ಯುದ್ಧದಿಂದ ಸಿಗದ ಗ್ಯಾಸ್ ಸಿಲಿಂಡರ್‌ – ಶಾಲೆಯಲ್ಲಿದ್ದ 6 ಸಿಲಿಂಡರ್​​ ಕಳ್ಳತನ

ಯುದ್ಧದಿಂದ ಸಿಗದ ಗ್ಯಾಸ್ ಸಿಲಿಂಡರ್‌  – ಶಾಲೆಯಲ್ಲಿದ್ದ 6 ಸಿಲಿಂಡರ್​​  ಕಳ್ಳತನ

ಗ್ಯಾಸ್ ಸಿಗದೇ  ಪರದಾಡುತ್ತಿದ್ದ ಜನರಿಗೆ ಮನೆಯಲ್ಲಿರೋ ಗ್ಯಾಸ್ ಕಾಪಾಡಿಕೊಳ್ಳುವುದು ದೊಡ್ಡ ಕೆಲಸವಾಗಿದೆ. ಹಾಡಹಗಲೇ ರಾಜಾರೋಷವಾಗಿ ಸಿಲಿಂಡರ್‌ ಕಳ್ಳತನ ಮಾಡಿದ ಘಟನೆ  ಬೀದರ್​​ನ ಶಾಲೆಯಲ್ಲಿ ನಡೆದಿದೆ. ಶಾಲೆಯಲ್ಲಿದ್ದ 6 ಸಿಲಿಂಡರ್​​ ಕಳತನ ಮಾಡಿರುವಂತಹ ಘಟನೆ ನಡೆದಿದೆ.

ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿದ್ದ 6 ಸಿಲಿಂಡರ್​​ಗಳನ್ನ ಕಳ್ಳರು ಹೊತ್ತೊಯ್ದಿದ್ದಾರೆ.​ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಪೂರೈಸಿದ್ದ ಸಿಲಿಂಡರ್​ಗಳನ್ನ ಅಡುಗೆಕೋಣೆ ಬೀಗ ಮುರಿದು ಕಳ್ಳರು ಹೊತ್ತೊಯ್ದಿದ್ದಾರೆ. ಸದ್ಯ ಈ ಕುರಿತಾಗಿ ಬಸವಕಲ್ಯಾಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ನೀವು ನಮ್ಮ ಮೇಲೆ ದಾಳಿ ಮಾಡಿದ್ರೆ ನಾವು ಗಲ್ಫ್​ನಲ್ಲಿ ಸಮುದ್ರ ಗಣಿ ನಾಶ ಮಾಡುತ್ತೇವೆ – ಅಮೆರಿಕಾಗೆ ಇರಾನ್ ಎಚ್ಚರಿಕೆ

ಇನ್ನು ಇತ್ತೀಚೆಗೆ ಭಾಲ್ಕಿ ನಿವಾಸಿ ಮಲ್ಲಿಕಾರ್ಜುನ ಕಂಟೆಪ್ಪಾ ಅವರು ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಖರೀದಿಸಲು ಗೋದಾಮಿಗೆ ತೆರಳಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಗ್ಯಾಸ್ ಸಿಲಿಂಡರ್ ಕದ್ದು ಪರಾರಿಯಾಗಿದ್ದ. ಮಾರ್ಚ್ 14ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿತ್ತು. ಕಳುವಾದ ಗ್ಯಾಸ್ ಸಿಲಿಂಡರ್ ಹುಡುಕಿಕೊಡುವಂತೆ ಮಲ್ಲಿಕಾರ್ಜುನ ಕಂಟೆಪ್ಪಾ ಭಾಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಗ್ಯಾಸ್‌ಗೆ ಬೇಡಿಕೆ ಹೆಚ್ಚಾಗ್ತಿದ್ದಂತೆ ಸಿಲಿಂಡರ್ ಮೇಲೆ ಕಣ್‌ ಹಾಕಿದ್ದಾರೆ. ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಆರ್.ಸಿ ಲೇಔಟ್‌ನಲ್ಲಿರೋ ಸಾಯಿ ಅಪಾರ್ಟ್‌ಮೆಂಟ್‌ನಲ್ಲಿ ಹಾಡಹಗಲೇ ಗ್ಯಾಸ್‌ ಸಿಲಿಂಡರ್‌ ಕಳ್ಳತನ ಇತ್ತೀಚಿಗೆ ನಡೆದಿದೆ. ಯುಗಾದಿ ಹಬ್ಬದ ದಿನವೇ ಹೆಲ್ಮೆಟ್‌ ಧರಿಸಿ ಸ್ಕೂಟರ್‌ನಲ್ಲಿ ಬಂದಿದ್ದ ಇಬ್ಬರು ಖದೀಮರು, ಅಪಾರ್ಟ್‌ಮೆಂಟ್‌ ಬೇಸ್‌ಮೆಂಟ್‌ಗೆ ನುಗ್ಗಿದ್ದಾರೆ. ಅಲ್ಲಿದ್ದ ಎರಡು ಸಿಲಿಂಡರ್‌ಗಳನ್ನ ಸ್ಕೂಟರ್‌ನಲ್ಲಿಟ್ಟುಕೊಂಡು ಎಸ್ಕೇಪ್ ಆಗಿದ್ದಾರೆ. ಕೇಸ್ ದಾಖಲಿಸಿಕೊಂಡಿರುವ ಬೇಗೂರು ಪೊಲೀಸರು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.

Kishor KV