಇದಿಷ್ಟೇ ಅಲ್ಲ, ಇನ್ನೂ ಹಲವು ದಾಖಲೆಗಳು ರೋಹಿತ್ ಶರ್ಮಾ ಹೆಸರಿಗೆ ಸೇರಿಕೊಂಡಿದೆ. ಇನ್ನು ಕ್ರೀಸ್ಗೇಲ್ ಸಿಕ್ಸರ್ ದಾಖಲೆಗಳನ್ನ ಬ್ರೇಕ್ ಮಾಡಿರುವ ಬಗ್ಗೆಯೂ ರೋಹಿತ್ ಶರ್ಮಾ ಮಾತನಾಡಿದ್ದು, ಯುನಿವರ್ಸಲ್ ಬಾಸ್ ಏನಿದ್ರೂ ಯುನಿವರ್ಸಲ್ ಬಾಸೇ. ಗೇಲ್ ಪುಸ್ತಕದ ಒಂದು ಪೇಜ್ ಅಷ್ಟೇ ಈಗ ನನ್ನ ಜೊತೆಗಿದೆ ಅಂತಾ ರೋಹಿತ್ ಹೇಳಿದ್ದಾರೆ. ಇಲ್ಲಿ ಇನ್ನೊಂದು ವಿಶೇಷ ಏನಂದ್ರೆ, ರೋಹಿತ್ ಶರ್ಮಾ ಮತ್ತು ಕ್ರೀಸ್ ಗೇಲ್ ಇಬ್ಬರದ್ದೂ ಒಂದೇ ಜೆರ್ಸಿ ನಂಬರ್. 45.. ಹೀಗಾಗಿ ಸೇಮ್ ಜೆರ್ಸಿ ನಂಬರ್ ಬ್ಯಾಟ್ಸ್ಮನ್ ರೆಕಾರ್ಡ್ ಬ್ರೇಕ್ ಮಾಡಿದ್ದ ಗೇಲ್ ಖುಷಿಯಾಗಿರಬಹುದು ಅಂತಾ ರೋಹಿತ್ ಶರ್ಮಾ ಹೇಳಿದ್ದಾರೆ. ಕ್ರಿಸ್ಗೇಲ್ ಕೂಡ ಇಬ್ಬರೂ ನಂ-45 ಜೆರ್ಸಿ ಹಾಕಿದ ಪೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ರೋಹಿತ್ ಶರ್ಮಾರನ್ನ ಅಭಿನಂದಿಸಿದ್ದಾರೆ.
Congrats, @ImRo45 – Most Sixes in International cricket. #45 Special 🙌🏿 pic.twitter.com/kmDlM1dIAj
— Chris Gayle (@henrygayle) October 11, 2023